ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ತಾಲ್ಲೂಕಿನ ಕುಂಚಿಟಿಗರಿಂದ ಉಪವಾಸ ಸತ್ಯಾಗ್ರಹ ಮಾಜಿ ಸಂಸದರಾದ ಚಂದ್ರಪ್ಪ ರವರಿಂದ ಬೆಂಬಲ

by | 06/09/23 | ಪ್ರತಿಭಟನೆ


ಹಿರಿಯೂರು :
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಪ್ರಕಾರ ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ, ರಾಜ್ಯ ಸರ್ಕಾರದ ಪ್ರವರ್ಗ -1 ರಲ್ಲಿ ಮೀಸಲಾತಿ, ಕುಂಚಿಟಿಗರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬುದಾಗಿ ಬೇಡಿಕೆ ಇಟ್ಟು, ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ವತಿಯಿಂದ ಗಾಂಧೀವಾದಿ ಕಸವನಹಳ್ಳಿರಮೇಶ್ ನೇತೃತ್ವದಲ್ಲಿ “ಸಮುದಾಯಕ್ಕಾಗಿ ಒಂದು ದಿನ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಹಕ್ಕೊತ್ತಾಯ ಮಾಡುವ ಉಪವಾಸ ಸತ್ಯಾಗ್ರಹ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಮತ್ತು ಸಂಗಡಿಗರು ಉಪವಾಸ ಸತ್ಯಾಗ್ರಹ ನಡೆಸಿದರು. ಈ ಉಪವಾಸ ಸತ್ಯಾಗ್ರಹಕ್ಕೆ ಚಿತ್ರದುರ್ಗ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿಸಂಸದ ಚಂದ್ರಪ್ಪ, ಆಗಮಿಸಿ ಬೆಂಬಲ ಸೂಚಿಸಿದರು.
ಈ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಹ ಆಗಮಿಸಿ ಬೆಂಬಲ ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಗಾಗಿ ಸ್ಥಳದಲ್ಲಿಯೇ ಪತ್ರ ಬರೆದು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಗೌರವಾಧ್ಯಕ್ಷ ಯಳನಾಡು ಗಿರಿಸ್ವಾಮಿ, ನಗರಸಭೆ ಸದಸ್ಯರಾದ ಪಾಂಡುರಂಗವಿಠ್ಠಲ, ಈಶ್ವರ್ ದಗ್ಗೆ, ಉಚ್ಚವ್ವನಹಳ್ಳಿ ಅವಿನಾಶ, ಆಪ್ಟಿಕಲ್ಸ್ ರಾಜೇಶ್, ಜಯಪ್ರಕಾಶ, ಕಾತ್ರಿಕೇನಹಳ್ಳಿಶ್ರೀನಿವಾಸ, ಮತ್ತು ಮಂಜುನಾಥ್ ದಿಂಡಾವರ, ಚಂದ್ರಗಿರಿ ಶಶಿಕಲಾ, ಕ್ಯಾದಿಗುಂಟೆ ಜಯರಾಮಯ್ಯ, ಹುಣಿಸೆಹಳ್ಳಿ ನಾಗರಾಜ, ದ್ಯಾಮಣ್ಣ, ಪೆಪ್ಸಿ ಹನುಮಂತರಾಯ, ಆಲೂರುನರೇಂದ್ರ, ಹೊಸಯಳನಾಡು ಗ್ರಾ.ಪಂ.ಅಧ್ಯಕ್ಷೆ ಹೇಮಲತ, ಮಲ್ಲಪ್ಪನಹಳ್ಳಿ ಜೋಗೇಶ್, ದೇವರಕೊಟ್ಟ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *