ಇವತ್ತಿನ-ಟ್ವೀಟ್

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುತ್ತಿರುವುದು ಖುಷಿ ತಂದಿದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್.


ಬೆಂಗಳೂರು ಸೆ.19ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುತ್ತಿರುವುದು ಖುಷಿಯ ವಿಚಾರ. ಮಸೂದೆಯನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. 2010ರಲ್ಲೇ ಯುಪಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ಮಹಿಳಾ ಮೀಸಲಾತಿ ಕಾಯ್ದೆಯು ಶ್ರೀಮತಿ ಸೋನಿಯಾ ಗಾಂಧಿ ಅವರ ಕನಸಿನ ಕೂಸು. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಮೂಲ ಧ್ಯೇಯಗಳಲ್ಲಿ ಒಂದಾಗಿದೆ.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎನ್ನುವ ದೃಷ್ಟಿಯಿಂದ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ನಾ ನಾಯಕಿ ಎನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇನೆ. ಇದು ನನ್ನ ಹೃದಯಕ್ಕೆ ಹತ್ತಿರವಾಗಿರುವ ಕಾರ್ಯಕ್ರಮ.

ಹರಿಪ್ರಸಾದ್ ಸಾಹೇಬರಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ ಕಂದಿಕೆರೆಸುರೇಶ್ ಬಾಬು.


ಹಿರಿಯೂರು ಹರಿಪ್ರಸಾದ್ ಸಾಹೇಬರಿಗೆ ಬಹಿರಂಗ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ…
ಹರಿಪ್ರಸಾದ್ ಅವರು ಹಿಂದಿನ ಸಭೆಯಲ್ಲಿ ಹೇಳಿದಂತೆ ನಮ್ಮ ದೇಶದಲ್ಲಿ ಐದು ರಾಜ್ಯದ ಮುಖ್ಯಮಂತ್ರಿ ಮಾಡಿರೋರು ನೀವು ನಿಮಗೆ ಮುಖ್ಯಮಂತ್ರಿ ಮಾಡೋದು ಗೊತ್ತು ಇಳಿಸುವುದು ಗೊತ್ತು ಆದರೆ ಯಾಕೋ ಇತ್ತೀಚಿಗೆ ಮಂತ್ರಿ ಪದವಿ ಬಗ್ಗೆ ನಿಮ್ಮ ಸಮಾಜದ ಸಭೆ ಸಮಾರಂಭಗಳಲ್ಲಿ ಹೇಳೋದು ಸರಿ ಅನಿಸುತ್ತಿಲ್ಲ. ನೀವು ರಾಷ್ಟೀಯ ಮುಖಂಡರು. ನಿಮ್ಮಲ್ಲಿ ನನ್ನದೊಂದು ಮನವಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತಿ ಹಿಂದುಳಿದ ಸಮಾಜದ ಸಮಾವೇಶದಲ್ಲಿ ಪರಮೇಶ್ವರ್ ರವರು ಸತೀಶ್ ಜಾರಕಿಹೊಳೆ ಅವರನ್ನ ಹಾಗೂ ಅಲ್ಪಸಂಖ್ಯಾತರನ್ನ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಮಾಡಲಿಲ್ಲ ಎಂದು ಹೇಳಿದ್ದೀರಿ. ಇವರುಗಳನ್ನು ಹೈಕಮಾಂಡ್ ಉಪಮುಖ್ಯಮಂತ್ರಿ ಮಾಡಿಕೊಳ್ಳಲು ಹೇಳಿತ್ತಾ ಹೇಳಿದ್ದರೆ ಮುಖ್ಯಮಂತ್ರಿಗಳು ಯಾಕೆ ಮಾಡಿಕೊಳ್ಳಲಿಲ್ಲ ನೀವು ಆಗ ಹೈಕಮಾಂಡ್ ಮುಂದೆ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದನ್ನು ಜನಗಳ ಮುಂದೆ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕಂದಿಕೆರೆ ಸುರೇಶ್ ಬಾಬು ಆಗ್ರಹ ಮಾಡಿದ್ದಾರೆ.
ನಿಮ್ಮ ಗೌರವ ನೀವು ಕಳೆದು ಕೊಳ್ಳಬಾರದು ನಿಮ್ಮ ಬಗ್ಗೆ ಹಿಂದುಳಿದ ಸಮಾಜಗಳಲ್ಲಿ ಗೌರವ ಇದೆ ಅದನ್ನ ಉಳಿಸಿಕೊಳ್ಳಿ ನೀವು ಮಂತ್ರಿ ಮುಖ್ಯ ಮಂತ್ರಿ ಆದ್ರೆ ರಾಜ್ಯದ ಜನತೆಗೆ ಸಂತೋಷ ಆಗುತ್ತದೆ. ಆದರೆ ಮಂತ್ರಿ ಪದವಿ ಹಾದಿ ಬೀದಿಯಲ್ಲಿ ಸಿಗುವ ಸ್ಥಾನವಲ್ಲ ಅಂತ ನಿಮಗೂ ಗೊತ್ತು. ಯಾಕೆಂದ್ರೆ ನೀವು ಎಷ್ಟೋ ರಾಜ್ಯಗಳ ಮುಖ್ಯಮಂತ್ರಿಗಳನ್ನ ಮಾಡಿದವರು ಆ ಸ್ಥಾನದ ಬಗ್ಗೆ ನಿಮಗೂ ಗೊತ್ತು ನನ್ನಂತ ಸಣ್ಣ ಕಾರ್ಯಕರ್ತನಿಗೂ ಸಹ ಗೊತ್ತು. ನಿಮ್ಮ ಕೈಲ್ಲಿ ಹೈಕಮಾಂಡ್ ಇದೆ. ನೀವು ಮಂತ್ರಿ ಆಗೋದು ಸುಲಭ. ಆದ್ರೆ ಸಿದ್ದರಾಮಯ್ಯನಂತ ಸಾಮಾನ್ಯ ಮನುಷ್ಯ 1984ರಲ್ಲಿ ಯಾವದೇ ರಾಜಕೀಯ ಬೆಂಬಲವಿಲ್ಲದೆ ಸಾಮಾನ್ಯ ವಕೀಲನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷೇತರನಾಗಿ ಗೆದ್ದು 2023ರವರೆಗೂ ಹೋರಾಟದ ಮೂಲಕ ಚುನಾವಣೆಯಲ್ಲಿ ಸೋಲು ಗೆಲುವನ್ನು ಕಂಡು ಎರಡು ಬಾರಿ ಉಪಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಅಗಿದ್ದಾರೆ. ಈ ರಾಜ್ಯದ ಜನಾಭಿಪ್ರಾಯ ಮತ್ತು ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಆಶೀರ್ವಾದದಿಂದ ಆಗಿರೋದು. ಅದು ನಿಮಗೂ ಗೊತ್ತಿದೆ. ನೀವು ಸಿದ್ದರಾಮಯ್ಯನವರನ್ನು ಜಾತಿವಾದಿ ಎಂದು ಸಮಾವೇಶದಲ್ಲಿ ಹೇಳಿದ್ದೀರಿ ನಾನು ಇಲ್ಲಿ ಸಿದ್ದರಾಮಯ್ಯನವರ ಬಗ್ಗೆ ಹೋಗಳಬೇಕಾದ ಅವಶ್ಯಕತೆ ಇಲ್ಲ. ನಾನು ಸುಮಾರು ಇಪ್ಪತ್ತುವರ್ಷಗಳ ಕಾಲ ಅವರ ಜೊತೆ ಶಿಷ್ಯನಾಗಿ ಒಡನಾಟ ಹೊಂದಿದ್ದರು ಸಹ ಅವರು ಹಿಂದೆ ಅಂದ್ರೆ 2013 ರಿಂದ 18ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಚಿತ್ರದುರ್ಗ ಜಿಲ್ಲಾ ಪಂಚಾಯತಿಗೆ ಒಪ್ಪಂದ ಪ್ರಕಾರ ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕುರುಬ ಸಮಾಜದವರು ಈಗಾಗಲೇ ಹಿಂದೆ ಜಿಲ್ಲೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಉಪ್ಪಾರ ಸಮಾಜದವರಿಗೆ ಸ್ಥಾನ ಸಿಕ್ಕಿಲ್ಲ ಹಾಗಾಗಿ ಉಪ್ಪಾರ ಸಮಾಜದ ಹೆಣ್ಣು ಮಗಳಿಗೆ ಅವಕಾಶ ಮಾಡಿ ಕೊಡಿ ಎಂದು ಜಿಲ್ಲೆಯ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು. ಅವರು ಸ್ವಜಾತಿಯವರಿಗಿಂತ ಮೊದಲು ಬೇರೆ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ ಎಲ್ಲ ಶೋಷಿತ ಸಮಾಜಗಳಿಗೆ ಹೆಚ್ಚು ಸಹಾಯ ಮಾಡಿದ್ದಾರೆ. ರಾಜಕೀಯದಲ್ಲಿ ಪರಿಣಿತರಾದ ನೀವು ಜನಾಅಭಿಪ್ರಾಯದ ವಿರುದ್ಧ ಮಾತಾಡೋದು ಯಾಕೋ ನಿಮ್ಮಂತ ಕಟ್ಟಾ ಆರ್ ಎಸ್ ಎಸ್ ವಿರೋಧಿ ಹಾಗೂ ಕಟ್ಟಾ ಕಾಂಗ್ರೆಸಿಗರಾದಂತ ನಿಮಗೆ ಸರಿ ಕಾಣುವುದಿಲ್ಲ. ನೀವು ಈ ರಾಜ್ಯದಿಂದ 30 ವರ್ಷಗಳ ಕಾಲ ರಾಜ್ಯಸಭೆ ಹಾಗು ವಿಧಾನ ಪರಿಷತ್ನಲ್ಲಿ ಸಭಾನಾಯಕನ ಸ್ಥಾನವನ್ನು ಅನುಭವಿಸಿದ ನೀವು ಹಿಂದೆಯೇ ಈ ರಾಜ್ಯದಿಂದ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬಹುದಿತ್ತು.? ಈಗ ಜನಾಭಿಪ್ರಯದಿಂದ ಆಯ್ಕೆ ಆಗಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವದು ನನ್ನಂತ ನಿಮ್ಮ ಅಭಿಮಾನಿಗೆ ನಿಮ್ಮ ಹೇಳಿಕೆ ಸರಿ ಅನಿಸಲಿಲ್ಲ ನೀವು ಸಹ ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಗೆದ್ದು ಈ ರಾಜ್ಯದ ಹಿಂದುಳಿದ ನಾಯಕರಾದ ಬಂಗಾರಪ್ಪನವರಂತೆ ಸ್ವಂತ ಶ್ರಮದಿಂದ ರಾಜ್ಯದ ಮುಂದಿನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕೆಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕಂದಿಕೆರೆ ಸುರೇಶ್ ಬಾಬು ಆಶಿಸಿದ್ದಾರೆ.

ಅಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀಗಳು


ಕೋಲಾರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರಗಳು ಹೆಚ್ಚಲಿವೆ. ಆದ್ರೆ, ಒಂದೇ ಪಕ್ಷ ಅಧಿಕಾರವನ್ನು ಹಿಡಿಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮಧ್ಯೆ ಇದೀಗ ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಕೋಡಿಮಠ ಶ್ರೀ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದರು.


ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ‌. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.

ಇತ್ತೀಚೆಗೆ ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ್ದ ಕೋಡಿಶ್ರೀ, ರಾಜಕೀಯ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲಾ ಡಿವೈಡ್ ಆಗುವ ಲಕ್ಷಣ ಇದೆ‌, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಅದರಂತೆ ಇದೀಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಈ ಮೂಲಕ ಶ್ರೀಗಳ ಭವಿಷ್ಯ ನಿಜವಾಗಿದೆ.

ಬಾಯಾರಿಕೆಯಿಂದ ಬಳಲಿ ಬೆಂಡಾಗಿ ನಿತ್ರಾಣಗೊಂಡಿದ್ದ ಮಹಿಳೆಗೆ ನೀರು ಕುಡಿಸಿ ಮಾನವೀಯತೆ ಮೆರದ ವಿದ್ಯಾರ್ಥಿ ತೇಜ್

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.11. ರಸ್ತೆ ಬದಿಯಲ್ಲಿ ನಿತ್ರಾಣಗೊಂಡ ಮಹಿಳೆಯೊಬ್ಬಳಿಗೆ ಬಾಲಕನೊಬ್ಬ ನೀರು ಕುಡಿಸಿ ಮಾನವೀಯತೆ ಮೆರದಿದ್ದಾನೆ.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಬೆಸ್ಕಾಂ ಕಚೇರಿ ಮುಂಭಾಗದ ಪಾದಚಾರಿ ರಸ್ತೆಯ ಮೇಲೆ ನಿತ್ರಾಣಗೊಂಡಿದ್ದ ಮಹಿಳೆಯೊಬ್ಬಳು ಬಿಸಿಲಿನ ಧಗೆಗೆ ದಾಹದಿಂದ ಪರಿತಪಿಸುತ್ತಿರುವುದು ಕಂಡು ಸೈಯ್ಯಾದ್ರಿ ಶಾಲೆಯಲ್ಲಿ 7 ನೇತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿ ತೇಜ್ ಶಾಲೆ ಮುಗಿಸಿ ಅಂಬೇಡ್ಕರ್ ನಗರದಲ್ಲಿರುವ ಮನೆಯ ಕಡೆ ನಡೆದು ಹೋಗುವಾಗಿ ಬಾಯಾರಿಕೆಯಿಂಸ ಬಳಲಿ ಬೆಂಡಾಗಿ ನಿತ್ರಾಣ ಸ್ಥಿತಿಯಲ್ಲಿದ್ದ ಮಹಿಳೆಗೆ ತನ್ನ ಶಾಲಾ ಬ್ಯಾಗಿನಲ್ಲಿದ್ದ ಬಾಟಲಿಯಲ್ಲಿದ್ದ ನೀರು ಕುಡಿಸಿ ಮಾನವೀಯತೆ ಮೆರೆದಿದ್ದಾನೆ . ವಿದ್ಯಾರ್ಥಿ ಮಹಿಳೆಗೆ ನೀರು ಕುಡಿಸುವ ದೃಶ್ಯವನ್ನು ಜನಧ್ವನಿ ಮುಖಪುಟ ಜಾಲ ತಾಣ ಪತ್ರಿಕೆ ತನ್ನ ಕ್ಯಾಮರದಲ್ಲಿ ಸೆರೆಯಿಡಿದು ಬಾಲಕನಿಗೆ ಧನ್ಯವಾದ ಹೇಳಿ ನಿತ್ರಾಣಗೊಂಡ ಮಹಿಳೆಯನ್ನು ವಿಳಾಸ ವಿಚಾರಿದರೆ ಮಾತನಾಡಲು ಬಾರದೆ ಕೈಸನ್ನೆ ಮಾಡಿದ್ದಾಳೆ. ಇಂತಹ ದೃಶ್ಯಗಳನ್ನು ಕಂಡೂ ಕಾಣದಂತೆ ಹೋಗುವ ಕಾಲದಲ್ಲಿ ಬಾಲಕ ನೀರು ಕುಡಿಸಿ ಮೆಚ್ಚಿಗೆಗೆ ಪಾತ್ರನಾಗಿದ್ದಾನೆ.

ಸ್ಮಶಾನ ಭೂಮಿ‌ ಅಕ್ರಮ ಒತ್ತುವರಿ ತೆರವಿಗೆ ಮುಂದಾದ ತಾಲೂಕು ಆಡಳೀತ

ಜನಧ್ವನಿ ವಾರ್ತೆ ಚಳ್ಳಕೆರೆ ಜ.9 ಚಳ್ಳಕೆರೆ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರ ಎದೆಯಲ್ಲಿ ನಡುಕ ಶುರುವಾಗಿದೆ. ಹೌದು ಚಳ್ಳಕೆರೆ ತಾಲೂಕಿನ ಸ್ಮಶಾನ ಭೂಮಿಯನ್ನು ಬಿಡದೆ ಪಟ್ಟ ಭದ್ರರು. ಸರಕಾರಿ ಗೋಮಾಳ. ಅರಣ್ಯ ಭುಮಿ. ಸಾರ್ವಜನಿರ ಸದುಪಯೋಗಗಿಟ್ಟ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಲ್ಲದೆ ಮನುಷ್ಯ ಸತ್ತಮೇಲೆ ಆರು ಮೂರಡಿ ಜಾಗವಿಲ್ಲದೆ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ಮನೆ.ಕಣ. ಜಾನುವಾರು ಕೊಟ್ಟಿಗೆ ನಿರ್ಮಿಸಿಕೊಂಡ ಅಂತ್ಯಸಂಸ್ಕಾರ ಮಾಡಲು ಅಡ್ಡಿ ಪಡಿಸಿ ಪ್ರಕರಣಗಳು ಬೆಳಕಿಗೆ ಬಂದಿದ್ದವು ಈಗ ಕಂದಾಯ ಇಲಾಖೆ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಲು ಮಂಗಳಾವಾರದಿಂದಲೇ ಒತ್ತುವರಿ ತೆರವುಗೊಳಿಸಿ ಸ್ಮಶಾನ ಭೂಮಿ ಅದ್ದುಬಸ್ತು ಮಾಡಲು ಕಂದಾಯ ಇಲಾಖೆ ಭೂಮಾಪನ ಇಲಾಖೆ ಗ್ರಾಮಗಳ ತೆರವು ವೇಳ ಪಟ್ಟಿ ಬಿಡುಗಡೆ ನಾಡಿದ್ದು ಬಹಳ ವರ್ಷಗಳಿಂದ ಸ್ಮಶಾನ ಭೂಮಿ ಒತ್ತುವರಿದಾರರಿಗೆ ಈಗ ನಡುಕವನ್ನುಂಟುಮಾಡಿದೆ

You cannot copy content of this page