ಕಾಮಸಮುದ್ರ ಅವಧೂತರಾ ಶ್ರೀ ಗೌಸಿದ್ದರಾತ, ಶ್ರೀ ನಾಗೇಶತಾತ ಹಾಗೂ ಸದಾನಂದಗಿರಿ ಸ್ವಾಮಿಗಳ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಡಗರ ಸಂಭ್ರಮದಿಂದ ಜರುಗುತು..

by | 10/03/24 | ಚರಿತ್ರೆ


ಚಳ್ಳಕೆರೆ ಮಾ10.ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನೆಲೆಸಿರುವ ಅವಧೂತರಾ
ಶ್ರೀ ಗೌಸಿದ್ದರಾತ, ಶ್ರೀ ನಾಗೇಶತಾತ ಹಾಗೂ ಸದಾನಂದಗಿರಿ ಸ್ವಾಮಿಗಳ
ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಡಗರ ಸಂಭ್ರಮದಿಂದ ಜರುಗುತು. ತಾತನ ಮಠದಲ್ಲಿ ಧ್ವಜ ವಿರಿಸುವುದು, ಜಾಗರಣೆ ಪೂಜೆ ಮತ್ತು ಕಾರ್ಯಕ್ರಮ ಹಾಗೂ ವಿವಿಧ ವಾಧ್ಯಗಳೊಂದಿಗೆ ಶನಿವಾರ ಹೂವಿನ ಪಲ್ಲಕ್ಕಿ ಉತ್ಸವ” ನಂತರ ಮಧ್ಯಾಹ್ನ 2-00 ಗಂಟೆಗೆ ಬಲಿಪಂಜೆ ಪೂರ್ಣಾಹುತಿಯೊಂದಿಗೆ ಶ್ರೀ ಶಿವಾನಂದ ಸ್ವಾಮಿಗಳಿಂದ ರಥೋತ್ಸವಕ್ಕೆ ಕಳಸ ಸ್ಥಾಪನೆ, ‘ಮುಕ್ತಿ ಭಾವುಟ ಹರಾಜು’ ನಂದಿ ಕೋಲು ಕುಣಡೊಳ್ಳು ಕುಣಿತ, ಬೊಂಬೆ ಕುಣಿತ, ಭಜನೆ, ಚಿಕ್ಕಭಜನೆ, ಉರಿಮೆ, ಮೇಳ ಹಾಗೂ ಸಕಲ ವಾದ್ಯಗಳಿಂದ ಪಾದಗಟ್ಟೆಯವರೆಗೆರಥೋತ್ಸವ
ನಡೆಯಿತು .

ನೆರೆಯ ಆಂದ್ರಪದೆಶ ದೇರಿದಂತೆ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.


ಇತಿಹಾಸ. ಮಧ್ಯಕರ್ನಾಟಕ ಭಾಗಕ್ಕೆ ಸೇರಿದ ಚಳ್ಳಕೆರೆ ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಸಾಧುಸಂತರು, ಯೋಗಿಗಳು ಮತ್ತು ಅವಧೂತರು ಆಗಿಹೋದದ್ದು ಸರಿಯಷ್ಟೆ. ಅಂಥವರಲ್ಲಿ ನಾಗೇಶತಾತ ಒಬ್ಬರು.
20ನೇ ಶತಮಾನದ ಪೂರ್ವಾರ್ಧ. ಆಗ ವೈಶಾಖಮಾಸ. ಸೂರ್ಯನ ಪ್ರಖರಕಿರಣಗಳು ಭೂಮಿಯನ್ನು ದಹಿಸುತ್ತಿವೆ. ಮಟಮಟ ಮಧ್ಯಾಹ್ನದ ವೇಳೆ. ಚಳ್ಳಕೆರೆ ತಾಲೂಕಿನ ಕಾಮಸಮುದ್ರದ ಬೀದಿಗಳಲ್ಲಿ ಮಧ್ಯವಯಸ್ಸು ಮೀರಿದ ಕೃಶವ್ಯಕ್ತಿಯೊಬ್ಬರು ಬರಿಗಾಲಲ್ಲಿ ನಡೆಯುತ್ತಿದ್ದಾರೆ. ದೈವೀಕಳೆಯುಳ್ಳ ಪ್ರಸನ್ನವದನ, ಕುರುಚಲು ಗಡ್ಡ, ಅತ್ಯಾಕರ್ಷಕ ವ್ಯಕ್ತಿತ್ವವುಳ್ಳ ಅವರು ಮಾಂಸಮಯ ಶರೀರವನ್ನು ಮಂತ್ರಮಯವಾಗಿಸಿಕೊಂಡಿದ್ದಾರೆ. ಆಗಾಗ್ಗೆ ‘ಶಿವಶಿವಾ’ ಎಂದು ಜಪಿಸುತ್ತ, ಕೊಡಗಟ್ಟಲೆ ಮಜ್ಜಿಗೆಯನ್ನು ಮೊಗೆಮೊಗೆದು ಪ್ರತಿಯೊಬ್ಬರಿಗೂ ತೀರ್ಥದಂತೆ ಕುಡಿಸುತ್ತಿದ್ದಾರೆ, ಆ ಮಜ್ಜಿಗೆ ಸೇವಿಸಿದ ಕಾಲರಾಪೀಡಿತರು ರೋಗದಿಂದ ಮುಕ್ತರಾಗಿ ಆ ಮಹಾಮಹಿಮರಿಗೆ ಶಿರಬಾಗುತ್ತಿದ್ದಾರೆ. ಕಾಮಸಮುದ್ರ ಹಾಗೂ ಸುತ್ತ-ಮುತ್ತಲ ಗ್ರಾಮಗಳನ್ನು ಆವರಿಸಿದ್ದ ಕಾಲರಾ ರೋಗ ಅವರ ಪಾದಸ್ಪರ್ಶದಿಂದ ನಿವಾರಣೆಯಾಗುತ್ತಿದೆ. ಹೀಗೆ, ತಮ್ಮ ಅಸದೃಶ ಮಂತ್ರಮಯ ವ್ಯಕ್ತಿತ್ವದಿಂದ ಜನೋಪಕಾರಿ ಕಾರ್ಯಗಳನ್ನು ಮಾಡುತ್ತಿದ್ದವರೇ ಶ್ರೀ ನಾಗೇಶತಾತ ಅಥವಾ ನಾಗಾರ್ಯ.
ಜನನ-ಪರ್ಯಟನ: ಕರ್ನಾಟಕದ ಗಡಿಭಾಗದಲ್ಲಿರುವ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಬೆಳಗುಪ್ಪ ಗ್ರಾಮದಲ್ಲಿ ಮಲ್ಲಾರೆಡ್ಡಿ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾಗಿ ಸು.1890ರಲ್ಲಿ ಜನಿಸಿದ ಇವರು ಪಾಕನಾಟಿ ವಂಶಸ್ಥರು. ಜನ್ಮನಾಮ ನಾಗರೆಡ್ಡಿ. ಜನ ಪ್ರೀತಿಯಿಂದ ‘ನಾಗೇಶ’ ಎಂದೇ ಕರೆಯುತ್ತಿದ್ದರು. ಇವರು 12 ವರ್ಷದವರಿದ್ದಾಗಲೇ ತಾಯ್ತಂದೆಯನ್ನು ಕಳೆದುಕೊಳ್ಳಬೇಕಾಯಿತು. ದಾಯಾದಿಗಳು ಇವರ ಆಸ್ತಿಯನ್ನು ಲಪಟಾಯಿಸಿದ್ದಲ್ಲದೆ ಅನೇಕ ಕಿರುಕುಳ ನೀಡಿದರು. ಆಗ ನಾಗೇಶ ಬೆಳಗುಪ್ಪೆ ತೊರೆದು ಭಿಕ್ಷಾಟನೆ ಮಾಡುತ್ತ ಸಿಕ್ಕಿದ ದಾರಿಯಲ್ಲಿ ನಡೆಯುತ್ತ, ಮದರಾಸ್ ತಲುಪಿದರು. ಒಮ್ಮೆ ಅಲ್ಲಿ ತಿರುಗಾಡುತ್ತಿರುವಾಗ ಬ್ರಹ್ಮಸಮಾಜದ ಬೃಹತ್ ಕಟ್ಟಡವೊಂದನ್ನು ನೋಡಿದರು. ಅಲ್ಲಿ ಡಾ. ಅನಿಬೆಸೆಂಟ್ ಅವರ ಉಪನ್ಯಾಸ ನಡೆಯುತ್ತಿತ್ತು. ಇಂಗ್ಲಿಷ್ ತಿಳಿಯದಿದ್ದರೂ ಅನಿಬೆಸೆಂಟರ ಉಪನ್ಯಾಸ ವೈಖರಿಗೆ ಮರುಳಾದರು. ನಾಗರೆಡ್ಡಿಯನ್ನು ನೋಡಿ ಆಕರ್ಷಿತರಾದ ಆನಿಬೆಸೆಂಟರು ಅವರಿಗೆ ಸಂಸ್ಥೆಯಲ್ಲಿ ಆಶ್ರಯ ನೀಡಿ ಬ್ರಹ್ಮಸಮಾಜದ ದೀಕ್ಷೆಯಿತ್ತರು. ನಾಗೇಶ ಅನತಿಕಾಲದಲ್ಲೇ ಇಂಗ್ಲಿಷ್, ಸಂಸ್ಕೃತಗಳಲ್ಲಿ ಪರಿಣತಿ ಸಾಧಿಸಿದರು. ಉಪನಿಷತ್ತುಗಳ ಅಧ್ಯಯನ ಮಾಡಿದರು. ಯೋಗಾನುಸಂಧಾನ ಮಾಡುತ್ತ ಅಸದೃಶ ವೈರಾಗ್ಯಭಾವವನ್ನು ತಾಳಿದರು. ಅವರ ವಾಕ್ಚಾತುರ್ಯ, ಸ್ಮರಣಶಕ್ತಿಗೆ ಬೆರಗಾದ ಅನಿಬೆಸೆಂಟರು, ಆಂಧ್ರ ಮತ್ತು ಕರ್ನಾಟಕ ಗಡಿಪ್ರದೇಶಗಳಲ್ಲಿ ಬ್ರಹ್ಮಸಮಾಜದ ತತ್ತ್ವವನ್ನು ಪ್ರಚಾರ ಮಾಡಬೇಕೆಂದು ಉಪದೇಶಿಸಿದರು. ಅನಿಬೆಸೆಂಟರಿಂದ ಸಂಪೂರ್ಣ ಯೋಗದೀಕ್ಷೆ ಪಡೆದು ಮದರಾಸ್ ಬಿಟ್ಟು ಶ್ರೀಶೈಲಕ್ಕೆ ಬಂದ ನಾಗೇಶರು, ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ದರ್ಶಿಸಿ ಕುಮಾರಸ್ವಾಮಿ ಬೆಟ್ಟವನ್ನು ತಲುಪಿದರು. ಅಲ್ಲಿನ ಗುಹೆಯೊಂದರಲ್ಲಿ ಧ್ಯಾನಾಸಕ್ತರಾಗಿ ಇರತೊಡಗಿದರು. ಒಂದೇ ಹೊತ್ತು ಹಿಡಿಅನ್ನವನ್ನು ಸೇವಿಸುತ್ತ, ಜಲಸ್ತಂಭನ, ವಾಯುಸ್ತಂಭನ ಮತ್ತು ಅಷ್ಟಾಂಗಯೋಗ ಸಾಧನೆಯಲ್ಲಿ ತೊಡಗಿದರು. ತರುವಾಯ ಹಂಪಿಗೆ ತೆರಳಿ ಯೌಗಿಕ ಸಾಧನೆ ಮಾಡಿ ಬಳ್ಳಾರಿ, ರಾಯದುರ್ಗ ಮಾರ್ಗವಾಗಿ ಬೆಳಗುಪ್ಪೆ ತಲುಪಿದರು.
ಆಗ ನಾಗೇಶರಿಗೆ ಸುಮಾರು 35 ವರ್ಷ. ನೇರವಾಗಿ ತಂದೆಯಿದ್ದ ಮನೆಗೆ ಹೋದಾಗ ಚಿಕ್ಕಪ್ಪ ಅಲ್ಲಿದ್ದರು. ನಾಗರೆಡ್ಡಿಗೆ 20 ವರ್ಷಗಳ ಹಿಂದಿನ ನೆನಪುಗಳು ಬಂದವು. ಆದರೆ ಚಿಕ್ಕಪ್ಪನ ವ್ಯಂಗ್ಯದಮಾತುಗಳಿಂದ ನೊಂದು ಪಕ್ಕದ ತಿಪ್ಪರೆಡ್ಡಿಹಳ್ಳಿಗೆ ಹೋದರು. ಅಲ್ಲಿನ ಪ್ರಮುಖರಾದ ಕೆಂಪುಗೌಟರ ತೋಟದಲ್ಲಿ ಪಾಳುಮಂಟಪ ಮತ್ತು ಪುರಾತನ ಲಿಂಗವಿತ್ತು. ನಾಗರೆಡ್ಡಿ ಮಂಟಪವನ್ನು ಚೊಕ್ಕಟಗೊಳಿಸಿ ಅಲ್ಲಿರತೊಡಗಿದರು. ಜನರ ರೋಗ-ರುಜಿನಗಳನ್ನು ಮಂತ್ರಶಕ್ತಿಯಿಂದ ಪರಿಹರಿಸತೊಡಗಿದರು. ಕೀರ್ತಿ ಬೆಳೆಯತೊಡಗಿತು. ತೋಟದ ಅರ್ಧಎಕರೆ ಭೂಮಿಯನ್ನು ಕೆಂಪುಗೌಡರಿಂದ ಪಡೆದು ಫಲವತ್ತಾದ ಭೂಮಿಯನ್ನಾಗಿಸಿದರು. ಸುತ್ತಮುತ್ತಲ ಜನ ಅವರನ್ನು ‘ನಾಗೇಶ ತಾತ’ ಎಂದು ಕರೆಯತೊಡಗಿದರು. ಕೆಲಕಾಲದ ನಂತರ ದೊಡ್ಡಮನೆ ಹುಚ್ಚಪ್ಪನವರ ತೋಟಕ್ಕೆ ಬಂದು ಜಪ-ತಪಗಳಲ್ಲಿ ನಿರತರಾದರು. ದೀನದಲಿತರಿಗೆ ಶಿವನಾಮದ ಮಂತ್ರೋಪದೇಶ ನೀಡುತ್ತಿದ್ದರು. ಮಹಿಮೆ ವ್ಯಾಪಕವಾಯಿತು. ತಿಪ್ಪರೆಡ್ಡಿಹಳ್ಳಿ ಸಮೀಪದ ದೊಣೆಹಳ್ಳಿ ಗ್ರಾಮದ ರೆಡ್ಡಿ ಸಾಕಮ್ಮ ಎಂಬಾಕೆಯ ಮನೆಗೆ ಬಂದರು. ಸಾಧು-ಸಂತರ ಮೇಲೆ ಹೆಚ್ಚು ಭಕ್ತಿಯಿದ್ದ ಆಕೆ ಅವರನ್ನು ದೇವದೂತರೆಂದೇ ಭಾವಿಸಿದಳು. ಇದೇ ವೇಳೆ ದೊಣೆಹಳ್ಳಿ, ತಿಪ್ಪರೆಡ್ಡಿಹಳ್ಳಿ, ಓಬಳಾಪುರ, ಜಾಜೂರು, ನಾಗಗೊಂಡನಹಳ್ಳಿ ಗ್ರಾಮಗಳಲ್ಲಿ ಭಯಂಕರ ಕಾಲರಾ ರೋಗ ಹಬ್ಬಿತ್ತು. ನಾಗೇಶತಾತ ಮಜ್ಜಿಗೆ ನೀಡಿ ರೋಗ ಪರಿಹರಿಸಿದರು. ದೊಣೆಹಳ್ಳಿ ಸಮೀಪದ ಕಾಮಸಮುದ್ರ ಗ್ರಾಮದಲ್ಲಿ ಕಾಲರಾ ಭೀಕರ ಸ್ವರೂಪದಲ್ಲಿ ಜನರನ್ನು ಕಾಡುತ್ತಿತ್ತು. ಅದರ ನಿವಾರಣೆಗೆಂದು ನಾಗೇಶತಾತ ದೊಣೆಹಳ್ಳಿ ಬಿಟ್ಟು ಹೊರಟು ಪಾತಜ್ಜ ಎಂಬುವವರ ತೋಟದಲ್ಲಿ ಉಳಿದುಕೊಂಡರು.
ಒಮ್ಮೆ ಮಧ್ಯಾಹ್ನದ ವೇಳೆ, ಕಾಮಸಮುದ್ರದಿಂದ ನೇಕಾರ ತಿರುಮಲಪ್ಪ, ತಳವಾರ ಪಚ್ಚಯ್ಯ, ನಾಯಕರ ಲಕುಮಜ್ಜ ತೋಟಕ್ಕೆ ಬಂದರು. ಸಮೀಪದಲ್ಲಿ ಕಳ್ಳಿ ಕಡಿಯುತ್ತಿದ್ದ ದೊಡ್ಡ ಓಬಳಪ್ಪ ಬಂದು ತಾತನವರನ್ನು ಕಂಡಾಗ ಅವರು ಸಿದ್ಧಿಪುರುಷರೆಂಬುದು ಅರಿವಾಯಿತು. ಅವರು ತೋಟದಿಂದ ಅಕ್ಕಿ, ತರಕಾರಿ, ಅಡುಗೆ ಪದಾರ್ಥಗಳನ್ನು ತಂದು ತಾತನವರಿಗೆ ಕೊಟ್ಟು ಅಡುಗೆ ಮಾಡಿಕೊಳ್ಳಲು ಪ್ರಾರ್ಥಿಸಿದರು. ಊರೊಳಗಿನಿಂದ ಬಂದ ನಾಯಕರ ಲಂಕೆಪ್ಪ, ನೀರಗಂಟಿ ಹನುಮಪ್ಪ, ತಳವಾರ ಗುಡ್ಡಯ್ಯ ಸ್ನಾನಮಾಡಿ ತಾತನವರ ಬಳಿ ಬಂದರು. ಅಡುಗೆ ಆದಮೇಲೆ ಊಟಮಾಡಿ ಹೋಗುವಂತೆ ಆ ಮೂವರಿಗೂ ನಾಗೇಶತಾತ ಸೂಚಿಸಿದರು. ತೋಟದ ಮಾಲೀಕ ಓಬಳಪ್ಪ ಹಾಗೂ ನಾಗೇಶತಾತರ ನಡುವೆ ವೇದಾಂತ ಸಂಬಂಧಿತ ಚರ್ಚೆಗಳು ಆಗಾಗ ನಡೆಯುತ್ತಿದ್ದವು.
ಕಾಯಕಯೋಗಿ: ಅಲ್ಲಿಯವರೆಗೆ ಕಾಮಸಮುದ್ರ ಗ್ರಾಮಕ್ಕೆ ಕಾಲಿಟ್ಟಿರದಿದ್ದ ನಾಗೇಶತಾತ ಒಮ್ಮೆ ಓಬಳಪ್ಪರೊಡನೆ ಅಲ್ಲಿಗೆ ಬಂದರು. ಆ ಊರಿನ ಗವಿಸಿದ್ಧಸ್ವಾಮಿಗಳ ಸಮಾಧಿ ಜಾಗವನ್ನು ಅಂತರ್​ದೃಷ್ಟಿಯಿಂದ ಕಂಡುಕೊಂಡು ಅದರ ಜೀಣೋದ್ಧಾರಕ್ಕೆ ಸಂಕಲ್ಪಿಸಿದರು. ಅಲ್ಲಿದ್ದ ಪಾಳುಮಂಟಪವನ್ನೇ ಸ್ವಚ್ಛಮಾಡಿಕೊಂಡು ವಾಸಮಾಡತೊಡಗಿದರು. ದಿನಕಳೆದಂತೆ ತಾತನವರ ಆಧ್ಯಾತ್ಮಿಕ ಶಕ್ತಿ, ಸರಳತೆ ಹಾಗೂ ದೈವೀಭಾವಕ್ಕೆ ಗ್ರಾಮಸ್ಥರು ಮಾರುಹೋದರು. ಮಮುಕ್ಷುಗಳು ತಾತನ ಪ್ರಿಯಶಿಷ್ಯರಾದರು. ಶಿಷ್ಯರು ತಂದುಕೊಡುವ ಹಾಲಿಗೆ ತಾತನವರು ಹೆಪ್ಪುಹಾಕಿ ಮಜ್ಜಿಗೆಯಾಗಿಸಿ ಅದಕ್ಕೆ ಮಂತ್ರಶಕ್ತಿ ತುಂಬಿ ಸರ್ವರೋಗ ನಿವಾರಕ ಅಮೃತವನ್ನಾಗಿ ಪರಿವರ್ತಿಸುತ್ತಿದ್ದರು. ಅದನ್ನು ತೆಂಗಿನ ಚಿಪ್ಪಿನಿಂದ ಮೊಗೆಮೊಗೆದು ತೀರ್ಥದಂತೆ ಜನಕ್ಕೆ ನೀಡುತ್ತಿದ್ದರು. ಅದನ್ನು ಸೇವಿಸಿದವರ ದೈಹಿಕ-ಮಾನಸಿಕ ರೋಗಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತಿದ್ದವು.
ಗವಿಸಿದ್ಧಸ್ವಾಮಿಗಳ ಮಠದ ಜೀಣೋದ್ಧಾರಕ್ಕೆ ನಾಗೇಶತಾತ ಸಂಕಲ್ಪಿಸಿದರು. ಭಕ್ತಸಮೂಹದ ಮಧ್ಯೆ ಗುದ್ದಲಿಪೂಜೆ ನೆರವೇರಿತು. ಒಬ್ಬೊಬ್ಬ ಶಿಷ್ಯರಿಗೆ ಒಂದೊಂದು ಕೆಲಸದ ನಿಯೋಜನೆಯಾಯಿತು. ಮಠದ ಸುತ್ತಲ ಗೋಡೆ, ಕಂಬ, ಬಾಗಿಲು ಮತ್ತು ತೊಲೆಗಳ ನಿರ್ವಣವಾಗಿ ಮೇಲ್ಛಾವಣಿಯೂ ಹೊದಿಸಲ್ಪಟ್ಟಿತು. ಪ್ರತಿಯೊಂದು ಕೆಲಸ ಮಾಡುವಾಗಲೂ ‘ಶಿವಶಿವಾ’ ಎಂದು ನಾಮೋಚ್ಚಾರಣೆ ಮಾಡುತ್ತ ನಾಗೇಶತಾತ ಎಲ್ಲರನ್ನು ಹುರಿದುಂಬಿಸುತ್ತಿದ್ದರು. ಹಿತ್ತಲು ಮತ್ತು ಕಾಂಪೌಂಡಿನ ಸುತ್ತಲೂ ಹುಣಸೇಗಿಡ, ಬೇವಿನಮರಗಳನ್ನು, ಪೂಜೆಗೆಂದು ಹೂವಿನ ಗಿಡಗಳನ್ನು ನೆಟ್ಟರು. ಮಠ ನಳನಳಿಸಿತು. ನಾಗೇಶತಾತರ ಪಾದಸ್ಪರ್ಶದಿಂದ ಕಾಮಸಮುದ್ರವು ಕಲ್ಯಾಣ ಪಟ್ಟಣವಾಯಿತು. ಬರಗಾಲ ಹೋಗಿ ಸಿರಿಗಾಲ ಬಂತು. ತಾತನವರ ಉಡುಪು ಸರಳವಾಗಿತ್ತು- ಲಂಗೋಟಿ, ಮೈಮೇಲೊಂದು ಕಂಬಳಿಚೂರು. ಬಗಲಲ್ಲಿ ಮಜ್ಜಿಗೆ ಮಡಿಕೆ, ಕೈಯಲ್ಲೊಂದು ತೆಂಗಿನಚಿಪ್ಪು. ದೇಹದಂಡನೆಯಿಂದ ಬಾಹ್ಯ ಆಸೆ ಆಕಾಂಕ್ಷೆಗಳನ್ನು ಮೆಟ್ಟಿನಿಲ್ಲುವ ವಿಧಾನವನ್ನು ಆಗಾಗ ಶಿಷ್ಯರಿಗೆ ಉಪದೇಶಿ ಸುತ್ತಿದ್ದುದುಂಟು. ಮಠದಲ್ಲಿ ಪ್ರತಿನಿತ್ಯ ಭಜನೆ, ಪೂಜೆ, ದಾಸೋಹ ನಡೆಯುತ್ತಿದ್ದವು. ಹಿಂದೂ-ಮುಸ್ಲಿಮರೆನ್ನದೆ ಸಕಲ ಸಮುದಾಯದವರೂ ಮಠಕ್ಕೆ ಬರುತ್ತಿದ್ದರು.
ಕಾಮಸಮುದ್ರದಲ್ಲಿ ಪ್ರತಿವರ್ಷ ಕೆರೆತುಂಬಿ ಯಥೇಚ್ಛ ಬೆಳೆಯಾಗುತ್ತಿತ್ತು, ಜನರು ಸಂತೋಷದಿಂದಿದ್ದರು. ಶಿಷ್ಯ ಲಂಕೆಪ್ಪನನ್ನು ಕರೆದುಕೊಂಡು ನಾಗೇಶತಾತ ಆಗಾಗ ಭಿಕ್ಷಾಟನೆಗೆ ಹೋಗುತ್ತಿದ್ದುದುಂಟು. ಸುಗ್ಗಿಕಾಲದಲ್ಲಿ ಕಣಗಳಿಗೆ ಭೇಟಿಕೊಡುತ್ತಿದ್ದರು. ಒಮ್ಮೆ ಜಾಜೂರು ಕೃಷ್ಣಪ್ಪನ ಕಣಕ್ಕೆ ಹೋಗಿ ಭತ್ತದ ಭಿಕ್ಷೆ ಬೇಡಿದರು. ಆದರೆ, ಯಾವುದೋ ಕಾರಣದಿಂದ ಕೃಷ್ಣಪ್ಪನಿಗೆ ಭಿಕ್ಷೆ ನೀಡಲಾಗಲಿಲ್ಲ. ಕೆಲ ದಿನಗಳಲ್ಲೇ ಕೃಷ್ಣಪ್ಪನಿಗೆ ಕಷ್ಟಗಳು ನಿರಂತರವಾದವು. ಕಾಲಾಂತರದಲ್ಲಿ ಬಾಯಲ್ಲಿ ಹುಣ್ಣು ಕಾಣಿಸಿಕೊಂಡು ಅವನು ಕಾಲವಾಗಿಬಿಟ್ಟ. ಇಂಥ ಕೆಲ ಘಟನೆಗಳಿಂದ ನಾಗೇಶತಾತರ ಅಂತಃಶಕ್ತಿಯ ಅರಿವು ಶಿಷ್ಯರಿಗಾಯಿತು.
ಈ ನಡುವೆ ನಾಗೇಶತಾತರ ಅಣ್ಣನ ಮಗ ನಾಗರೆಡ್ಡಿ ಮತ್ತು ರಾಮಸಾಗರದ ವೆಂಕಟರೆಡ್ಡಿ ಕಾಮಸಮುದ್ರಕ್ಕೆ ಬಂದು ತಾತನಿಂದ ದೀಕ್ಷೆ ಪಡೆದರು. ಮಠದಲ್ಲಿ ಶಿವರಾತ್ರಿ ಉತ್ಸವದ ಏರ್ಪಾಡು ಮಾಡಿದರು. ಸೆಟ್ಟೂರು ಗ್ರಾಮಕ್ಕೆ ವರ್ಗವಾಗಿ ಬಂದ ವೀರಭದ್ರಪ್ಪ ಎಂಬ ಸಬ್​ಇನ್ಸ್​ಪೆಕ್ಟರ್ ತಾತನ ಪ್ರಿಯಶಿಷ್ಯರಾದರು. ಸೆಟ್ಟೂರಿನಲ್ಲಿ ತಾತನ ಸಾನ್ನಿಧ್ಯದಲ್ಲಿ ಶಿವಸಪ್ತಾಹ ವಿಜೃಂಭಣೆಯಿಂದ ನಡೆಯಿತು. ಒಮ್ಮೆ ನಾಗೇಶತಾತ ಮಠದಲ್ಲಿ ನಡೆದ ಅಹಿತಕರ ಸನ್ನಿವೇಶದಿಂದ ನೊಂದು ಯಾರಿಗೂ ಹೇಳದೆ ವೇದಾವತಿ ನದಿತೀರದಲ್ಲಿರುವ ಸಂಗಮೇಶ್ವರ ದೇವಾಲಯಕ್ಕೆ ಹೊರಟುಹೋದರು. ಅಲ್ಲಿ ಲಿಂಗಪೂಜೆ ಮಾಡುತ್ತ ಶಿವಯೋಗಾನುಭವದಲ್ಲಿ ಮುಳುಗಿದರು. ಎಷ್ಟೋ ದಿನಗಳಾದ ಮೇಲೆ ಅವರ ನೆಲೆ ಭಕ್ತರಿಗೆ ತಿಳಿದು, ಮಠಕ್ಕೆ ಹಿಂದಿರುಗುವಂತೆ ಭಕ್ತರು ಬೇಡಿಕೊಂಡಿದ್ದಕ್ಕೆ ತಾತ ಕಾಮಸಮುದ್ರಕ್ಕೆ ಮರಳಿದರು.
‘ರೋಗನಾಶ, ಭವನಾಶ’ ಎಂಬ ಮಾತು ತಾತನವರ ವಿಷಯದಲ್ಲಿ ಪ್ರಸಿದ್ಧಿ ಪಡೆಯಿತು. ಮೋದೂರು ಗ್ರಾಮದ ಪೊಲೀಸ್ ಸತ್ಯಪ್ಪನಿಗೆ ವಿಚಿತ್ರ ಕಾಯಿಲೆಯಿದ್ದು, ಎಲ್ಲಿ ತೋರಿಸಿದರೂ ವಾಸಿಯಾಗಿರಲಿಲ್ಲ. ಕೊನೆಗೆ ತಾತನ ಬಳಿಗೆ ಬಂದು ಗುಣಮುಖನಾದ. ಕಾಮಸಮುದ್ರದ ನಾಗೇಶಪ್ಪನಿಗೆ ತೀವ್ರಜ್ವರ ಕಾಣಿಸಿಕೊಂಡಾಗ, ತಾತನ ಸೂಚನೆಯಂತೆ ಗೌಳಿಮರದ ಚಕ್ಕೆಯ ಕಷಾಯ ಕುಡಿದ ಮೇಲೆ ಕಾಯಿಲೆ ನಿವಾರಣೆಯಾಯಿತು. ನಾಗೇಶತಾತ ಪ್ರತಿನಿತ್ಯ ಮುಂಜಾನೆ 3 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ತೀರಿಸಿಕೊಂಡು ಮಠದ ಆವರಣದಲ್ಲಿನ ಕಸಕಡ್ಡಿಗಳನ್ನು ಗುಡಿಸಿ ಶುಚಿಗೊಳಿಸುತ್ತಿದ್ದರು. ಸಗಣಿಯಲ್ಲಿ ಬೆರಣಿ ತಟ್ಟಿ ಅದನ್ನು ‘ಕರಿಚಿನ್ನ’ ಎನ್ನುತ್ತಿದ್ದರು. ಕಸದಿಂದ ರಸ ಮಾಡುವ ಕಲೆ ಹಾಗೂ ಅದರ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದರು. ನಂತರ ಸ್ನಾನಮುಗಿಸಿ ಶಿವಚಿಂತನೆಯಲ್ಲಿ ತೊಡಗುತ್ತಿದ್ದರು. ಆಮೇಲೆ ಕುರಿಹಟ್ಟಿಗಳಿಂದ ಕುರಿಹಾಲು ಸಂಗ್ರಹಿಸಿ ಚೆನ್ನಾಗಿ ಕಾಯಿಸಿ ಹೆಪ್ಪುಹಾಕಿ ಮಜ್ಜಿಗೆ ಮಾಡಿ ಬಂದವರಿಗೆಲ್ಲ ತೀರ್ಥದಂತೆ ನೀಡುತ್ತಿದ್ದರು. ಇವರಿಂದ ಶಿವದೀಕ್ಷೆ ಪಡೆದವರಲ್ಲಿ ಪಿ.ನಾಗೇಶಪ್ಪ, ಕುರಿ ಓಬಯ್ಯ, ತಳವಾರ ಗುಡ್ಡಯ್ಯ, ದಾಸರ ವೀರಣ್ಣ, ನೀರಗಂಟಿ ಬೂಸಿ ಹನುಮಪ್ಪ, ಭಜಂತ್ರಿ ಓಬಳಪ್ಪ, ಚೆಲುವಾದಿ ವೆಂಕಟಪ್ಪ, ನೇಯ್ಗೆ ದೊಡ್ಡತಿಮ್ಮಪ್ಪ ಪ್ರಮುಖರು. ಮಹಾಸಮಾಧಿ: ಕಾರಣಪುರುಷರೆನಿಸಿಕೊಂಡಿದ್ದ ನಾಗೇಶತಾತರಿಗೆ ಭೂತ-ಭವಿಷ್ಯತ್-ವರ್ತಮಾನಗಳ ಅರಿವಿತ್ತು. ಮಹಾಸಮಾಧಿಯ ಸಮಯ ಸನ್ನಿಹಿತವಾಗಿರುವುದು ಗೊತ್ತಾಗಿ ಅದಕ್ಕಾಗಿ ಅಂತರಂಗದಲ್ಲಿ ತಯಾರಾಗುತ್ತಿದ್ದರು, ಬೆಳಗುಪ್ಪೆಯಲ್ಲಿ ಮಹಾಸಮಾಧಿ ಆಗಬೇಕೆಂದು ನಿಶ್ಚಯಿಸಿದರು. ಪ್ರಿಯಶಿಷ್ಯ ಪಿ.ನಾಗೇಶಪ್ಪನನ್ನು ಕರೆಸಿ ಎತ್ತಿನಗಾಡಿ ತರಲು ಹೇಳಿದರು. ಅದರ ಮೇಲೆ ಜಮಖಾನೆ ಹಾಕಿ ಸನ್ನದ್ಧಗೊಳಿಸಲಾಯಿತು. ಈ ಸುದ್ದಿ ಕಾಮಸಮುದ್ರದಲ್ಲಿ ಮಿಂಚಿನಂತೆ ಹಬ್ಬಿ, ಮಠದ ಮುಂದೆ ಜನಸಾಗರವೇ ಸೇರಿತು. ಕಣ್ಣೀರಾದ ಜನ, ಕಾಮಸಮುದ್ರದಲ್ಲಿಯೇ ಇರುವಂತೆ ತಾತನವರಿಗೆ ಪರಿಪರಿಯಾಗಿ ಕೇಳಿಕೊಂಡರು. ಆದರೆ, ತೀರ್ಮಾನ ಬದಲಿಸಲು ಸುತರಾಂ ಒಪ್ಪದ ನಾಗೇಶತಾತ ಪ್ರಶಾಂತ ಮುಖಮುದ್ರೆಯಿಂದ ಶಿವಧ್ಯಾನದಲ್ಲಿ ತೊಡಗಿದರು. ಗಾಡಿ ಬೆಳಗುಪ್ಪೆಯನ್ನು ತಲುಪಿತು. ಯರ್ರಿತಾತನ ಮಠದ ಪಕ್ಕದಲ್ಲಿ ಉಳಿದುಕೊಂಡ ನಾಗೇಶತಾತ, ಬಾಹ್ಯ ಮರೆತು ನಿರ್ವಿಕಲ್ಪ ಸಮಾಧಿಸ್ಥಿತಿಯಲ್ಲೇ ಉಳಿದಿದ್ದರು. ಶಿಷ್ಯ ನಾಗೇಶಪ್ಪನ ಸೂಚನೆಯಂತೆ ಅಮೃತಶಿಲೆಯ ಸಮಾಧಿ ನಿರ್ವಣಗೊಂಡಿತು. ಅಂದು ಶಿವರಾತ್ರಿ. ತಾತನವರಿಗೆ ಸ್ನಾನಮಾಡಿಸಿ ಕಾವಿಬಟ್ಟೆ ಉಡಿಸಿದರು. ಟ್ರಾಕ್ಟರನ್ನು ಸಿಂಗರಿಸಿ ಅದರಲ್ಲಿ ತಾತನವರನ್ನು ಕುಳ್ಳಿರಿಸಿದರು. ಬೆಳಗ್ಗೆ 8 ಗಂಟೆಗೆ ಮೆರವಣಿಗೆ ಪ್ರಾರಂಭವಾಯಿತು. ನಾಗೇಶತಾತ ಸಮಾಧಿ ಸ್ಥಿತಿಯಲ್ಲಿಯೇ ಇದ್ದರು. ಸಮಾಧಿ ಜಾಗಕ್ಕೆ ಅವರನ್ನು ಕರೆತಂದರು. ಕಲ್ಲೋಡ ವೀರಭದ್ರಪ್ಪ ಅವರಿಗೆ ಲಿಂಗಧಾರಣೆ ಮಾಡಿಸಿದರು. ನಂತರ ತಾತನವರನ್ನು ಮಹಾಸಮಾಧಿಯ ಒಳಭಾಗದ ಯೋಗಪೀಠದ ಮೇಲೆ ಕುಳ್ಳಿರಿಸಿದರು. ಅವರ ಮುಖ ಪ್ರಕಾಶಮಾನವಾಗಿತ್ತು. ಸೇರಿದ್ದ ಸಾವಿರಾರು ಜನ ತಾತನವರ ಮೇಲೆ ಬಿಲ್ವಪತ್ರೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದರು. ಸಮಾಧಿಯ 2 ಬಂಡೆಗಳನ್ನು ಕೂಡಿಸಿ ಕಟ್ಟಡವನ್ನು ಪೂರ್ಣಗೊಳಿಸಲಾಯಿತು. ಹೀಗೆ ನಾಗೇಶತಾತ 1947ರಲ್ಲಿ ಬೆಳಗುಪ್ಪೆಯಲ್ಲಿ ಜೀವಂತವಾಗಿ ಮಹಾಸಮಾಧಿ ಹೊಂದಿದರು ಎಂಬ ಇತಿಹಾಸವನ್ನು ಹೊಂದಿದೆ.

Latest News >>

ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು,ನಾವು ರೋಗಿಗಳ ಸೇವೆಮಾಡುವಲ್ಲಿ ದೇವರನ್ನ ಕಾಣಬೇಕು. ಬೆಂ.ಗ್ರಾ.ಕ್ಷೇತ್ರದಸಂಸದ ಡಾ.ಸಿ.ಎನ್.ಮಂಜುನಾಥ್

ತುಮಕೂರು : ವೈದ್ಯಕೀಯ ಕ್ಷೇತ್ರ ನೊಬೆಲ್ ವೃತ್ತಿಯಾಗಿದ್ದು ಸಾರ್ವಜನಿಕರು, ರೋಗಿಗಳು ನಮ್ಮನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ನಾವು...

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page