ಕಥೆ-ಕವನ

ಕೃತಿಕಾರರಲ್ಲಿ ಹಿಡಿಯಷ್ಟು ಪ್ರೀತಿ-ತಾಯ್ತನದ ಮಮತೆ ಇದ್ದರೆ ಭೂಮಿಯ ತೂಕದ ಕಾವ್ಯ ಸೃಷ್ಟಿಯಾಗುತ್ತದೆ ಸಾಹಿತಿ ,ಬರಹಗಾರ ,ಸಹ ಪ್ರಾಧ್ಯಪಕ ಕೆ.ಚಿತ್ತಯ್ಯ.


ಹಿರಿಯೂರು:
ಯಾವುದೇ ಕವಿಗಳು, ಕಾದಂಬರಿಕಾರರು ಹಾಗೂ ಕೃತಿಕಾರರಲ್ಲಿ ಹಿಡಿಯಷ್ಟು ಪ್ರೀತಿ-ವಾತ್ಸಲ್ಯ, ಕರುಣೆ ಹಾಗೂ ತಾಯ್ತನದ ಮಮತೆ ಇದ್ದರೆ ಭೂಮಿಯಷ್ಟು ತೂಕದ ಕಾವ್ಯ ಸೃಷ್ಟಿಯಾಗುತ್ತದೆ ಎಂಬುದಾಗಿ ಸಾಹಿತಿ,ಬರಹಗಾರರು ಹಾಗೂ ಚಳ್ಳಕೆರೆ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಪಕರಾದ ಕೆ.ಚಿತ್ತಯ್ಯ ಅವರು ಹೇಳಿದರು.
ನಗರದ ರೋಟರಿ ಸಭಾ ಭವನದಲ್ಲಿ ಭಾನುವಾರ ನಿವೃತ್ತ ಶಿಕ್ಷಕಿ ಶ್ರೀಮತಿ ಅನುಸೂಯಮ್ಮ ಅವರ “ಪ್ರೀತಿಯಿದ್ದರೆ ಹಿಡಿಯಷ್ಟು” ಕವನ ಸಂಕಲ ಬಿಡುಗಡೆ ಹಾಗೂ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿ ಹೃದಯದಲ್ಲಿ ವಸ್ತುವಿನ ಬಗ್ಗೆ ಸ್ಪಷ್ಟತೆ ಹಾಗೂ ಅದನ್ನು ಮಾನಸಿಕವಾಗಿ ಅನುಭವಿಸಿ ಬರೆಯುವಂತಹ ಕೌಶಲ್ಯ ಹಾಗೂ ಅಭಿರುಚಿ ಕೃತಿಕಾರರಲ್ಲಿ ನಿರ್ಮಲವಾದ ಅನುಭಾವ ಹೊರಹೊಮ್ಮಿದರೆ ಮಾತ್ರ ಕಾವ್ಯ ಕುಸುಮಗಳು ಅರಳುತ್ತವೆ ಎಂಬುದಾಗಿ ಅವರು ಅಭಿಪ್ರಾಯ ಪಟ್ಟರು.
ಜನಪದ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಸಿ.ಶಿವಲಿಂಗಪ್ಪ ಅವರು ಮಾತನಾಡಿ ಅನುಸೂಯಮ್ಮ ಅವರ ಕವನ ಸಂಕಲದಲ್ಲಿ ಮಮತೆ, ಘನತೆ,ಸಮತೆಗಳ ಸಮ್ಮಿಳಿವಾಗಿದೆ. ಎಲ್ಲಾ ಇಸಂ ಗಳನ್ನು ಮೀರಿದ ಸಮನ್ವಯ ಕವಿಯಾಗಿ ಅವರು ಮೈತಳೆದಿದ್ದಾರೆ. ಅವರ ಅನುಭವಕ್ಕೆ ತಕ್ಕ ಭಾವ ಅರ್ಥಗಳ ಜೋಡಣೆಯಾಗಿ ಉತ್ತಮ ಕೃತಿ ಹೊರ ಬಂದಿದೆ ಎಂಬುದಾಗಿ ಕೃತಿ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಸಾಮಾಜ ಸೇವಕಿ ಹಾಗೂ ದಾನಿಗಳಾದ ಶ್ರೀಮತಿ ಎಚ್.ವಿ.ಸೀತಮ್ಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದೊಡ್ಡಮಲ್ಲಯ್ಯ , ನಿವೃತ್ತ ಉಪನ್ಯಾಸಕ ಎಂ.ಜಿ.ರಂಗಸ್ವಾಮಿ, ಲೇಖಕಿಅನುಸೂಯಮ್ಮ, ಆರನಕಟ್ಟೆ ಶಿವಕುಮಾರ್, ಶಿವಗಂಗಮ್ಮ, ಕೆ.ಎಂ.ಜಗನ್ನಾಥ್, ಹರ್ತಿಕೋಟೆ ರುದ್ರಸ್ವಾಮಿ, ಬಬ್ಬೂರು ತಿಪ್ಪೀರನಾಯಕ, ಹರ್ತಿಕೋಟೆ ಮಹಾಸ್ವಾಮಿ, ಎಂ.ಆರ್.ನಾಗರಾಜ್, ಲಕ್ಷ್ಮೀಸುಧೀಂಧ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹೊಸವರ್ಷದ ಹಾರ್ಥಿಕ ಶುಭಾಶಯಗಳೊಂದಿಗೆ-2024

ಹೊಸವರ್ಷದ ಹಾರ್ಥಿಕ ಶುಭಾಶಯಗಳೊಂದಿಗೆ….

ಮೊನ್ನೆ ಮೊನ್ನೆಯಷ್ಟೇ 2023ರ ವರ್ಷವನ್ನು ಎದುರುಗೊಂಡ ನೆನಪು. ನೋಡ ನೋಡುತ್ತಲೇ 2023ರ ಘಟ್ಟ ಮುಗಿದು 2024ರ ಆಗಮನವಾಗಿದೆ. ಬೇಡವೆಂದರೆ ನಿಲ್ಲುವುದೇ. ವರ್ಷವೆಂಬುದು ಎಷ್ಟು ಬೇಗ ಮುಗಿದು ಹೋಯಿತಲ್ಲವೇ.

2024ರ ಆಗಮನವಾಗಿದೆ. ಹಳೆಯ ನೆನಪುಗಳನ್ನು ಕಾಲ ಗರ್ಭಕ್ಕೆ ಸರಿಸಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುವ ಸುದಿನ. ಒಂದಿಷ್ಟು ಹೊಸ ನಿರೀಕ್ಷೆಗಳು ಹಾಗೂ ಭರವಸೆಗಳೊಂದಿಗೆ ನವಚೇತೋಹಾರಿಯಾಗಿ ಹೊಸ ವರ್ಷವನ್ನು ಎದುರುಗೊಳ್ಳೋಣ.

2024ರ ಆಗಮನದ ಹಿನ್ನೆಲೆಯಲ್ಲಿ ನಮ್ಮದೊಂದು ಹಾರ್ದಿಕ ಶುಭ ಕಾಮನೆಗಳು ನಿಮಗೆ 💐💐💐

ಮತ್ತೊಂದು ಕಾಲಘಟ್ಟವನ್ನು ಬರಮಾಡಿಕೊಳ್ಳುವ ಬರದಲ್ಲಿ ಉತ್ತಮ ಬದುಕಿಗೆ ಬೇಕಾದ ಒಂದಿಷ್ಟು ಒಳ್ಳೆಯ ಸಂಕಲ್ಪಗಳನ್ನು ಮಾಡೋಣ.

ಆರೋಗ್ಯದ ಜೀವನ ನಿಮ್ಮದಾಗಲಿ. ಐಶ್ವರ್ಯ ನಿಮ್ಮನ್ನು ಹುಡುಕಿಕೊಂಡು ಬರಲಿ. ಬದುಕಿನ ಸವಾಲುಗಳು ಮತ್ತು ಸಂಕೋಲೆಗಳು ಸುಲಲಿತವಾಗಿ ಪರಿಹಾರಗೊಳ್ಳಲಿ. ಒತ್ತಡ ಮುಕ್ತ ಜೀವನ ನಿಮ್ಮದಾಗಲಿ.

2024 ನಿಮಗೆ ಅತ್ಯಂತ ಯಶಸ್ವಿ ವರ್ಷವಾಗಿ ನಿಮ್ಮ ಜೀವನದ ಪುಟದಲ್ಲಿ ಚಿರಸ್ಥಾಯಿಯಾಗಿ ದಾಖಲಾಗಲಿ ಎಂದು ಶುಭಕೋರುತ್ತೇನೆ.

2023 ನಿನಗಿದೋ ಶುಭ ವಿದಾಯ 2024 ನಿನಗಿದೋ ಸ್ವಾಗತ.

ಇನಾಯತ್ ಪಾಷ. ಎಸ್ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ.


…………………….. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿ ಎಂದು ಹಾರೈಸುತ್ತೇನೆ.. ನಿಮಗೂ.. ನಿಮ್ಮ ಕುಟುಂಬದ ಸದಸ್ಯರಿಗೂ ಹೊಸ ವರ್ಷದ ಶುಭಾಶಯಗಳು.. ಜನಧ್ವನಿ ಡಿಜಿಟಲ್ ಮೀಡಿಯಾ ಚಳ್ಳಕೆರೆ

“ರಸ್ತೆ ಸುರಕ್ಷೆ “ಕವಿತೆ ಮೂಲಕ ತಿಪ್ಪೇಸ್ವಾಮಿ ಮಣೆಗಾರ ಸಾರಿಗೆ ಬಸ್ ನಿರ್ವಾಹಕ.

“ರಸ್ತೆ ಸುರಕ್ಷೆ. ”
ಓ ನನ್ನ ಚಾಲಕ ಭಾಂದವರೆ
ಪಾಲಿಸಿ ರಸ್ತೆ ಸುರಕ್ಷೆ ನಿಯಮ
ಚಲಾಯಿಸಿ ವಾಹನ ಸಾವಧಾನ
ದಾರಿಹೊಕರಿಗೆ ನೀಡಿ ಜೀವಧಾನ
ಚಾಲನೆಯಲಿ ಇರಲಿ ಏಕಾಗ್ರತೆ
ಮುಂದಿನ ವಾಹನದ ಬಗ್ಗೆ ವಹಿಸಿ ಮುಂಜಾಗ್ರತೆ
ರಸ್ತೆಯಲಿ ನೋಡಿ ಅಪಘಾತದ ತೀವ್ರತೆ
ಮುಂದೆ ಬರುವ ವಾಹನದ ಬಗ್ಗೆ ಇರಲಿ ಜಾಗ್ರತೆ
ರಸ್ತೆ ಸುರಕ್ಷತೆ ನಿಯಮ ಅರಿತು
ಕರೆದೊಯ್ದಿರಿ ಅವರವರ ಊರಿಗೆ
ರಸ್ತೆ ಸುರಕ್ಷತೆ ನಿಯಮ ಮರೆತು
ಕರೆದೊಯ್ಯದಿರಿ ಯಮನೂರಿಗೆ
ರಸ್ತೆ ಸುರಕ್ಷೆ ನಿಯಮ ಪಾಲಿಸದೆ
ಲಕ್ಷ ಲಕ್ಷ ಆದಾಯ ತಂದರೇನಂತೆ
ಬಡಪಾಯಿ ಜೀವಕ್ಕೆ ಸಮವಲ್ಲಂತೆ
ಬಲ್ಲವರು ಹೇಳುವಂತೆ ಸುರಕ್ಷತೆಗೆ
ಸಾರಿಗೆ ನಿಗಮದಲ್ಲಿ ಪ್ರಥಮ ಆದ್ಯತೆಯಂತೆ
ರಸ್ತೆ ಸುರಕ್ಷೆ ನಿಯಮ ಪಾಲಿಸದೆ
ವಾಹನ ಚಲಾಯಿದರೆ
ಸಾರಿಗೆ ನಿಗಮಕ್ಕೆ ಕಪ್ಪು ಚುಕ್ಕೆ
ನಿನೇ ದಯಪಾಲಿಸಿದಂತೆ
ಜಾಗ್ರತೆ ವಹಿಸಿ ಪಾಲಿಸು ರಸ್ತೆ ಸುರಕ್ಷೆ
“ನಿನಗೆ ಜೀವ ಕೊಡುವ ಶಕ್ತಿ ಇಲ್ಲದ ಮೇಲೆ
ಜೀವ ತೆಗಿಯುವ ಹಕ್ಕೇನಿದೆ ನಿನಗೆ.”
“ಅನುದಿನವು ಅನುಗಾಲವು ಪಾಲಿಸಿ
ರಸ್ತೆ ಸುರಕ್ಷತೆಯ ನಿಯಮ

ಕೆ.ತಿಪ್ಪೇಸ್ವಾಮಿ,ಮಣೆಗಾರ,
ಚಳ್ಳಕೆರೆ ಡಿಪೋ,

“ಧರ್ಮ-ಕರ್ಮ-ಮರ್ಮ ಕವನ ಕೆ. ತಿಪ್ಪೇಸ್ವಾಮಿ, ಮಣೆಗಾರ K S R T C. ಚಳ್ಳಕೆರೆ ಘಟಕ.

“ಧರ್ಮ-ಕರ್ಮ-ಮರ್ಮ.”

ಜನಸೇವೆ ಮಾಡುವುದು ನಿನ್ನ ಧರ್ಮ
ಯಾವಜನ್ಮದ್ದಲ್ಲಿ ಮಾಡಿದ್ದೆ ನೀ ಕರ್ಮ
ತಿಳಿಯುತ್ತಿಲ್ಲ ಜನಸೇವಕರ ಒಳಮರ್ಮ l
*
ಒತ್ತಿದವರಿಗೆ ಒತ್ತದಿರುವರಿಗೆ
ಹಿರಿಯಜ್ಜಿಗೆ ಹಿರಿಸೊಸೆಗೆ
ಯುವನಿಧಿ ಭಾಗ್ಯನಿಧಿ ನೀಡುವುದುಂಟು l
ಬೆವರರಿಸಿ ಜನಸೇವೆ ಗೈಯ್ಯುವ
ಬಡಜೀವಿ ಕಾರ್ಮಿಕರಿಗೆ
ಹಿಂಬಾಕಿ ಕೊಡಲು ಅಡ್ಡಿಯೇನುಂಟು l
*
ಸಾರಿಗೆ ಕಾರ್ಮಿಕನದು ಜೀವವಲ್ಲವೆ
ಈ ನಾಡಲ್ಲಿ ಜೀವಿಸಲು ಯೋಗ್ಯನಲ್ಲವೆ
ಕಾರ್ಮಿಕರ ಮೂಕರೋದನೆ ತಿಳಿಯುತ್ತಿಲ್ಲವೆ l
*
ಎದೆ ಉಬ್ಬಿಸಿ ನಡೆದರೆ ಉಳಿಗಾಲವಿಲ್ಲ
ತಲೆತಗ್ಗಿಸಿ ದುಡಿದರೆ ಸರಿಯಾಗಿ ಸಂಬಳವಿಲ್ಲ l
*
ಏನಂತ ತಿಳಿದಿರುವರು ನಮ್ಮನ್ನೆಲ್ಲ
ಸುಮ್ಮನೆ ಕೂರುವವರಲ್ಲೆಂದು
ಬೊಗಳೆ ಬಿಡುವವರೇ ಎಲ್ಲಾ l
ಕಾರ್ಮಿಕರನ್ನೆಲ್ಲ ಮೂರ್ಖರನ್ನಾಗಿ
ಮಾಡುವರು ಸಂಘಟನೆಯವರೆಲ್ಲ
ಅವರಿಗೆ ಬುದ್ಧಿ ಇನ್ನೂ ಯ್ಯಾಕೆ ಬರುತ್ತಿಲ್ಲ l


ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.

ಒಂಟಿಸಲಗ. ಸಾರಿಗೆ ಬಸ್ ನಿರ್ವಾಹಕ ಬರೆದ ಕವಿತೆ.

“ಒಂಟಿಸಲಗ. ”
ಅಭಿಮಾನ್ಯು ಪಿತನ ಹತಗೈದವನು
ದಟ್ಟಾರಣ್ಯದಲಿ ಅಡಗಿರಲಿ l
ಮಡುವಿನಲಿ ಮಲಗಿರಲಿ l
ಬೆಂಬಿಡದೆ ಹೆಡೆಮುರಿ ಕಟ್ಟು l
ವಿನು ಸಲಗವ ವಿನಯದಿ ಪಳಗಿಸಿ
ದಶಮಿಯಂದು ಅಂಭಾರಿ ಕಟ್ಟು l
*
ನಾಡದೇವಿ ನಾಡಜನರ ಅಭಯ
ನಿನ್ನ ಮೇಲಿರಲು ಚಿಂತಿಸುವೇಕೆ?
ಅಂಜುವೇಕೆ? ವಿನು ಏಳು ಮೇಲೇಳು
ಅಭಿಮಾನ್ಯು ಜೊತೆಗೂಡಿ ಕದಳಿವನಕ್ಕೆ
ಕರಿ ಹೊಕ್ಕಂತೆ l ಕಾನನಕ್ಕೆ ನುಗ್ಗಿ
ಮಧಗಜವ ಮಧವಡಗಿಸಿ ಎಳೆದು
ತಾ ವಿನು ನಾಡಿಗೆ l
*
ಒಂಟಿಸಲಗನ ಮೇಲೆ ನಾಡದೇವಿಯ
ಕೂರಿಸಿ ಮೆರಸು ವಿಜಯದಶಮಿಯಂದು l
ನಾಡಿಗೆ ಆಗ ಕೂಗಿ ಕೂಗಿ ಹೇಳು
ಅರ್ಜುನನ ಹಂತಕ ಇವನೆಂದು l
*
ಹೇ ಮಧವೇರಿದ ಮಧಗಜನೇ
ಚಾಮುಂಡಿಯ ಸುತ ಅರ್ಜುನನ ಹಂತಕನೇ
ಮಾವುತ ವಿನುಗೆ ಶರಣಾಗಿ l
ನಾಡದೇವಿಯ ಹೊತ್ತು ಪಾವನನಾಗು ಬಾ
ಕಾಡಿಂದ ನಾಡಿಗೆ l
*
ಪಣತೊಡು ವಿನು ಪಣತೊಡು
ಮಧವೇರಿದ ಮಧಗಜವ ಮಧವಡಗಿಸಿ
ಮಹಿಷಿ ಮರ್ದಿನಿಯ ಕೂರಿಸಿ
ಅರ್ಜುನನ ಹತಗೈದವನು ಇವನೆಂದು
ಹೇಳುವ ಪಣತೊಡು ವಿನು l

ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.

ದಸರಾ ಮಹೋತ್ಸವ ಆಚರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕಾಗಿದೆ ಸಾಹಿತಿ ಪತ್ರಕರ್ತ ಕೊರ್ಲಕುಂಟೆತಿಪ್ಪೇಸ್ವಾಮಿ.

ದಸರಾ ಮಹೋತ್ಸವ ಆಚರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕಾಗಿದೆ ಸಾಹಿತಿ ಪತ್ರಕರ್ತ ಕೊರ್ಲಕುಂಟೆತಿಪ್ಪೇಸ್ವಾಮಿ.

ಚಳ್ಳಕೆರೆ: ಸಾಮಾಜಿಕ ನ್ಯಾಯಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರು
ತಮ್ಮ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತಂದವರು.
ಸಂಪ್ರದಾಯಬದ್ಧವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವ
ವಿಖ್ಯಾತಿಯಾಗಿ ನಡೆಯುವ ದಸರಾ ಮಹೋತ್ಸವ ಆಚರಣೆಯಲ್ಲಿ
ಸಾಮಾಜಿಕ ನ್ಯಾಯ ಪಾಲಿಸಬೇಕಾಗಿದೆ.
ಪ್ರಸಕ್ತ ವರ್ಷದ ದಸರಾ ಮಹೋತ್ಸವದ ಉದ್ಘಾಟನೆಗೆ
ನಾಡಿನ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪರಿಪೂರ್ಣವಾಗಿ
ತೊಡಗಿಸಿಕೊಂಡಿರುವ ಡಾ.ಅರವಿಂದ ಮಾಲಗತ್ತಿ, ಎಚ್.
ಗೋವಿಂದಯ್ಯ, ಮೂಡಕೂಡು ಚಿನ್ನಸ್ವಾಮಿ, ಡಾ.ಯಲ್ಲಪ್ಪ
ಕೆಕೆಪುರ, ಡಾ.ವಡ್ಡಗೆರೆ ನಾಗರಾಜಯ್ಯ, ಬಿ.ಟಿ. ಜಾಹ್ನವಿ,
ಡಾ. ಬಂಜಗೆರೆ ಜಯಪ್ರಕಾಶ್, ಡಾ.ಬಿ.ಎಲ್. ವೇಣು ಮತ್ತು
ಡಾ. ಚಂದ್ರಶೇಖರ ತಾಳ್ಯ ಇವರ ಬದುಕಿನ ಆದರ್ಶವನ್ನು
ಅವಲೋಕನ ಮಾಡುವ ಮೂಲಕ ಈ ವರ್ಷದ ದಸರಾ
ಮಹೋತ್ಸವದ ಉದ್ಘಾಟನೆಗೆ ಸಾಮಾಜಿಕ ನ್ಯಾಯದ
ತಳಹದಿಯಲ್ಲಿ ರಾಜ್ಯದ ಆಡಳಿತ ಸರ್ಕಾರ, ಪ್ರಾದೇಶಿಕವಾಗಿ
ಮತ್ತು ಪ್ರಗತಿಪರ ನೆಲೆಯಲ್ಲಿ ಪರಿಗಣಿಸಬೇಕು ಎಂದು ತಾಲೂಕಿನ
ವಸುಂಧರ ಶಿಕ್ಷಣ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ
ಅಧ್ಯಕ್ಷ, ಕವಿ ಕಲ್ಲಕುಂಟೆ ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾವ್ಯಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರವೀಂದ್ರನಾಥ್


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.2
ಕಾವ್ಯಕ್ಕೆ ಮನಸ್ಸನ್ನು ಮುದಗೊಳಿಸುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರವೀಂದ್ರನಾಥ್ ಹೇಳಿದರು.
ನಗರದ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಕನ್ನಡ ವಿಭಾಗ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಪ್ರೊ.ಎ.ಎಂ.ಜಗದೀಶ್ವರಿ ಅವರ “ಮಾತಾಡುವ ಮನಸ್ಸುಗಳು” ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನುಷ್ಯನು ಆಧುನಿಕ ಯುಗದಲ್ಲಿ ಹಲವು ಸಂಕಷ್ಟಗಳ ಮೂಲಕ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದರೂ ಕಾವ್ಯ ವಾಚನದಿಂದ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ. ನಂತರ ರಸಾನುಭವದಿಂದ ಮನಸ್ಸು ಮುದಗೊಳ್ಳುತ್ತದೆ. ಕಾವ್ಯ ಮನಸ್ಸನ್ನು ಪರಿಷ್ಕರಣೆಗೊಳಿಸಿ ಭಾಷೆ ಮತ್ತು ಭಾವನೆಗಳನ್ನು ಇತರರಿಗೆ ಹಂಚುತ್ತದೆ. ಕನ್ನಡ ಸಾಹಿತ್ಯದಲ್ಲಿ ವಿಜ್ಞಾನದ ಎಲ್ಲ ಜ್ಞಾನ ಶಾಖೆಗಳು ಅಡಕವಾಗಿವೆ. ಪ್ರಸ್ತುತ ಕವನ ಸಂಕಲನದಲ್ಲಿ ಪ್ರತಿ ಕವನದಲ್ಲಿ ಕಾವ್ಯದ ಓಘ ಅಮೋಘವಾಗಿದೆ. ಕಾವ್ಯ ಓದುವಿಕೆಯಿಂದ ಮನುಷ್ಯರ ಬದುಕು ಯಾಂತ್ರಿಕತೆಯಿAದ ವಿಮುಕ್ತಿ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಪ್ರೊ.ಡಿ.ಅAಜನಪ್ಪ, ಕವನಸಂಕನ ಕುರಿತು ವಿಶೇಷ ಉಪನ್ಯಾಸ ನೀಡಿತ್ತಾ “ ಕವಿತೆ ಬುದ್ದಿಗಮ್ಯವಲ್ಲದೆ ಭಾವಗಮ್ಯವಾಗಿ ಮನುಷ್ಯ ಬದುಕಿನ ನಿಜಸ್ಥಿತಿಯನ್ನು ಕುರಿತು ಮಾತನಾಡುತ್ತದೆ. ಬದುಕಿನಲ್ಲಿ ಹಲವು ಸಂಕಷ್ಟಗಳಿರುತ್ತವೆ. ಆ ಎಲ್ಲ ಸಂಕಷ್ಟಗಳಿAದ ಮುಕ್ತಿ ಹೊಂದಬೇಕಾದರೆ ಬದುಕನ್ನು ಕ್ರಿಯಾಶೀಲತೆಯಿಂದ ರೂಪಿಸಿಕೊಳ್ಳಬೇಕು. “ಮಾತಾಡುವ ಮನಸ್ಸುಗಳು” ಕವನ ಸಂಕಲನದಲ್ಲಿ ಹೆಣ್ಣು ಲೋಕದ ಒಳ ಧ್ವನಿಗಳನ್ನು ತೆರೆಯುತ್ತದೆ. ಸಮಾಜವನ್ನು ನೋಡುವ ಪರಿಯನ್ನು ಹೇಳುತ್ತದೆ. ವ್ಯಾವಹಾರಿಕ ಸಂಬAಧಗಳÀ ಆಚೆ ಮಾನವೀಯ ಸಂಬAಧಗಳ ನಿಲುವುಗಳನ್ನು ಸ್ಪಷ್ಟಪಡಿಸುತ್ತವೆ. ಒಟ್ಟಾರೆಯಾಗಿ ಕವನದ ಕೇಂದ್ರಬಿAದು ಮನಸ್ಸು ಆಗಿದ್ದು, ಹೆಣ್ಣಿನ ಭಾವನೆಗಳನ್ನು ತೆರೆದಿಡುತ್ತದೆ” ಎಂದರು.
ಎ.ಎA.ಜಗದೀಶ್ವರಿ ಅವರು ಮೂಲತಃ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಅವರು ಬರೆದಿರುವ ಮಾತಾಡುವ ಮನಸುಗಳು ಕವನ ಸಂಕಲನವು ಸಾಹಿತ್ಯ ಮತ್ತು ವಿಜ್ಞಾನಗಳು ಅವಿನಾಭಾವ ಸಂಬAಧವನ್ನು ಸೂಚಿಸುತ್ತದೆ. ಈ ಸಂಕಲನವು ವೈಚಾರಿಕತೆಯ ಭಾವದಿಂದ ತುಂಬಿದೆ. ಜತೆಗೆ ತಾಳ್ಮೆಯ ಓದುಗರರನ್ನು ನಿರೀಕ್ಷಿಸುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಆರ್.ರಂಗಪ್ಪ ಹೇಳಿದರು.
ಕನ್ನಡ ಜೀವದ ಭಾಷೆಯಾಗಿದೆ. ಕನ್ನಡಕ್ಕೆ ಬಹುದೊಡ್ಡ ಇತಿಹಾಸವಿದ್ದು, ಕನ್ನಡ ಸೂಕ್ಷ್ಮ ಮತ್ತು ಸಂಕೀರ್ಣವಾದ ಭಾಷೆಯಾಗಿದೆ. ನಿತ್ಯ ತಂತ್ರಜ್ಞಾನದ ಮೂಲಕ ಕನ್ನಡವನ್ನು ಬಳಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಡಾ.ಗೋವಿಂದ ಮಾತನಾಡಿದರು.
ಇದೇವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಪ್ರಾಧ್ಯಾಪಕರಾದ ಬಿ.ಯು.ನರಸಿಂಹಮೂರ್ತಿ, ಪ್ರೊ.ಎನ್.ಜಗನ್ನಾಥ್, ಪ್ರೊ.ರಮೇಶ್‌ಭಟ್, ಪ್ರೊ.ಡಿ.ಎನ್.ರಘುನಾಥ್, ಪ್ರೊ.ಜೆ.ಮಾನಸ, ಡಾ.ಪಾಪಣ್ಣ ಇದ್ದರು. ಪ್ರೊ. ಎ.ಎಸ್.ಸತೀಶ್ ನಿರೂಪಿಸಿದರು. ಡಾ.ಜಿ.ವಿ.ರಾಜಣ್ಣ ಸ್ವಾಗತಿಸಿದರು, ಡಾ.ಕೆ.ಚಿತ್ತಯ್ಯ ವಂದಿಸಿದರು.

ನರರಾಕ್ಷಸನ‌ ವಿಕೃತ ಅಟ್ಟಹಾಸ……

” ನರರಾಕ್ಷಸನ‌ ವಿಕೃತ ಅಟ್ಟಹಾಸ………
****************************************
ನಾವು‌ ಚಿಕ್ಕವರಿದ್ದಾಗ ದೆವ್ವ, ಪಿಶಾಚಿ, ರಾಕ್ಷಸರೆಂದರೆ‌ ಮನುಷ್ಯರಿಗೆ ತದ್ವಿರುದ್ಧವಾದ ಅತಿ ಭಯಂಕರ ರೂಪ ಹೊಂದಿರುವ, ನೋಡಿದರೆ ಬೆಚ್ಚಿ‌ಬೀಳುವ ಕ್ಷುದ್ರ ಆಕೃತಿಗಳು ಎಂಬ ವಿಶೇಷ ಕಲ್ಪನೆಯಿತ್ತು. ಕಥೆ, ಸಿನಿಮಾ‌, ಡ್ರಾಮಾ, ಫ಼್ಯಾಂಟಸಿ ಕಥಾನಕಗಳಲ್ಲೂ ದೆವ್ವ ಪಿಶಾಚಿಗಳೆಂದರೆ ಒಂದು ರೀತಿಯ ಭಯಾನಕ ಚಿತ್ರಣವೇ‌ ಕಣ್ಣಮುಂದೆ ಇತ್ತು. ಆದರೆ ಸ್ವತಃ ದೆವ್ವ- ಭೂತಗಳೂ ಹೆದರಿಕೊಳ್ಳು ವಂತಹಾ, ಕಾಡು ಪ್ರಾಣಿಗಳೂ ನಾಚಿಕೆ ಪಟ್ಟುಕೊಳ್ಳುವಂತಹ, ವಿಷಜಂತುಗಳೂ ಬೆಚ್ಚಿ ಬೀಳುವ ಭಯಂಕರ ಕೃತ್ಯಗಳನ್ನು ಈ ನರ ಮನುಷ್ಯ ಎಂಬ ವಿಚಿತ್ರ ಪ್ರಾಣಿ ಮಾಡಬಲ್ಲ ಎಂಬುದು ಎಂದೋ ಸಾಬೀತಾಗಿದೆ, ಆಗುತ್ತಲಿದೆ ಹಾಗೂ ಆಗಲಿದೆ.

ಆ ಸಾಲಿಗೆ‌ ಇಲ್ಲೊಬ್ಬ ನರರಾಕ್ಷಸನ‌ ಹೇಯ‌ ಕೃತ್ಯ ಸೇರ್ಪಡೆ ಯಾಗಿದೆ. ಹಾಗೇ ಗಮನಿಸಿ.

ತನ್ನೊಡನೆ ಮದುವೆಯಾಗದೇ ಒಟ್ಟಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅವಳ ದೇಹವನ್ನು ಬರೋಬ್ಬರಿ 35 ತುಂಡುಗಳನ್ನಾಗಿಸಿ, ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಆಕೆಯ‌ ದೇಹದ ಭಾಗಗಳನ್ನು ಸರಿ ರಾತ್ರಿಯಲ್ಲಿ ಹೂತು ಹಾಕಿರುವ ಭೀಭತ್ಸಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ನರರಕ್ಕಸ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮೊನ್ನೆ ಸುದ್ದಿಯಾಗಿದೆ.

ಇದರ ಹಿನ್ನೆಲೆ‌ ಕೆದಕಿದಾಗ ಸಿಕ್ಕಿದ್ದಿಷ್ಟು !

ಕೊಲೆಯಾದ ನತದೃಷ್ಟೆ ಯುವತಿಯ ಹೆಸರು ಶ್ರದ್ಧಾ. ಕೊಲೆಮಾಡಿದ ನಫ಼್ತಟಾಲ್ ನರರಕ್ಕಸ , ಅಫ಼್ತಾಬ್ ಅಮೀನ್ ಪೂನವಾಲಾ ಎಂಬ ಮಾನವ ರೂಪ ಹೊತ್ತ ಕಾಡು ಮೃಗ.

ಶ್ರದ್ಧಾ ಮುಂಬೈನ‌ ಎಂ.ಎನ್.ಸಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಸಾಮಾಜಿಕ ಜಾಲತಾಣದ ಮೂಲಕ‌ ಪರಿಚಯವಾದ ಅಫ಼್ತಾಬ್ ಅಮೀನ್ ಎಂಬ ಪರಮ ಅಯೋಗ್ಯನ ಪ್ರೀತಿಯೆಂಬ ಆಕರ್ಷಣೆಗೆ‌ ಸಲೀಸಾಗಿ ಬೀಳುತ್ತಾಳೆ. ನಂತರ ಬಹುತೇಕ ಮೊಬೈಲ್‌ ಪ್ರೀತಿಗಳಂತೆ ಈ ಹುಚ್ಚು ಆಕರ್ಷಣೆ ಅವರ ನಡುವಿನ ಡೇಟಿಂಗ್ ನ‌ ಪರಾಕಾಷ್ಠೆ ತಲುಪಿದೆ. ಸಹಜವಾಗಿ ಎದುರಾದ ಮನೆಯವರ ವಿರೋಧವನ್ನೂ‌ ಲೆಕ್ಕಿಸದೇ ಈ ಲಫ಼ಂಗನೊಂದಿಗೆ ಭವಿಷ್ಯದ ಕನಸು ಕಂಡು ದೆಹಲಿಗೆ ಹಾರಿ ಅಲ್ಲಿ ಇವನೊಂದಿಗೆ ಕೂಡಿ ಬಾಳುವ ಕನಸಿಗೆ ಹೆಜ್ಜೆ ಇಟ್ಟಿದ್ದಾಳೆ. ಅವಳೊಂದಿಗೆ, ಅವಳ ಹಣದಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಸುಖ ಕಾಣುತ್ತಿದ್ದ ಈ ಕಂತ್ರಿಯಲ್ಲಿ, ದಿನ ಕಳೆದಂತೆ‌ ತನ್ನನ್ನು ಮದುವೆಯಾಗುವಂತೆ‌ ಪೀಡಿಸುತ್ತಿದ್ದ ಶ್ರದ್ಧಾಳ ವರ್ತನೆ‌ ಆಕ್ರೋಷ ಹುಟ್ಟಿಸಿ ಅವನಲ್ಲಿನ ಮೃಗತ್ವವನ್ನು ಹೊರಹಾಕಿದೆ. ಎಲ್ಲಿಯವರಗೆ ಅವಳ ಹಣ, ಸೌಂದರ್ಯ, ದೇಹ ಈ ಎಲ್ಲದರ ರುಚಿ‌ ಇತ್ತೋ ಅಲ್ಲಿಯವರೆಗೆ ಅವಳನ್ನು ಎಂಜಾಯ್ ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡು ಆನಂತರ‌ ಶ್ರದ್ಧಾಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟೇ ಆಗಿದ್ದಲ್ಲಿ ಈ ಪ್ರಕರಣಕ್ಕೆ ಇಷ್ಟೊಂದು‌ ಕ್ರೂರತೆ ಬರುತ್ತಿರಲಿಲ್ಲ. ಅವಳನ್ನು ಕೊಲೆ ಮಾಡಿ ಆನಂತರ ಅವಳ ಶವವನ್ನು 35 ತುಂಡುಗಳನ್ನಾಗಿ ಮಾಡಿ ಅದನ್ನು ದೆಹಲಿಯ ಮೆಹ್ರೌಲಿಯ ಅರಣ್ಯ ಭಾಗಗಳಿಗೆ ಮಧ್ಯರಾತ್ರಿ ಎರಡು ಘಂಟೆಯ ವೇಳೆಗೆ‌ ಹದಿನೆಂಟು ದಿನಗಳ ಕಾಲ ಹೋಗಿ ಎಸೆದಿದ್ದನಂತೆ ! ಅವಳ ದೇಹದ ತುಂಡುಗಳನ್ನಿರಿಸಲು‌ ಈ ಅಯೋಗ್ಯ ಹೊಸ ಫ಼್ತಿಡ್ಜ್ ಕೂಡಾ ಖರೀದಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆಯಂತೆ‌!

ಇಂತಹಾ‌ ಭೀಭತ್ಸ ದುಷ್ಕೃತ್ಯವನ್ನು ನೋಡಿದಾಗ ಯಾವ ಕೋನದಲ್ಲಿ ಮನುಷ್ಯನಾದವನು ಕ್ಷುದ್ರ ರಾಕ್ಷಸರಿಗಿಂತ ಕಡಿಮೆಯಿರಲು ಸಾಧ್ಯ ಎಂದೆನಿಸುವುದಲ್ಲವೇ ? ಇಂಥವರನ್ನು ಮನುಷ್ಯ ಎನ್ನಲು ಸಾಧ್ಯವೇ ?

ಮೊದಲನೆಯದಾಗಿ ಹರೆಯಕ್ಕೆ ಕಾಲಿಟ್ಟ‌ ಹುಡುಗಿಯರ‌ ಮನಸ್ಥಿತಿಯೆನ್ನುವುದು ಸುಲಭದ ಅರ್ಥಕ್ಕೆ ಸಿಗದ‌‌ ವಸ್ತುವಾಗಿ ಅಂದಿನಿಂದ ಇಂದಿನವರೆಗೂ ಉಳಿದಿದೆ. ಅದರಲ್ಲೂ ಇಂದಿನ ಅಂತರ್ಜಾಲ ಯುಗದಲ್ಲಿ , ಮೊಬೈಲ್ ಫೋನ್ ಗಳ ಭ್ರಮಾತ್ಮಕ ಬದುಕಲ್ಲಿ ಒಬ್ಬರನ್ನು ಆಕರ್ಷಣೆಗೆ ಒಳಗಾಗುವುದೂ- ಒಳಗಾಗಿಸುವುದೂ ಎರಡೂ ಸುಲಭ. ನೋಡಲು ಚಂದವಿರುವ ಸ್ಟೈಲಾಗಿರುವ ವ್ಯಕ್ತಿ ಮೊಬೈಲ್ ಸ್ಕ್ರೀನ್ ನಲ್ಲಿ ಪರಿಚಯವಾದನೆಂದರೆ ತಮ್ಮೆಲ್ಲಾ ಇಹಪರವನ್ನೂ ಮರೆತು, ವಾಸ್ತವ ಲೋಕದಿಂದ ಇನ್ನೆಲ್ಲೋ ಕಳೆದುಹೋಗಿಬಿಡುತ್ತಾರೆ. ಇದಕ್ಕೆ ಅಮಾಯಕ ಹುಡುಗಿ ಅಥವಾ ಹುಡುಗ ಯಾರಾದರೂ ಆಗಿರಬಹುದು.

ಇನ್ಸ್ಟಾ ಗ್ರಾಮ್, ಫ಼ೇಸ್ ಬುಕ್,ವಾಟ್ಸಪ್ ಗಳ ಚಾಟುಗಳಲ್ಲಿ , ಫೋಟೋಗಳಲ್ಲಿ ತಲೆತೂರಿಸಿ ಅಲ್ಲಿನ ಆಕರ್ಷಣೆಗೆ ಬಿದ್ದು ತಮ್ಮ ಕಾಲ ಮೇಲೆ ತಾವೇ‌ ಚಪ್ಪಡಿ ಎಳೆದುಕೊಳ್ಳುವ ಅನೇಕರಿದ್ದಾರೆ. ಈ ಹಂತದಲ್ಲಿ ಯಾರ ಬುದ್ದಿವಾದವಾಗಲೀ , ಯಾವುದೇ ವಾಸ್ತವ ಪ್ರಜ್ಞೆಯಾಗಲೀ ಕೆಲಸ ಮಾಡಲಾರದು. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದ ಕೆಲ‌ ಕ್ಷುದ್ರ ಮನಸುಗಳು ಸರಿಯಾದ ಅವಕಾಶಕ್ಕಾಗಿ ಕಾದು ಸೂಕ್ತ ಸಮಯ ನೋಡಿ ತಮ್ಮ‌ ಖೆಡ್ಡಾಕ್ಕೆ ಅಮಾಯಕರನ್ನು ಬೀಳಿಸಿಕೊಂಡು ಇನ್ನಿಲ್ಲದ ಅಪರಾಧಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಹುಡುಗಿಯ/ ಮಹಿಳೆಯ ಜೊತೆ ಮೊಬೈಲ್ ನಲ್ಲಿ ಸಲಿಗೆ ಬೆಳೆಸಿಕೊಂಡು ಅವರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಮಾಡಿ ಅಥವಾ ಅವರ ಖಾಸಗೀ ಪೋಸುಗಳ ಫೋಟೋಗಳನ್ನು ತೆಗೆದು ಬ್ಲಾಕ್ ಮೈಲ್ ಮಾಡುತ್ತಾ ಹೆದರಿಸಿ ಬ್ಲಾಕ್ ಮೈಲ್ ಮಾಡುತ್ತಾ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

ಈ‌ ಬಗ್ಗೆ ಏನೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಿವೆ.

ಈ ಮೇಲಿನ ಘಟನೆಯಲ್ಲಿ ಮೂಲ ತಪ್ಪು ಎಲ್ಲಿದೆ ?

ಕೇವಲ ಮೊಬೈಲ್ ಸ್ಕ್ರೀನಿನಲ್ಲಿ ಚೆನ್ನಾಗಿ ಹಲ್ಲು ಕಿರಿದ ಅಯೋಗ್ಯನೊಬ್ಬ ನೋಡಲು ಸ್ಮಾರ್ಟಾಗಿದ್ದಾನೆಂಬ ಏಕೈಕ ಕಾರಣಕ್ಕಾಗಿ ಹಿಂದೆ ಮುಂದೆ ನೋಡದೇ ಇಪ್ಪತ್ತೈದು ವರ್ಷ ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಅವನೊಟ್ಟಿಗೆ ಪರಾರಿಯಾಗಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಮೈ, ಮನಸ್ಸು ಎರಡನ್ನೂ ಅನಾಮತ್ತು ಕೊಡುತ್ತಾರೆಂದರೆ ಅಲ್ಲಿಗೆ ತಪ್ಪು ಎಲ್ಲಿದೆ…. ಯಾರಲ್ಲಿದೆ ?

ಆಯ್ತು … ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ಉದ್ಯೋಗ ಇದಾವುದರ ಭೇದವಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅವನು ನಿಜವಾಗಿಯೂ ಇವಳನ್ನು ಪ್ರೀತಿಸುವವನಾಗಿದ್ದರೆ ಮೊದಲು ಮದುವೆಯಾಗಿ ನಂತರ ರಿಲೇಷನ್ ಶಿಪ್ ಮುಂದುವರೆಸ ಬೇಕಿತ್ತಲ್ಲವೇ ? ನಿಜವಾದ ಪ್ರೀತಿಗೂ, ಸ್ವಾರ್ಥಕ್ಕಾಗಿ ಟಿಶ್ಯೂ ಪೇಪರಿನಂತೆ ಉಪಯೋಗಿಸಿ ಬಿಸಾಕುವ ಪ್ರೇತಗಳ ಟೆಂಪೊರೆರಿ ಕಿಕ್ಕಿಗೂ ವ್ಯತ್ಯಾಸ ಅರಿಯದೇ ಹೋದರೆ ಹಾಗೂ ವಾಸ್ತವ ಜಗತ್ತಿಗೆ ಮುಖ ಮಾಡದೇ ಭ್ರಮಾಲೋಕದ ಬಾಳಿನಲ್ಲಿ ಮುಳುಗೇಳುವ ಕನಸ ಕಂಡರೆ….ಅಲ್ಲಿ ಶ್ರದ್ಧಾಳಿಗೆ ಆದ ಗತಿ ಇಲ್ಲಿ ಎಲ್ಲರಿಗೂ ಆದೀತು ! ಎಚ್ಚರವಿರಲಿ.

** ಮರೆಯುವ ಮುನ್ನ **

ನಮ್ಮ ಸಮಾಜದ ಸಮಸ್ಯೆಯೆಂದರೆ ಎಂತಹಾ ಕಣ್ಣು ತೆರೆಸುವ ಘಟನೆಗಳಾದರೂ ಅವುಗಳನ್ನು ಬಹುಬೇಗ ಮರೆತು ಮತ್ತೇ‌‌ ಯಥಾ ಸ್ಥಿತಿಯ ಹಳಿಗೇ ಮರಳುವುದು ಹಾಗೂ ಒಳ್ಳೆಯದು – ಕೆಟ್ಟದರ ನಡುವಿನ ಸೂಕ್ಷ್ಮ‌ ವ್ಯತ್ಯಾಸದ ಪದರನ್ನು ಗುರುತಿಸಲು ಪರದಾಡುವುದು , ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅವಾಸ್ತವಿಕತೆಗೆ, ಮಾಯಾ ಭ್ರಮೆಗೆ ಸಲೀಸಾಗಿ ತೆರೆದುಕೊಳ್ಳುವುದು. ವಸ್ತುಸ್ಥಿತಿ ಹೀಗಿರುವುದರಿಂದಲೇ ನೆಟ್ ಲೋಕದ ನಯವಂಚಕರು ಅತಿ ಸುಲಭಕ್ಕೆ ಯಾಮಾರಿಸಬಹುದಾದ ಹೆಣ್ಣು/ ಗಂಡು ಗಳನ್ನು ತಮ್ಮದೇ ಆದ ನೆಟ್ ವರ್ಕ್ ಮೂಲಕ ಜಾಣತನದಿಂದ ಹೆಕ್ಕಿ ಬಲೆ ಬೀಸಿ ತಮ್ಮ ಜಾಲಕ್ಕೆ ಕೆಡವಿ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಸಾಧ್ಯವಾಗಿರುವುದು.

ಶ್ರದ್ಧಾಳದ್ದು ಹೆಚ್ಚು ಕಡಿಮೆ ಇದೇ ರೇಂಜಿನ ಕೇಸು. ಅದೇನೇ ಇರಲಿ ! ಒಬ್ಬ ಅಮಾಯಕ ಯುವತಿಯ ಜೊತೆ ತಿಂಗಳುಗಳ ಕಾಲ ಡೇಟಿಂಗ್ ಮಾಡಿ ಅವಳದೆಲ್ಲವನ್ನೂ ಅನುಭವಿಸಿ ಆನಂತರ ಅವಳನ್ನು‌ ಬರ್ಬರವಾಗಿ ತುಂಡುತುಂಡಾಗಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಹೂತು ಬರುತ್ತಾನೆಂದರೆ ಇಂಥವರನ್ನು ಯಾವುದರಲ್ಲಿ ಹೊಡೆಯಬೇಕು, ಯಾವ ಕಾನೂನಿನಿಂದ ಹೇಗೆ ಶಿಕ್ಷಿಸಬೇಕು ಅಥವಾ ಇತರರಿಗೆ ಪಾಠವಾಗುವ ಯಾವ ದಂಡನೆ ವಿಧಿಸಬೇಕು ಎಂಬುದು ತರ್ಕಕ್ಕೆ‌ ನಿಲುಕದ ಸಂಗತಿಯಾಗಿದೆ. ಇವನಿಗೆ ಕೊಡುವ ಶಿಕ್ಷೆ, ಈ ತರಹದ ಅಪರಾಧಗಳಲ್ಲಿ‌ ಭಾಗಿಯಾಗುವವರಿಗೆಲ್ಲಾ ಒಂದು ಎಚ್ಚರಿಕೆಯ ಗಂಟೆಯಾಗಲೆಂದಷ್ಟೇ ನಾವು ಆಶಿಸಬಹುದು.

ಅಫ಼್ತಾಬ್ ಅಮೀನ್ ನಂತಹ ಕ್ರೂರ ಮೃಗಗಳ ಬಗೆಗೆ, ಸಾಮಾಜಿಕ ಜಾಲತಾಣಗಳ ವಿಷಜಾಲಗಳ ಬಗೆಗೆ ಅಮಾಯಕ ಹೆಣ್ಣುಮಕ್ಕಳು ಮೈತುಂಬಾ ಎಚ್ಚರವಿರೋದು ಒಳ್ಳೆಯದು .

# ಲಾಸ್ಟ್ ಪಂಚ್ #

ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿದು ಹಾಳಾಗುವುದು ಬಟ್ಟೆಯೇ !

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.

ಚಳ್ಳಕೆರೆ ನವಂಬರ್12.
ಸಾಹಿತ್ಯ ಸಂಸ್ಕಾರ ಸಮಾಜದ ಬದುಕನ್ನು ಅರ್ಥೈಸಿಕೊಳ್ಳುವ ಮಹಾಶಕ್ತಿಯಾಗಿದೆ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶನಿವಾರ ಗ್ರಾಮೀಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ ಕಾರ್ಯಕ್ರಮ ಮತ್ತು ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಭಾವರೂಪ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ನೆಲೆಗಟ್ಟಿನ ಪರಂಪರೆ ಇದೆ. ಬದುಕಿನೊಟ್ಟಿಗೆ ಇದನ್ನು ಉಳಿಸಿಕೊಳ್ಳುವ ಇಚ್ಚಾಸಕ್ತಿ ಜನಮಾಸದಲ್ಲಿ ಕಾಪಾಡಿಕೊಳ್ಳಬೇಕಿದೆ. ಬೆಳಗೆರೆ ಕೃಷ್ಣಶಾಸ್ತಿçಗಳು ಜಿ.ಎಸ್. ಶಿವರುದ್ರಪ್ಪ, ಆರಾಸೇ ಮಹನೀಯರು ಸೂಚಿತ ಗ್ರಾಮೀಣ ಸಾಹಿತ್ಯ ಪರಿಷತ್ತು ಹೆಸರಿನಡಿ ಸುಮಾರು 32 ವರ್ಷಗಳ ಕಾಲ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇದರಿಂದ ಗ್ರಾಮೀಣ ಜನಜೀವನದ ಸೊಗಡು, ಜೀವನ ಶೈಲಿ ಮತ್ತು ಜನಪದರ ನೋವು-ದುಮ್ಮಾನವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಿದೆ. ಪ್ರತಿಭಾವಂತ ಬರಹಗಾರರಿಗೆ ವೇದ, ಋಗ್ವೇದ, ರಾಮಾಯಣ, ಮಹಾಭಾರತ ಅಧ್ಯಯನ ಮಾಡಿಕೊಳ್ಳಲು ಪುಸ್ತಕಗಳ ಸಂಗ್ರಹ ಮಾಡಲಾಗಿದೆ. ಇದನ್ನು ಸದುಪಯೋಗ ಮಾಡಿಕೊಳ್ಳುವ ಮನಸ್ಸುಗಳ ಸಂಖ್ಯೆ ಬೆಳೆಯಬೇಕಿದೆ ಎಂದ ಅವರು, ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಕೆಲ ಕವಿತೆಗಳು ವಿದ್ಯಾರ್ಥಿಗಳಿಗೆ ಪಠ್ಯ ವಿಷಯವಾಗುವ ಅರ್ಹತೆ ಇವೆ ಎಂದು ಭವಿಷ್ಯ ನುಡಿದರು.
‘ಭಾವರೂಪ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಬಿಇಒ ಕೆ.ಎಸ್. ಸುರೇಶ್, ಪ್ರಸ್ತುತ ವೈರಾಗ್ಯ ಸಮಾಜದಲ್ಲಿ ಆಡಂಬರ ಮತ್ತು ರಾಜಕೀಯ ಬಯಸುವ ಸಂಖ್ಯೆ ಕಾಣುತ್ತಿದ್ದೇವೆ. ಸಮಾಜವನ್ನು ಅರ್ಥೈಸುವ ಸಾಹಿತ್ಯ ಕೇಳುವ ಮತ್ತು ಪ್ರೋತ್ಸಾಹಿಸುವ ಇಚ್ಚಾಸಕ್ತಿ ಕಾಣುತ್ತಿಲ್ಲ. ನಗರ ಶೈಲಿಗೆ ಮಾರು ಹೋಗುತ್ತಿರುವು ಹಳ್ಳಿಗಳಲ್ಲೂ ಜೀವನದ ಸೊಗಡು, ಸಂಸ್ಕೃತಿ ಉಳಿದುಕೊಳ್ಳುತ್ತಿಲ್ಲ. ಇದರಿಂದ ಜೀವನದ ಸಾರ್ಥಕತೆ ಕಂಡುಕೊಳ್ಳಲಾಗದೆ, ಬೆಚ್ಚಿ ಬೀಳಿಸುವ ಘಟನೆಗಳ ಹಿಂದೆ ಹೋಗುತ್ತಿದ್ದೇವೆ. ಸಾಹಿತ್ಯ ರಚನೆಕಾರರು ಹಳ್ಳಿಯಾಗಲೀ, ದೇಶದ ಯಾವುದೇ ಭಾಗದಲ್ಲಿರಲಿ ಭಾವನೆ ಒಂದೇ ಇರುತ್ತದೆ. ಆದ್ದರಿಂದ ಸಾಹಿತ್ಯ ಜನಜೀವನದ ಅಂತಃಸತ್ವವಾಗಿರುತ್ತದೆ. ಸುಮಾರು ವರ್ಷಗಳಿಂದ ಸಾಹಿತ್ಯ ಅಭಿರುಚಿಯಲ್ಲಿರುವ ಕರ‍್ಲಕುಂಟೆ ತಿಪ್ಪೇಸ್ವಾಮಿ ಅವರ ಸಾಹಿತ್ಯ ರಚನೆ ಸಮಾಜಮುಖಿಯಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎನ್. ರಘುಮೂರ್ತಿ ಮಾತನಾಡಿ, ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿ ನಿರಂತರ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ತಿಪ್ಪಣ್ಣ ಮರಿಕುಂಟೆ ಅವರ ಸಾಹಿತ್ಯ ಬದುಕು ಸಮಾಜಕ್ಕೆ ಮಾದರಿಯಾಗಿದೆ. ಗಾಮದಲ್ಲಿ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಮತ್ತು ಒಂದು ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡುವ ಇಚ್ಚಾಸಕ್ತಿ ಇದೆ. ಸಾಹಿತ್ಯ ಕಾರ್ಯವನ್ನು ಪ್ರೋತ್ಸಾಹಿಸಿದಾಗ ಮಾತ್ರ ಸಮೃದ್ದ ಭಾಷಾಭಿಮಾನವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೆ.ಎಸ್. ರಾಘವೇಂದ್ರ ಉದ್ಘಾಟಿಸಿದರು.
ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ವೀರಭದ್ರಪ್ಪ, ದೊಡ್ಡಯ್ಯ, ಪೂಜಾರಿ ಗೋವಿಂದಪ್ಪ, ಮಂಜುನಾಥ, ರಾಜಶೇಖರ, ಬಿ ಒ ಕೆ.ಎಸ್ ಸುರೇಶ್ ಮತ್ತಿತರರು ಇದ್ದರು.

You cannot copy content of this page