ಚಳ್ಳಕೆರೆ ಜನಧ್ವನಿ ವಾರ್ತೆ ಸೆ.13. ಮುಂಗಾರಿನಲ್ಲಿ ಬಿತ್ತನೆ ಮಾಡಿದಶೇಂಗಾ ಬೆಳೆಗಳು ನೆಲಕಚ್ಚಿ ಸಂಕಷ್ಟದಲ್ಲಿರುವ ರೈತರಿಗೆ ಕಳಪೆ ಬಿತ್ತನೆ ಬೀಜದ ಹಾವಳಿಯಿಂರ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ರೈತ ರೇವಣ್ಣ ತನ್ನ ಮೂರು ಎಕರೆ ಪ್ರದೇಶದಲ್ಲಿ ಸೋಮಗುದ್ದು ಗ್ರಾಮದ ಶ್ರೀಗೌರವಕಾಶಿ ಉದ್ಪಾಕರ ಸಂಘದಲ್ಲಿ ಬೀಜ ಒಳೆಯ ಇಳುವರಿ ನೀಡುತ್ತದೆ ಎಂದು ನಂಬಿಸಿ ವಿತರಣೆ ಮಾಡಿದ್ದಾರೆ
ಕೃಷಿ ಚಟುವಟಿಕೆಗೆ ಸುಮಾರು 55 ಸಾವಿರ ರೂ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ.
ಈಗ ನಷ್ಟದಿಂದ ಸಾಲದ ಸುಳಿಗೆ ಸಿಲುಕುವಂತಾಗಿದ್ದು ಕಳಪೆ ಬೀಜದ ಬಗ್ಗೆ ವಿತರಕರ ಗಮನ ಸೆಳೆದಾಗ ಮೂರು ಬಾರಿ ಬಂದು ಬೆಳೆ ವೀಕ್ಷಣೆ ಮಾಡಿ ಹೋದರೂ ಯಾವುದೇ ಪರಿಹಾರ ನೀಡಿಲ್ಲ ಹಲವು ಬಾರಿ ದೂರವಾಣಿ ಮೂಲಕ ಗಮನಸೆಳೆದರೂ ನಮ್ಮ ಮನವಿ ಅವರ ಕಿವಿಗೆ ಬೀಳದಂತಾಗಿದೆ ಇದರಿಂದ ಸಂಪೂರ್ಣ ಬೆಳೆನಷ್ಟ ಅನುಭವಿಸುವಂತಾಗಿದೆ ಕಳಪೆ ಗುಣಮಟ್ಟದ ಮುಸುಕಿನ ಜೋಳದ ಬೀಜವನ್ನು ಬಿತ್ತಿದ್ದ ರೈತನ ಬದುಕು ಈಗ ಬೀದಿಗೆ ಬರುವಂತಾಗಿದೆ.
ಸಕಾಲದಲ್ಲಿ ಮುಂಗಾರು ಮಳೆಯಾಗದ್ದರಿಂದ ನೀರಾವರಿ ಜಮೀನುಳ್ಳ ರೈತ ಮುಸುಕಿನ ಜೋಳ ಬೆಳೆದಿದ್ದರು ಕಳಪೆ ಬಿತ್ತನೆ ಬೀಜ ಮಾರಾಟದಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಈಗ ರೈತರಲ್ಲಿ ಕಾಡಿದೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಕಾಗಳು ಕಳಪೆ ಬಿತ್ತನೆ ಬೀಜ ಖರೀದಿಸಿ ನಷ್ಟ ಅನುಭವಿಸಿದ ರೈತನಿಗೆ ಪರಿಹಾರಕೊಡಿಸುವರೇ ಕಾದು ನೋಡ ಬೇಕಿದೆ.
0 Comments