ಹಿರಿಯೂರು:
ಕೇಂದ್ರ ಸರ್ಕಾರದ ಆದೇಶದ ಮೇರೆಗೆ 60 ಕಿ.ಮೀ ದೂರದೊಳಗಡೆ ಇರುವ ಯಾವುದೇ ಟೋಲ್ ಗಳಿಗೆ ಸ್ಥಳೀಯರು ಶುಲ್ಕವನ್ನು ಪಾವತಿಸುವಂತಿಲ್ಲ ಎಂಬುದಾಗಿ ಹೇಳಿದ್ದು, ಈ ಬಗ್ಗೆ ಜನರು ಜಾಗೃತರಾಗುವ ಮೂಲಕ 60 ಕಿ.ಮೀ ಕ್ಕಿಂತ ಕಡಿಮೆ ಅಂತರದಲ್ಲಿದ್ದರೆ ಟೋಲ್ ನಲ್ಲಿ ಯಾವುದೇ ಶುಲ್ಕ ಪಡೆಯಬಾರದು ಎಂಬುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕು ಅಧ್ಯಕ್ಷ ಬಿ.ಲಕ್ಷ್ಮಿಕಾಂತ್ ಹೇಳಿದರು.
ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ಗುಯಿಲಾಳು ಟೋಲ್ ಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ 60 ಕಿ.ಮೀ ದೂರದೊಳಗಡೆ ಇರುವ ಯಾವುದೇ ಟೋಲ್ ಗಳಿಗೆ ಸ್ಥಳೀಯರು ಶುಲ್ಕವನ್ನು ಪಡೆಯದಂತೆ ಚೆಕ್ ಪೋಸ್ಟ್ ಮುಖ್ಯವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ಟೋಲ್ ಗಳಲ್ಲಿ ಶೇಕಡಾ 60ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಕನ್ನಡಿಗರಿಗೆ ಟೋಲ್ ಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಮಾಡಿಕೊಡಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ನೀಡುವ ಬಗ್ಗೆ ಕರ್ನಾಟಕ ನವನಿರ್ಮಾಣ ಸೇನೆಯು ಗುಯಿಲಾಳ್ ಟೋಲ್ ಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಬಿ.ಲಕ್ಷ್ಮಿಕಾಂತ್, ಉಪಾಧ್ಯಕ್ಷರಾದ ಚೇತನ್, ನಗರ ಪ್ರಧಾನ ಕಾರ್ಯದರ್ಶಿ ವಿಷ್ಣು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸಿಫ್, ಮೇಟಿಕುರ್ಕೆ ಗ್ರಾಮದ ಅಧ್ಯಕ್ಷ ಲಕ್ಷ್ಮಣ್ ಹಾಗೂ ಪದಾಧಿಕಾರಿಗಳಾದ ರಾಮು, ತಿಮ್ಮಯ್ಯ ,ಜಬಿವುಲ್ಲಾ, ಶರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 Comments