ಚಳ್ಳಕೆರೆ , ನ9 ಕಳಪೆ ಗುಣಮಟ್ಟದ ಸಿಮೆಂಟ್ ಬಳಕೆ ಮಾಡಿ ಕಟ್ಟಡ ಕಾಮಗಾರಿ ಮಾಡಿತ್ತಿದ್ದ ಗುತ್ತಿಗೆದಾರನಿಗೆ ಅಧಿಕಾರಿಯೊಬ್ಬರ ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಬರಮಸಾಗರ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಸುಮಾರು 27 ಲಕ್ಷ ರೂ ವೆಚ್ಚದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ದಾರ ಚಲ್ಲಿಪುಡಿ(ಎಂ ಸ್ಯಾಡ್ಲ್) ಬಳಕೆ ಮಾಡಿಕೊಂಡು. ಗ್ರೇಡ್ ಇಲ್ಲದೆ ಇರುವ ಸಿಮೆಂಟ್ ಬಳಕೆ ಮಾಡಿಕೊಂಡು ಕಟ್ಟಡ ಕಾಮಗಾರಿ ನಿರ್ಮಾಣ ಮಾಡುತ್ತಿರುವುದನ್ನು ಕಂಡು ಗ್ರಾಮದ ಕೆಲವರು ಜಿಲ್ಲಾಪಂಚಾಯಾತ್ ಇಂಜಿನಿಯರಿಂಗ್ ಎ ಇ ಇ ಕಾವ್ಯಗೆ ದೂರು ನೀಡಿದ್ದಾರೆ. ದೂರು ಆದರಿಸಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡು ಕಳಪೆ ಗುಣಮಟ್ಟಡ ಗ್ರೇಡ್ ಇಲ್ಲದ ಸೀಮೆಂಟ್ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಗುತ್ತಿಗೆ ದಾರನಿಗೆ ತರಾಟೆಗೆ ತೆಗೆದು ಕೊಂಡಿದ್ದಾರೆ. ಗುತ್ತಿಗೆ ದಾರ ಕಳಪೆ ಗುಣಮಟ್ಟದ ಸೀಮೆಂಟ್ ಬಳಕೆ ಮಾಡಿಕೊಳ್ಳದೆ ಗುಣಮಟ್ಟದ ಗ್ರೇಡ್ ಇರುವ ಸೀಮೆಂಟ್ ಹಾಗೂ ಮರಳು ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಇಡೀ ತಾಲೂಕಿಗೆ ಒಬ್ಬರೆ ಇಂಜಿನಿಯರ್ ಇರುವುದರಿದ ಇಡಿ ನಲವತ್ತು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ ಗುತ್ತಿಗೆದಾರರು ನಂಬಿಕೆಯಿಂದ ಗುಣ ಮಟ್ಟದ ಕಾಮಗಾರಿಗಳನ್ನು ಮಾಡುವಂತೆ ತಿಳಿಸಿದ್ದಾರೆ ಈ ಘಟನೆ ಸುಮಾರು 15 ದಿನಗಳು ಕಳೆದಿದೆ ಈಗ ಗುತ್ತಿಗೆ ದಾರ ಕಾಮಗಾರಿಯ ಗುಣ ಮಟ್ಟವನ್ನು ಕಾಪಾಡಿಕೊಂಡು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಎ ಇಇ ಕಾವ್ಯ ಜನಧ್ವನಿ ಯೊಂದಿಗೆ ಮಾಹಿತಿ ನೀಡಿದ್ದಾರೆ
0 Comments