ಕನ್ನಡದ ಕಾರ್ಯಕ್ರಮಗಳು ಪ್ರತಿಯೊಂದು ಕುಟುಂಬದ ಹಬ್ಬಉತ್ಸವಗಳಾಗಬೇಕು :ಯಾದವನಂದ ಸ್ವಾಮೀಜಿ

by | 08/11/23 | ಸುದ್ದಿ


ಹೊಳಲ್ಕೆರೆ ನ.8
ಕನ್ನಡಭಾಷೆ ಕನ್ನಡಿಗರ ಈ ನೆಲ-ಜಲ ಸಂಸ್ಕೃತಿಗಳ ಹಾಗೂ ಸದಾಚಾರಗಳ ಅಸ್ಮಿತೆಯಾಗಿದೆ, ಈ ನಿಟ್ಟಿನಲ್ಲಿ ಕನ್ನಡ ನಾಡಿನಲ್ಲಿ ನಡೆಯುವ ಎಲ್ಲಾ ಕನ್ನಡಪರ ಕಾರ್ಯಕ್ರಮಗಳು ಪ್ರತಿಯೊಂದು ಕುಟುಂಬದ ಹಬ್ಬಉತ್ಸವಗಳಾಗಬೇಕು ಎಂಬುದಾಗಿ ಚಿತ್ರದುರ್ಗದ ಅಖಿಲ ಭಾರತ ಯಾದವ ಪೀಠದ ಯಾದವನಂದ ಸ್ವಾಮೀಜಿಗಳು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಎಮ್ಮೆಹಟ್ಟಿ ಅಂಗಡಿ ಕುಟುಂಬದವರು ಹಮ್ಮಿಕೊಂಡಿದ್ದ ವಿಶೇಷ ನಾಮಕರಣ ಕಾರ್ಯಕ್ರಮ ಕನ್ನಡದ ಕಂದಮ್ಮನ ನಾಮಕರಣದ ಪ್ರಯುಕ್ತ ಕನ್ನಡದ ಮನಸ್ಸುಗಳಿಗೆ ಸಂಸ್ಕಾರ ಸಂಸ್ಕೃತಿ ದಿಬ್ಬಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅಂಗಡಿ ಕುಟುಂಬದ ಎನ್.ಶಿವಮೂರ್ತಿ ಕನ್ನಡ ನಾಡುನುಡಿ ಬಗ್ಗೆ ಸಂಸ್ಕೃತಿ ಬಗ್ಗೆ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದು, ತಮ್ಮ ಸಹೋದರ ಜ್ಞಾನಭಾರತಿ ಬಿ.ಇಡಿ ಕಾಲೇಜು ಪ್ರಾಂಶುಪಾಲ ಎನ್.ಧನಂಜಯ ರವರ ಸುಪುತ್ರಿ ನಾಮಕರಣವನ್ನು ಕನ್ನಡದ ಹಬ್ಬವಾಗಿ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರಲ್ಲದೆ,
ಕನ್ನಡದ ಸಂಸ್ಕೃತಿ ಪಸರಿಸುವ ಉಪನ್ಯಾಸ ಹಾಗೂ ವಚನಗಳ ಪ್ರಸ್ತುತಿಯ ಕಾರ್ಯಕ್ರಮ ಏರ್ಪಡಿಸಿ ಈ ಮೂಲಕ ನೆರೆದ ಎಲ್ಲ ಬಂಧು ಬಳಗಕ್ಕೆ ಸದ್ವಿಚಾರಗಳನ್ನು ಉಣಪಡಿಸಿ ಅರ್ಥಪೂರ್ಣ ಕೌಟುಂಬಿಕ ಕನ್ನಡದ ಹಬ್ಬ ನೆರವೇರಿಸುತ್ತಿದ್ದಾರೆ ಕನ್ನಡ ಭಾಷೆ ಉಳಿಸಿ ಬೆಳೆಸುವುದು ಕೇವಲ ಸರ್ಕಾರಿ ನೀತಿ ನಿಯಮಗಳಾಗಬಾರದು ಅದು ಪ್ರತಿ ಕನ್ನಡಿಗರ ಸಾರ್ವಜನಿಕರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಕಾಯಕಯೋಗಿ ಹೊಸದುರ್ಗ ಅಖಿಲ ಕರ್ನಾಟಕ ಕುಂಚಿಟಿಗರ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಡಾ.ಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಜಾತಿಕುಲ ಧರ್ಮದ ಸಂಕೋಲೆಗಳನ್ನು ತ್ಯಜಿಸಿದರೆ ಮಾತ್ರ ಮಹಾಮಾನವನಾಗುತ್ತಾನೆ, ಕುಟುಂಬದ ಪ್ರತಿ ಮಗು ಸದ್ಗುಣ ಸಂಪನ್ನರಾಗಬೇಕು ಎಂಬುದಾದರೆ ಕನ್ನಡನಾಡಿನ ಎಲ್ಲಾ ಮಹನೀಯರ ಯಶೋಗಾದೆಗಳನ್ನು ಹಾಗೂ ಜೀವನದ ಆದರ್ಶಗಳನ್ನು ಈ ಮಗುವಿಗೆ ತಿಳಿಯಪಡಿಸುವ ಮೂಲಕ ಸದ್ಗುಣ ಸಂಪನ್ನ ವೀರಕನ್ನಡಿಗನಾಗಿ ಬೆಳೆಸಬೇಕು ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸುಮಿತ್ರಕ್ಕನವರು ಮಾತನಾಡಿ, ಶಿವಮೂರ್ತಿಯವರ ಕುಟುಂಬ ಸಮಾಜಮುಖಿ ಕಾರ್ಯಗಳಲ್ಲಿ ವಿಶೇಷವಾಗಿ ತೊಡಗಿಕೊಂಡಿದ್ದು, ಅವರು ತಾಲ್ಲೂಕಿನಲ್ಲಿ ಕನ್ನಡದ ತೇರನ್ನು ಸಾರಥಿಯಾಗಿ ಯಶಸ್ವಿಯಾಗಿ ಕೊಂಡೊಯ್ಯುತ್ತಿದ್ದು, ಇಡೀ ಜಿಲ್ಲೆಯಲ್ಲಿ ಹೊಳಲ್ಕೆರೆ ಕನ್ನಡ ಪರಿಷತ್ತಿನ ಘಟಕ ಸಕ್ರಿಯವಾಗಿ ನಿರಂತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದೇ ನಿದರ್ಶನ, ಅಂಗಡಿ ಕುಟುಂಬಕ್ಕೆ ಸೇರ್ಪಡೆಯಾಗಿ ಇಂದು ನಾಮಕರಣಗೊಳ್ಳುತ್ತಿರುವ ಸುಪುತ್ರಿ “ಲಾಸ್ಯ ಅಂಗಡಿ ” ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು.
ಚನ್ನಗಿರಿ ಪಾಂಡುಮಟ್ಟಿ ವಿರಕ್ತಮಠದ ಮ.ನಿ.ಪ್ರ.ಡಾ.ಗುರುಬಸವ ಮಹಾಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಶ್ರೀಮಂತ ಸಾಹಿತ್ಯ ಪರಂಪರೆಯನ್ನ ಹೊಂದಿದಂತಹ ನಮ್ಮ ನಾಡಿನಲ್ಲಿ ಕನ್ನಡ ಭಾಷೆ ಅನ್ನ ಕೊಡುವಂತಹ ಭಾಷೆಯಾಗಬೇಕಾದ ಅನಿವಾರ್ಯತೆಯಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪ, ರಾಜ್ಯ ಯಾದವಸಂಘದ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಡಿ.ಟಿ.ಶ್ರೀನಿವಾಸ್, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಸಿಟಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಇಂದಿರಾ ಕಿರಣ್ ಕುಮಾರ್, ಕಾಂಗ್ರೇಸ್ ಮುಖಂಡ ಜಿ.ಎಚ್.ಷಣ್ಮುಖಪ್ಪ. ಜಿಲ್ಲಾ ಕಾಂಗ್ರೇಸ್ ಕಾರ್ಯಾಧ್ಯಕ್ಷ ಹಾಲೇಶ್, ಡಾ.ವಿ.ಬಸವರಾಜ್. ಟಿ.ವೀರಕರಿಯಪ್ಪ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮಯ್ಯ. ಹೊಳಲ್ಕೆರೆ ಶಾಖೆ ಅಧ್ಯಕ್ಷರಾದ ಲೋಕೇಶ್, ಕೆ ಎಸ್ ಎಸ್ ಅಕಾಡೆಮಿ ಚೇರ್ಮನ್ ಎಚ್.ಕೆ.ಬಸವರಾಜ. ಜಿಲ್ಲಾ ಶಿಕ್ಷಕರ ಸಂಘದ ಆರ್. ಕೃಷ್ಣಪ್ಪ. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶಿವಕುಮಾರ್. ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಎಪಿಎಂಸಿ ಸದಸ್ಯ ದಾಸಯ್ಯನಹಟ್ಟಿ ರಮೇಶ್, ಪುರಸಭಾ ಸದಸ್ಯರುಗಳಾದ ಕೆ. ಸಿ. ರಮೇಶ್, ಬಸವರಾಜ್ ಯಾದವ್. ಸಿದ್ದರಾಮಣ್ಣ ಮುಖಂಡರಾದ ಜಾನಕೊಂಡ ಆನಂದ್, ಬೆನ್ನೂರ್ ಪ್ರಕಾಶ್. ಡಿಸಿ ಮೋಹನ್ ಅವಿನಹಟ್ಟಿ ಮೋಹನ್ ರಾಜ್ ಕುಮಾರಸ್ವಾಮಿ. ತಾ. ಪಂ. ಮಾಜಿ ಅಧ್ಯಕ್ಷ ಮೋಹನ್, ನಾಗರಾಜ್, ಬಂಗಾರಪ್ಪ, ಸರ್ವೇ ಇಲಾಖೆ ಶಿವಣ್ಣ, ನಾಗೇಂದ್ರಪ್ಪ ಸೊಕ್ಕೆ, ಬಸವರಾಜ್.ರಾಷ್ಟ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿಪಿ ಉಮೇಶ್, ಪತ್ರಕರ್ತರಾದ ವೇದಮೂರ್ತಿ, ದುಮ್ಮಿ ಚಿತ್ತಪ್ಪ, ಸುರೇಶ, ಶಿವರುದ್ರಪ್ಪ, ಯುವರಾಜ್, ರಾಮಗಿರಿ, ಲೋಕೇಶ್, ಚಿತ್ರದುರ್ಗ ಜಿಲ್ಲೆ ಹಾಗೂ ತಾಲೂಕು ಘಟಕದ ನೌಕರರ ಸಂಘದ ಎಲ್ಲಾ ಪಧಾಧಿಕಾರಿಗಳು ಕಸಾಪ ಪಧಾಧಿಕಾರಿಗಳು ಬಿಸಿಎಂ ಇಲಾಖೆ ನೌಕರರ ವರ್ಗದವರು ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಅಪಾರ ಬಂಧುಬಳಗದವರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *