ದಾವಣಗೆರೆ : ಕೌಟುಂಬಿಕ ಸಮಸ್ಯೆ ಹಿನ್ನೆಲೆ ತಂದೆ-ತಾಯಿಯಿಂದಲೆ ಯುವತಿಯ ಕಿಡ್ನಾಪ್ ಯತ್ನ ಘಟನೆ ತೋಳಹುಣಸೆ ಗ್ರಾಮದ ಬಳಿ ಇರುವ ದಾವಣಗೆರೆ ವಿಶ್ವವಿದ್ಯಾಲಯದ ಮುಂದೆ ನಡೆದಿದೆ.
ಬಳ್ಳಾರಿ ಮೂಲದ ಯುವತಿಯೊಬ್ಬಳು ದಾವಣಗೆರೆಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರು. ಇದರ ಬೆನ್ನಲ್ಲೇ ಎಂದಿನಂತೆ ಕಾಲೇಜೆಗೆ ಯುವತಿ ಬಂದಿದ್ದು, ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ಯುವಕರು ಯುವತಿಯನ್ನು ಕಾರ್ಗೆ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಯುವತಿಯು ರಕ್ಷಣೆಗಾಗಿ ಚೀರಾಡಿದ್ದ ಹಿನ್ನೆಲೆ ತಕ್ಷಣವೇ ಕಾರ್ ಗೆ ಅಡ್ಡಲಾಗಿ, ಯುವತಿಯ ರಕ್ಷಣೆಗಾಗಿ ನಿಂತ ವಿವಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗದವರು.
ರಕ್ಷಣೆ ಮಾಡಿ ಈ ಘಟನೆ ಬಗ್ಗೆ ದಾವಣಗೆರೆ ಪೋಲಿಸಗೆ ಮಾಹಿತಿ ತಿಳಿಸಿದ್ದು, ಸದ್ಯ ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಬೇಟಿ ನೀಡಿದರು. ಬಳಿಕ ಈ ಘಟನೆ ಬಗ್ಗೆ ವಿಚಾರಿಸಿದಾಗ ಯುವತಿಯ ಕಿಡ್ನಾಪ್ ಗ್ಯಾಂಗ್ನಲ್ಲಿ ಅವಳ ತಂದೆ- ತಾಯಿ ಶ್ಯಾಮಿಲು ಆಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಯುವತಿಯನ್ನು ಬಾಲ್ಯ ವಿವಾಹ ಮಾಡಿದ್ದು, ಪ್ರಾಥಮಿಕ ಮಾಹಿತಿಯಲ್ಲಿ ಹೊರಬಿದ್ದ ಕೌಟುಂಬಿಕ ಸಮಸ್ಯೆ.
ಅಷ್ಟೇ ಅಲ್ಲದೆ ಯುವತಿಯು ನನ್ನನ್ನು ಬಲವಂತದಿಂದ ಕರೆದುಕೊಂಡು ಹೋಗಿ ಆತನ ಬಳಿ ಬಿಡುತ್ತಾರೆ. ಆದರೆ ಆತನಿಗೆ ಅಕ್ರಮ ಸಂಬಂಧವಿರುವ ಹಿನ್ನೆಲೆ ಅವನ ಜೊತೆ ಕಳಿಸೋ ವಿಚಾರವಾಗಿ ಆತ್ಮಹತ್ಯೆಗೂ ಯತ್ನಿಸಿದ್ದೇ, ನನಗೆ ಅವನ ಜೊತೆ ಬಾಳಲು ಇಷ್ಟವಿಲ್ಲ ಎಂದು ಪೋಲಿಸರ ಬಳಿ ಅಳಲು ತೋಡಿಕೊಂಡಳು.
ಕಿಡ್ನಾಪ್ ವೇಳೆ ಸ್ಥಳೀಯರ ಎಂಟ್ರಿಯಿಂದ ಯುವತಿ ಬಚಾವ್ ಆಗಿದ್ದು, ಯುವತಿಯ ತಂದೆ ತಾಯಿಗೆ ಕ್ಲಾಸ್ ತೆಗೆದುಕೊಂಡ ಸ್ಥಳಿಯರು ಹಾಗೂ ಪೋಲಿಸರು.
0 Comments