ಇಸ್ಪೀಟ್ ಅಡ್ಡೆ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ಪ್ರಕರಣ ದಾಖಲು.

by | 15/11/23 | ಕ್ರೈಂ


ಚಳ್ಳಕೆರೆ ನ.15 ಸಾರ್ವಜನಿಕ‌ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತಿ ಮಾಹಿತಿ ಮೇರೆಗೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಹಣ ಹಾಗೂ 6 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿ ಗ್ರಾಮದ ಹತ್ತಿರದ ಗುಡ್ಡದ ಪಕ್ಕ ಸಾರ್ವಜನಿಕ ಸ್ಥಳದಲ್ಲಿಮಂಗಳವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಚಳ್ಳಕೆರೆ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದು ಇಸ್ಪೀಟ್ ಆಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಶ್ರೀನಿವಾಸ ತಂದೆ ತಿಪ್ಪೇಸ್ವಾಮಿ ಚಳ್ಳಕೆರೆಟೌನ್ ಮತ್ತು ಇತರೆಯವರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರವಾದ ಅಂದರ್ ಬಾಹರ್ ಇಸ್ಪೀಟ್
ಜೂಜಾಟ ಆಡುತ್ತಿದ್ದಾರೆ ಎಂತ ಮಾಹಿತಿ ಶ್ರೀನಿವಾಸ ಟಿ ಗಾಂಧಿನಗರ,ಚಳ್ಳಕೆರೆ,ಸತೀಶ ತಂದೆ ಮಂಜುನಾಥ, ಮದಕರಿ ನಗರ,
ಚಳ್ಳಕೆರೆ,ಗುರು ಪ್ರಸಾದ್ ಡಿ ಎಂ ತಂದೆ ಮಂಜುನಾಥ, ಹೌಸಿಂಗ್ ಬೋರ್ಡ್ ಕಾಲೋನಿ, ಚಳ್ಳಕೆರೆ ಟೌನ್ . ಕಾರ್ತಿಕ ವಾಟರ್ ಮಾನ್ ಕೆಲಸ, ಶಾರದ ಸ್ಕೂಲ್
ಮುಂಭಾಗ, ಗಾಂಧಿನಗರ, ಚಳ್ಳಕೆರೆ,. ನೂರ್ ಜಾನ್ @ ನೂರಿ ಆಟೋ ಚಾಲಕ
ಕೆಲಸ, ಕಪರಚರಹಟ್ಟಿ, ಗಾಂಧಿನಗರ, ಚಳ್ಳಕೆರೆ . ಬಾಷಾ @ ಚಿಕನ್ ಬಾಷಾ, ರಹೀಂ ನಗರ ಚಳ್ಳಕೆರೆ. ಹಾಗೂ 4460 ರೂ .ಇಸ್ಪೀಟ್ ಎಲೆ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *