ಕಚೇರಿಗೆ ಬಂದ ಸಾರ್ವಜನಿಕರಿಗೆ ಸ್ಪಂಧಿಸಿ ಕೆಲಸ ಮಾಡದೆ ಸಿಬ್ಬಂದಿಗಳನ್ನು ಕೂಡಲೆ ಬದಲಾಯಿಸುವಂತೆ ಯೋಜನಾ ನಿರ್ದೇಶಕರಿಗೆ ಶಾಸಕ ಟಿ.ರಘುಮೂರ್ತಿ ತಾಕೀತು

by | 28/08/23 | ಜನಧ್ವನಿ

ಚಳ್ಳಕೆರೆ ಆ.28. ಕಚೇರಿಗೆ ಬಂದ ಸಾರ್ವಜನಿಕರಿಗೆ ಸ್ಪಂಧಿಸಿ ಕೆಲಸ ಮಾಡದೆ ಸಿಬ್ಬಂದಿಗಳನ್ನು ಕೂಡಲೆ ಬದಲಾಯಿಸುವಂತೆ ಯೋಜನಾ ನಿರ್ದೇಶಕರಿಗೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.

ನಗರದ ನಗರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ ಜನಸಂಪರ್ಕ ಸಭೆಯ ಅಧ್ಯಕ್ಷತೆವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳ ವಿರುದ್ದ ಕೆಂಡಮಂಡಲವಾದರು. ನಗರಸಭೆ ಕಚೇರಿಯಲ್ಲಿ ನಿವೇಶನ ಹಾಗೂ ಮನೆಗಳ ಇ-ಸ್ವತ್ ಖಾತೆ ಮಾಡಲು ವಿಳಂಬ. ಆಸ್ತಿ ತೆರಿಗೆ ಕಟ್ಟಲು ಬಂದವರಿಗೆ ಅಲೆದಾಟ ಕಚೇರಿಯಲ್ಲಿ ಹಣ ಹಾಗೂ ಪ್ರಭಾವಿಗಳ ಆರ್ಶೀವಾದ ಇದ್ದರೆ ಮಾತ್ರ ಕೆಲಸ ಇಲ್ಲಿ ಮುಖ್ಯವಾಗಿ ಕಂದಾಯ ಇಲಾಖೆ ವಿಭಾಗದ್ದೆ ದೊಡ್ಡ ಸಮಸ್ಯೆ ಎಂದು ನಾಗರೀಕರು ಶಾಸಕ ಟಿ.ರಘುಮೂರ್ತಿ ಬಳಿ ದೂರಿನ ಸುರಿಮಳೆಗೈದರು. ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಮ್ಯೂಟೇಷನ್ ಹಾಗೂ ಇ-ಸ್ವತ್ ಖಾತೆಗೆ 45 ದಿನಗಳ ಕಾಲಾವಕಾಶವಿರುತ್ತದೆ ಈಗ 27 ಕಡತಗಳಲ್ಲಿ 11 ಕಡತಗಳು ಬಾಕಿ ಇವೆ ಇವುಗಳ ಅವಧಿ ಮುಗಿದಿಗೆ ದಿನಕ್ಕೆ ಮೂರು ಮಾತ್ರ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ನಗರಸಭೆ ಸದಸ್ಯ ರುದ್ರನಾಯಕ ಮಾತನಾಡಿ ಒಬ್ಬ ವ್ಯಕ್ತಿಗೆ ಒಂದೇ ದಿನದಲ್ಲಿ 50 ನಿವೇಶನಗಳಿಗೆ ಇ ಸ್ವತ್ ಖಾತೆ ನೀಡುತ್ತಾರೆ ಅರ್ಜಿ ನೀಡಿ ಮೂರು ತಿಂಗಳು ಕಳೆದರೂ ನಮ್ಮ ಆಸ್ತಿಗಳದ್ದೇ ಇ ಸ್ವತ್ ನೀಡುವಯದಿಲ್ಲ ವಿಳಂಬ ಧೋರಣೆ ಯಿಂದ ನ್ಯಾಯಾಲ ವ್ಯಾಜ್ಯ.ಮಾರಾಟಕ್ಕೆ ತೊಂದರೆಯಾಗುತ್ತಿದೆ ಸದಸ್ಯರ ಕೆಲಸಗಳೇ ಆಗುತ್ತಿಲ್ಲ ಎಂದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಅಧಿಕಾರಿಗಳ ವಿರುದ್ದ ದೂರಿದರು. ಕಂದಾಯ ಅಧಿಕಾರಿ ರುಕ್ಮಿಣಿ ಮಾತನಾಡಿ ಕಂದಾಯ ವಿಭಾಗ ಸಿಬ್ಬಂದಿ ಲೋಕಾಯುಕ್ತರ ದಾಳಿಗೆ ಸಿಲುಕಿರಹವುದರಿಂದ ಕಡತಗಳು ಅವರ ಬೀರುವಿನಲ್ಲಿ ಕೆಲವು ಕಡತಗಳು ದೊರೆಯದೆ ವಿಳಂಬವಾಗಿದೆ ಎಂದು ಮಾಹಿತಿ ನೀಡಿದಾಗ . ಶಾಸಕ ಟಿ.ರಘುಮೂರ್ತಿ ಮಾತನಾಡಿ ಕಡತಗಳು ಕಳೆದಿವೆ ಅವರ ಬಳಿ ಇವೆ 45 ದಿನ ಅವದಿ ಮುಗಿಯಲಿ ಎಂಬ ಕುಂಟು ನೆಪ ಬಿಟ್ಟು ಕಚೇರಿಗೆ ಬಂದ ನಾಗರೀಕರನ್ನು ಅಲೆದಾಡಿಸುದರೆ ನಿಮಗೆ ಶಾಪಹಾಕುತ್ತಾರೆ ನಿಮ್ಮನ್ನು ದೇವರು ಕ್ಷಮಿಸುವುದಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದು ಕೊಂಡರ. ಪೌರಾಡಳಿತದ ಜಿಲ್ಲಾ ಯೋಜನಾ ನಿರ್ದೇಶಕ ಮಹೇಂದ್ರ ಮಾತನಾಡಿ ನೀವು ಆಸ್ತಿ ತೆರಿಗೆ ಕಟ್ಟಿದರೆ ಸಾಕು ಇ ಸ್ವತ್ ಖಾತೆ ಪಡೆಯಬಹುದು ನಿಮ್ಮ ಆಸ್ತಿಗಳನ್ನು ಬೇರೆಯವರು ಅಕ್ರಮ ಖಾತೆ ಮಾಡಿಕೊಂಡಿದ್ದಾರೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲೇ ನೋಡಿಕೊಳ್ಳಬಹುದು ಆಸ್ತಿ ತೆರಿಗೆ ನಿಮ್ಮ ಮನೆ ಮಹಡಿ ಅಥವಾ ವಾಣಿಜ್ಯ ಪರಿವರ್ತನೆ ಮಾಡಿದಾಗ ಮಾತ್ರ ತೆರಿಗೆ ಹೆಚ್ಚಲಿದೆ ಒಮ್ಮೆ ಇ ಸ್ವತ್ ಖಾತೆಯಾದರೆ ಮತ್ತೆ ಯಾವುದೇ ದಾಖಲೆಗಳು ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜನ ಸಂಪರ್ಕ ಸಭೆಗಳು ನಿರಂತರವಾಗಿ ನಡೆಯಲಿದ್ದು, ಸಾರ್ವಜನಿಕರು ಭಾಗವಹಿಸಿ, ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು ಮುಂದಿನ ಜನಸಂಪರ್ಕ ಸಭೆಯಷ್ಟರಲ್ಲಿ ಪೈಲ್ ಸಿಕ್ಕಿಲ್ಲ, ದಾಖಲಾತಿಗಳು ಅವರು ಕಡೆಯಿದೆ ಎಂದು ಪದೆ-ಪದೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡುವದನ್ನು ತಪ್ಪಿಸ ಬೇಕು ಮುಂದಿನ ದಿನಗಳಲ್ಲಿ ವಾರ್ಡ್ ವಾರು ಸಭೆ ನಡೆಸಿ ಜನರ ಬಳಿಗೆ ಹೋಗಿ ಜ‌ನರ ಸಮಸ್ಯೆ ಬಗೆಹರಿಸಲಾಗುವುದು.ಎಂದು ಶಾಸಕರು ಹೇಳಿದರು.

ನಬಿದ್ ಅಹಮ್ಮದ್ ಮಾತನಾಡಿ ಖಾತೆ ಮಾಡಲು 40 ದಿನಗಳು ಕಳೆದರೂ ಮಾಡಿಲ್ಲ, ಬಹಳ ಅಲೆದಾಡಿಸುತ್ತಾರೆ, ಜನರನ್ನು ನಗರಸಭೆ ಅಧಿಕಾರಿಗಳು ಕೆಲಸ ಮಾಡದೆ ಸಾರ್ವಜನಿಕರನ್ನು ನೋಯಿಸುತ್ತಾರೆ ಎಂದು ಅಳಲು ತೋಡಿಕೊಂಡಿರು.
ನಾಗಭೂಷಣ್ ತೆರಿಗೆ ಕಟ್ಟಿದ ದಾಖಲೆಗಳೇ ನಗರಸಭೆಯಲ್ಲಿ ಇರುವುದಿಲ್ಲ, ನಾವು ಕಟ್ಟಿರುವ ತೆರಿಗೆ ಬಗ್ಗೆ ಎಂಟ್ರಿ ಮಾಡಿರುವ ಬುಕ್ ತರಿಸಿ ಪರಿಶೀಲನೆ ಮಾಡುವಂತೆ
ಶಾಸಕರನ್ನು ಒತ್ತಾಯಿಸಿದರು…

ನಗರಸಭೆ ಸದಸ್ಯ ರುದ್ರ ನಾಯಕ ಮಾತನಾಡಿ ಇ-ಸ್ವತ್ತು ತಿದ್ದು ಪಡಿ ಮಾಡಲು ಕೊಟ್ಟು 25 ದಿನ ಕಳೆದರೂ ತಿದ್ದುಪಡಿ ಮಾಡಿಲ್ಲ, ಒಬ್ಬರಿಗೆ ಅರ್ದಗಂಟೆ ಒಳಗಡೆ ಇ-ಸ್ವತ್ತು ತಿದ್ದುಪಡಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು…
ಸಭೆಯಲ್ಲಿ ರಸ್ತೆ ಒತ್ತುವರಿ. ಚರಂಡಿ ಹೂಳು. ತ್ಯಾಜ್ಯ ಕಸ ತೆರವು ವಿಳಂಬ ಇ ಸ್ವತ್ತಿನ ಖಾತೆ ವಿಳಂಬದ ಬಗ್ಗೆ ನಾಗರೀಕರು ಶಾಸಕರ ಬಳಿ ದೂರಿದರಜ.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಸದಸ್ಯರಾದ ಜಯಣ್ಣ, ವೀರಭದ್ರಯ್ಯ, ಸುಮ, ಕವಿತಾ . ರಮೇಶ್ ಗೌಡ, ಮಲ್ಲಿಕಾರ್ಜುನ, ವೆಂಕಟೇಶ, ಗೋವಿಂದರಾಜು,ಸುಜಾತ,
, ತಹಶೀಲ್ದಾರ್ ರೇಹಾನ್ ಪಾಷಾ, ಡಿವೈಎಸ್ಪಿ ರಾಜಣ್ಣ .ಪಿಐ ಆರ್ .ಎಫ್.ದೇಸಾಯಿ. ಪಿಎಸ್ ಐ ಶಿವರಾಜ್. ಸಹಾಯಕ ಅಭಿಯಂತರ ಸತ್ಯನಾರಾಯಣ .ಲೋಕೇಶ್. ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *