ಐದು ವರ್ಷದ ಅಧಿಕಾರಾವಧಿಯಲ್ಲಿ ಮತಕ್ಷೇತ್ರದ ಅಭಿವೃದ್ಧಿ ಮರೆತ ಸಚಿವ ಶ್ರೀರಾಮುಲು ಜನರಿಗೆ ಎಸ್ ಟಿ ಸಮಾವೇಶದ ನೆಪದಲ್ಲಿ ಜನರಿಗೆ ಬಾಡೂಟ ಊಟ ಮತ್ತು ಎಣ್ಣೆನ್ನು ಕೊಟ್ಟು ಜನರನ್ನು ಮತ್ತಿನಲ್ಲಿ ತೈಲಾಡಿಸಿ ನಿನ್ನ ಪರವಾಗಿ ಮತ ಚಲಾಯಿಸಲು ಮಾಡಿರುವ ಈ ಬಾಡೂಟ ದ ವ್ಯವಸ್ಥೆ. ನೀವೇನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಸರಿಯಾದ ರಸ್ತೆಗಳಿಲ್ಲ ರೈತರಿಗೆ ಮೂಲ ಬೆಲೆ ಸಿಗುವಂತೆ ಮಾಡಿಲ್ಲ ಜನಗಳಿಗೆ ನೀರಿಲ್ಲ ಈ ಒಂದು ಗೌರಸಮುದ್ರ ಮಾರಮ್ಮ ದೇವಿಯ ಸುಕ್ಷೇತ್ರಕ್ಕೆ ರಾಜ್ಯಗಳ ಮೂಲೆ ಮೂಲೆಗಳಿಂದಲೂ ಭಕ್ತದಿಗಳು ಆಗಮಿಸುತ್ತಿದ್ದರೆ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಸರಿಯಾದ ರಸ್ತೆಗಳಿಲ್ಲ ಸ್ನಾನದ ಗೃಹಗಳಿಲ್ಲ ವಸತಿ ಗೃಹಗಳಿಲ್ಲ ಬಸ್ ಸ್ಟಾಪ್ ಇಲ್ಲ ಇಂಥ ಸಮಸ್ಯೆಗಳನ್ನು ಬಗೆಹರಿಸಿ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಪಡಿ ಇಂಥ ಬಾಡೂಟದ ವ್ಯವಸ್ಥೆ ಮಾಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಬೇಡಿ ಇಂತಹ ನೀಚ ಕೃತ್ಯ ಈ ಸನ್ನಿಧಿಯಲ್ಲಿ ನೆಲೆಸಿರುವಂತಹ ಗೌರಸಮುದ್ರ ಮಾರಮ್ಮ ದೇವಿಯು ಕ್ಷಮಿಸುವುದಿಲ್ಲ . ಈ ಸನ್ನಿಧಿಯಲ್ಲಿ ಹಲವಾರು ಸಮಸ್ಯೆಗಳ ಇದ್ದು ತಮ್ಮ ಗಮನಕ್ಕೆ ತಂದ್ರು ಸಹ ಬೇಡಿಕೆ ನಿಟ್ಟರು ಸಹ ನೀವು ಇದುವರೆಗೂ ಒಂದು ಸಮಸ್ಯೆಯನ್ನು ಈಡೇರಿಸಿಲ್ಲ ಆದರೆ ಇಂದು ನೀವು ಈ ಸನ್ನಿಧಿಯಲ್ಲಿ ಬಾಡೂಟದ ವ್ಯವಸ್ಥೆ ಯಾವ ಪುರುಷಾರ್ಥಕಾಗಿ ರೀತಿಯ ವ್ಯವಸ್ಥೆ ಮಾಡಿ ಸಮಾಜದ ಹಾಳುಗೆಡಿಸುವಲ್ಲಿ ಮೊದಲಿಗರು ನೀವೇ ಜನರನ್ನು ದಿಕ್ಕು ತಪ್ಪಿಸುವವರು ನೀವೇ . ನೀನು ಈ ಮಾರಮ್ಮ ದೇವಿಯ ಸನ್ನಿದಿಯಲ್ಲಿ ಬಾಡೂಟ ಮಾಡುತ್ತಿದ್ದೀರಾ ಪ್ರೀತಿ ವಿಶ್ವಾಸ ಅಭಿವೃದ್ಧಿ ವಿಚಾರದಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಗಿದ್ದೀರಾ ಇದೇ ಕಾರಣಕ್ಕೆ ನೀವು ಜನರನ್ನು ಬಾಡೂಟ ಮತ್ತು ಎಣ್ಣೆ ವ್ಯವಸ್ಥೆ ಮಾಡಿ ಜನಗಳನ್ನು ತನ್ನ ಮಾಡುತ್ತಾ ಇದ್ದೀರಾ ನೀನು ಮಾಡಿದ ವಂಚನೆಯನ್ನು ಜನರು ಮರೆತುಬಿಡುತ್ತಾರೆ ಎಂಬ ಭ್ರಮೆಯನ್ನು ಶ್ರೀರಾಮುಲು ಬಿಡಬೇಕು
ಪ್ರೀತಿ ವಿಶ್ವಾಸ ಅಭಿವೃದ್ಧಿ ಯಲ್ಲಿ ಜನರನ್ನು ಸೆಳೆಯುವಲ್ಲಿ ವಿಫಲವಾಗುವುದರಿಂದ ಈ ಬಾಡೂಟ ಮತ್ತು ಎಣ್ಣೆ ವ್ಯವಸ್ಥೆಯನ್ನು ಶ್ರೀರಾಮುಲು ಮಾಡಿದ್ದಾರೆ ಸಚಿವ ಶ್ರೀರಾಮುಲು ಇಂತ ಕೃತ್ಯದಿಂದ ಜನರನ್ನು ತನ್ನತ್ತ ಸೆಳೆದು ಬಿಜೆಪಿಗೆ ಮತ ನೀಡಲು ಯತ್ನಿಸುತ್ತಿರುವ ನಿನ್ನ ಪ್ರಯತ್ನ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ಈ ಮಾರಮ್ಮ ದೇವಿಯ ಸನ್ನಿಧಿಯಲ್ಲಿ ನಾನು ಹೇಳಲು ಬಯಸುತ್ತಿದ್ದೇನೆ ರಾಮುಲು
ಇಡೀ ರಾಜ್ಯದಲ್ಲಿ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿ ಇನ್ನೂ ಕಳಚಿಲ್ಲ. ಜನರಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲದೇ ಸರ್ಕಾರದ ಸೌಲಭ್ಯಗಳು ಸಿಗದಂತೆ ಶ್ರೀರಾಮುಲು ಶಕುನಿ ರಾಜಕಾರಣ ಮಾಡಿದ್ದಾರೆ. ಅಧಿಕಾರ ನೀಡಿದ ಜನರನ್ನು ಮರೆತು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಮತಕ್ಷೇತ್ರದ ಜನರಿಗೆ ಮಾಡಿರುವ ವಂಚನೆ ಯಾರಿಗೂ ತಿಳಿದಿಲ್ಲ ಎಂಬ ಜಾಣ ಕುರುಡಿನೊಳಗೆ ಮತ್ತೆ ಅಧಿಕಾರಕ್ಕಾಗಿ ಬಾಡೂಟ ಏರ್ಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಶ್ರೀರಾಮುಲು ಅವರ ಹಣಬಲ, ತೋಳ್ಬಲಕ್ಕೆ ಈ ಸಲ ಕ್ಷೇತ್ರದ ಜನ ಮರಳಾಗುವುದಿಲ್ಲ ಭಯಪಡುವುದಿಲ್ಲ
ಮತಕ್ಷೇತ್ರದ ಗಡಿಭಾಗದಲ್ಲಿ ಕನಿಷ್ಠ ಅಭಿವೃದ್ಧಿ ಆಗಿಲ್ಲ. ತಳಕು, ನಾಯಕನಹಟ್ಟಿ, ರಾಂಪುರ ಹೋಬಳಿಗಳಲ್ಲಿ ಅಭಿವೃದ್ಧಿಪರ ಒಂದೂ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಜನರಿಗೆ ಶ್ರೀರಾಮುಲು ನೀಡಿದ್ದ ಭರವಸೆಗಳು ಒಂದಾದರೂ ಸಾಕಾರಗೊಂಡಿಲ್ಲ. ಮತಕ್ಷೇತ್ರದಲ್ಲಿ ಒಂದೂ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಅಂತಹ ರಸ್ತೆಗಳು ಶ್ರೀರಾಮುಲು ಕಣ್ಣಿಗೆ ಬಿದ್ದಿಲ್ಲ. ಅವರ ಕಣ್ಣಿಗೆ ಬರೀ ಬಳ್ಳಾರಿನೇ ಕಾಣಿಸುತ್ತದೆ. ಹಾಗಾಗಿ, ಹಗಲಿರುಳು ಬಳ್ಳಾರಿಯಲ್ಲೇ ಉಳಿದು ಶ್ರಮಿಸುತ್ತಿದ್ದಾರೆ. ಎಂಥವರಿಗೆ ಮತಹಾಕಿದೆವಲ್ಲ ಎಂದು ಜನರು ಶ್ರೀರಾಮುಲು ಅವರ ಬಗ್ಗೆ ದೂರಿಕೊಳ್ಳುತ್ತಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಮತಕ್ಷೇತ್ರದಲ್ಲಿ ಪುನಃ ಚುನಾವಣೆಗೆ ನಿಂತರೆ
ಹೀನಾಯ ಸೋಲಿಸಲು ಮತದಾರರು ಕಾಯುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಶ್ರೀರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ, ಬಾಡೂಟ ಉಣಿಸಿ ತಾನು ಮಾಡಿರುವ ವಂಚನೆ ಜನರಲ್ಲಿ ಮರೆಸಬೇಕು ಎಂದುಕೊಂಡಿದ್ದರೆ ಅದು ಶ್ರೀರಾಮುಲು ಅವರ ಮೂರ್ಖತನ ಆಗುತ್ತದೆ ಎಂದರು.
ಮತಕ್ಷೇತ್ರದ ಜನರಿಗೆ ತಾವು ಮಾಡಿರುವ ವಂಚನೆ, ಅನ್ಯಾಯ ಒಪ್ಪಿಕೊಂಡು ಸ್ಪರ್ಧೆಯಿಂದ ಹಿಂದುಳಿದರೆ ಮಾನ ಉಳಿಯಲಿದೆ. ಹಾಗಾಗಿ, ಶ್ರೀರಾಮುಲು ಬಾಡೂಟ ಕೂಡಲೇ ನಿಲ್ಲಿಸಿ ಮತಕ್ಷೇತ್ರಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು
ಶ್ರೀರಾಮುಲು ಮತಕ್ಷೇತ್ರದ ಯುವಕರನ್ನು ಕಡೆಗಣಿಸಿದ್ದಾರೆ. ಎಸ್ಸಿ ಎಸ್ಟಿ ಮೀಸಲು ಮತಕ್ಷೇತ್ರ ಪ್ರತಿನಿಧಿಸುತ್ತಿರುವ ಶ್ರೀರಾಮುಲು ಎಸ್ ಟಿ ಕಲ್ಯಾಣ ಸಚಿವ ಶ್ರೀರಾಮುಲು ಬೆರಳೆಣಿಕೆಯಷ್ಟು ಯೋಜನೆ, ಸೌಲಭ್ಯ ಕಲ್ಪಿಸಿಲ್ಲ. ಯುವಶಕ್ತಿಗೆ ದೊರೆಯಬೇಕಿದ್ದ ಸರ್ಕಾರಿ ಸೌಲಭ್ಯ ಸಿಗದಂತೆ ನೋಡಿಕೊಂಡಿದ್ದಾರೆ. ಸಾಕಷ್ಟು ಯೋಜನೆಗಳಿದ್ದರೂ ಮತಕ್ಷೇತ್ರದ ಯುವಜನರಿಗೆ ಒಂದೇ ಒಂದು ಯೋಜನೆಯನ್ನು ಸಾಕಾರಗೊಳಿಸಿಲ್ಲ. ಯುವಕರಿಗೆ ನಯವಂಚನೆಯನ್ನು ಮಾಡಿದ್ದಾರೆ. ಯುವ ಸಮುದಾಯ ಮತಕ್ಷೇತ್ರದಲ್ಲಿ ಪರಿವರ್ತನೆಯ ರಾಜಕಾರಕ್ಕೆ ಮುಂದಾಗಿದೆ. ನೂರಾರು ಯುವ ಉತ್ಸಾಹಿಗಳು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿವೆ. ನಿವು ಮಾಡುವಂತ ಹೇ ಕೃತ್ಯಕ್ಕೆ ನನ್ನ ಧಿಕ್ಕಾರವಿರಲಿ. ಟಿ. ಶಶಿಕುಮಾರ್ . ವಕೀಲರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕುಗಳ ಬ್ಲಾಕ್ ನ ಕಾಂಗ್ರೆಸ್ ಅಧ್ಯಕ್ಷರು
ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ)ಯ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವುದು, ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸು ನೀಡಲಿದೆ.
ಸರ್ಕಾರದ ಸಂಪನ್ಮೂಲಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲ ಮತ್ತು ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ವೇತನ ಆಯೋಗವು ಆರು ತಿಂಗಳ ಒಳಗಾಗಿ ತನ್ನ ಶಿಫಾರಸುಗಳನ್ನು ಮಾಡಲಿದೆ.
0 Comments