
ಚಳ್ಳಕೆರೆನ.13 ಕಾಡುಗೊಲ್ಲ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡಲು ಸರ್ಕಾರ ಈಗಾಗಲೇ ಅನ್ನಪೂರ್ಣಮ್ಮನವರ ನೇತೃತ್ವದಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡಲು ಆದೇಶ ನೀಡಿದ್ದರೂ ಸಹ ತಾಲೂಕು ಆಡಳಿತದ ನಿರ್ಲಕ್ಷದಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಆದ್ದರಿಂದ ಇದೆ ನ. 20 ರಂದು ತಾಲೂಕು ಕಚೇರಿ ಮುಂದೆ ಕಾಡುಗೊಲ್ಲ ಸಮುದಾಯದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ತಿಳಿಸಿದರು.
ನಗರದ ಕಾಡುಗೊಲ್ಲ ವಿದ್ಯಾರ್ಥಿ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸರ್ಕಾರ ಇದನ್ನು ಮನಗಂಡು ಈಗಾಗಲೇ ಕಾಡುಗೊಲ್ಲ ಸಮುದಾಯಕ್ಕೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ ಈ ನಿಗಮದ ಪ್ರಯೋಜನಗಳನ್ನು ಪಡೆಯಬೇಕಾದರೆ ನಮಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಅವಶ್ಯಕತೆ ಇದೆ ತಾಲೂಕು ಆಡಳಿತ ಕೂಡಲೇ ಕ್ರಮವಹಿಸಿ ತಾಲೂಕಿನ ಎಲ್ಲಾ ಗೊಲ್ಲರಹಟ್ಟಿಗಳ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾಡುಗೊಲ್ಲ ಪ್ರಮಾಣ ಪತ್ರವನ್ನು ನೀಡಬೇಕು, ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ ಹೀಗಾಗಿ ನವೆಂಬರ್ 20ರಂದು ರಾಜ್ಯದ 12 ಜಿಲ್ಲೆ 41 ತಾರೀಕುಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಕಾಡುಗೊಲ್ಲರ ಸಂಘದ ಉಪಾಧ್ಯಕ್ಷ ಜಿ ಟಿ ಶಶಿಧರ್ ಮಾತನಾಡಿ ನಮ್ಮ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡಿ ಎಂದು ಈಗಾಗಲೇ ಶಾಸಕ ಟಿ ರಘುಮೂರ್ತಿ ಮೊಳಕಾಲ್ಮುರು ಶಾಸಕ ಎನ್ ವೈ ಗೋಪಾಲಕೃಷ್ಣ ತಹಶೀಲ್ದಾರ್ ಅವರಿಗೆ ಆದೇಶ ನೀಡಿದ್ದರು ಸಹ ಕ್ರಮ ಕೈಗೊಂಡಿಲ್ಲ ಈ ವಿಳಂಬ ನೀತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಎಲ್ಲಾ ಕಾಡುಗೊಲ್ಲ ಸಮುದಾಯದ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು
ಈ ಸಂದರ್ಭದಲ್ಲಿ ಸಮುದಾಯದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಂತರಾಜು ಮಂಜುನಾಥ್ ನಾಗರಾಜ್ ಮಂಜಣ್ಣ ಭಾನು ವೀರೇಶ್ ಸೇರಿದಂತೆ ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
0 Comments