ಕೃಷಿ ಗಣತಿ ಹಾಗೂ ಕೃಷಿ ಅಂಕಿ-ಅAಶ ಸಮನ್ವಯ ಸಮಿತಿ ಸಭೆ ಬೆಳೆ ಕಟಾವು ನಿರ್ಲಕ್ಷö್ಯ ತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

by | 15/06/24 | ಕೃಷಿ


ಚಿತ್ರದುರ್ಗ ಜೂ.15:
ಬೆಳೆ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತ ನಿರ್ಧರಿಸುತ್ತವೆ. ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದರ ಪರಿಣಾಮ ಜಿಲ್ಲೆಯ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ 11ನೇ ಕೃಷಿ ಗಣತಿ ಹಾಗೂ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅAಶಗಳ ಮೊದಲನೇ ತ್ರೆöÊಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳಕಟಾವು ಯೋಜನೆ ಪಟ್ಟಿ ಬಿಡುಗಡೆಗೊಂಡ ಕೂಡಲೇ ನಮೂನೆ-1 ನ್ನು ಕೈಗೊಳ್ಳಲು ಇಲಾಖಾ ಮುಖ್ಯಸ್ಥರು ಅನುವು ಮಾಡಿಕೊಡಬೇಕು. ಕಟಾವು ಪ್ರಯೋಗದ ಸಿ.ಸಿ.ಇ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ನಮೂನೆ-1 ಕೈಗೊಳ್ಳಲು ಸೂಕ್ತ ಕ್ರಮ ವಹಿಸಬೇಕು. ಬೆಳೆ ಕಟಾವು ಪ್ರಯೋಗದಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ಮೊಬೈಲ್ ತಂತ್ರಾAಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ತುಂಬಬೇಕು. ಬೆಳೆ ಕಟಾವು ಪ್ರಯೋಗ ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಪ್ರಯೋಗ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೆಳೆ ಕಟಾವು ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲಕ್ಷ್ಯದಿಂದ ತಪ್ಪಾಗಿ ಮಾಹಿತಿ ತುಂಬಿದರೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಛಾಯಾಚಿತ್ರವನ್ನು ಸೆರೆ ಹಿಡಿಯುವಾಗ ತೂಕದ ಯಂತ್ರವು ಹಾಗೂ ಉತ್ಪನ್ನವು ಕಾಣುವ ರೀತಿಯಲ್ಲಿ ಇರಬೇಕು. ಇಲ್ಲವಾದರೆ ಕಟಾವು ಪ್ರಯೋಗ ಅನೂರ್ಜಿತವಾಗಲಿದೆ. ಛಾಯಾಚಿತ್ರವನ್ನು ಸೆರೆ ಹಿಡಿಯುವಾಗ ತೂಕದ ಯಂತ್ರವು ಹಾಗೂ ಉತ್ಪನ್ನವು ಕಾಣುವ ರೀತಿಯಲ್ಲಿ ಇರಬೇಕು. ಬಂದಿರುವAತಹ ತೂಕವನ್ನು ಸ್ಪಷ್ಟವಾಗಿ ಗೋಚರವಾಗುವ ರೀತಿಯಲ್ಲಿ ಫೋಟೊದಲ್ಲಿ ಸೆರೆ ಹಿಡಿಯಬೇಕು. ಉತ್ಪನ್ನ ಹಾಗೂ ಉಪ ಉತ್ಪನ್ನಗಳನ್ನು ನಿರ್ದಿಷ್ಟ ಕಾಲಂಗಳಲ್ಲಿಯೇ ತುಂಬಬೇಕು. ತೂಕದ ಯಂತ್ರದಲ್ಲಿರುವ ಹೋಲ್ಡ್ ಬಟನ್ ಪ್ರೆಸ್ ಮಾಡಿ ತೂಕವು ಸ್ಥಿರವಾದ ನಂತರವೇ ಫೋಟೋ ತೆಗೆಯಬೇಕು. ಬೆಳೆ ಕಟಾವು ನಿಯಮಾನುಸಾರ ಮಾಡದೇ, ರೈತರಿಗೆ ಬೆಳೆ ವಿಮೆಯ ಮೊತ್ತ ದೊರಕದೇ ಹೋದಲ್ಲಿ ಅಥವಾ ಕಡಿಮೆ ಮೊತ್ತ ದೊರೆತರೆ, ಕಟಾವು ಪ್ರಯೋಗ ಕೈಗೊಂಡ ಅಧಿಕಾರಿ ವೇತನದಲ್ಲಿ ಮೊತ್ತ ಕಟಾವುಗೊಳಿಸಿ, ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾಗುವುದು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

ಕೃಷಿ, ತೋಟಗಾರಿಕೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಬೆಳೆ ಕಟಾವುಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಯಾವುದೇ ಸಬೂಬು ಸಲ್ಲದು. ಬೆಳಿ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ರೈತರು, ವಿಮಾ ಕಂಪನಿಯ ಅಧಿಕಾರಿಗಳು, ಮೇಲ್ವಿಚಾರಕರಿದ್ದಲ್ಲಿ ಅವರನ್ನು ಸಹ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಿರುವಂತೆ ಕ್ರಮವಹಿಸಬೇಕು. ಬೆಳೆ ಸಮೀಕ್ಷೆ ದತ್ತಾಂಶದ ಶೇ.1% ಪರಿಶೀಲನೆಯನ್ನು ಆಪ್ ಬಿಡುಗಡೆಯಾದ ತಕ್ಷಣವೇ ನಿಯೋಜಿಸಿದ ಅಧಿಕಾರಿಗಳು ನಿಯೋಜಿಸಿದ ಪ್ಲಾಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಫೋಟೋ ತೆಗೆದು ಮೊಬೈಲ್ ಆಪ್ ನಲ್ಲಿ ಅಪ್ಲೋಡ್ ಮಾಡಲು ಸೂಚಿಸಿದರು. ಯಾವುದೇ ಕಾರಣಕ್ಕೂ ನಿಯೋಜಿಸಿದ ಪ್ಲಾಟ್ ಗಳನ್ನು ಪರಿಶೀಲನೆ ಕೈಗೊಳ್ಳದೇ ಬಾಕಿ ಉಳಿಸುವಂತಿಲ್ಲ ಎಂದರು.

ಪ್ರಯೋಗ ಅನೂರ್ಜಿತ ಅಧಿಕಾರಿಗಳ ಅಮಾನತಿಗೆ ಕ್ರಮ :

ಬೆಳ ಕಟಾವಿನ ಪ್ರಯೋಗದಲ್ಲಿ ನಿರ್ಲಕ್ಷö್ಯ ತೋರಿ ಪ್ರಯೋಗಗಳ ಅನೂರ್ಜಿತಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಾಗುವುದು. ಗಂಭೀರ ಪ್ರಕರಣಗಳಲ್ಲಿ ಅಮಾನತು ಮಾಡಲಾಗುವುದು. ಅನೂರ್ಜಿತಗೊಂಡ ಪ್ರಯೋಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗೆ ನಿರ್ದೇಶನ ನೀಡಿದರು.
2023-24ನೇ ಸಾಲಿನ ನಮೂನೆ ಎರೆಡನೇ ಹಂತದಲ್ಲಿ ಮುಂಗಾರು ಹಂಗಾಮಿನ ನಮೂನೆ-2 ರ ಹಂತದಲ್ಲಿ 1 ಹಾಗೂ ಹಿಂಗಾರು ಹಂಗಾಮಿನ ನಮೂನೆ-2ರ ಹಂತದಲ್ಲಿ 3 ಹಾಗೂ ಬೇಸಿಗೆ ಹಂಗಾಮಿನ ನಮೂನೆ-2 ರ ಹಂತದಲ್ಲಿ 1 ಬೆಳೆ ಕಟಾವು ಪ್ರಯೋಗಗಳು ಅನೂರ್ಜಿತವಾಗಿವೆ ಎಂದು ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಸಭೆಯಲ್ಲಿ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಒಟ್ಟು 31 ಪ್ರಕರಣಗಳಲ್ಲಿ ಕಟಾವು ಪ್ರಯೋಗದ ಪೋಟೋಗಳು ಹೊಂದಾಣಿಕೆಯಾಗಿಲ್ಲ. ಒಟಾರೆ 3 ಹಂಗಾಮಿನ ಕಟಾವು ಪ್ರಯೋಗಳಲ್ಲಿ 89 ಪ್ರಯೋಗಳಿಗೆ ಆಕ್ಷೇಪಣೆ ಸಲ್ಲಿಸಿ, ಸಂಬAಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟೀಕರಣಕ್ಕೆ ನೋಟಿಸು ನೀಡಲಾಗಿದೆ. 2023-24ನೇ ಬೇಸಿಗೆ ಹಂಗಾಮಿನಿ ಕಟಾವು ಪ್ರಯೋಗ ಬಹುತೇಕ ಪೂರ್ಣವಾಗಿದೆ. ಜಿಲ್ಲೆಗೆ ಒಟ್ಟು 546 ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು ಯೋಜಿಸಲಾಗಿತ್ತು. ಇದರಲ್ಲಿ ಕಂದಾಯ ಇಲಾಖೆಗೆ 248, ಕೃಷಿ ಇಲಾಖೆಗೆ 66, ತೋಟಗಾರಿಕೆ ಇಲಾಖೆಗೆ 62 ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 170 ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ಈ ಎಲ್ಲಾ ಪ್ರಯೋಗಗಳ ಫಾರಂ-1 ಪೂರ್ಣಗೊಂಡಿವೆ. ಆದರೆ 546 ಪ್ರಯೋಗಳ ಪೈಕಿ 13 ಪ್ರಯೋಗಗಳ ಫಾರಂ-2 ಪೂರ್ಣಗೊಂಡಿಲ್ಲ ಎಂದು ರವಿಕುಮಾರ್.ಎನ್ ಮಾಹಿತಿ ನೀಡಿದರು.

11ನೇ ಕೃಷಿ ಗಣತಿ ವರದಿ ಸ್ಪಷ್ಟೀಕರಣ ನೀಡಲು ಸೂಚನೆ:

ಸಭೆಯಲ್ಲಿ 2021-22ನೇ ಸಾಲಿನ 11ನೇ ಕೃಷಿ ಗಣತಿ ವರದಿ ಕುರಿತು ಚರ್ಚಿಸಲಾಯಿತು. 2015-16ನೇ ಸಾಲಿನ 10ನೇ ಕೃಷಿ ಗಣತಿ ಅನುಸಾರ ಜಿಲ್ಲೆಯಲ್ಲಿ 3,01,539 ವೈಯಕ್ತಿಕ ಹಿಡುವಳಿದಾರರು ಇದ್ದು, 5,48,344 ಹೆಕ್ಟೇರ್ ಸಾಗುವಳಿ ಭೂಮಿ ಇತ್ತು. ಸದ್ಯದ 11ನೇ ಕೃಷಿ ಗಣತಿಯಲ್ಲಿ 3,66,453 ವೈಯಕ್ತಿಕ ಹಿಡುವಳಿದಾರರು ಹಾಗೂ 5,75,498 ಹೆಕ್ಟೇರ್ ಸಾಗುವಳಿ ಭೂಮಿ ಇರುವುದಾಗಿ ತಿಳಿದು ಬಂದಿದೆ. ಸಾಗುವಳಿ ಭೂಮಿ ಕ್ಷೇತ್ರದಲ್ಲಿ 27,154 ಹೆಕ್ಟೇರ್ ಅಂದರೆ ಸುಮಾರು 68 ಸಾವಿರ ಎಕರೆ ಸಾಗುವಳಿ ಭೂಮಿ ಹೆಚ್ಚಳವಾಗಿದೆ. ಇಷ್ಟು ಪ್ರಮಾಣದ ಸಾಗುವಳಿ ಭೂಮಿ ಹೆಚ್ಚಳವಾಗಲು ಸಾಧ್ಯವಿಲ್ಲ. ತಾಲ್ಲೂಕುವಾರು ತಹಶೀಲ್ದಾರಗಳಿಂದ ಮತ್ತೊಮ್ಮೆ ಮಾಹಿತಿ ಪಡೆದು ಕೃಷಿ ಗಣತಿ ವರದಿಯನ್ನು ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸುವAತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ 11 ಕೃಷಿ ಗಣತಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಶೇ.5 ರಷ್ಟು ಹಾಗೂ ಪರಿಶಿಷ್ಟ ಪಂಗಡದ ಶೇ.6 ರಷ್ಟು ಸಾಗುವಳಿ ಭೂಮಿ ಪ್ರಮಾಣವು 2015-16ನೇ ಗಣತಿಗಿಂತಲೂ ಕಡಿಮೆಯಾಗಿದೆ. ಜಿಲ್ಲೆಯ ಮಹಿಳಾ ಸಾಗುವಳಿ ಹಿಡುವಳಿದಾರರ ಸಂಖ್ಯೆ 2015-16ನೇ ಗಣತಿಯಲ್ಲಿ 73,405 ಇದ್ದು, ಪ್ರಸ್ತುತ ಗಣತಿಯಲ್ಲಿ 1,10,687 ಕ್ಕೆ ಏರಿಕೆಯಾಗಿದೆ.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೆಶಕ ಮಂಜುನಾಥ, ಉಪನಿರ್ದೇಶಕರುಗಳಾದ ಪ್ರಭಾಕರ್, ಶಿವಕುಮಾರ್, ಸಹಾಯಕ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page