ಈಚರ್ ಲಾರಿಗೆ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನ ಡಿಕ್ಕಿ ವ್ಯಕ್ತಿಗೆ ಗಾಯ ::

by | 20/11/23 | ಅಪಘಾತ

ಚಿತ್ರದುರ್ಗ, ನವೆಂಬರ್ 20 : ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ಕುರುಬರಹಟ್ಟಿ ಗ್ರಾಮದ ರವಿ ( 28) ,ಬೆಳಗ್ಗೆ 10.45 ಸಮಯದಲ್ಲಿ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನಚಾಲನೆ ಮಾಡಿಕೊಂಡು
ಐಮಂಗಲ ಗ್ರಾಮದಿಂದ ಐನಳ್ಳಿ ಗ್ರಾಮಕ್ಕೆ ಹೋಗಲು ಚಿತ್ರದುರ್ಗ ಬೈಪಾಸ್ ರಸ್ತೆಯ ತಮಟಕಲ್ಲು
ಬ್ರಿಡ್ಜ್ ಮುಂಭಾಗದ ಜೀವನ್ ಡಾಬಾದ ಹತ್ತಿರ ಬೆಂಗಳೂರು-ದಾವಣಗೆರೆ ಎನ್.ಹೆಚ್-48 ರಸ್ತೆಯಲ್ಲಿ
ಮುಂಭಾಗದಲ್ಲಿ ಹೋಗುತ್ತಿದ್ದ ಈಚರ್ ಲಾರಿಯು ತನ್ನ ಲಾರಿಯನ್ನು ಎಡಪಥದಿಂದ ಬಲಪಥದಿಂದ
ತೆಗೆದುಕೊಂಡು ಯಾವುದೇ ಮುನ್ಸೂಚನೆಯನ್ನು ನೀಡದೇ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಗೂಡ್ಸ್ ಗಾಡಿಯನ್ನು ನಿಯಂತ್ರಣಕ್ಕೆ ತರಲಾರದೇ ಮುಂದೆ ಹೋಗುತ್ತಿದ್ದ ಈಚರ್ ಲಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಶೋಕ್ಲೇ ಲ್ಯಾಂಡ್ ಗೂಡ್ಸ್ ವಾಹನದ ಚಾಲಕನಿಗೆ ಮೂಗಿನ ಹತ್ತಿರ ರಕ್ತಗಾಯವಾಗಿ, ಎದೆಗೆ, ಮತ್ತು ಕೈಕಾಲುಗಳಿಗೆ‌ ತರಚಿದ ಗಾಯಗಳಾಗಿರುತ್ತದೆ. ಅಲ್ಲದೇ ಗೂಡ್ಸ್ ವಾಹನವು ಜಖಂಗೊಂಡಿರುತ್ತದೆ. ಡಿಕ್ಕಿ ಪಡಿಸಿದ ಯಾವುದೋ ಒಂದು ಈಚರ್ ಲಾರಿಯ ಚಾಲಕ ನಿಲ್ಲಿಸದೇ ತೆಗೆದುಕೊಂಡು ಹೋಗಿರುತ್ತಾನೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *