ಕಲಿಕಾ ಹಬ್ಬ ತರಬೇತಿ ಪಡೆದ ಶಿಕ್ಷಕರ ಗುಣಮಟ್ಟ ಶಿಕ್ಷಣ ನೀಡುವಲ್ಲಿ ತುಂಬಾ ಸಹಕಾರಿಯಾಗಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್ .ಸುರೇಶ್

by | 09/01/23 | ಜೀವನಶೈಲಿ

ಚಳ್ಳಕೆರೆ ಕಲಿಕಾ ಹಬ್ಬ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವಲ್ಲಿ ತುಂಬಾ ಸಹಕಾರಿಯಾಗಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್ .ಸುರೇಶ್ ಹೇಳಿದರು.
ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ, ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕದಿಂದ ಸೋಮವಾರಪ್ರಾರ್ಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಕಲಿಕಾ ಹಬ್ಬಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ತರಬೇತಿಯಲ್ಲಿ ಯಾವುದೇ ಅಂಜಿಕೆ ಅಳಕಿಲ್ಲದೆ ಕಲಿತು ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಈ ತರಬೇತಿ ಸಹಕಾರಿಯಾಗಲಿದೆ.
ಶಿಕ್ಷಕರು ವಿದ್ಯಾರ್ಥಿಹಳೊಂದಿಗೆ ಬೆರೆತು ನೃತ್ಯ.ಹಾಡು.ಸಂಗೀತ
ಪಠ್ಯಚವಟಿಗಳನ್ನು ಕಲಿಸಿದಾಗ ಮಾತ್ರ ವಿದ್ಯಾರ್ಥಿಗಳು ಹಲವಾರು ಚಟುವಟಿಕೆಗಳನ್ನು ಸ್ವತ ತಾವೇ ಮಾಡುವುದರಿಂದ ಅವರಲ್ಲಿ ಖುಷಿ ಹೆಚ್ಚುತ್ತದೆ. ಇದರಿಂದ ಶಾಲೆ ಆಕರ್ಷಣೀಯವಾಗಲು ಕಲಿಕಾ ಹಬ್ಬದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಚಟುವಟಿಕೆಗಳನ್ನು ಗ್ರಹಿಸಿ ಮಕ್ಕಳಿಗೆ ಉಪಯೋಗವಾಗುವ ರೀತಿಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ ಶಿಕ್ಷಕರು ಸಮಯ ವ್ಯರ್ಥಮಾಡದೆ ಕಡಿಮೆ ಸಮಯದಲ್ಲಿ ಕಲಿತುಕೊಂಡರೆ ಮಕ್ಕಳಿಗೆ ತರಬೇತಿ ನೀಡಲು ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಪಿಸಿ ಮಂಜುನಾಥ ಮಾತನಾಡಿ ಕೋವಿಡ್ -19ರ ಪರಿಣಾಮವಾಗಿ ಉಂಟಾದ ಕಲಿಕಾ ನಷ್ಟವನ್ನು ಸರಿದೂಗಿಸಲು 2022- 23 ನೇ ಸಾಲಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಶಿಕ್ಷಕರಿಗೆ ತರಬೇತಿ ಪ್ರತಿ ಮಗುವಿಗೆ ಚಟುವಟಿಕೆ ಹಾಳೆಗಳನ್ನು ಒದಗಿಸುವ ಮೂಲಕ ಮಗು ಕ್ರಿಯಾಶೀಲವಾಗಿ ಕಲಿಯುವ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಈ ಕಾರ್ಯಕ್ರಮದ ನಿರಂತರತೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನವಾಗಿ ಶಿಕ್ಷಕರಿಗೆ ಕಲಿಕಾ ಹಬ್ಬ. ತರಬೇತಿ ಕಾರ್ಯಕ್ರಮದಕ್ಲಿ
ಹಾಡು ಕಥೆ ಪರಿಸರ ಅಧ್ಯಯನ ಸಮುದಾಯದ ಜ್ಞಾನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಅತ್ಯಂತ ಸಂತಸದಾಯಕವಾಗಿ ಕಲಿಕಾ ಹಬ್ಬದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜಣ್ಣ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಮಾತನಾಡಿದರು
ಮುಖ್ಯಶಿಕ್ಷಕ ಅಶೋಕರೆಡ್ಡಿ ಇತರರಿದ್ದರು. ಶಿಕ್ಷಕರು ಕಾರ್ಯಕ್ರಮದಲ್ಲಿ ಕಾಗದದಿಂದ ತಯಾರಿಸಿದ ಟೋಪಿಗಳನ್ನು ಹಾಕಿಕೊಂಡು ತರಬೇತಿ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರದಂತೆ ನಿರ್ಮಿಸಿ ತರಬೇತಿ ಪಡೆಯಲು ಉತ್ಸುಕರಾಗಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *