ಕೆರೆ ನೀರು ಅಕ್ರಮವಾಗಿ ಕೃಷಿಗೆ ಬಳಕೆ ನೀರು ಖಾಲಿ ಖಾಲಿ. ಕೆರೆಯಂಗಳದಲ್ಲಿ ಅಕ್ರಮ ಬೆಳೆ ಬಿತ್ತನೆ ಅಧಿಕಾರಿಗಳು ಮೌನಕ್ಕೆ ಶರಣು ಸಾರ್ವಜನಿಕರ ಅಕ್ರೋಶ. ಚನ್ನಗಿರಿ.

by | 19/11/23 | ತನಿಖಾ ವರದಿ

ಚನ್ನಗಿರಿ ನ.19 ಜನ ಜಾನುವಾರುಗಳಿಗೆ ನೀರಿನ ಬವಣೆ ನೀಗಿಸಲು ಕೆರೆ ನೀರು ಬರದಾನ ಇದನ್ನೇ ಬಂಡವಾಳ ಮಾಡಿ ಕೊಂಡ ಕೆಲವರು ಕೃಷಿಗೆ ಬಳಕೆ ಮಾಡಿ ಕೆರೆ ನೀರು ಖಾಲಿ .

ಹೌದು ಇದು ದಾವಣಗೆರೆ ಜಿಲ್ಲೆಯ ಚನ್ಮಗಿರಿ ತಾಲೂಕಿನ ಕಾಕನೂರು ಗ್ರಾಪಂ ವ್ಯಾಪ್ತಿಯ ಕೊಳೇನೂರು ಗ್ರಾಮದ ಕೆರೆಯ ನೀರಿಗೆ ರೈತರು ಅಕ್ರಮ ಡೀಸೆಲ್‌ ಪಂಪ್‌ಸೆಟ್‌ ಬಳಸಿ ತಮ್ಮ ಜಮೀನುಗಳಿಗೆ ನೀರು ಹರಿಸಿ ಬೆಳೆಗಳನ್ನು ಬೆಳೆಯಲು ಮುಂದಾಗಿ ಕೆರೆ ನೀರು ಖಾಲಿ ಮಾಡಿದ್ದಾರೆ. ಕೆರೆಯ ನೀರನ್ನು ಅಕ್ರಮವಾಗಿ ಡೀಸೆಲ್ ಪಂಪ್ ಬಳಕೆ ಮಾಡಿ ಕೃಷಿಗೆ ನೀರು ಬಳಕೆ ಮಾಡಿಕೊಳ್ಳುವಂತಿಲ್ಲ ಎಂಬ ನಿಯಮವಿದೆ ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೃಷಿಗೆ ಅಕ್ರಮ ನೀರು ಬಳಕೆ ಮಾಡಿ ಕೆರೆ ನೀರು ಖಾಲಿ ಮಾಡಿ ಈಗ ಕೆರೆಯಂಗವನ್ನು ಒತ್ತುವರಿ ಮಾಡಿ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಇತ್ತ ಮಳೆಯಿಲ್ಲದೆ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಜನ ಜಾನುವಾರು.ಪ್ರಾಣಿ. ಪಕ್ಷಿ. ಸಂಕುಲಕ್ಕೆ ಆಶ್ರಯವಾಗ ಬೇಕಿದ್ದ ನೀರನ್ನು ಕೆರೆಯ ಅಕ್ರಪಕ್ಕದ ಜಮೀನಿನ ಮಾಲಿಕರು ಅಕ್ರಮವಾಗಿ ಬಳಕೆ ಮಾಡಿ ನೀರು ಖಾಲಿ ಮಾಡಿದ್ದು ಜಾನುವಾರು.ಪಕ್ಷಿಗಳು ನೀರಿಗಾಗಿ ಪರದಾಡಿದರೆ ಅಂತರ್ಜಲ ಮಟ್ಟ ಕುಸಿಯುವ ಭೀತಿ ಎದುರಾಗಿದ್ದು. ಈಗ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದರೂ ಸಹ ಜಿಲ್ಲಾಡಳಿತ. ತಾಲೂಕು ಆಡಳಿತ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.

ಈಗಲಾದರೂ ಇರುವ ಕೆರೆಯ ನೀರನ್ನು ರಕ್ಚಣೆ ಜತೆಗೆ ಕೆರೆಯ ಭುಮಿ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

.
ವರದಿ ಕುಳೇನೂರು ಅರುಣ್ ಕುಮಾರ್ ಚನ್ನಗಿರಿ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *