ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್

by | 30/11/23 | ಸುದ್ದಿ


ಹಿರಿಯೂರು :
ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಮೌಢ್ಯತೆಯನ್ನು ಹೋಗಲಾಡಿಸಲು, ಜನಜಾಗೃತಿಯನ್ನು ಮೂಡಿಸಲು ಹೋರಾಟ ನಡೆಸಿದ ಮಹಾನ್ ಚೇತನ, ಇವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 530 ನೇ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಕ್ತಿಮಾರ್ಗದ ಮೂಲಕ ಉಡುಪಿಯ ಕೃಷ್ಣನನ್ನು ಓಲಿಸಿಕೊಂಡ ಕನಕದಾಸರು ಭಗವಂತನಿಗೆ ಯಾವುದೇ ಜಾತಿಕುಲದ ಬೇಧವಿಲ್ಲ, ನಾರಾಯಣನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಬೀತುಪಡಿಸಿದ್ದಾರೆ, ಇಂತಹ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲರೂ ಗೌರವಿಸಬೇಕು ಎಂಬುದಾಗಿ ಹೇಳಿದರು.
ಉಪನ್ಯಾಸಕರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಜಾತಿ ವ್ಯವಸ್ಥೆಯನ್ನು, ವರ್ಣ ವ್ಯವಸ್ಥೆಯನ್ನು ವಿರೋಧಿಸಿದ ಕನಕದಾಸರು ಜನರ ಮನಸ್ಸಿನಲ್ಲಿ ಭಕ್ತಿಯನ್ನು ಬಿತ್ತರಿಸಿದರಲ್ಲದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ತಮ್ಮ ಕೀರ್ತನೆಗಳನ್ನೇ ಅಸ್ತ್ರವಾಗಿ ಬಳಸಿ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು ಎಂಬುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠವಾದ ದಾಸ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸಿದ ಹರಿದಾಸರಲ್ಲಿ ಶ್ರೇಷ್ಠರಾದ ಕನಕದಾಸರ ತತ್ವ-ಆದರ್ಶಗಳನ್ನು ಇಂದಿನ ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ರಾಜೇಶ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್, ಕೆಪಿಸಿಸಿ ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು, ಕೋಡಿಹಳ್ಳಿ ತಿಪ್ಪೇಸ್ವಾಮಿ, ಗೋಡೆ ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆ ದೇವರಾಜು, ತಾ.ಪಂ.ಮಾಜಿ ಅಧ್ಯಕ್ಷ ವೆಂಕಟೇಶ, ನಗರಸಭೆ ಸದಸ್ಯರಾದ ಶ್ರೀಮತಿ ವಿಶಾಲಾಕ್ಷಮ್ಮ, ಮಂಜುನಾಥ್, ಶಿವಕುಮಾರ್, ಮುದ್ದುಲಿಂಗಪ್ಪ, ಮಾಜಿ ಸೈನಿಕ ಶಿವಲಿಂಗ, ಹರೀಶ್, ಚಂದ್ರಪ್ಪ, ಕಾಂತರಾಜು, ಸೋಮೇಶ್, ಉಮೇಶ್, ಸಕ್ಕರಕೆಂಪಣ್ಣ, ಮಾಲತೇಶ್, ಓಂಕಾರಪ್ಪ, ರಾಮಚಂದ್ರಪ್ಪ, ಹರ್ತಿಕೋಟೆ ಮಹಾಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News >>

ಕಾಣೆಯಾದ ಐದು ವರ್ಷದ ಬಾಲಕಿ ಪತ್ತೆ ಕುಟುಂಬಸ್ಥರ ಮಡಿಲು ಸೇರಿದ ಬಾಲಕಿ

ಚಳ್ಳಕೆರೆ ಮಾ.3 ಮನೆಯಿಂದ ಕಾಣೆಯಾಗಿದ್ದ 5 ವರ್ಷದ ಬಾಲಕಿ‌ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ. ಹೌದು ಇದು ಚಳ್ಳಕೆರೆ ನಗರದ ಶಾಂತಿನಗರದ...

ಚಳ್ಳಕೆರೆಯಲ್ಲಿ 700 ಮನೆಗಳ ಲೋಕಾರ್ಪಣೆ ಮನೆ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

ಚಿತ್ರದುರ್ಗ ಮಾ.01: ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ‘ಸರ್ವರಿಗೂ ಸೂರು’...

ಸಹಕಾರ ಸಂಘಗಳು ಲೆಕ್ಕಪರಿಶೋಧಕರ ನೇಮಕ ಮಾಹಿತಿ ಸಲ್ಲಿಸಲು ಸೂಚನೆ

ಚಿತ್ರದುರ್ಗ ಫೆ.29: ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8)ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಹಾಗೂ...

ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ: ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಚಿತ್ರದುರ್ಗ ಫೆ.28: ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016ರನ್ವಯ ಕರ್ನಾಟಕ...

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ

ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗೆ 4 ಬಾರಿ ಗೈರು ಹಾಜರಾದ ಸದಸ್ಯೆಯನ್ನು ಅನರ್ಹಗೊಳಿಸಲಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ...

ಇ-ಆಸ್ತಿ ಆಂದೋಲನ ಸದುಪಯೋಗ ಪಡಿಸಿಕೊಳ್ಳುವಂತೆ ಪೌರಾಯುಕ್ತ ಚಂದ್ರಪ್ಪ.

ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಸುತ್ತೋಲೆಯಂತೆ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಇ -ಆಸ್ತಿ ಸೇವೆ ಆಂದೋಲನ ಪ್ರಾರಂಭ ಮಾಡಿದ್ದೆವೆ...

ನೀರಿನ ಅಸಮರ್ಪಕ ಬಳಕೆಯಿಂದ ಬರ ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ ಫೆ.23: ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ...

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ: ವರ್ಷಾಂತ್ಯಕ್ಕೆ ನೇರ ರೈಲು ಕಾಮಗಾರಿ ಆರಂಭ

ಚಿತ್ರದುರ್ಗ. ಫೆ.26: ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page