ಕ್ರೈಂ

ಇಸ್ಪೀಟ್ ಅಡ್ಡೆ ಮೇಲೆ ಪಿಎಸ್ ಐ ಧರೆಪ್ಪ ಹಾಗೂ ಸಿಬ್ಬಂದಿ ದಾಳಿ ಪ್ರಕರಣ ದಾಖಲು.


ಚಳ್ಳಕೆರೆ ಆ.6 ಸಾರ್ವಜನಿಕ‌ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿ ವೈ ಎಸ್ಪಿ ಕೆ.ರಾಜಣ್ಣ ಹಾಗೂ ಪಿ ಐ ದೇಸಾಯಿಮಾರ್ಗದರ್ಶನದಲ್ಲಿ‌ದಾಳಿ
ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪಿ ಎಸ್ಐ ಧರೆಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ 14 ಬೈಕ್. 48 ಸಾವಿರ ರೂ ಹಾಗೂ 10 ಇಸ್ಪೀಟ್ ಜೂಜುಕೋರರನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹೊಸದುರ್ಗ-ಬ್ಯಾಂಕ್ ಉದ್ಯೋಗಿಯೊಬ್ಬರು ನೇಣಿಗೆ ಶರಣು.


ಹೊಸದುರ್ಗ ಆ.5. ಬ್ಯಾಂಕ್ ಅಧಿಕಾರಿಯೊಬ್ಬರು ಲಾಡ್ಜ್ ನಲ್ಲಿ ಕೊಠಡಿ ಪಡೆದು ಆತ್ಮಹತ್ಯೆ ಮಾಡಿಕೊಂಡಿರುವುದುಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಸಂತೋಷ್‌ ಕುಮಾರ್‌ (38) ಬ್ಯಾಂಕ್‌ ಮೇಲಂತಸ್ತಿನಲ್ಲಿದ್ದ ಲಾಡ್ಜ್‌ನ ಕೊಠಡಿಯಲ್ಲಿ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೈಸೂರು ಮೂಲದ ಸಂತೋಷ್‌ ಕುಮಾರ್‌ ಅವರು ಭಗೀರಥ ಲಾಡ್ಜ್‌ನಲ್ಲಿ ತಂಗಿದ್ದರು.ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಲಾಡ್ಜ್‌ಗೆ ಬಂದು ಕೊಠಡಿ ಪಡೆದಿದ್ದರು. ಕಳೆದ 8 ತಿಂಗಳ ಹಿಂದಷ್ಟೇ ಅವರ ವಿವಾಹವಾಗಿತ್ತು. ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದರು.

ಮೈಸೂರಿನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ಪಟ್ಟಣ ಪೊಲೀಸರು ತಿಳಿಸಿದರು.

ಬಾಲ್ಯವಿವಾಹ ಪತ್ತೆ ಪ್ರಕರಣ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲು.


ಚಳ್ಳಕೆರೆ ಆ.3 ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದರೂ ಮೌಡ್ಯ, ಕಂದಾಚಾರಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಗದಿತ ವಿವಾಹ ವಯಸ್ಸು ಉಲ್ಲಂಘಿಸಿ ಅಪ್ರಾಪ್ತರನ್ನು ವಿವಾಹ ಮಾಡುವ ಪದ್ದತಿ ಇಂದಿಗೂ ಕದ್ದು ಮುಚ್ಚಿ ಮಾಡಿ ಕಾನೂನು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಹೌದು ಇದು ನಾಯಕನಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬಲವಂತವಾಗಿ ಬಾಲಕಿಯನ್ನು ವಿವಾಹವಾದ ಆರೋಪದ ಮೇಲೆ ವರ ಮತ್ತು ಉಭಯ ಕುಟುಂಬದ ಸದಸ್ಯರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಕುದಾಪುರ ಗ್ರಾಮದ ಬೋರೆದೇವರ ದೇವಾಲಯದಲ್ಲಿ ಹಿರಿಯೂರು ತಾಲ್ಲೂಕಿನ ಗ್ರಾಮವೊಂದರ ಯುವಕನು ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯನ್ನು 2023ರ 23ರಂದು ವಿವಾಹವಾಗಿದ್ದ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಈಚೆಗೆ ಕೈಗೊಂಡಿದ್ದ ಮನೆ ಮನೆ ಭೇಟಿ ವೇಳೆ ಘಟನೆಯು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿಗೆ ವರದಿ ನೀಡಿದ್ದರು.

ಅವರ ಆದೇಶದಂತೆ ಚಳ್ಳಕೆರೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಲ್ಯ ವಿವಾಹ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲು

ಚಳ್ಳಕೆರೆ ಆ.2ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದರೂ ಮೌಡ್ಯ, ಕಂದಾಚಾರಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಗದಿತ ವಿವಾಹ ವಯಸ್ಸು ಉಲ್ಲಂಘಿಸಿ ಅಪ್ರಾಪ್ತರನ್ನು ವಿವಾಹ ಮಾಡುವ ಪದ್ದತಿ ಇಂದಿದೂ ಕದ್ದು ಮುಚ್ಚಿ ನಡೆಯುತ್ತಿವೆ. ಹೌದು ಇದು ನಾಯಕನಹಟ್ಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬಲವಂತವಾಗಿ ವಿವಾಹವಾದ ಆರೋಪದ ಮೇಲೆ ವರ ಮತ್ತು ಎರಡೂ ಕಡೆಯ ಕುಟುಂಬದ ಸದಸ್ಯರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ನಾಯಕನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ.
ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದ ಬೋರೆದೇವರ ದೇವಾಲಯದಲ್ಲಿ ಹಿರಿಯೂರು ತಾಲ್ಲೂಕಿನ ಗ್ರಾಮವೊಂದರ ಯುವಕನು ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯನ್ನು 2023ರ ಏಪ್ರಿಲ್ 23ರಂದು ವಿವಾಹವಾಗಿದ್ದನು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ಈಚೆಗೆ ಕೈಗೊಂಡಿದ್ದ ಮನೆ ಮನೆ ಭೇಟಿ ವೇಳೆ ಘಟನೆಯು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಅವರಿಗೆ ವರದಿ ನೀಡಿದ್ದರು.

ಅವರ ಆದೇಶದಂತೆ ಚಳ್ಳಕೆರೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಯಕನಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಮದ್ಯ ಸಾಗಾಟ ಅಬಕಾರಿ ಅಧಿಕಾರಿ ದಾಳಿ ಪ್ರಕರಣ ದಾಕಲು.

ಚಳ್ಳಕೆರೆ ಜು.31 ಗ್ರಾಮೀಣ ಭಾದಲ್ಲಿ ಅಕ್ರಮ ಮಾರಾಟ ಮಾಡಲು ಮದ್ಯಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಳ್ಳಕೆರೆ ನಗರದಿಂದ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ಕಚಿತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದಿಂದ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಹೋಗುವ ರಸ್ತೆಯ ಎಡಬಾಗದ ರಸ್ತೆಯ ಪಂಪ್ ಹೌಸ್ ಹತ್ತಿರ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಹೈವಾರ್ಡ್ಸ್ ವಿಸ್ಕಿ 90 ಮಿಲಿಯ 37 ಟೆಟ್ರಾ ಪ್ಯಾಕ್ ಗಳು .ಓಲ್ಡ್ ಟಾವರಿನ್ ವಿಸ್ಕಿ 180 ಮಿಲಿಯ 8 ಟೆಟ್ರಾ ಪ್ಯಾಕ್ ಗಳು ಇದ್ದು ಒಟ್ಟು-4.770 ಲೀಟರ್ ಮದ್ಯ ವನ್ನು ಹೀರೋ ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಅಬಕಾರಿ ಕಾಯ್ದ ನಿಯಮಾನುಸಾರ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದೆ. ಹಾಗೂ ಆರೋಪಿಯು ಪರಾರಿಯಾಗಿದ್ದು ತನಿಖಾ ಸಮಯದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಪ್ರಕರಣದಲ್ಲಿ ವಶಪಡಿಸಿಕೊಂಡ ಮಧ್ಯ ಮತ್ತು ವಾಹನದ ಮೌಲ್ಯ ಸುಮಾರು 53_ ಸಾವಿರ ರೂಪಾಯಿಗಳು ಆಗಿರುತ್ತದೆ. ಸದರಿ ಕಾರ್ಯಚರಣೆಯಲ್ಲಿ ಸಿ ನಾಗರಾಜು ಅಬಕಾರಿ ನಿರೀಕ್ಷಕರು, ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1, ಡಿ.ಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು -2, ಮುಖ್ಯಪೇದೆಗಳಾದ ಎನ್. ನಾಗರಾಜ, ಬಿ.ಮಂಜುಳಮ್ಮ, ಟಿ.ಸೋಮಶೇಖರ ಇವರು ಪಾಲ್ಗೊಂಡಿದ್ದರು. ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ರವರ ನಿರ್ದೇಶನದಂತೆ ಅಬಕಾರಿ ಉಪ ನಿರೀಕ್ಷಕರು-1 ಚಳ್ಳಕೆರೆ ವಲಯ ಮತ್ತು ಅಬಕಾರಿ ಉಪ ನಿರೀಕ್ಷಕರು-2 ಚಳ್ಳಕೆರೆ ವಲಯ ರವರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಪ್ರಕರಣ ದಾಖಲು ಮಾಡಲಾಗಿದೆ.

ಸರ್ಕಾರಿ ಬಸ್ ನಿಲ್ದಾಣದಬಳಿ ಚಿತ್ರದುರ್ಗ ಸಿಇಎನ್ ಠಾಣೆಯ ಪಿಐ ವೆಂಕಟೇಶ್ ರ ತಂಡ 3ಕೆಜಿ110 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ


ಹಿರಿಯೂರು:
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಚಿತ್ರದುರ್ಗದ ಸಿಇಎನ್ ಠಾಣೆಯ ಪಿಐ ವೆಂಕಟೇಶ್ ರವರ ತಂಡ ಸುಮಾರು ಒಂದು ಲಕ್ಷದ 50ಸಾವಿರದ ಐದುನೂರು ರೂ ಬೆಲೆ ಬಾಳುವ 3ಕೆಜಿ 110 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಬೆಳಗ್ಗೆ 4.10 ಸಮಯದಲ್ಲಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ತಂಡ ಬೆಂಗಳೂರಿನಿಂದ ದರ್ಶನ್ ರಾಜ್ ಎನ್ನುವವನು ಕೆಎ17,ಎಫ್ 2079 ನೇ ನಂಬರಿನ ಸರ್ಕಾರಿ ಬಸ್ ನಲ್ಲಿ ಹಿರಿಯೂರು ನಗರಕ್ಕೆ ಮಾರಾಟ ಮಾಡಲು ತೆರಳುತ್ತಿದ್ದ ಎನ್ನಲಾದ ಒಂದೂವರೆ ಲಕ್ಷ ಮೌಲ್ಯದ 3ಕೆಜಿಗೂ ಹೆಚ್ಚು ಗಾಂಜಾ ಮತ್ತು ಮೊಬೈಲ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಬೆಂಗಳೂರಿನ ಜಹೀರ್ ಎಂಬುವವನಿಂದ ಗಾಂಜಾ ತೆಗೆದುಕೊಂಡು ಬಂದಿದ್ದೇನೆ ಎಂದಿದ್ದಾನೆ.
ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದದ ಜಿಲ್ಲಾ ಸಂಚಾಲಕ ಹೆಗ್ಗೆರೆ ಮಂಜುನಾಥ್ ಪ್ರತಿಕ್ರಿಯಿಸಿ ಇತ್ತೀಚೆಗೆ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು ಯುವಕರು, ವಿದ್ಯಾರ್ಥಿಗಳು ಸಹ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈಗಾಗಲೇ ಗಾಂಜಾ ಸೇವನೆ ಮಾಡುತ್ತಿದ್ದರು ಎಂಬುದಾಗಿ ಹಲವು ಪ್ರಕರಣ ದಾಖಲಾಗಿವೆಯೇ ಹೊರತು ಅವರಿಗೆ ಆಗಾಂಜಾ ಎಲ್ಲಿಂದ ಬಂತು ಎಂದು ಪತ್ತೆಯಾಗಿಲ್ಲ.
ನಗರದ ಗಾರೆದಿಂಡು, ಹರಿಶ್ಚಂದ್ರಘಾಟ್, ಲಕ್ಕವ್ವನಹಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ, ಶಿವಮೂರ್ತಿ ಲೇ ಔಟ್ ಬಳಿ ಗಾಂಜಾ ಸೇವನೆಗೆಂದೇ ಹೋಗುವವರಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟ ಮಾಡುವವರಾರು ಎಂಬುದನ್ನು ಪತ್ತೆ ಹಚ್ಚಿ ನೂರಾರು ಯುವಕರ ಭವಿಷ್ಯ ಉಳಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ಚಿತ್ರಬರಹಗಾರನ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿ ಚಳ್ಳಕೆರೆ ಪ್ರಾವಾಸಿ ಮಂದಿರದಲ್ಲಿ ಬಂಧನ.


ಜಗಲೂರು ಜು.30 ಚಿತ್ರಬರಹಗಾರ ಟಿ. ಹರೀಶ್ ಎಂಬುವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆಮಾಡಿ ಜಗಲೂರು ಠಾಣೆಯಲ್ಲಿ ಪ್ರಕಣ ದಾಖಲಾಗಿ ಸುಮಾರು ಹದಿನೈದು ದಿನಗಳಿಂದ ತಲೆಮರೆಸಿಕೊಂಡಿದ್ದ ವೈ.ಪಿ.ಸಿದ್ದನಗೌಡ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಜಗಲೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ದಿ. ಜುಲೈ 17 ರಂದು ಬೆಳಿಗ್ಗೆ ಜಮ್ಮಾಪುರ ಗ್ರಾಮಕ್ಕೆ ನೇರಗಾ ಕೆಲಸದ ಬೋರ್ಡ್ ಬರೆಯಲು ಬೈಕ್ನಲ್ಲಿ ಹೋಗುವಾಗ ಮರೇನಹಳ್ಳಿ ರಸ್ತೆಯಲ್ಲಿರುವ ಟೀ ಅಂಗಡಿ ಬಳಿ ಹಳೆ ವೈಷಮ್ಯ ಮನಸ್ಸಿನಟ್ಟುಕೊಂಡು ಏಕಾಏಕಿ ಕೈಯಲ್ಲಿದ್ದ ಮಚ್ಚಿನಿಂದ ಟಿ.ಹರೀಶ್ ಮೇಲೆ ಹಲ್ಲೆಮಾಡಿದ್ದಾನೆ. ಮಚ್ಚಿನ ಏಟಿನಿಂದ ಭುಜಕ್ಕೆ ಪೆಟ್ಟಾಗಿ ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿ, ಪಟ್ಟಣದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ದೂರು ಸ್ವೀಕರಿಸಿ ವಿವಿಧ ಸೆಕ್ಷನ್(ಕಲಂ 109,126,352,351 ಬಿಎನ್ಎಸ್ಆಕ್ಟ್ 2023) ಅಡಿಯಲ್ಲಿ ಜಗಲೂರು ಪೊಲೀಸರು ಪ್ರಕರಣೆ ದಾಖಲು ಮಾಡಿಕೊಂಡು ವೈ.ಪಿ.ಸಿದ್ದನಗೌಡನನ್ನು ಬಂಧಿಸಲು ಹುಡುಕಾಟ ನಡೆಸಿದ್ದರು, ಆದರೆ ವೈ.ಪಿ.ಸಿದ್ದನಗೌಡ ತಲೆ ಮರೆಸಿಕೊಂಡಿದ್ದನು. ಕೊನೆಗೂ ಸಿಪಿಐ ಶ್ರೀನಿವಾಸ್ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಮಂಜುನಾಥ ಸ್ವಾಮಿ ಹಾಗೂ ಸಿಬ್ಬಂದಿಒಳಗೊಂಡ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ ಚಳ್ಳಕೆರೆಯ ಪ್ರವಾಸಿ ಮಂದಿರದಲ್ಲಿ ಇಂದು ಬೆಳಗಿಜಾವ ಸುಮಾರು 5.30 ಗಂಟೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿ ಇಂತಹ ದುಷ್ಟಕೃತ್ಯದಿಂದ ಆಶಾಂತಿ ಸೃಷ್ಠಿಸುತ್ತಿದ್ದ ಸಿದ್ದನಗೌಡನ ಹೆಡಿಮುರಿ ಕಟ್ಟಿದ ಜಗಲೂರು ಪೊಲೀಸರನ್ನು ನಗರದ ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.

ಟಿ ಎ ಟಿ ಟ್ಯಾಕೀಸ್ ಹಿಂಭಾದ “ಎ” ಅಂಗನವಾಡಿ ಕೇಂದ್ರದಲ್ಲಿ ಕಳವು.


ಚಳ್ಳಕೆರೆ ಜು.,24. ಅಂಗನವಾಡಿ ಕೇಂದ್ರದ ಬೀಗ ಮುರಿದು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಚಳ್ಳಕೆರೆ ನಗರದ ಟಿ.ಎ ಟಿ ಟಾಕೀಸ್ ಹಿಂಭಾದ ಎ. ಅಂಗನವಾಡಿ ಕೇಂದ್ರದ ಬೀಗ ಮುರಿದು ಕುಕ್ಕರ್.ಪಾತ್ರೆ. ಬಕೇಟ್ ಸೇರಿದಂತೆ ಅಡುಗೆ ಮಾಡುವ ಸಾಮಾಗ್ರಿಗಳನ್ನು ಕಳವು ಮಾಡಿದ್ದು ಒಂದೇ ಸ್ಥಳದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿದ್ದು ಮತ್ತೊಂದು ಅಂಗನವಾಡಿ ಕೇಂದ್ರ ಬೀಗ ಒಡೆಯಲು ಮುಂದಾಗಿದ್ದು ಕಳವು ಪ್ರಕರಣ ವಿಫಲರಾಗಿದ್ದಾರೆ. ಎಂದಿನಂತೆ ಅಂಗನವಾಡಿ ಕೇಂದ್ರ ಶಿಕ್ಷಕಿ ಕರ್ತವ್ಯಕ್ಕೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ತಕ್ಷಣ ಇಲಾಖೆ ಅಧಿಕಾರಿ ಹಾಗೂ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶವಗಾರದ ಬಳಿ ವಿದ್ಯುತ್ ಸ್ಪರ್ಶದಿಂದ ಎರಡು ಎಮ್ಮಗಳು ಸಾವು.

ಚಳ್ಳಕೆರೆ ಜು.23. ವಿದ್ಯುತ್ ಸ್ಪರ್ಶದಿಂದ ಶವಗಾರದ ಆವರಣದಲ್ಲೇ ಎರಡು ಎಮ್ಮೆಗಳು ಮೃತ ಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಇದು ನಗರದ ಸಾರ್ವಜನಿಕ ಆಸ್ಪತ್ರೆ ಆವಣದಲ್ಲಿ ಎರಡು ಎಮ್ಮೆಗಳು ಮೇಯಲು ಹೋಗಿ ಶವಗಾರದ ಆವರದಲ್ಲಿ ಮೃತ ಪಟ್ಟಿರುವುದು ವಿದ್ಯುತ್ ಸ್ಪರ್ಶ ಹಾಗೂ ಆಸ್ಪತ್ರೆಯಲ್ಲಿ ತ್ಯಾಜ್ಯ ಸುರಿದಿರುವುದನ್ನು ತಿಂದು ಮೃತಪಟ್ಟಿರ ಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ನಗರದ ಹೊಸಬೇಡರಹಟ್ಟಿಯ ದೀವ್ಯ ಕೋಂ ಆತ್ಮಲಿಂಗ ಇವರಿಗೆ ಸೇರಿದ ಎರಡು ಎಮ್ಮೆಗಳು ಮೃತಪಟ್ಟಿದ್ದ ಒಂದು ಎಮ್ಮೆಗೆ 40 ಸಾವಿರ ರೂ ನಂತೆ ಒಟ್ಟು 80 ಸಾವಿರ ರೂಗಳು ಎಮ್ಮೆಗಳ ಮೃತದಿಂದ ನಷ್ಟವಾಗಿದೆ.
ಆಸ್ಪತ್ರೆಯ ಆವರಣದಲ್ಲಿರುವ ಶವಗಾರಕ್ಕೆ ಗೇಟು ಇಲ್ಲದೆ ಇರುವುದು ಜಾನುವಾರುಗಳು ಆಸ್ಪತ್ರೆಯ ;ತ್ಯಾಜ್ಯವನ್ನು ಶವಗಾರದ ಪಟ್ಟದಲ್ಲೇ ಸುರಿಯುತ್ತಿರುವುದಿಂದ ಅನೇಕ ಜಾನುವಾರುಗಳು ಮೇವನ್ನು ಹುಡುಕುತ್ತಾ ಹೋಗಿ ತ್ಯಾಜ್ಯ ತಿನ್ನುತ್ತಿವೆ ಹಾಗೆ ಶವಗಾರದ ಆವರಣದಲ್ಲಿ ವಿದ್ಯುತ್ ವೈರ್ ನೇತಾಡುತ್ತಿರುವುದನ್ನು ಎಮ್ಮಗಳು ಮುಟ್ಟಿರುವುದಕ್ಕೆ ಸ್ಥಳದಲ್ಲೇ ಮೃತ ಪಟ್ಟಿವೆ ಎನ್ನಲಾಗಿದೆ.
ಆಸ್ಪತ್ರೆ ಆವರಣದ ಶವಗಾರಕ್ಕೆ ಗೇಟು ಇಲ್ಲದೆ ಇರುವುದು ಶವಗಾರಕ್ಕೂ ಭದ್ರತೆಯಿಲ್ಲದಂಗಾಗಿದ್ದು. ಶವಗಾರದ ಮುಂಭಾಗದಲ್ಲಿ ಪ್ಲಾಸ್ಟಿಕ್ ನಂತ ತ್ಯಾಜ್ಯದ ರಾಸಿ ಬಿದ್ದಿದ್ದು ಮೃತ ಪಟ್ಟ ಎಮ್ಮೆಗಳೂ ಸಹ ತ್ಯಾಜ್ಯದ ಮೇಲೆ ಮೃತಪಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶವ ಪರೀಕ್ಷೆಗಾಗಿ ಎರಡು ಎಮ್ಮೆಗಳನ್ನು ಕೊಂಡಯ್ಯಲಾಗಿದೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆ ಶವಗಾರ ಬಳಿ ತ್ಯಾಜ್ಯ ಸ್ವಚ್ಚತೆ ಹಾಗೂ ಶವಗಾರದ ಗೇಟ್ ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.

ವಿದ್ಯುತ್ ಅವಘಡದಿಂದ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲು.


ಶ್ರೀರಾಂಪುರ(ಹೊಸದುರ್ಗ) ಜು.19 ಹಸು ಮೇಯಿಸಲು ಹೋದ ವ್ಯಕ್ತಿ ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹೌದು ಇದು ಹೊಸದುರ್ಗ ತಾ, ಮೆಂಗಸಂದ್ರ ಗ್ರಾಮದ ಕಾಲಭೈರವೇಶ್ವರ ಪೂಜಾರಿ ಶಿವಲಿಂಗಪ್ಪ ತಮ್ಮ ಹಸು ಮೆಯಿಸಲು ಹೋದ ಸಂದರ್ಭದಲ್ಲಿ,ಬಾಚವರ ಮಹೇಶ್ವರಪ್ಪ ಇವರ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ಮೈನ್ಸ್ ವೈರ್ ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದ್ದು ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

You cannot copy content of this page