ಮೊಳಕಾಲ್ಮೂರು ಆ.22 ಕರಡಿ ದಾಳಿಯಿಂದ ಮೃತಪಟ್ಟ ಕಾಡುಮೃಗಗಳಿಂಗಾಯಗೊಂಡ ಕುಟುಂಬಗಳಿಗೆ ಅರಣ್ಯಿಲಾಕೆಯಿಂದ ಮಂಜುರಾತಿಯಾದ ಪರಿಹಾರವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ವಿತರಿಸಿದರು.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಓಬಳಾಪುರ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಮ್ಮೆಯನ್ನು ಮೇಯಿಸುತ್ತಿದ್ದ
ದನಗಾಹಿ ಓಂಕಾರಪ್ಪ ಇವರ ಮೇಲೆ ಕರಡಿಯು ತೀವೃವಾಗಿ ದಾಳಿ ಮಾಡಿ ಗಾಯ ಮಾಡಿದ್ದು ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆ.14 ರಂದು ಮೃತಪಟ್ಟಿದ್ದು.ಮೃತನ ಕುಟುಂಬಕ್ಕೆ
5,ಲಕ್ಷ ರೂ ಮೃತನ ಪತ್ನಿ ಅನಸೂಯಮ್ಮಗೆ ವಿತರಿಸಿದರೆ.
ಹಾಗೂ ಮೊಳಕಾಲೂರು ಅರಣ್ಯ ವಲಯದ ವ್ಯಾಪ್ತಿಯಬೊಮ್ಮಲಿಂಗನಹಳ್ಳಿ ಗ್ರಾಮದ. ಬಸವರಾಜಪ್ಪನ ಮೇಲೆ ಚಿರತೆದಾಳಿಯಿಂದ ಗಾಯಗೊಂಡಿದ್ದು 1.60 ಲಕ್ಷ ರೂ ಹಾಗೂ ಗುಂತಕೋಲಮ್ಮನಹಳ್ಳಿ ಗ್ರಾಮದ ಮಂಜಮ್ಮ ಇವರ ಮಗಳಾದ ಸಾನ್ವಿ ವನ್ಯಪ್ರಾಣಿಯಿಂದ
ಗಾಯಗೊಂಡಿದ್ದು 60 ಸಾವಿರ ರೂ ಮಂಜೂರಾತಿ ಆದೇಶವನ್ನು ಅರಣ್ಯಇಲಾಖೆಯ ಪರಿಹಾರ ಧನವನ್ನು ಮೊಳಕಾಲ್ಕೂರು ವಿಧಾನ ಸಭಾ ಕ್ಷೇತ್ರದ ಶಾಸಕ
ಎನ್.ವೈ.ಗೋಪಾಲಕೃಷ್ಣ ವಿತರಿಸಿದರು. ಈಸಂದರ್ಭದಲ್ಲಿ ರಾಜಣ್ಣ ಟಿ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಚಿತ್ರದುರ್ಗ ವಿಭಾಗ. ಹರ್ಷ ಡಿ.ಎಲ್. ವಲಯ ಅರಣ್ಯಾಧಿಕಾರಿ ಮೊಳಕಾಲ್ಕೂರು. ಮಂಜುನಾಥ ಎಸ್.ವಿ ವಲಯ ಅರಣ್ಯಾಧಿಕಾರಿ ಚಳ್ಳಕೆರೆ ಹಾಗೂ ಸಿಬ್ಬಂದಿಗಳಿದ್ದರು.
0 Comments