ಚಳ್ಳಕೆರೆ ಜನಧ್ವನಿ ವಾರ್ತೆ ಆ.13 ದುಷ್ಕರ್ಮಿಗಳು ಈರುಳ್ಳಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿ ವಿಕೃತಿ ಮೆರೆದಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ಬೆಳೆ ನಾಶವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಸಮೀಪದ ಗ್ರಾಮದ ಮಂಜುನಾಥರೆಡ್ಡಿ ತೋಟದಲ್ಲಿ ಘಟನೆ ನಡೆದಿದೆ.
ಕಿಡಿಗೇಡಿಗಳು ರಾತ್ರಿ ಸಿಂಪಡಣೆ ಮಾಡಿರುವುದರಿಂದ ಈರುಳ್ಳಿ ಬೆಳೆ ಒಣಗುತ್ತಿರುವ ದೃಶ್ಯ ಕಂಡು ಬಂದಿದೆ.
ರೈತ ಮಂಜುನಾಥರೆಡ್ಡಿ ಸುಮಾರು 4 ಎಕರೆಯಲ್ಲಿ ಈರುಳ್ಳಿ ಬೆಳೆಯನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. ಬೆಳೆ ಸಹಿಸದ ಕಿಡಿಗೇಡಿಗಳು ಬೆಳೆ ನಾಶವಾಗುವ ಔಷಧಿಯನ್ನು ಈರುಳ್ಳಿಗೆ ಸಿಂಪಡಣೆ ಮಾಡಿರುವುದರಿಂದ ಈರುಳ್ಳಿ ಬೆಳೆ ನಷ್ಟವಾಗಿದ್ದು ರೈತ ಆತಂಕಗೊಂಡಿದ್ದಾನೆ..
0 Comments