ಚಳ್ಳಕೆರೆ ಆ.25 ಭಾರತೀಯ ಪರಂಪರೆಯಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದ್ದು, ಕೃಷ್ಣನ ನಡಿಗೆ, ತುಂಟಾಟ ಹಾಗೂ ಸೌಜನ್ಯ ಸ್ವಭಾವವನ್ನು ಮಕ್ಕಳಿಂದ ಕುಟುಂಬದವರು ಬಯಸುತ್ತಾರೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ಪಟ್ಟರು.
ಚಳ್ಳಕೆರೆ ಇಸ್ಕಾನ್ ಟೆಂಪಲ್. ಚಿತ್ರದುರ್ಗ ರಸ್ತೆಯ ಶ್ರೀ ಕೃಷ್ಣ ಪರಮಾತ್ಮನಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಭಿಷೇಕ ಅರ್ಚನೆ ವಿಶೇಷ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತಿ, ಲಿಂಗಗಳನ್ನು ಮೀರಿ ಇಷ್ಟ ಪಡುವುದು ಕೃಷ್ಣನನ್ನು ಭಾಷೆಯ ಗಡಿಯನ್ನು ದಾಟದೆ ಕೃಷ್ಣನ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಇರುವಂತದ್ದು, ಸಾಮರಸ್ಯ, ಸಹೋದರತ್ವಕ್ಕೆ ಮತ್ತೊಂದು ಹೆಸರು ಶ್ರೀ ಕೃಷ್ಣ ಎಂದರೆ ತಪ್ಪಾಗಲಾರದು ಎಂದು ಕೃಷ್ಣ ಮಹಾಭಾರತದಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿದ್ದು, ಜನಮೆಚ್ಚುಗೆಗೆ ಪಾತ್ರರಾಗಿದ್ದರೆ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾರ್ ,ನಗರಸಭೆ ಸದಸ್ಯರಾದ ಬಿ.ಟಿ.ರಮೇಶ್ ಗೌಡ, ನೇತಾಜಿ ಪ್ರಸನ್ನ ವಕೀಲ ಶಶಿಕುಮಾರ್ ಇತರರು ಭಾಗವಹಿಸಿದ್ದರು.
0 Comments