ಕೋಳಿ ಫಾರಂನಲ್ಲಿ ಮಲಗಿದ್ದ ನಾಲ್ವರು ಅನುಮಾನ್ಪಸದ ಸಾವು.

by | 18/09/23 | ಕ್ರೈಂ

ಚಿಕ್ಕಬಳ್ಳಾಪುರ : ಕೋಳಿ ಫಾರಂನಲ್ಲಿ ಮಲಗಿದ್ದ ನಾಲ್ವರು ಅನುಮಾನ್ಪಸದವಾಗಿ ಸಾವನ್ನಪ್ಪಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಹೊಲೆಯರಹಳ್ಳಿ ಬಳಿ ನಡೆದಿದೆ. ಕೋಳಿಫಾರಂನಲ್ಲಿ ಕೆಲಸಕ್ಕಾಗಿ ನೇಪಾಳ ಮೂಲದ ನಾಲ್ವರು 8 ದಿನದ ಹಿಂದೆ ಬಂದಿದ್ದರು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ನಾಲ್ವರು ಬೆಳಗ್ಗೆ ಏಳಲೇ ಇಲ್ಲ. 60 ವರ್ಷದ ಕಾಲೇ ಸರೇರಾ, 50 ವರ್ಷದ ಲಕ್ಷ್ಮಿ ಸರೇರಾ, 40 ವರ್ಷದ ಉಷಾ ಸರೇರಾ, 16 ವರ್ಷದ ಪೂಲ್ ಸರೇರಾ ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ದೊಡ್ಡಬೆಳಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಹೀರಾತು

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *