ಕನ್ನಡಪರ ಸಂಘಟನೆಗಳು ಕನ್ನಡ ನೆಲ,ಜಲ ಭಾಷೆಯನ್ನು ಉಳಿಸಿ, ಬೆಳೆಸಬೇಕು :ಕರವೇ ಅಧ್ಯಕ್ಷರಾದ ರಾಮಕೃಷ್ಣಪ್ಪ

by | 13/11/23 | ಪ್ರತಿಭಟನೆ


ಹಿರಿಯೂರು :
ಕನ್ನಡಪರ ಸಂಘಟನೆಗಳಿಂದ ಮಾತ್ರ ಕನ್ನಡದ ನೆಲ,ಜಲ ಭಾಷೆಗಳ ರಕ್ಷಣೆ ಸಾಧ್ಯವಾಗಲಿದ್ದು, ಹೆಚ್ಚು ಹೆಚ್ಚು ಕನ್ನಡಪರ ಸಂಘಟನೆಗಳು ನೆಲ,ಜಲ ಭಾಷೆಯನ್ನು ಉಳಿಸಿ, ಬೆಳೆಸಬೇಕು, ತಾಯ್ನಾಡಿನ ರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲಬೇಕು ಎಂಬುದಾಗಿ ಕರವೇ ತಾಲ್ಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ ಹೇಳಿದರು.
ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಭಾನುವಾರದಂದು ನಗರದ ಕಾರ್ಮಿಕ ಘಟಕದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಮತ್ತು ಹೊಸ ನಾಮಫಲಕದ ಅನಾವರಣದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ ನಗರಾಧ್ಯಕ್ಷರಾದ ಮೊಹಮ್ಮದ್, ತಾಲ್ಲೂಕು ಗೌರವ ಅಧ್ಯಕ್ಷರಾದ ಗೋ.ಬಸವರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ಜಾಫರ್, ಚೆನ್ನಗಿರಿ ಬಾಬು, ಗಿರೀಶ್, ಸುಹೇಲ್, ನೂರುಲ್ಲಾ, ನಗರ ಕಾರ್ಮಿಕರ ಘಟಕದ ಅಧ್ಯಕ್ಷರಾದ ಕಲಂದರ್, ಉಪಾಧ್ಯಕ್ಷರಾದ ಜಾಫರ್, ಮತ್ತೊಬ್ಬ ಉಪಾಧ್ಯಕ್ಷರಾದ ಆಫ್ರಿದ್, ಪ್ರಧಾನ ಕಾರ್ಯದರ್ಶಿ ಅಸ್ಲಾಂ, ಶ್ರೀನಿವಾಸ್, ಸ್ವಾಮಿ, ನಗರ ಉಪಾಧ್ಯಕ್ಷ ರಘು, ನಗರ ಪ್ರಧಾನ ಕಾರ್ಯದರ್ಶಿ ಕಾಶಿ, ಸುಹೇಲ್, ಉದಯ್, ಶಂಕರ್, ಮಂಜು, ಸ್ವಾಮಿ, ಪಂಚರ್ ಮುಬಾರಕ್, ರವಿ ಸೇರಿದಂತೆ ಹಲವಾರು ಕನ್ನಡಪರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರುಗಳು ಹಾಜರಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *