ಉಚಿತ ಆರೋಗ್ಯಶಿಬಿರಗು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದ್ದು ಸದುಪಯೋಗ ಪಡಿಸಿಕೊಳ್ಳಯವಂತೆ ಜಪಾನಂದಸ್ವಾಮಿಜಿ.

by | 05/12/23 | ಆರೋಗ್ಯ


ಪಾವಗಡ ಡಿ.5 ಪಂಚೇಂದ್ರಿಯಗಳಲ್ಲಿ ಯಾವುದೇ ಒಂದು ಅಂಗ ನಿಷ್ಕ್ರಿಯವಾದರೂ ಮನುಷ್ಯ
ಕೀಳರಿಮೆಗೆ ಒಳಪಡುತ್ತಾನೆ. ಹೆಚ್ಚಿನ
ಖಾಯಿಲೆಗಳಿಗೆ ಪರಿಹಾರ ಇದೆಯಾದರೂ
ಗ್ರಾಮೀಣ ಭಾಗದ ಜನರಿಗೆ ತಲುಪುವಲ್ಲಿ
ವಿಫಲವಾಗಿದೆ. ಎಂದು ಜಪಾನಂದಸ್ವಾಮೀಜಿ ಹೇಳಿದರು.

ಪಾವಗಡ ನಗರದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಡಾ||ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ಇಂದು ಎರಡನೇ ಹಂತದ ಶ್ರವಣ ಸಾಧನಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ನಿಟ್ಟಿನಲ್ಲಿ ಉಚಿತ ವಾಕ್ಶ್ರ ವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಸೇರಿದಂತೆ ಉಚಿತ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದ ಬಡವರ್ಗದ ಜನರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸದೃಢ ಆರೋಗ್ಯವಂತರಾಗುವಂತೆ ಕರೆ ನೀಡಿದರು.
ಪ್ರತಿಯೊಂದು ಶ್ರವಣ ಸಾಧನಕ್ಕೆ ಸುಮಾರು ರೂ.9,990/- ಗಳು ಆಗುತ್ತದೆ). ಈ ಯೋಜನೆಗೆ ಡಾ||ಎಸ್.ಆರ್.ಚಂದ್ರಶೇಖರ್ ಸಂಸ್ಥೆಯ ಹಿರಿಯ ತಜ್ಞರಾದ ಡಾ.ಮಾಧುರಿ ಗೋರೆ ರವರ ನೇತೃತ್ವದಲ್ಲಿ ನಿನ್ನೆ ಆರಂಭವಾದ ಈ ವಿತರಣಾ ಯೋಜನೆ 50 ಜನರಿಗೆ ಪ್ರತಿ ದಿನ ಹತ್ತು ಜನರಂತೆ ವಿತರಿಸಲಾಗುತ್ತದೆ. ಇದಕ್ಕೆ ಕಾರಣ ಅವರವರ ಕಿವಿಯಲ್ಲಿ ಅಳತೆಗೆ ತಕ್ಕ ಹಾಗೆ ಯಂತ್ರವನ್ನು ಅಳವಡಿಸಿ ಜೊತೆಯಲ್ಲಿ ಕಿವಿಯ ಹಿಂಭಾಗದಿಂದ ಒಂದು ಸಣ್ಣ ತಂತಿಯನ್ನು ಅಳವಡಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಸಂಸ್ಥೆಯ ಹಿರಿಯ ತಜ್ಞರಾದ ಡಾ||ಚಂದ್ರಕಲಾ, ಎಂ.ಬಿ.ಬಿ.ಎಸ್. ಡಿ.ಎಲ್.ಓ. ಡಿ.ಎನ್.ಬಿ (ಕಿವಿ, ಮೂಗು, ಗಂಟಲು) ಮತ್ತು ತಂಡ ಅತ್ಯಂತ ಶ್ರದ್ಧೆಯಿಂದ ಸಮಯವನ್ನು ತೆಗೆದುಕೊಂಡು ಪ್ರತಿಯೊಬ್ಬರಿಗೂ ಅಳವಡಿಸುವ ಮಹತ್ಕಾರ್ಯ ನಡೆಯುತ್ತಿದೆ. ನಿಜಕ್ಕೂ ಇದೇ ಕಾರ್ಯವನ್ನು ಮಹಾನಗರಗಳ ಆಸ್ಪತ್ರೆಯಲ್ಲಿ ಅಳವಡಿಸಿದ್ದೇ ಆದರೆ ಸಹಸ್ರ ಸಹಸ್ರ ರೂಪಾಯಿಗಳ ವೆಚ್ಚ ತೆತ್ತಬೇಕಾದೀತು. ಆದರೆ, ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಈ ತೆರನಾದ ನಾನಾ ರೀತಿಯ ಉಚಿತ ಸೇವಾ ಯೋಜನೆಗಳು ನಿರಂತರವಾಗಿ ನಡೆಯುತ್ತಿರುವುದು ಇಡೀ ಜಗತ್ತಿಗೆ ತಿಳಿದ ವಿಚಾರವಾಗಿದೆ. ಇಂದು ಅತ್ಯಂತ ಕುಗ್ರಾಮಗಳಿಂದ ಬಂದ ಯುವಕ ಯುವತಿಯರು ಹಾಗೂ ವೃದ್ಧರು ಯಾವಾಗ ಕಿವಿಯಲ್ಲಿ ಶಬ್ಧ ಕೇಳಿಸುವಂತಾಯಿತೋ ಆವಾಗಲೇ ಪೂಜ್ಯ ಸ್ವಾಮೀಜಿಯವರಿಗೆ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಿ ಕಣ್ಣಂಚಿನಲ್ಲಿ ನೀರನ್ನು ಹರಿಸಿ ತಮ್ಮ ತೃಪ್ತಿ ಹಾಗೂ ಭಕ್ತಿಯನ್ನು ವ್ಯಕ್ತಪಡಿಸಿದ್ದನ್ನು ಕಾಣಬಹುದಾಗಿತ್ತು. ಈ ಯೋಜನೆ ಇನ್ನೂ ಮೂರು ದಿನ ಉಳಿದ 30 ಜನರಿಗೆ ಅಳವಡಿಸಲಾಗುತ್ತದೆ. ಮುಂದಿನ ಯೋಜನೆಗೆ ಈಗಾಗಲೇ ಹೆಸರುಗಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ. ಅತಿ ಬಡತನದಿಂದ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯುವಂತಹವರು ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್ ಮತ್ತು 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ತರತಕ್ಕದ್ದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಯೋಜನೆಗೆ ಡಾ||ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಲಯನ್ಸ್ ಕ್ಲಬ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರ ಸಹಕಾರದಿಂದ ಕಾರ್ಯಕ್ರಮವನ್ನು ರೂಪಿಸಲಾಗಿದೆ.

Latest News >>

ಮಹಿಳಾ ನಿಲಯದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ದಿವ್ಯ ಮತ್ತು ನಾಗರಾಜ್ ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ನಡೆದ ಮದುವೆ ಬೀಗರಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು

ದಾವಣಗೆರೆ; ಫೆ.21 ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಮಹಿಳಾ ನಿಲಯದ ದಿವ್ಯ ಎಂ ಇವರ ಮದುವೆಯು ಚಿತ್ರದುರ್ಗ ತಾಲ್ಲೂಕಿನ...

ಚೌಡೇಶ್ವರಿ ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ ಸಂಭ್ರಮದ ಹಿರೆಕೆರೆ ಕಾವಲು ಚೌಡೇಶ್ವರಿ ಜಾತ್ರಾ ಮಹೋತ್ಸವ

ನಾಯಕನಹಟ್ಟಿ : ನಾಯಕನಹಟ್ಟಿ ಸಮೀಪದ ಹಿರೆಕೆರೆ ಕಾವಲಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ ಕಾವಲು ಚೌಡೇಶ್ವರಿ ದೇವಿಯ ಜಾತ್ರಾ...

ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಿವಿಸಾಗರ ನೀರು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ರಿಂದ ಭರವಸೆ

ಹಿರಿಯೂರು: ತಾಲ್ಲೂಕಿನ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಾಣಿವಿಲಾಸ ಸಾಗರ...

ಬಯಲು ಸೀಮೆಯ ಜೋಡಿತ್ತಿನ ಗಾಡಿ ಸ್ಪರ್ಧೆಗೆ ಚಾಲೆನೆ ನೀಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು

ನಾಯಕನಹಟ್ಟಿ:: ಜೋಡಿತ್ತಿನ ಗಾಡಿ ಸ್ಪರ್ಧಾಳುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ...

ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ದೂರು , ಮಾಧ್ಯಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ ನೇರೆ ಹೊಣೆ ಗಾರರು ಎಂದು ಶಾಸಕ ಹಾಗೂ ಸಣ್ಣ ಕೈಗಾರಿಗಳ ಅಭಿವೃದ್ಧಿನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಾಕೀತು.

ಚಳ್ಳಕೆರೆ ಫೆ.19 ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ದೂರು , ಮಾಧ್ಯಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ ನೇರೆ ಹೊಣೆ ಗಾರರು...

ಸಂಭ್ರಮದಿಂದ ಜರಗಿದ ಚಿಲುಮೆ ರುದ್ರ ಸ್ವಾಮಿಯ ರಥೋತ್ಸವ.

ಚಳ್ಳಕೆರೆ: ತಾಲ್ಲೂಕಿನ ನಾಗಗೊಂಡನಹಳ್ಳಿ ಸಮೀಪದ ವೇದಾವತಿ ನದಿಯ ತಟದಲ್ಲಿರುವ ಶಿವಯೋಗಿ ಶ್ರೀ ಗುರು ಚಲುಮೆ ರುದ್ರ ಸ್ವಾಮಿಗಳವರ ಜೀವೈಕ್ಯ...

ಮಲ್ಲೂರಹಟ್ಟಿಯಲ್ಲಿ ಸಂಭ್ರಮದ ಶ್ರೀ ಬನಶಂಕರಿ ಜಾತ್ರೆ ಜಾನಪದ ಕಲಾತಂಡಗಳೊಂದಿಗೆ ಸಂಭ್ರಮದ ಆಚರಣೆ*

ನಾಯಕನಹಟ್ಟಿ. ಸಮೀಪದ ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರೆ ವಿಜೃಂಭಣೆಯಿಂದ ಆಚರಿಸಲಾಯಿತು. ಎಂದು ಶ್ರೀ ಬಾಳೇ ಬಂದಮ್ಮ...

ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಸಹಾಯವಾಣಿ ಪ್ರಾರಂಭ

ಚಿತ್ರದುರ್ಗ ಫೆ.17 ಜಿಲ್ಲೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸುವಂತಾಗಲು...

ಜಿಲ್ಲಾಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಬಾಲವಿಕಾಸ ಅಕಾಡೆಮಿ ಕಾರ್ಯ ಉತ್ತಮ

ಚಿತ್ರದುರ್ಗ ಫೆ.17: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಹೊರಹಾಕುವ ನಿಟ್ಟಿನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಜಿಲ್ಲೆಯಲ್ಲಿರುವ...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page