ಹಿರಿಯೂರು :
ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನಿಕರಿಂದ ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಏಕಾಂಗಿಯಾಗಿ ಹೋರಾಡುವ ಮೂಲಕ ದುರ್ಗದ ಕೋಟೆಯನ್ನು ರಕ್ಷಣೆ ಮಾಡಿದ ಒನಕೆ ಓಬವ್ವನ ದೇಶಪ್ರೇಮ, ಧೈರ್ಯ, ಹಾಗೂ ಸಾಹಸ ನಿಜಕ್ಕೂ ಮೆಚ್ಚುವಂತಹುದು, ಈ ನಿಟ್ಟಿನಲ್ಲಿ ಓನಕೆ ಓಬವ್ವನ ತ್ಯಾಗ-ಬಲಿದಾನ ಆದರ್ಶಗಳು ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಕೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರವನಿತೆ ಒನಕೆ ಓಬವ್ವನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತನ್ನ ಗಂಡ ಊಟಕ್ಕೆ ಮನೆಗೆ ಬಂದ ಸಂದರ್ಭದಲ್ಲಿ ಚಿತ್ರದುರ್ಗದ ಕೋಟೆಯೊಳಗೆ ನುಸುಳಿದ ಹೈದರಾಲಿಯ ಸೈನಿಕರನ್ನು ಸಮಯೋಚಿತ ಚಿಂತನೆಯಿಂದ ಹೋರಾಡುವ ಮೂಲಕ ಬೃಹತ್ ಗಾತ್ರದ ಎದುರಾಳಿ ಸೈನ್ಯವನ್ನು ಒಬ್ಬ ಸಾಮಾನ್ಯ ಮಹಿಳೆ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆ ಎದುರಿಸಬಹುದು ಎಂಬುದಕ್ಕೆ ವೀರವನಿತೆ ಒನಕೆ ಓಬವ್ವ ಸಾಕ್ಷಿಯಾಗಿದ್ದಾರೆ ಎಂಬುದಾಗಿ ಹೇಳಿದರು.
ವಾಣಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸುಮಾರು 18ನೇ ಶತಮಾನದ ವೀರಮಹಿಳೆಯರ ಸಾಲಿನಲ್ಲಿ ಕಂಡುಬರುವ ಒನಕೆ ಓಬವ್ವ ಚಿತ್ರದುರ್ಗದ ಕೋಟೆಯ ಕಾವಲುಗಾರ ಚಲವಾದಿ ಸಮುದಾಯದ ಮದ್ದಹನುಮಪ್ಪನ ಹೆಂಡತಿ, ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿ ಬಳಸುವ ಒನಕೆಯನ್ನೇ ಅಸ್ತ್ರವಾಗಿ ಬಳಸಿ, ಶತ್ರು ಸೈನ್ಯದೊಂದಿಗೆ ಹೋರಾಡುತ್ತಲೇ, ಶತ್ರುಗಳ ಕತ್ತಿಗೆ ಬಲಿಯಾಗಿ ವೀರಮರಣವನ್ನಪ್ಪಿದ ವೀರಮಹಿಳೆಯಾಗಿದ್ದಾರೆ ಎಂಬುದಾಗಿ ಹೇಳಿದರು.
ಇಂತಹ ವೀರಮಹಿಳೆಯ ಪ್ರತಿಮೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ಥಾಪಿಸುವ ಮೂಲಕ ಗೌರವ ಸಲ್ಲಿಸಿದೆ, ನಮ್ಮ ಸರ್ಕಾರ 2021 ರ ನವಂಬರ್ 11 ರಿಂದ ಒನಕೆ ಓಬವ್ವನ ಜಯಂತ್ಯೋತ್ಸವವನ್ನು ನಾಡಿನ ಎಲ್ಲಡೆ ಆಚರಣೆಯನ್ನು ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ, ಅಲ್ಲದೆ ಇಂತಹ ದಿಟ್ಟ, ವೀರಮಹಿಳೆಯನ್ನು ನಾಡಿನಜನ ಸ್ಮರಿಸುವಂತೆ ಮಾಡಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸ್ತೇದಾರರಾದ ತಿಪ್ಪೇಸ್ವಾಮಿ ವಹಿಸಿದ್ದರು, ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷರಾದ ಪ್ರಕಾಶ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಶ್ರೀಮತಿ ಮಮತಾ, ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಚಲವಾದಿ ಮಹಾಸಭಾ ಅಧ್ಯಕ್ಷರಾದ ಖಾದಿ ಹೇಮಂತ್ ಕುಮಾರ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ನರಸಿಂಹಮೂರ್ತಿ, ಜಿ.ಪಂ.ಮಾಜಿ ಸದಸ್ಯರಾದ ನಾಗೇಂದ್ರ ನಾಯಕ್, ಮಸ್ಕಲ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿಂಬೂಧರ, ಮಹಮ್ಮದ್ ಫಕ್ರುದ್ದೀನ್, ವಿಕೆಗುಡ್ಡ ಗ್ರಾ.ಪಂ.ಉಪಾಧ್ಯಕ್ಷರಾದ ಮಂಜುನಾಥ, ಎಂ ಡಿ ಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಯಶವಂತ್, ಇದ್ದಲನಾಗೇನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಸದಸ್ಯರಾದ ರಾಜಣ್ಣ, ಎಲ್.ಐ.ಸಿ ಸೂಪರ್ ಡೆಂಟ್ ಕೇಶವಮೂರ್ತಿ, ವಕೀಲರ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಅಧ್ಯಕ್ಷರಾದ ಹೆಚ್.ಎನ್.ಕೇಶವಮೂರ್ತಿ, ಉಪಾಧ್ಯಕ್ಷರಾದ ಶ್ರೀಮತಿ ಶಾಂತಮ್ಮ, ಉಡುವಳ್ಳಿ ಗ್ರಾಮ ಪಂಚಾಯಿತಿ ವಿಜಯಕುಮಾರ್, ಕೆಇಪಿ ಸದಸ್ಯರಾದ ಶಿವಕುಮಾರ್, ಕೆಪಿಸಿಸಿ ಸದಸ್ಯರಾದ ವಿಜಯ್ ಕುಮಾರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಓಬವ್ವನ ದೇಶಪ್ರೇಮ, ಧೈರ್ಯ, ಇಂದಿನ ಮಹಿಳೆಯರಿಗೆ ಸ್ಪೂರ್ತಿಯಾಗಬೇಕು :ಜಿಲ್ಲಾಉಸ್ತುವಾರಿ ಸಚಿವ ಸುಧಾಕರ್
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments