ಹಿರಿಯೂರು :
ಬ್ರಿಟೀಷರ ಆಳ್ವಿಕೆಯಲ್ಲಿ ನೂರಾರು ವರ್ಷಗಳು ದಾಸ್ಯದಲ್ಲಿದ್ದ ನಮ್ಮ ಭಾರತ ದೇಶ 1947ನೇ ಆಗಸ್ಟ್ 15ರಂದು ಸ್ವಾತಂತ್ರ ಗಳಿಸಿತು. ಈ ಸ್ವಾತಂತ್ರ ಹೋರಾಟದಲ್ಲಿ ಅಸಂಖ್ಯಾತ ದೇಶಪ್ರೇಮಿಗಳು, ಸ್ವಾತಂತ್ರ ಹೋರಾಟಗಾರರು ಈ ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇವರೆಲ್ಲರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರವನ್ನು ನಾವು ನೀವೆಲ್ಲಾ ಉಳಿಸಿಕೊಳ್ಳಬೇಕಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿ.ರಾಜೇಶ್ ಕುಮಾರ್ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 78ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖವಾಗಿ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿಸುಭಾಷ್ ಚಂದ್ರಬೋಸ್, ಸರ್ದಾರವಲ್ಲಭಾಯಿಪಟೇಲ್, ಬಾಲಗಂಗಾಧರತಿಲಕ್, ಭಗತಸಿಂಗ್, ಚಂದ್ರಶೇಖರಆಜಾದರಂತಹ ಸಹಸ್ರಾರು ದೇಶಪ್ರೇಮಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿ ದೇಶಪ್ರೇಮ ಮೆರೆದಿದ್ದಾರೆ. ಅಷ್ಟೇ ಅಲ್ಲಾ, ಸಮಾಜದ ಎಲ್ಲಾ ವರ್ಗದಜನರು ಮತ್ತು ಮಹಿಳೆಯರೂ ಸಹ ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸಿದ್ದಾರೆ ಎಂಬುದಾಗಿ ಹೇಳಿದರು.
ನಮ್ಮ ದೇಶದಲ್ಲಿ ಸುಮಾರು 43ಕೋಟಿಗಿಂತ ಹೆಚ್ಚು ವಿದ್ಯಾರ್ಥಿಗಳೇ ಇದ್ದಾರೆ. ನೀವುಗಳೇ ಈ ದೇಶದ ನಿರ್ಮಾಣದ ರೂವಾರಿಗಳು, ದೇಶದ ಭವಿಷ್ಯವು ನಿಮ್ಮ ಉತ್ತಮ ಬೆಳವಣಿಗೆಯನ್ನು ಆಧರಿಸಿದೆ. ಆದುದರಿಂದ ನೀವು ದೇಶದ ಸಮರ್ಥ ಪ್ರಜೆಗಳಾಗಿ ರೂಪುಗೊಳ್ಳುವ ಜೊತೆಗೆ ನೊಂದವರ ಬಗ್ಗೆ ಹಾಗೂ ದೇಶದ ಬಗ್ಗೆ ಕಾಳಜಿ ಮತ್ತು ಪ್ರೀತಿ ಬೆಳೆಸಿಕೊಳ್ಳಬೇಕು, ಮತ್ತು ದೇಶದ ಪ್ರಗತಿಗಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂಬುದಾಗಿ ಹೇಳಿದರು.
ನಮ್ಮ ಕರ್ನಾಟಕ ಸರ್ಕಾರವು ಈ ವರ್ಷದಲ್ಲಿ ರಾಜ್ಯದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಮ್ಮ ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 77,951, ಗೃಹಲಕ್ಷ್ಮೀ ಯೋಜನೆಯಡಿ 68,330, ಫಲಾನುಭವಿಗಳನ್ನು ಗುರುತಿಸಲಾಗಿದ್ದು ಗೃಹಜ್ಯೋತಿ ಯೋಜನೆಯಡಿ 65,356, ಫಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತಪ್ರಯಾಣ ಕಲ್ಪಿಸಾಗಿದೆ ಎಂದರಲ್ಲದೆ,
ರಾಜ್ಯದ ಯುವಪದವೀಧರರಿಗೆ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ, ಡಿಪ್ಲೋಮೋ ಪದವೀಧರರಿಗೆ 1500 ಸಹಾಯಧನ, ರೈತರ ಸಾಂತ್ವನ ಮತ್ತು ಅಭಿವೃದ್ಧಿಗಾಗಿ ಮಣ್ಣು ಆರೈಕೆ ಅಭಿಯಾನ ಮತ್ತು ಕೃಷಿಭಾಗ್ಯ ಯೋಜನೆ, ಗ್ರಾಮೀಣ ಅಭಿವೃದ್ಧಿಗಾಗಿ ಜಲಜೀವನ್ ಯೋಜನೆ, ಶಿಕ್ಷಣದ ಅಭಿವೃದ್ಧಿಗಾಗಿ ಪಿ.ಎಂ.ಶ್ರೀ ಯೋಜನೆ, ಅಕ್ರಮ-ಸಕ್ರಮ ಯೋಜನೆಯಡಿ, 752 ಮನೆಗಳ ಹಕ್ಕುಪತ್ರ ವಿತರಿಸಲಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಾದ ನೃತ್ಯ ನಿರ್ದೇಶಕ ಹಾಗೂ ನೃತ್ಯಪಟು ಮಹೇಶ್, ಕಲಾವಿದ ಹಾಗೂ ಪತ್ರಕರ್ತ ಮಾರುತೇಶ್ ಕೂನಿಕೆರೆ, ಸೇವಾದಳ ಶಿಕ್ಷಕ ಡಿ.ಜಿ.ಶ್ರೀನಿವಾಸ್, ತಂತ್ರಜ್ಞ ಮಹಮದ್ ಶಫಿವುಲ್ಲಾ, ಮುಖ್ಯಶಿಕ್ಷಕಿ ಕಮಲಮ್ಮ, ಅಂಗಾಂಗ ದಾನಿ ದಿ.ಆಕಾಶ್ ಕುಟುಂಬಸ್ಥರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪೋಲೀಸ್ ಹಾಗೂ ಹೋಂಗಾರ್ಡ್ಸ್ ಸಿಬ್ಬಂದಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೋಲೀಸ್ ಉಪಾಧೀಕ್ಷರಾದ ಶ್ರೀಮತಿ ಎಸ್.ಚೈತ್ರಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್, ನಗರಸಭೆ ಪೌರಾಯುಕ್ತರಾದ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್, ನಗರಸಭೆ ಸದಸ್ಯರುಗಳಾದ ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ಅಂಬಿಕಾಆರಾಧ್ಯ, ಶ್ರೀಮತಿ ಶಂಷುನ್ನೀಸಾ, ಶ್ರೀಮತಿ ವಿಶಾಲಾಕ್ಷಿ, ಶ್ರೀಮತಿ ರತ್ನಮ್ಮ, ಶ್ರೀಮತಿ ಸುರೇಖಾಮಣಿ, ಶ್ರೀಮತಿ ರತ್ನಮ್ಮ, ಶ್ರೀಮತಿ ಮೊದಲಮೇರಿ, ಶ್ರೀಮತಿ ಮಮತಾ, ಚಿತ್ರಜಿತ್ ಯಾದವ್, ಅಜಯ್ ಕುಮಾರ್, ಈರಲಿಂಗೇಗೌಡ, ಎಂ.ಡಿ.ಸಣ್ಣಪ್ಪ, ದೇವೀರಮ್ಮ, ನಾಮ ನಿರ್ದೇಶನ ಸದಸ್ಯರುಗಳಾದ ರಮೇಶ್ ಬಾಬು, ಶಿವಕುಮಾರ್, ಅಜೀಂ ಭಾಷಾ, ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಎಂ.ವಿ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕಾಂಗ್ರೆಸ್ ಮುಖಂಡರುಗಳಾದ ಸಾದತ್ ವುಲ್ಲಾ, ದಾದಾಪೀರ್, ಸಮೀವುಲ್ಲಾ, ಜಬೀವುಲ್ಲಾ, ಜಗದೀಶ್, ಬಗರ್ ಹುಕಂ ಸಮಿತಿ ಸದಸ್ಯೆ ಶ್ರೀಮತಿಡಾ.ಸುಜಾತ, ರೈತ ಮುಖಂಡರುಗಳಾದ ಕೆ.ಸಿ. ಹೊರಕೇರಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ದಾದಾಪೀರ್, ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರ, ಸಬ್ ಇನ್ಸಪೆಕ್ಟರ್ ಗಳಾದ ಮಂಜುನಾಥ್, ಲಕ್ಷ್ಮಿನಾರಾಯಣ, ಶ್ರೀಮತಿ ಅನುಸೂಯ, ಶ್ರೀಮತಿ ಶಶಿಕಲಾ ಸೇರಿದಂತೆ ಅನೇಕ ಗಣ್ಯರು ನಗರದ ನಾಗರೀಕರು, ನಗರಸಭೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ನೌಕರರು ಸಿಬ್ಬಂದಿವರ್ಗ, ಶಾಲಾ ಶಿಕ್ಷಕ –ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸೇವಾದಳದ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments