ಚಳ್ಳಕೆರೆ ಆ.31. ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಲಿತಾಂಶದಲ್ಲಿ ಶೇ100 ತಂದು ಕೊಟ್ಟ ಬೆನ್ನಲ್ಲೇ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ
ಪಡೆದಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ.ಟಿ ರವೀಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಾಣೀಕೆರೆಯ ವೇದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಾಬಲ್ಯ ಮೆರೆಯುವುದರೊಂದಿಗೆ ವಿವಿಧ ಆಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವದರೊಂದಿಗೆ ಅದ್ದೂರಿಯಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
100 ಮೀಟರ್ ಓಟ
ಪ್ರಥಮ ಸ್ಥಾನ. – ಪ್ರಿಯಾಂಕ ಬಿ.
400 ಮೀಟರ್ ಓಟ ಪ್ರಥಮ ಸ್ಥಾನ.- ಭರತ್ ಕುಮಾರ್ . ಓ.
200 ಮೀಟರ್ ಓಟ ಪ್ರಿಯಾಂಕ ಬಿ. ಪ್ರಥಮ ಸ್ಥಾನ. 200 ಮೀಟರ್ ಓಟ ತೃತೀಯ ಸ್ಥಾನ. ಶಶಿಕಲಾ .ಜಿ., 3000 ಮೀಟರ್ ನ ಓಟ ತೃತೀಯ ಸ್ಥಾನ. ಪ್ರಿಯಾ ಬಿ.ಸಿ4X100 ರಿಲೆ. ,ಬಾಲಕಿಯರ ವಿಭಾಗ ದ್ವಿತೀಯ ಸ್ಥಾನ.
ಪ್ರಿಯಾಂಕ, ವರ್ಷಿಣಿ, ಶಶಿಕಲ,ಮತ್ತು ತನ್ಯ,4X400 ರಿಲೆ ಬಾಲಕರ ವಿಭಾಗ ಪ್ರಥಮ ಸ್ಥಾನ.
ಭರತ್ ಕುಮಾರ್, ಯಶವಂತ ರಾಜ್, ಸಂಜಯ್ ಯಾದವ್, ಗಿರೀಶ್., ಬಾಲಕಿಯರ ವಿಭಾಗದ ಥ್ರೋಬಾಲ್ ದ್ವಿತೀಯ ಸ್ಥಾನ.
ಹೀಗೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಥಮ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಿಟಿ ರವೀಂದ್ರ ಹಾಗೂ ಕಾರ್ಯದರ್ಶಿ ಕಿರಣ್, ಖಜಾಂಚಿಯಾದ ವಿಜಯ್ ಸರ್, ಪ್ರಾಂಶುಪಾಲರಾದ ಸಂದೀಪ್ , ಶಾಲಾ ಮುಖ್ಯ ಶಿಕ್ಷಕಿ ಪುಷ್ಪರಾಣಿ, ದೈಹಿಕ ಶಿಕ್ಷಕರಾದ ಸತೀಶ್ ,ರವಿ ,ವಿರೂಪಾಕ್ಷಪ್ಪ ಯೋಗೇಶ್, ಪ್ರಕಾಶ್ ಹಾಗೂ ಸಹನಾ ಇತರರು ಮಕ್ಕಳಿಗೆ ಅಭಿನಂದಿಸಿದ್ದಾರೆ.
0 Comments