ಕೆರೆಯಲ್ಲಿನ ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕುವವರು ಯಾರು…?

by | 05/12/22 | ಸಾಮಾಜಿಕ

ಚಳ್ಳಕೆರೆ.
ಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ, ಟ್ರ‍್ಯಾಕ್ಟರ್‌ಗಳಿಂದಕೆರೆ ಮಣ್ಣನ್ನು ಸಾಗಾಟ ಮಾಡಲಾಗುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದ ಜನ ಜಾನುವಾರುಗಳಿಗೆ ಜೀವನಾಡಿಗಳಾದ ಪೂರ್ವಜನರು ನಿರ್ಮಿಸಿದ ಕೆರೆಗಳು ಇಂದು ಅಕ್ರಮ ಮಣ್ಣು ಗಣಿಗಾರಿಕೆ ನಲುಗಿ ಕೆರೆಯ ಚಿತ್ರಣವೇ ಬದಲಾಗಿರುವುದು ಕಂಡು ಬಂದಿದೆ.
ಚಳ್ಳಕೆರೆ ತಾಲೂಕಿನ ಬೊಮ್ಮಸಂದ್ರ ಗ್ರಾಮದ ಕೆರೆಯಂಗಳದಲ್ಲಿ ಪ್ರತಿನಿತ್ಯ ಹಾಡು ಹಗಲೇ ಜೆಸಿಬಿ ಯಂತ್ರಗಳಿAದ ನಿತ್ಯ ಸುಮಾರು ೨೦ ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳೀತ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಮಣ್ಣು ಸಾಗಾಟದಿಂದ ಕೆರೆಯಲ್ಲಿ ಬೃಹತ್ ಗುಂಡಿಗಳನ್ನು ನಿರ್ಮಾಣವಾಗಿ ಕೆರೆಯಲ್ಲಿನ ನೀರು ನಿಲ್ಲದೆ ಇಂಗಿ ಹೋಗುತ್ತಿದ್ದು ಇದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಬೀತಿಯಲ್ಲಿ ಗ್ರಾಮಸ್ಥರು/
ಕೆರೆ ಬಳಕೆದಾರರ ಜಿಲ್ಲಾ ಒಕ್ಕೂಟದ ಕಾರ್ಯದಶಿ ಓ.ಆನಂದ್ ಮಾತನಾಡಿ ಅಕ್ರಮವಾಗಿ ಮಣ್ಣನ್ನುತೆಗೆದು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದು, ಕೆರೆಸಂಪತ್ತು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳೀತ ,ಜಿಲ್ಲಾಡಳತ ಗಮನಕ್ಕೂ ತರಲಾಗಿದೆ ಆದರೂ ಸಹ ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.
ತಾಲೂಕಿನ ಬಹುತೇಕ ಎಲ್ಲಾಕೆರೆಗಳು ತುಂಬಿವೆ. ಆದರೆ, ಬೊಮ್ಮಸಂದ್ರ ಕೆರೆಗೆ ಅಲ್ಪಸ್ವಲ್ಪ ನೀರು ಬಂದಿದ್ದು. ಅಕ್ರಮ ಮಣ್ಣು ಸಾಗಾಟದಿಂದ ನೀರು ಕೆರೆಯಲ್ಲಿ ನಿಲ್ಲದೆಂತಾಗಿದೆ ಈಗಲಾದರೆ ಸಂಬAಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *