ಚಳ್ಳಕೆರೆ ಜನಧ್ವನಿ ವಾರ್ತೆ ಅ.9.ಸರಕಾರಿ ಕೆಲಸ ದೇವರ ಕೆಲಸ, ಕಚೇರಿಯಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ಲೋಕಾಯುಕ್ತರನ್ನು ಸಂಪರ್ಕಿಸಿ….. ಎಂಬ ಡೊಡ್ಡದಾದ ಗೋಡೆ ಬರಹವನ್ನು ನೋಡುತ್ತೇವೆ. ಆದರೆ ಇಲ್ಲಿ ಕಚೇರಿ ಒಳಗಡೆ ಕಾಲಿಟ್ಟರೆ .ಇ-ಖಾತೆ.ಖಾತೆ ಬದಲಾವಣೆಯಾಗ ಬೇಕಾದರೆ ಕಾಸು ಕೊಡದೆ ಯಾವುದೇ ಕೆಲಸಗಳಾಗುವುದಿಲ್ಲ, ಮಧ್ಯವರ್ತಿಗಳಿಲ್ಲದೆ ಪ್ರಭಾವಿಗಳ ಆಶ್ರೀವಾದ ಹಾಗೂ ಲಕ್ಷ್ಮಿಕೃಪಾಕಟಾಕ್ಷವಿದ್ದರೆ ಮಾತ್ರ ಕೆಲಸ. ಹೌದು ಚಳ್ಳಕೆರೆ ನಗರದ ನಗರಸಭೆ ಕಚೇರಿಯಲ್ಲಿ ಪೌರಾಯುಕ್ತರು ಹಾಗೂ ಬಿಲ್ ಕಲೆಕ್ಟರ್ ಖಾತೆ ಬದಲಾವಣೆ ಮಾಡುವಲ್ಲಿ ಲಂಚಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಲುಕಿದ್ದ ಪ್ರಕರಣ ಇನ್ನು ಕಣ್ಣುಮುಂದೆ ಇರುವಾಗಲೇ ಸೋಮವಾರ ನಗರಸಭೆ ಆವರಣದಲ್ಲಿ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷಪ್ರಶ್ನಿಸಿದರು ವಜನಿಕ ಕುಂದುಕೊರತೆ ಸಭೆಯಲ್ಲಿ ಖಾತೆ ಮಾಡಲು ಬಿಲ್ ಕಲೆಕ್ಟರ್ ಒಬ್ಬರು 7.5 ಲಕ್ಷರೂ ಲಂಚ ಕೇಳಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಶಾಸಕ ಟಿ.ರಘುಮೂರ್ತಿ ಹಾಗೂ ಸಾರ್ವಜನಿಕರು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಲಂಚ ನೀಡಿದೇ ಅಧಿಕಾರಿಗಳ ಬಳಿ ಯಾವ ಫೈಲ್‌ಗಳು ಮೂವ್ ಆಗುವುದಿಲ್ಲ ಇಂತಹ ದುಸ್ಥಿತಿಗೆ ತಲುಪಿದೆ ನಗರಸಭೆ ಕಚೇರಿ ಎಂದು ಸಾರ್ವಜನಿಕರು ದೂರಿನ ಸುರಿಮಳೆ ಗೈದರು ಇಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ ಕೂಡಲೆ ನಗರಸಭೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಂತೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಶಾಸಕರಿಗೆ ಒತ್ತಾಯಿಸಿದರು.
ನಗರಸಭೆ ಕಚೇರಿಯಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳಾಗಬೇಕಾದರೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಲಂಚ ನೀಡಬೇಕು ಇಲ್ಲವಾದರೆ ದಾಖಲೆಗಳ ನೆಪದಲ್ಲಿ ಅಲೆದಾಡಿಸುವುದು.ಕಡತವೇ ಇಲ್ಲದಂತೆ ಮಾಡುವುದು ಮಾಡುತ್ತಾರೆ ಎಂದು ಸಾರ್ವಜನಿಕರು ಶಾಸಕ ಟಿ.ರಘುಮೂರ್ತಿಯವರ ಮುಂದೆ ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕರ ದೂರುಗಳನ್ನು ಸಮಾಧಾನವಾಗಿ ಆಲಿಸಿದ ಶಾಸಕರು ಪೌರಾಯುಕ್ತ ಚಂದ್ರಪ್ಪ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿ ನಗರಸಭೆಯಲ್ಲಿ ಕಳೆದ 40 ದಿನಗಳ ಹಿಂದೆ ಜನ ಸಂಪರ್ಕ ಸಭೆ ಏರ್ಪಡಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು ಸಹ ಯಾವುದೇ ಬೆಳವಣಿಗೆಗಳು ಆಗಿಲ್ಲ ಸಾರ್ವಜನಿಕರ ಅಲೆದಾಟ ತಪ್ಪಿಲ್ಲ ಇಂತಹ ಕಾಟಾಚಾರದ ಕೆಲಸ ಮಾಡುವುದಾದರೆ ಅಧಿಕಾರಿಗಳು ವರ್ಗಾವಣೆ ತೆಗೆದುಕೊಂಡು ಹೊರಡಿ ಎಂದು ನಗರಸಭೆ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ನಗರ ಸಭೆ ಸದಸ್ಯ ಪ್ರಶಾಂತ್ ಕುಮಾರ್ ಮಾತನಾಡಿ ನಾನು ಒಬ್ಬ ನಗರಸಭೆ ಸದಸ್ಯನಾಗಿದ್ದರು ನನಗೆ ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುವ ಮಟ್ಟಿಗೆ ಬೆಳೆದು ನಿಂತಿದ್ದಾರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳು ನಗರಸಭೆಯಲ್ಲಿ ಇರಬೇಕಾ? ಎಂದು ಶಾಸಕ ಟಿ ರಘುಮೂರ್ತಿಯವರನ್ನು ಪ್ರಶ್ನಿಸಿದರು ಕೂಡಲೇ ಎಲ್ಲ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಹೊಸ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ನಗರಸಭೆ ಸದಸ್ಯ ಜಯಣ್ಣ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು.
ಶಾಸಕ ಟಿ ರಘುಮೂರ್ತಿ ಚಿತ್ರದುರ್ಗದ ಯೋಜನಾಧಿಕಾರಿ ಮಹೇಂದ್ರ ಕುಮಾರ್ ರವರನ್ನು ಕುರಿತು ನೀವು ಕಳೆದ ಸಭೆಯಲ್ಲಿ ಸಿಬ್ಬಂದಿಗೆ ಸರಿಯಾದ ಆಡಳಿತದ ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳಿದ್ದೀರಿ ಅದು ಏಕೆ ಕಾರ್ಯರೂಪಕ್ಕೆ ಬರಲಿಲ್ಲ. ಸಾರ್ವಜನಿಕರ ಅಲೆದಾಟ ತಪ್ಪಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮಹೇಂದ್ರ ಕುಮಾರ್ ಪೌರಾಯುಕ್ತ ಚಂದ್ರಪ್ಪನವರ ಮೇಲೆ ಬೊಟ್ಟು ಮಾಡಿ ತೋರಿಸಿದರು ನಾನು ಯಾವುದೇ ವಿಷಯಗಳನ್ನು ಹೇಳಿದರು ಅವರು ಕಿವಿಗೆ ಹಾಕಿಕೊಳ್ಳುವುದಿಲ್ಲ ತಮ್ಮದೇ ಕಾನೂನುಗಳನ್ನು ರೂಪಿಸುತ್ತಾರೆ ಎಂದು ದೂರಿದರು. ಈ ವೇಳೆ ಚಂದ್ರಪ್ಪ ಹಾಗೂ ಮಹೇಂದ್ರ ಕುಮಾರ್ ರವರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದವು.

15 ದಿನಗಳಿಗೊಮ್ಮೆ ಜನಸಂಪರ್ಕ ಸಭೆ: ಶಾಸಕ ಟಿ ರಘುಮೂರ್ತಿ ನಗರಸಭೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ನಗರಸಭೆಯಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗುವುದು ಎಲ್ಲ ಅಧಿಕಾರಿಗಳು ತಮ್ಮ ಸೋಮಾರಿತನವನ್ನು ಬಿಟ್ಟು ಕೆಲಸ ನಿರ್ವಹಿಸಿದರೆ ಮಾತ್ರ ಇಲ್ಲಿ ಇಟ್ಟುಕೊಳ್ಳುತ್ತೇವೆ ಇಲ್ಲದಿದ್ದರೆ ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರ ದೂರಿನ ಸುರಿಮಳೆ: ನಗರಸಭೆಯಲ್ಲಿ ಜನ ಸಂಪರ್ಕ ಸಭೆ ನಡೆಯುತ್ತಿದೆ ಎಂದು ಗೊತ್ತದ ಕೂಡಲೇ ನಗರದ ನಾಗರಿಕರು ತಂಡೋಪ ತಂಡವಾಗಿ ಬಂದು ನಗರಸಭೆ ಅಧಿಕಾರಿಗಳ ವಿರುದ್ಧ ಶಾಸಕರ ಮುಂದೆ ದೂರುಗಳ ಸುರಿಮಳೆ ಗೈದರು ಮನೆ ಕಂದಾಯ ನಲ್ಲಿ ಕಂದಾಯ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಶಾಸಕ ಟಿ ರಘುಮೂರ್ತಿ ಯವರ ಮುಂದೆ ತೆರೆದಿಟ್ಟರು.
ಶಾಸಕರ ಇಂದಿನ ಸಭೆಯ ಚಾಟಿ ಬೀಸುವಿಕೆಗಾದರೂ ಮುಂದಿನ ದಿನಗಳಲ್ಲಿ ನಗರಸಭೆಯ ಆಡಳಿತ ಸರಿ ಹೋಗುವುದು ಅಥವಾ ಇದೇ ನಮ್ಮ ಕೆಲಸ ಎಂದು ಸಾಬೀತುಪಡಿಸುವರು ಕಾದುನೋಡಬೇಕಿದೆ.
0 Comments