ಒತ್ತಾಯ ಪೂರ್ವಕವಾಗಿ ಇರುವ ಒಬ್ಬ ಮಗನನ್ನು ಇಸ್ಲಾಂ ಧರ್ಮಕ್ಕೆ ಸೇರ್ಪಡೆ-ಮನಗನನ್ನು ಉಳಿಸಿಕೊಡುವಂತೆ ಪೋಲಿಸ್ ಠಾಣೆಗೆ ಪೋಷಕರ ದೂರು.

by | 07/11/23 | ಕ್ರೈಂ

ಪರಶುರಾಂಪುರ: ಕುರುಬ ಸಮುದಾಯದ ಬಾಲಕನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಆರೋಪ ಕೇಳಿಬಂದಿದೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಅಬ್ಬಾ ಮತ್ತು ಫಾರುಕ್ ಎಂಬುವರು ಮತಾಂತರ ಮಾಡಿದ ಆರೋಪ ಕೇಳಿಬಂದಿದೆ.ಈ ಸಂಬಂಧ ಬಾಲಕನ ಪೋಷಕರು ಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.


ಈ ಕುರಿತು ಹಿಂದೂ ಜಾಗರಣ ವೇದಿಕೆಯ ಡಾ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಮತಾಂತರಗೊಂಡ ಬಾಲಕನ ಪೋಷಕರು ಅಕ್ಟೋಬರ್ 29 ರಂದು ಪರಶುರಾಂಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಮತಾಂತರ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪೋಷಕರ ದೂರಿನ ಸಾರಾಂಶ.


ಜೋಲೀಸ್ ಠಾಣೆ
ಪರಶುರಾಂಪುರ
ಮಾನ್ಯರೆ,
ವಿಷಯ: ಅಪ್ರಾಪ್ತ ಬಾಲಕ ಮತಾಂತರ ಆಗಿರುವ ಬಗ್ಗೆ ದೂರು ದಾಖಲು
ಚಳ್ಳಕೆರೆ ತಾಲ್ಲೂಕು, ಪರಶುರಾಂಪುರ ಹೋಬಳಿ, ಚೌಳೂರು ಗ್ರಾಮದ ಕುರುಬ ಜನಾಂಗದ ಸುಮಾರು 53
ವರ್ಷ ವಯಸ್ಸಿನ ವೀರಭದ್ರಪ್ಪ ಬಿನ್ ವೀರಣ್ಣ ಆದ ನಾನು ಬರೆದುಕೊಂಡ ದೂರು ಏನೆಂದರೆ,ನಾನು ವ್ಯವಸಾಯದಿಂದ ಜೀವನ ಸಾಗಿಸಿಕೊಂಡು ಬರುತ್ತಿದ್ದು, ನನ್ನ 17 ವರ್ಷ ವಯಸ್ಸಿ ಮಗನಾದ ಭೂಪತಿಬಿನ್ ವೀರಭದ್ರಪ್ಪ ಆದ ಈತನನ್ನು ವಿದ್ಯಾಭ್ಯಾಸದ ದೃಷ್ಟಿಯಿಂದ ಚಳ್ಳಕೆರೆ ತಾಲ್ಲೂಕಿನ ಪರಶುರಾಮರದಲ್ಲಿ
ಕಾಲೇಜ್‌ಗೆ ಸೇರಿಸಿದ್ದೇವು. ಪ್ರತಿದಿನಾ ಕಾಲೇಜ್‌ಗೆ ಪರಶುರಾಂಪುರಕ್ಕೆ ಹೋಗಿ ವಾಪಸ್ ಮನೆಗೆ ನಮ್ಮೊಂದಿಗೆ ಮನೆಯಲ್ಲಿ ವಾಸವಾಗಿದ್ದನು. ಸುಮಾರು 6 ತಿಂಗಳಿನಿಂದ ಅಂದರೆ, ದಿನಾಂಕ 27-03-2023
ರಿಂದ ಇಲ್ಲಿಯ ವರೆಗೆ ಈತನ ನಡುವಳಿಕೆಯಲ್ಲಿ ವ್ಯತ್ಯಸಾ ಕಂಡುಬಂದು ನಮಗೆ ಅನುಮಾನ ಬಂದು ಈತನ ಮೊಬೈಲ್ ಮತ್ತು ಇತರೆ ವಸ್ತುಗಳನ್ನು ಪರಿಶೀಲಿಸಿದಾಗ ಕಂಡ ಬಂದ ಸಂಗತಿಯೆಂದರೆ, ಪರಶುರಾಂಪುರದಲ್ಲಿ
ಸೈಕಲ್ ಶಾಪ್ ನಡೆಸುತ್ತಿರುವ ಅಬ್ಬಾಸ್ ಮತ್ತು ಆತನ ತಂದೆ ಗರೀಬ್ ಉರೂಫ್ ಫಾರುಕ್ ಎಂಬುವರು ನನ್ನ ಮಗನನ್ನು ಚಿತ್ರದುರ್ಗ, ಚಳ್ಳಕೆರೆ, ಧಾರವಡ ನಿಪ್ಪಾಣಿ, ರೋಣ ಇನ್ನು ಮುಂತಾದ ಕಡೆಗಳಲ್ಲಿರುವ ಮಸೀದಿಗಳಿಗೆ
ಮದರಸಗಳಿಗೆ ಕರೆದುಕೊಂಡು ಹೋಗಿ ನನ್ನ ಮಗನನ್ನು ಯಾರು ಅನುಮತಿಯು ಇಲ್ಲದೆ, ಒತ್ತಾಯ ಪೂರ್ವಕವಾಗಿ ಇಸ್ಲಾಂಗೆ ಮತಾಂತರಿಸಿರುತ್ತಾರೆ ಈ ವಿಷಯವಾಗಿ ವಿಚಾರಿಸಿದಾಗ ಅವನ ಬಳಿ ಬಿಳಿ ಟೋಪಿ, ಮುಕ್ಕಾಲು ಪ್ಯಾಂಟ್, ಇಸ್ಲಾಂಗೆ ಸಂಬಂಧಪಟ್ಟ
ಲೇಖನಗಳು ಕಂಡು ಬಂದಿರುತ್ತವೆ. ಹಾಗೂ ಮೊಬೈಲ್‌ ಫೋನ್‌ನಲ್ಲಿ ಡ್ರಗ್ಸ್ ಮತ್ತು ಗಾಂಜಾ ವಿಷಯವಾಗಿ ಸಂಭಾಷಣೆ ಮಾಡಿರುವುದು ಕಂಡುಬಂದಿರುತ್ತದೆ. ಹಾಗೂ ಮತಾಂತರಕ್ಕೆ ಪೂರಕವೆಂಬತೆ ಅದಕ್ಕೆ ಬಳಸುವ
ಸಾಮಾಗ್ರಿಗಳು ಚೌಳೂರು ಗ್ರಾಮದ ಸ್ವಂತ ಮನೆಯಲ್ಲಿ ದೊರೆತಿರುತ್ತವೆ, ಆದ್ದರಿಂದ ಅಬ್ಬಾಸ್ ಮತ್ತು ಗರೀಬ್‌ ಫಾರೂಕ್ ಇವರಿಬ್ಬರು ಅಮಾಯಕರನ್ನು ಅನೈತಿಕ ಚಟುವಟಿಕೆಗೆ ಬಳಸುವ ಹುನ್ನಾರ ನಡೆದಿರುವುದು ಗುಮಾನಿಯಾಗಿರುತ್ತದೆ.
ಆದ್ದರಿಂದ ಅಮಾಯಕನಾದ ನನ್ನ ಅಪ್ರಾಪ್ತ ಮಗನಿಗೆ ಅಮೀಷ ಒಡ್ಡಿ ಒತ್ತಾಯ ಪೂರ್ವಕವಾಗಿ ಇಸ್ಲಾಂಗೆ ಮತಾಂತರಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ಅಬ್ಬಾಸ್ ಬಿನ್ ಗರೀಬ್ ಮೇಲೆ ಕಾನೂನು ರೀತಿಯಲ್ಲಿ ಕ್ರಮಜರುಗಿಸಿ ನನ್ನ ಒಬ್ಬನೇ ಮಗನನ್ನುಉಳಿಸಿಕೊಡಬೇಕೆಂದು ಪರಶುರಾಂಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *