ಕ್ರೈಂ

ಈಜಲು ಹೋಗ ಬಾಲಕ ಮೃತ ಪಟ್ಟ ಘಟನೆ ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ


ಮೊಳಕಾಲ್ಮೂರು ಮೇ 22 ಬಾವಿಯಲ್ಲಿ ಈಜಲು ಹೋಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಹೌದು ಇದು ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಬುಧವಾರ ತನ್ನ ಗೆಳೆಯರೊಂದಿಗೆ ಈಜಲು ಹೋಗಿಮಾರುತಿ (14) , ಮೃತಪಟ್ಟ ದುರ್ದೈವಿ ಬಾಲಕನಾಗಿರುತ್ತಾರೆ.
ಮೊಳಕಾಲ್ಮೂರು ತಾಲೂಕಿನ ಮೆಗಳ ಕಣುವೆ ಗ್ರಾಮದವನ್ನಾಗಿದ್ದು ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜುವಾಗ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ.


ರಾಂಪುರ ಪೊಲೀಸ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹುಲ್ಲಿನ ಬಣವಗೆ ಬೆಂಕಿಟ್ಟವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಸುಧಾಕರ್ ಠಾಣೆಗೆ ದೂರು ನೀಡಿದ್ದಾರೆ.


ಚಳ್ಳಕೆರೆ ಮೇ 17 ಜಮೀನಲ್ಲಿದ್ದ ಮೇವಿನ ಬಣವೆ ಬೆಕ್ಕಿಯಿಟ್ಟು ಸುಟ್ಟ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ರೈತ ಪಿ.ಎಸ್. ಸುಧಾರ್ ಪರಶುರಾಂಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.


ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಚೌಳೂರು ಗ್ರಾಮದ ಪಿ.ಎಸ್.ಸುಧಾಕರ್ ಇವರ ಜಮೀನಿನಲ್ಲಿದ್ದ ಸುಮಾರು ನಾಲ್ಕು ಟ್ರಾಕ್ಯರ್ ಲೋಡ್ ಶೇಂಗಾ ಬಳ್ಳಿ ಮೇವಿಗೆ ಶುಕ್ರವಾರ ಬೆಳಗಿನ ಜಾವ ಬೆಕ್ಕಿ ಹಚ್ಚಿ ಸುಟ್ಟಿರುತ್ತಾರೆ ಇದರಿಂದ ಸುಮಾರು ನಾಲ್ಕು ಲಕ್ಷ ರೂ ನಷ್ಟವಾಗಿದೆ,


ನಮ್ಮ ಜಮೀನ ಮೂರು ದಿಕ್ಕಿನ ಚಕ್ ಬಂದಿಯವರು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ಪದೆ ಪದೇ ಜಗಳವಾಡುತ್ತಿದ್ದ ಇದೇ ಸೇಡಿನ ಮೇಲೆ ಬಣವೆಗೆ ಬೆಂಕಿ ಹಚ್ಚಿದ್ದಾರೆ ಕೂಡಲೆ ತನಿಖೆ ನಡೆಸು ಕಾನೂನು ಕ್ರಮ ಜರುಗಿಸುವಂತೆ ಪರಶುರಾಂಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಶ -ಬಳ್ಳಾರಿ.

ಬಳ್ಳಾರಿ,ಮೇ 16
ನಗರದ ಹೊರವಲಯದಲ್ಲಿನ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115 ರ ಬದಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡು ಮುಂದಿನ ಅಗತ್ಯ ಕ್ರಮ ವಹಿಸಿದೆ.


ವಶಪಡಿಸಿಕೊಳ್ಳಲಾದ ಪಡಿತರ ಅಕ್ಕಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಆಹಾರ ಇಲಾಖೆಯ ಆಹಾರ ನಿರೀಕ್ಷಕರು, ಸಿಬ್ಬಂದಿ ಒಟ್ಟುಗೂಡಿ ಈ ಕಾರ್ಯಾಚರಣೆ ಮಾಡಲಾಗಿದ್ದು, ಅಕ್ರಮ ಪಡಿತರ ಅಕ್ಕಿಯನ್ನು ಸಾಗಾಣೆ ಮಾಡುತ್ತಿದ್ದ ಲಾರಿಯನ್ನು ಬಳ್ಳಾರಿ ನಗರದ ಎಪಿಎಂಸಿ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡು ಎಫ್‍ಐಆರ್ ದಾಖಲಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಹಾಗೂ ಆಹಾರ ಇಲಾಖೆ ಉಪನಿರ್ದೇಶಕಿ ಸಕೀನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಡ ಜನರಿಗೆ ತಲುಪಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವವರಿಗೆ ಇದು ಆಹಾರ ಇಲಾಖೆಯ ಈ ಕ್ರಮ ಎಚ್ಚರಿಕೆಯ ಸಂದೇಶವಾಗಿದೆ.
———

ಐದು ಜನರ ಸಾವು FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ‌ ಸಾವಾಗಿದೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ.

ಚಿತ್ರದುರ್ಗ, ಮೇ.16: ನಗರದ ಚಳ್ಳಕೆರೆ ಗೇಟ್​ ಸಮೀಪದ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಜಗನ್ನಾಥರೆಡ್ಡಿ ಎಂಬುವವರ ಮನೆಯಲ್ಲಿ 2023ರ ಡಿಸೆಂಬರ್ 28ರಂದು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ ಹಾಗೂ ನರೇಂದ್ರರೆಡ್ಡಿ ಸೇರಿದಂತೆ ಐವರ ಅಸ್ಥಿಪಂಜರ ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್(FSL) ರಿಪೋರ್ಟ್ ಬಂದಿದ್ದು, ಚಿತ್ರದುರ್ಗ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಸಾವಿನ ಕುರಿತು ಸತ್ಯಾಂಶ ಬಯಲಾಗಿದೆ.ಎಸ್ಪಿ ಹೇಳಿದ್ದಿಷ್ಟು

ಇನ್ನು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ‘ 5 ಅಸ್ಥಿಪಂಜರ ಸಿಕ್ಕ ತಕ್ಷಣ, ಪೂರ್ತಿ ಮನೆ ಅಸ್ತವ್ಯಸ್ತತೆಯಲ್ಲಿತ್ತು. ಕೂಡಲೇ ಎಫ್‌ಎಸ್‌ಎಲ್ ಟೀಂ ಕರೆಸಿ ಸೂಕ್ತ ತನಿಖೆಗೆ ಆದೇಶ ನೀಡಲಾಯಿತು.
ತನಿಖಾ ತಂಡ ಹಾಗೂ FSL ತಂಡ ಸೇರಿ ಆ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಎಲ್ಲಾ ಸ್ಯಾಂಪಲ್ಸ್​ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದು ತುಂಬಾ ಸೆನ್ಸಿಬಲ್ ಕೇಸ್ ಆಗಿದ್ದರಿಂದ ರಿಪೋರ್ಟ್ ತಡವಾಗಿ ಬಂದಿದೆ.

ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಸಿಕ್ಕ ಪ್ರಕರಣ: ಆತ್ಮಹತ್ಯೆ ಮಾಡಿಕೊಂಡಿತಾ ಜಗನ್ನಾಥರೆಡ್ಡಿ ಕುಟುಂಬ?

ಈ ಬಗ್ಗೆ ಮೃತರ ಸಂಬಂಧಿಕ ಪವನ್ ಕುಮಾರ್ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಜಗನ್ನಾಥ ರೆಡ್ಡಿ ಕುಟುಂಬವೇ ಎಂದು ಪವನ್ ದೂರು ನೀಡಿದ್ದರು. FSL ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ.
ಐದು ಮಂದಿ ನಿದ್ದೆ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ‌ ಸಾವಾಗಿದೆ. ಆದ್ರೆ ಕಿಚನ್​ನಲ್ಲಿ ಇರುವ ಎರಡು ಪಾತ್ರೆಗಳಲ್ಲಿ ಸೈನೈಡ್ ಸಿಕ್ಕಿದೆ ಎಂದು FSL ನಲ್ಲಿ ಪತ್ತೆಯಾಗಿದೆ. ಅಸ್ಥಿಪಂಜರಗಳ ದೇಹದಲ್ಲಿ ಸೈನೈಡ್ ಸೇವನೆ ಮಾಡಿರುವುದು ಕಂಡು ಬಂದಿಲ್ಲ. ಆ ಮನೆಯಲ್ಲಿ‌ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ‌‌ ತನಿಖೆ ಪ್ರಕಾರ ಫೆಬ್ರವರಿ, ಮಾರ್ಚ್ 2019 ರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ಆದ್ರೆ, ನಮ್ಮ ಎಲ್ಲಾ ರೀತಿಯ ಆಯಾಮಗಳ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಮುಂದುವರೆದ ತನಿಖೆಯನ್ನು CPI ಗೆ ಒಪ್ಪಿಸಲಾಗಿದೆ. ಇದು ಸಾವಿಗೆ ಸೂಕ್ತ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ. CPI ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದರು.

ಘಟನೆ ವಿವರ

2023 ಡಿ.29 ರಂದು ಚಿತ್ರದುರ್ಗದಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಾಥರೆಡ್ಡಿ ಕುಟುಂಬ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾರೆ ಎಂಬ ಅಂಶ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ಪೊಲೀಸರು ಡೆತ್ ನೋಟ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದರು. ಈ ಡೆತ್​ನೋಟ್​ನಲ್ಲಿ, ‘ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ 2013ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಇದೇ ವರ್ಷ ನರೇಂದ್ರರೆಡ್ಡಿ ಗೆಳೆಯರ ಜತೆ ಸೇರಿ ಬಿಡದಿ ಬಳಿ ವಾಹನವೊಂದನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ಕೆಲದಿನಗಳ ಕಾಲ ಜೈಲಿನಲ್ಲಿದ್ದನು. ನರೇಂದ್ರರೆಡ್ಡಿಯ ಈ ಕೃತ್ಯದಿಂದ ಮನನೊಂದ ಕುಟುಂಬ, ಡೆತ್​ ನೋಟ್​ ಬರೆದಿಟ್ಟು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಈ ಎಲ್ಲ ವಿಷಯ ಡೆತ್​ ನೋಟ್​ನಲ್ಲಿತ್ತು. ಇದೀಗ ಎಫ್​ಎಸ್​ಎಲ್​ ವರದಿಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಗ್ಗೆ ಉಲ್ಲೇಖಿಸಲಾಗಿದೆ.

ವಿಠಲನಗರದಲ್ಲಿ ಕಳ್ಳತನ ಯತ್ನ ವಿಫಲ- ಪೋಲಿಸ್ ಅಧಿಕಾರಿಗಳು ಭೇಟಿ ಪರಿಶೀಲನೆ.


ಚಳ್ಳಕೆರೆ ಮೇ.16 ನಗರದಲ್ಲಿ ಸರಣಿ ಕಳ್ಳತನ
ನಗರದ ಜನತೆಯ ನಿದ್ದೆ ಕೆಡಿಸುವಂತೆ ಮಾಡಿದೆ. ಹೌದು ಇದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯಲ್ಲಿ ಮನೆಗಳ್ಳತನ ಪ್ರಕರಣ ಮಾಸುವ ಮುನ್ನವೇ ವಿಠಲನಗರದ ಗ್ರಾಮಲೆಕ್ಕಾಧಿಕಾರಿ ಹರೀಶ್ ಮನೆಗೆ ಗುರುವಾರ ಬೆಳಗಿನ ಜಾಬ 2 ಗಂಟೆ ಸುಮಾರಿನಲ್ಲಿ ಗೇಟ್ ಬೀಗ ಮುರಿದು ಒಳ ನುಗ್ಗಿದ್ದಾರೆ ಗೇಟ್ ಶಬ್ದವಾದ ತಕ್ಷಣ ಎಚ್ಚರಗೊಂಡು ಕೂಗಿದ ತಕ್ಷಣ ಕಳ್ಳರು ಓಡಿ ಹೋಗಿದ್ದಾರೆ ಅಕ್ಕಪಕ್ಕದವರ ಸಮಯ ಪ್ರಜ್ಞೆಯಿಂದ ಕಳ್ಳತನ ತಪ್ಪಿದಂತಾಗಿದೆ. ಇತ್ತೀಚೆಗೆ ನಗರದಲ್ಲಿ ಆಸ್ಪತ್ರೆ. ಬಸ್ ನಿಲ್ದಾಣ. ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ನಿಲ್ಲಿಸಿದ್ದ ಬೈಕ್ ಕಳ್ಳತನ.ಮೊಬೈಲ್ ಕಳ್ಳತನಗಳ ಹಾವಳಿ ಹೆಚ್ಚಾಗಿದ್ದು ನಾಗರೀಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ನಗರದ ನೆಹರು ವೃತ್ತ. ಪೋಲಿಸ್ ಠಾಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮರಗಳ ನಿರ್ವಹಣೆ ಇಲ್ಲದೆ ಸಿಸಿ ಕ್ಯಾಮರಗಳು ಕಣ್ಣು ಮುಚ್ಚಿಕೊಂಡಿರುವುದರಿಂದ ಕಳ್ಳತನ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಅಂತ ಕಳ್ಳರು ಕಳ್ಳತನ ಕೆಲಸವನ್ನ ಮುಂದುವರಿಸಿದ್ದಾರೆ.
ನಗರಸಭೆವತಿಂದ ನೆಹರು ವೃತ್ತ. ಸೇರಿದಂತೆ ವಿವಿಧ ಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿತ್ತು.. ಇದೆ ಸಿಸಿಟಿವಿಗಳಿಂದ ಸಾಕಷ್ಟು ಅಪರಾಧ ಪ್ರಕರಗಳು ತಡೆಗಟ್ಟಲು ಪೊಲೀಸರಿಗೆ ಅನುಕೂಲ ಆಗ್ತಾಯಿತ್ತು.. ಕಳ್ಳರನ್ನ ಕ್ಷಣಾರ್ಧದಲ್ಲೇ ಲಾಕ್ ಮಾಡಲಾಗುತ್ತಿತ್ತು.. ಆದ್ರೆ ಸಿಸಿ ಕ್ಯಾಮರಗಳ ನಿರ್ವಹಣೆ ಮಾಡದೆ ನಿರ್ಲಕ್ಷ್ಯಕ್ಕೆ ಒಳಗಾಗಿ ಲಕ್ಷಾಂತರ ರೂ. ಮೌಲ್ಯದ ಸಿಸಿಟಿವಿ ಕ್ಯಾಮರಗಳು ಬಂದ್ ಆಗಿ ಸುಮಾರು ಹತ್ತು ವರ್ಷಗಳು ಕಳೆದರೂ ದುರಸ್ಥಿ ಮಾಡಿಸಲು ಮುಂದಾಗದೆ ಇರುವುದು ವಿಪರ್ಯಾಸವಾಗಿದೆ.
ಪರಶುರಾಂಪು ಹೋಬಳಿ ಕೇಂದ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸಿ ಸಿ ಕ್ಯಾಮರ ಅಳವಡಿಸಲಾಗಿದ್ದು ನಗರದಲ್ಲಿ ಅಳವಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ. ಈಗಲಾದರೂ ಚಳ್ಳಕೆರೆ ನಗರದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಿ ಸಿ ಕ್ಯಾಮರ ಅಳವಡಿಸುವರೇ ಕಾದು ನೋಡ ಬೇಕಿದೆ.

ಇಸ್ಪೀಟ್ ಜೂಜು ಅಡ್ಡೆ ಮೇಲೆ ಚಳ್ಳಕೆರೆ ಪಿ ಎಸ್ ಐ ಶಿವರಾಜ್ ದಾಳಿ ಪ್ರಕರಣ ದಾಖಲು.


ಚಳ್ಳಕೆರೆ ಮೇ.15 ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಅಡ್ಡಿ ಮೇಲೆ ಪಿಎಸ್ಐ ಶಿವರಾಜ್ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಗೌಡ್ರ ಜಮೀನಿನ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತ ಮೇರೆಗೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ 5220 ರೂ ಹಾಗೂ ಜೂಜಾಟದಲ್ಲಿ ತೊಡಗಿದ್ದ ದಿನಕರ ಹಾಗೂ ಇತರರನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಐಪಿಎಲ್ ಕ್ರಿಕೇಟ್ ಜೂಜು ಅಡ್ಡೆ ಮೇಲೆ ಪಿ ಐ ಕುಮಾರ್ ದಾಳಿ ಪ್ರಕರಣ ದಾಖಲು.


ಚಳ್ಳಕೆರೆ ಮೇ.15 ನಗರದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಐಪಿಎಸ್ ಜೋಜಾಟ ಅಡ್ಡೆ ಮೇಲೆ ಚಳ್ಳಕೆರೆ ಠಾಣಾಧಿಕಾರಿ ಕುಮಾರ್ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣದಾಖಲಿಸಿಕೊಂಡಿದ್ದಾರೆ.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ, ತೇಜಸ್ಸು
ಮತ್ತು ಇತರರು ಸೇರಿ ಡೆಲ್ಲಿ, ಕ್ಯಾಪಿಟಲ್ ಮತ್ತು ಲಕೋ ಸೂಪರ್ ಕಿಂಗ್ಸ್
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕುರಿತು ಸಾರ್ವಜನಿಕರಿಂದ ಡೆಲ್ಲಿ, ಕ್ಯಾಪಿಟಲ್ ಗೆದ್ದರೆ 100/-ರೂಗಳಿಗೆ 1000/-ರೂಗಳು,
ಲಕೋ ಸೂಪರ್ ಕಿಂಗ್ಸ್ ಗೆದ್ದರೆ 100/-ರೂ ಗೆ 1000/-ರೂ ಕೊಡುವುದಾಗಿ ಕಾನೂನು ಬಾಹೀರವಾಗಿ ಹಣವನ್ನು ಪಣವನ್ನಾಗಿ
ಕಟ್ಟಿಸಿಕೊಂಡು ಸೋಲು-ಗೆಲುವಿನ ಅದೃಷ್ಟದ ಬೆಟ್ಟಿಂಗ್ ಆಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮೇಲ್ಕಂಡ ಕ್ರಿಕೆಟ್
ಬೆಟ್ಟಿಂಗ್ ಆಡುವವರ ಮೇಲೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.

ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಲಕ್ಷ ಲಕ್ಷ ರೂ ಕನ್ನ – ಬ್ಯಾಂಕ್ ಖಾತೆದಾರರಲ್ಲಿ ಆತಂಕ ಹಣ ಕಳೆದುಕೊಂಡರು ಠಾಣೆಗೆ ದೂರು.

ಚಳ್ಳಕೆರೆ ಮೇ 14 ಬ್ಯಾಂಕ್ ಖಾತೆ, ಪಹಣಿ, ಪಾನ್ ಕಾರ್ಡ್ .ಸಿಮ್ ಕಾರ್ಡ್ . ಬೆಳೆವಿಮೆ,ಬೆಳೆ ಪರಿಹಾರ . ಆಧಾರ್ ಕಾರ್ಡ್ ಜೋಡಣೆ . ಇ-ಕೆವೈಸಿ ಸರಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗಲೂ ನೀಡುವ ಬಯೋಮೆಟ್ರಿಕ್ ಕಡ್ಡಾಯಗೊಳಿಸಿಲಾಗಿದ್ದು ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಸೈಬರ್ ಕಳ್ಳರು ಕನ್ನ ಹಾಕುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ನಗರದ ದೊಡ್ಡೇರಿ ವಕೀಲ ಮಲ್ಲಿಕಾರ್ಜುನ ಎಂಬುವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 1.30 ಲಕ್ಷ ರೂ, ನೀತೀನ್ 1.80 ಲಕ್ಷ ರೂ ಸೇರಿದಂತೆ ಹಲವರ ಬ್ಯಾಂಕ್ ಖಾತೆಗಳ ಮೇಲೆ ಸೈಬರ್ ಕಳ್ಳರು ಕನ್ನ ಹಾಕುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಕೇವಲ ಚಳ್ಳಕೆರೆಗೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಸೈಬರ್ ವಂಚಕರ ಹಾವಳಿ ಹೆಚ್ಚಿಗಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವು ಖಾಸಗಿ ಯ್ಯಾಪ್ ಮೂಲಕ ಜನರನ್ನು ಮರಳು ಮಾಡಿ ಕಡಿಮೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ನೀಡುತ್ತೇವೆ ಎಂಬ ಮರಳು ಮಾತಿಗೆ ನಂಬಿ ಬೇಗಾ ಶ್ರೀಮಂತರಾಗ ಬೇಕು . ಹೆಚ್ಚು ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಹಣ ಹೂಡಿಕೆ ಮಾಡಿ ಕಳೆದು ಕೊಂಡರೆ ಇನ್ನು ಕೆಲವರು ಆನ್ ಲೈನ್ ಗೇಮ್ ನಲ್ಲಿ ಹಣ ಹಾಕಿ ಕಳೆದು ಕೊಂಡು ಸಾಲದ ದವಡೆಗೆ ಸಿಲುಕಿ ನರಳುವಂತಾಗಿದೆ.
ರಾಜ್ಯಾದ್ಯಂತ ನಾನಾ ರೂಪಗಳಲ್ಲಿ ಆನ್ಲೈನ್ ವಂಚನೆ ಹೆಚ್ಚುತ್ತಿದೆ. ಈಗ ಆಧಾರ್ ಕಾರ್ಡ್ನ ಬೆರಳಚ್ಚು (ಬಯೋಮೆಟ್ರಿಕ್) ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದಾರೆ ಎಂಬ ಬೀತಿ ಜನರಲ್ಲಿ ಕಾಡತೊಡಗಿದೆ. ಸೈಬರ್ ಖದೀಮರು ಸಣ್ಣ ಮೊತ್ತವನ್ನೇ ಸೇಫ್ ಟಾರ್ಗೆಟ್ ಮಾಡಿಕೊಂಡಿದ್ದರು . ಸಣ್ಣ ಮೊತ್ತ ಕಳೆದುಕೊಂಡವರು ಹೆಚ್ಚಾಗಿ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೆ ಸುಮ್ಮನಾಗುತ್ತಿದ್ದರು ಇದನ್ನೇ ವರದಾನ ಮಾಡಿಕೊಂಡ ಸೈಬರ್ ವಂಚಕರು ದೊಡ್ಡ ಮೊತ್ತಕ್ಕೆ ಕನ್ನ ಹಾಕಲು ಮುಂದಾಗಿದ್ದಾರೆ.

ಈಗಾಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸೈಬರ್ ಕಳ್ಳರ ಹಾವಳಿಗೆ ಕಡಿವಾಣ ಹಾಕಲು ಮುಂದಾಗ ಬೇಕಿದೆ.

ವಿದ್ಯುತ್ ಶಾಖೆ ನಿಂದ ರೈತ ತಿಮ್ಮಣ್ಣ ಸ್ಥಳದಲ್ಲೇ ಸಾವು.

ಚಳ್ಳಕೆರೆ ಜನಧ್ವನಿ ವಾರ್ತೆ ಮೇ 12. ಜಮೀನಿನಲ್ಲಿ ಕೆಲಸ ಮಾಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ರೈತರ ಮೃತ ಪಟ್ಟ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ತಿಮ್ಮಣ್ಣ (28) ವಿದ್ಯುತ್ ಅವಘಟಕ್ಕೆ ತುತ್ತಾಗಿ ಜಮೀನಲ್ಲೇ ಮೃತ ಪಟ್ಟಿದ್ದಾನೆ.
ಜಮೀನಿನಲ್ಲಿರುವ ಗಿಡಗೆಂಟೆಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರ ಬರುತ್ತದೆ ಎಂಬ ಉದ್ದೇಶದಿಂದ ಜಮೀನಲ್ಲಿ ನೇತಾಡುವ ವೈರ್ ಗಳನ್ನು ತೆರವುಗೊಳಿಸುವ ಆಕಸ್ಮಿಕ ವಿದ್ಯತ್ ಸ್ಪರ್ಶದಿಂದ ರೈತ ಮೃತಪಟ್ಟಿದ್ದಾನೆ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಲಾಗಿದೆ.

ಬೆಸ್ಕಂ ವಿರುದ್ದ ಅಕ್ರೋಶ ರೈತರ ಜಮೀನಿಲ್ಲಿ ಹಾಗೂ ಮನೆಗಳ ಮೇಲೆ ವಿದ್ಯುತ್ ತಂತಿಗಳು ನೇತಾಡುವ ಬಗ್ಗೆ ಬೆಸ್ಕಾಂ ಸಿಬ್ಬಂದಿಗಳಿಗೆ ಅನೇಕ ಬಾರಿ ಹೇಳಿದರೂ ಸಹ ನೇತಾಡುವ ವಿದ್ಯುತ್ ತಂತಿಗಳ ಬಗ್ಗೆ ಬೆಸ್ಕಾಂ ಇಲಾಖೆ ನಿರ್ಲಕ್ಷವಹಿಸುತ್ತದೆ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಇಬ್ಬರು ಬೆಸ್ಕಾಂ ಲೈನ್ ಮ್ಯಾನ್ ಇದ್ದರೂ ಎಂದೂ ಇಲಾಖೆಯ ಸಮವಸ್ತ್ರ ಧರಿಸುವುದಿಲ್ಲ ಕಾಲೇಜ್ ವಿದ್ಯಾರ್ಥಿಗಳಂತೆ ವರ್ತಿಸುತ್ತಾರೆ. ಗ್ರಾಮಗಳಲ್ಲಿ ನೇತಾಡುವ ವಿದ್ಯುತ್ ತಂತಿಗಳ ಸರಿಪಡಿಸಿದ್ದರೆ ರೈತರ ಮಸ್ಯೆಗಳಿಗೆ ಸ್ಪಂಧಿಸಿ ಕರ್ತವ್ಯ ನಿರ್ವಹಿಸಿದ್ದರೆ ಇಂದು ತಿಮ್ಮಣ್ಣ ಸಾವು ಸಂಭವಿಸುತ್ತಿರಲಿಲ್ಲ ಎಂದು ಗ್ರಾಮಸ್ಥರೊಬ್ಬರು ಜನಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಲಾದರೂ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ತಾಲೂಕಿನಾದ್ಯಂತ ರೈತರ ಜಮೀನು, ಗ್ರಾಮಗಳಲ್ಲಿ ನೇತಾಡುವ ವಿದ್ಯುತ್ ವೈರ್ ಗಳನ್ನು ದುರಸ್ಥಿ ಪಡಿಸುವುದು ಹಾಗೂ ರೈತರ ಜಮೀನಿನಲ್ಲಿ ವಿದ್ಯುತ್ ಕಂಬದ ಕೊರತೆಯಿಂದ ನೆಲಾದ ಮೇಲೆ ಎಳೆದುಕೊಂಡು ಹೋಗಿದ್ದರೆ ಅಂತಹ ರೈತರಿಗೆ ತಿಳುವಳಿಗೆ ಹೇಳುವ ಮೂಲಕ ವಿದ್ಯುತ್ ಕಂಬಳ ವ್ಯವಸ್ಥೆ ಮಾಡಿ ಇಂತಹ ವಿದ್ಯುತ್ ಅವಘಡಗಳಿಂದ ಹಾಗೂ ಸಾವು ನೋವುಗಳ ಬಗ್ಗೆ ಇಲಾಖೆ ಮುಂದಾಗ ಬೇಕಿದೆ.

ಭೀಕರ ಅಪಘಾತ : ಇಬ್ಬರು ಶಿಕ್ಷಕರು ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

Power TV DISCOVER THE ART OF PUBLISHING

ತುಮಕೂರು : ಕಾರೊಂದು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಒ. ಧನಂಜಯ ಹಾಗೂ ಶ್ರೀಕೃಷ್ಣ ಮೃತಪಟ್ಟ ಶಿಕ್ಷಕರು. ಶಿಕ್ಷಕರಾದ ನರಸಿಂಹ ಹಾಗೂ ವೆಂಕಟಾಚಲಪತಿ ಗಂಭೀರವಾಗಿ ಗಾಯಕೊಂಡಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೆನಹಳ್ಳಿ ಗೇಟ್‌ ಬಳಿ ಕಾರು ಪಲ್ಟಿಯಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ವರು ಶಿಕ್ಷಕರು ತುಮಕೂರಿನಲ್ಲಿ ಮದುವೆ ಆರತಕ್ಷತೆ ಮುಗಿಸಿಕೊಂಡು ಪಾವಗಡಕ್ಕೆ ತೆರಳುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿದೆ. ಕಾರು ಪಲ್ಟಿಯಾದ ತೀವ್ರತೆಗೆ ಒ. ಧನಂಜಯ ಹಾಗೂ ಶ್ರೀಕೃಷ್ಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿಕ್ಷಕರಾದ ನರಸಿಂಹ ಹಾಗೂ ವೆಂಕಟಾಚಲಪತಿ ಗಾಯಗೊಂಡಿದ್ದಾರೆ.

ಒ. ಧನಂಜಯ ಅವರು ಪಾವಗಡ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾಗಿದ್ದರು. ಇನ್ನು ಶ್ರೀಕೃಷ್ಣ ಅವರು ಪಾವಗಡ ತಾಲೂಕಿನ ಗೌಡೇಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು. ಪಲ್ಟಿಯಾದ ತೀವ್ರತೆಗೆ ಕಾರು ಕೂಡ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page