ಹಿರಿಯೂರು :
ಸುಮಾರು 17 ನೇ ಶತಮಾನದ ಶ್ರೇಷ್ಠ ತೆಲುಗು ಕವಿಗಳಲ್ಲಿ ಒಬ್ಬರಾದ ಮಹಾಯೋಗಿ, ಸಮಾಜ ಸುಧಾರಕ ವೇಮನರವರು ರಚಿಸದ ತ್ರಿಪದಿಗಳಲ್ಲಿನ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದಾಗಿ ವಾಣಿಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಿರಿಯೂರು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೇಮನರು ವೇಶ್ಯೆಯ ಸಹವಾಸ ಜೊತೆಗೆ ದುಷ್ಚಟಗಳಿಗೆ ಬಲಿಯಾಗಿ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮರಿಂದ ಬದಲಾದ ವ್ಯಕ್ತಿಯಾಗಿ ತಮ್ಮ ತಪ್ಪುಗಳನ್ನು ಅರಿತು, ತಿದ್ದಿಕೊಂಡು ಮಹಾಯೋಗಿಯಾಗಿ ಜಗತ್ತಿಗೆ ಪರಿಚಿತರಾದ ಇವರು, ತಮ್ಮ ಅನುಭವ ಹಾಗೂ ಸಮಾಜಿಕ ವ್ಯವಸ್ಥೆಯ ಕುರಿತು ಸರಳ ವಚನಗಳನ್ನು ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರಲ್ಲದೆ,
ತಂದೆ, ತಾಯಿಗಳ ಸೇವೆ ಮಾಡದ ಮಗನನ್ನು ಗೆದ್ದಿಲು ಹುಳುವಿಗೆ ಹೋಲಿಸಿದ ವೇಮನ ಕವಿ ಜಾತಿ ಸಂಘರ್ಷ, ಮೇಲುಕೀಳು ತಾರತಮ್ಯದಂತಹ ಸಾಮಾಜಿಕ ಪಿಡುಗುಗಳಿಗೆ ಸುಮಾರು 15 ಸಾವಿರ ವಚನಗಳನ್ನು ರಚಿಸಿ, ತಮ್ಮ ಸಾಹಿತ್ಯದ ಮೂಲಕ ಉತ್ತರಿಸಿದ ಮಹಾನ್ ಚೇತನ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಶಿರಸ್ತೇದಾರ್ ತಿಪ್ಪೇಸ್ವಾಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪ, ಪ್ರಕಾಶ್ ರೆಡ್ಡಿ, ಗಿರೀಶ್ ರೆಡ್ಡಿ, ಸೀತಾರಾಮರೆಡ್ಡಿ, ನಾರಾಯಣರೆಡ್ಡಿ, ಟಿ.ಪಿಓ ಕೆ.ಎಂ.ಮನೋಹರ್, ಸತ್ಯನಾರಾಯಣ ರೆಡ್ಡಿ, ಲಕ್ಷ್ಮಣ್ ರೆಡ್ಡಿ, ಟಿ.ಶ್ರೀನಿವಾಸ್ ರೆಡ್ಡಿ, ಸಂಜಯ್ ರೆಡ್ಡಿ, ಸಾಗರ್ ರೆಡ್ಡಿ, ಸೇರದಂತೆ ಅಕ್ಷರದಾಸೋಹ ಅಧಿಕಾರಿಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಕವಿವೇಮನರ ತ್ರಿಪದಿಗಳಲ್ಲಿನ ತತ್ವಆದರ್ಶಗಳುಇಂದಿಗೂ ಪ್ರಸ್ತುತವಾಗಿದೆ : ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments