ಪರಶುರಾಂಪುರ.
ಗ್ರಾಮೀಣ ಭಾಗದ ಜನರಿಗೆ ಕಾನೂನು ತಿಳಿವಳಿಕೆ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಸಲಹೆ ಹಾಗೂ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ತಾಲೂಕ ನ್ಯಾಯಾಧೀಶ ಶಮೀರ್ ಪಿ ನಂದ್ಯಾಲ್ ತಿಳಿಸಿದರು.
ಸಮೀಪದ ಸಿದ್ದೇಶ್ವರನದುಗ೯ ಗ್ರಾಪಂಯ ಆವರಣದಲ್ಲಿ ಬುಧವಾರ ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಜಿಲ್ಲಾ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಾನೂನು ಸಲಹೆ ಮತ್ತು ಸಹಾಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವಾರಕ್ಕೊಮ್ಮೆ ಸಲಹಾ ಕೇಂದ್ರದಲ್ಲಿ ಒಬ್ಬ ವಕೀಲರನ್ನು ನೇಮಿಸಲಾಗಿದ್ದು, ಜನರು ಕಾನೂನು ಸಲಹೆ ಪಡೆಯುವಂತೆ ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಎಸ್ ಜೆ ಮಾತನಾಡಿ,ಗ್ರಾಪಂ ಗಳು ವ್ಯಾಜ್ಯ ಜತೆ ತ್ಯಾಜ್ಯ ಮುಕ್ತ ಗ್ರಾಪಂ ವಾದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ.ಇದಕ್ಕೆ ಎಲ್ಲರೂ ಕೈಜೋಡಿಸುವುದರ ಜತೆ ವಿದ್ಯಾರ್ಥಿಗಳು ಪರಿಸರ ಉಳಿಸಿ ಬೆಳಸಿಕೋಂಡು ಹೋಗೋಣವೆಂಬುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಹೇಮಾ ಎಚ್ ಆರ್, ಗ್ರಾಪಂ ಅಧ್ಯಕ್ಷೆ ಪುಟ್ಟೀರಮ್ಮ, ಉಪಾಧ್ಯಕ್ಷೆ ಲಕ್ಷ್ಮೀದೇವಿ, ಇಓ ಶಶಿಧರ,ಎಡಿ ಸಂತೋಷ,ವಕೀಲರ ಸಂಘದ ಪಾಲಯ್ಯ,ರುದ್ರಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ, ಸೇರಿದಂತೆ ವಕೀಲರು, ಪೋಲಿಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು,ಸಾವ೯ಜನಿಕರು ಉಪಸ್ಥಿತರಿದ್ದರು
0 Comments