ಚಳ್ಳಕೆರೆ ಏ3 ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಎಪಿಎಂಸಿಯನ್ನು ಖಾಸಗಿಕರಣ ಮಾಡಿ ರೈತರ ಜೀವನವನ್ನು ಬೀದಿಗೆ ತಳ್ಳಿ ಸಾಲಗಾರರನ್ನಾಗಿ ಮಾಡಿದೆ ಎಂದು ಶಾಸಕ ಟಿ ರಘುಮೂರ್ತಿ ದೂರಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಗಣೇಶ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮತಯಾಚನೆ ಪ್ರಾರಂಭಿಸಿದ ಶಾಸಕರು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ನೀಡದೆ ರೈತರ ಜೀವನವನ್ನು ನಾಶ ಮಾಡಲು ಹೊರಟಿದೆ 2013ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನೀಡಿ ರೈತರನ್ನು ಸಾಲ ಮುಕ್ತರನ್ನಾಗಿ ಮಾಡಿದ್ದಲ್ಲದೆ ಲೀಟರ್ ಹಾಲಿಗೆ ಎರಡು ರೂ ಪ್ರೋತ್ಸಾಹ ಧನ ನೀಡಿ ರೈತರ ಮೊಗದಲ್ಲಿ ಹರ್ಷ ಮೂಡಿಸಿತ್ತು ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾವ ನ್ನಾಗಲಿ ಬೆಂಬಲ ಬೆಲೆಯನ್ನಾಗಲಿ ಯಾವುದನ್ನು ಘೋಷಿಸದೆ ರೈತರನ್ನು ಹೀನಾಯ ಸ್ಥಿತಿಗೆ ತಳ್ಳಿದೆ ಎಂದು ತಿಳಿಸಿದರು. ಈ ವೇಳೆ ಎಪಿಎಂಸಿ ಮಾರುಕಟ್ಟೆಯ ವರ್ತಕರ ಹಾಗೂ ರೈತರ ಬಳಿ ಮತಯಾಚನೆ ಮಾಡಿದರು.
ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷವು ರೈತ ಹಾಗೂ ಬಡವರ ಪರವಾದ ಪಕ್ಷವಾಗಿದ್ದು ಬಿಜೆಪಿಯ ಅಧಿಕಾರ ದಾಹದಿಂದಾಗಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಅಧಿಕಾರ ನಡೆಸುತ್ತಿದೆ ಈಗಾಗಲೇ ಜನರು ಬಿಜೆಪಿಯ ದುರಾಡಳಿತಕ್ಕೆ ಬೇಸತ್ತಿದ್ದು ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಶಾಸಕರು 10 ವರ್ಷಗಳ ಅವಧಿಯಲ್ಲಿ ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಜನರ ಕಣ್ಣ ಮುಂದೆ ಇದೆ ಆದ್ದರಿಂದ ಶಾಸಕ ಟಿ ರಘುಮೂರ್ತಿ ತಾಲೂಕಿನಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿ ಮತ್ತೊಮ್ಮೆ ಶಾಸಕರಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಾಲೂಕಿನ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ ರಮೇಶ್ ಗೌಡ ವೀರಭದ್ರಪ್ಪ ಬೋರಯ್ಯ ವೈ ಪ್ರಕಾಶ್ ಮಲ್ಲಿಕಾರ್ಜುನ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾಜಿ ಸದಸ್ಯ ಬಿಪಿ ಪ್ರಕಾಶ್ಮೂರ್ತಿ ನಗರಸಭೆ ಮಾಜಿ ಸದಸ್ಯ ಸಿಟಿ ಶ್ರೀನಿವಾಸ್ ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೀತಾಬಾಯಿ ಹೆಚ್ ಎಸ್ ಸೈಯದ್ ಡಿಕೆ ಕಾಟಯ್ಯ ಶಿವ ಸ್ವಾಮಿ ಉಷಾ ಸುಜಾತ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
0 Comments