ಚಳ್ಳಕೆರೆ ಆ.23. ಈರುಳ್ಳಿ ಬೆಳೆಗೆ ಕೊಳೆರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ನಾಷವಾಗಿದ್ದು ಈರು ಬೆಳೆಗಾರರಲ್ಲಿ ಆತಂಕದಂದಿದೆ.
ಹೌದು ಇದು ಚಳ್ಳಕೆರೆ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಕುರಡಿಹಳ್ಳಿ ಸೇರಿದಂತೆ ವಿವಿಧ ಕಡೆ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದು ಕಳೆದ ಒಂದು ವಾರದಿಂದುಸುರಿದ ಮಳೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ.ತಾಲ್ಲೂಕಿನ ವಿವಿಧ ಭಾಗದಲ್ಲಿ ಬೆಳೆದ ಈರುಳ್ಳಿ ಬೆಳೆ ಬೆಳವಣಿಗೆ ಹಂತದಲ್ಲಿದ್ದ ಬೆಳೆಗೆ ಕೊಳೆ ರೋಗ ಆವರಿಸಿದೆ. ಇದರಿಂದ ರೈತರು ಆತಂಕಕ್ಕೆಸಿಲುಕುವಂತೆ ಮಾಡಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇರುವುದರಿಂದ ರೈತರು ಬೆಳೆದಿದ್ದು ಈರುಳ್ಳಿ ಬೆಳೆಯಿಂದ ಹೆಚ್ಚು ಆಧಾಯ ನೀರೀಕ್ಷೆಯಲ್ಲಿದ್ದ ರೈತರಿಗೆ ಜಿಟಿಜಿಟಿ ಹಾಗೂ ಅತಿ ಹೆಚ್ಚು ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಅಧಿಕವಾಗಿದೆ. ಬೆಳೆಯ ಮೆಲ್ಭಾಗದಲ್ಲಿ ಕೆಂಪಮಿಶ್ರಿತ ಹಳದಿ ಬಣ್ಣ ಆವರಿಸಿ ಕೊಳೆ ರೋಗ ಹೆಚ್ಚಾಗಿದ್ದು ಬೆಳೆ ಸಂಪೂರ್ಣ ನೆಲಕಚ್ಚಿದೆ.
.ಸುಮಾರು ಕಳೆದ ಐದಾರು ವರ್ಷಗಳಿಂದ ಈರುಳ್ಳಿ ಬೆಳೆ ನೀರೀಕ್ಷೆಯಷ್ಟು ರೈತರ ಕೈಹಿಡುಯದೆ ಈರುಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದ್ದು ಈ ಬಾರಿಯೂ ಅಲ್ಪ ಸ್ವಲ್ಪ ಹಾಕಿದ ಈರುಳಿ ಬೆಳೆಗೆ ಕೊಳೆ ರೋಗದಿಂದ ಬೆಳೆ ನಷ್ಟವಾಗಿದ್ದು ರೈತರನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ ಎಂದು ಕುರಡಿಹಳ್ಳಿ ಗ್ರಾಮದ ಈರುಳ್ಳಿ ಬೆಳೆಗಾರರಾದ ಪುರುಷೋತ್ತಮನಾಯ್ಕ್.ತಿಪ್ಪೇಶ್.ತಿಮ್ಮನಸಯ್ಕ್. ಧಾಂಜನಾಯ್ಕ್. ವೆಂಕಟೇಶ್ ಇತರರು ಅಳಲು ತೋಡಿಕೊಂಡಿದ್ದಾರೆ.
0 Comments