ಕಾಡುಗೊಲ್ಲಜಾನಪದಕಲೆ ರಾಜ್ಯದ್ಯಂತಘಮಿಸುವಂತೆ ಮಾಡಿರುವ ವೇದಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ ಕಾಡುಗೊಲ್ಲ ಸಮಾಜದ ಯುವಮುಖಂಡ ಧನಂಜಯ್

by | 19/12/22 | ಸಾಮಾಜಿಕ

ಹಿರಿಯೂರು :
ನಮ್ಮ ಕಾಡುಗೊಲ್ಲ ಸಮುದಾಯದ ಜಾನಪದ ಕಲೆ ತನ್ನದೇ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಬಗ್ಗೆ ಹೆಮ್ಮೆ ಇದೆ. ಅದೇ ನಿಟ್ಟಿನಲ್ಲಿ ನಮ್ಮ ಜಾನಪದ ಸೊಗಡು ರಾಜ್ಯಾದ್ಯಂತ ಪಸರಿಸಲು ಕಾರಣವಾದ “ವೇದ” ಚಿತ್ರತಂಡವನ್ನು ಕಾಡುಗೊಲ್ಲ ಸಮಾಜದ ಯುವಮುಖಂಡ ಎಮ್ಮೆಹಟ್ಟಿ ಎನ್.ಧನಂಜಯ ಅಭಿನಂದಿಸಿದ್ದಾರೆ.
ಜಾನಪದ ಸಾಹಿತ್ಯ ಶ್ರೀಮಂತಿಕೆಗೆ ಕಾಡುಗೊಲ್ಲ ಸಮಾಜದ ಕೊಡುಗೆ ಅಪಾರವಾಗಿದ್ದು, ನಮ್ಮ ಸಮುದಾಯದ ಜಾನಪದಸಿರಿ ಸಿರಿಯಜ್ಜಿ ಅವರನ್ನು ಜಾನಪದ ಕಂಪ್ಯೂಟರ್ ಎಂದು ಕರೆಯಲಾಗುತ್ತಿತ್ತು, ಅವಿದ್ಯಾವಂತೆಯಾಗಿದ್ದ ಸಿರಿಯಜ್ಜಿ ಸುಮಾರು 10000ಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಹೇಳುವ ಸಾಮರ್ಥ್ಯ ಬೆಳೆಸಿಕೊಂಡಿದ್ದರು ಒಂದು ಹಾಡಿನಲ್ಲಿ ಬಳಸಿದ ವಾಕ್ಯವನ್ನು ಮತ್ತೊಂದು ಸಾಲಿನಲ್ಲಿ ಪುನರಾವರ್ತನೆಯಾಗುತ್ತಿರಲಿಲ್ಲ ಎಂಬುದೇ ಇವರ ವಿಶೇಷವಾಗಿತ್ತು.
ಇದೀಗ ಕಾಡುಗೊಲ್ಲ ಜಾನಪದ ಹಾಡುಗಳನ್ನು ತನ್ನದೇ ಕಂಠಸಿರಿ ಮೂಲಕ ಹಾಡುತ್ತಿದ್ದ ಯುವಕ ಮೋಹನ್ ಕುಮಾರ್ ಗಾಂಧಿನಗರದ ಬಾಗಿಲು ತಟ್ಟಿ ಯಶಸ್ವಿಯಾಗಿದ್ದಾರೆ ಹರ್ಷ ಸರ್ ಹಾಗೂ ಅರ್ಜುನ್ ಜನ್ಯ ರವರ ನೆರವಿನೊಂದಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದಲ್ಲಿ ಅವಕಾಶ ಪಡೆದುಕೊಂಡು ಜುಂಜಪ್ಪಗೀತೆ ಹಾಡುವುದರ ಮುಖಾಂತರ ಆ ಹಾಡು ಚಿತ್ರ ಬಿಡುಗಡೆಗೆ ಮುಂಚೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ ಎಂಬುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಡುಗೊಲ್ಲ ಜಾನಪದದ ಸೊಗಡು ರಾಜ್ಯದ್ಯಂತ ಘಮಿಸಲು ಅವಕಾಶ ಮಾಡಿಕೊಟ್ಟಂತಹ ವೇದ ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ನಮ್ಮ ಕಾಡುಗೊಲ್ಲ ಸಮುದಾಯದ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂಬುದಾಗಿ ಕಾಡುಗೊಲ್ಲ ಸಮಾಜದ ಮುಖಂಡ ಧನಂಜಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *