ಇಳಿವಯಸದಸಿನಲ್ಲಿಯೂ ಸತತವಾಗಿ 2 ಗಂಟೆಗಳ ಕಾಲ ಮಕ್ಕಳಿಗೆ ಪಾಠ ಬೋದನೆ ಮಾಡುವ ನಿವೃತ್ತಿ ಸಹಾಯಕಶಿಕ್ಷಣಾಧಿಕಾರಿ ಕರಿಯಪ್ಪ.

by | 02/02/23 | ಮಾತೆಂದರೆ ಇದು, ಸಾಮಾಜಿಕ

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.2
ಸಾಮಾನ್ಯವಾಗಿ ಇಂದಿನ ದಿನಮಾನದಲ್ಲಿ ಶಿಕ್ಷಣ ಅನ್ನೋದು ಸಂಪೂರ್ಣ ವ್ಯಾಪಾರವಾಗಿ ಪರಿಣಮಿಸಿದ್ದು, ಶಾಲಾ ಕಾಲೇಜ್ ಇರಲಿ, ಕೋಚಿಂಗ್ ಇರಲಿ, ಮನೆಪಾಠ ಇರಲಿ, ಯಾವುದಕ್ಕೂ ಹಣ ಇಲ್ಲದೆ ನಡೆಯೋದಿಲ್ಲ ಶುಲ್ಕ ಕಟ್ಟಿಯೇ ಮಕ್ಕಳು ಶಿಕ್ಷಣ ಪಡೆಯಬೇಕು ಆದರೆ ಇಲ್ಲೊಬ್ಬ ಇಳಿ ವಯಸ್ಸಿನ ನಿವೃತ್ತ ಶಿಕ್ಷಣ ಸಹಾಯಕರೊಬ್ಬು ಶಾಲೆಗಳಿಗೆ ಕಲಿಕಾಸಕ್ತಿಯನ್ನು ಹೆಚ್ಚುಸುವಂತೆ ಮಾಡುತ್ತಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಚಿಕಗತನಹಳ್ಳಿ ಗ್ರಾಮದಲ್ಲಿ ಹುಟ್ಟಿ ಹುಟ್ಟಿ ಡಿ.ಉಪ್ಪಾರಹಟ್ಟಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ,ಚಳ್ಳಕೆರೆ ನಗರದಲ್ಲಿ ಉನ್ನತ ಶಿಕ್ಷಣÀ ಪಡೆದ ಕರಿಯಪ್ಪ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಶಿಕ್ಷಣಾಧಿಕಾರಿ ಸುದೀರ್ಘ ಸೇವೆ ಸಲ್ಲಿಸಿ 1996 ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಾರೆ.
ನಿವೃತ್ತಿ ನಂತರ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲ ಬಡ ಮಕ್ಕಳಿಗಾಗಿ ಏನಾದ್ರೂ ಮಾಡಬೇಕೆಂಬ ಹಂಬಲದೊಂಗೆ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಪೆನ್ನು ವಿತರಣೆಮಾಡಿದ್ದಾರೆ.
ಸುಲಭವಾಗಿ ಅಕ್ಷರ ಹಾಗೂ ಗಣಿತ ಕಲಿಯಲು ವೇದಗಣಿತ, ವರ್ಣ ಮಾಲೆ ಎಂಭ ಪುರಸ್ಕಗಳನ್ನು ಬರೆಯಲಾಗಿದ್ದು ಮುದ್ರಣಗೊಂಡಿಲ್ಲ ಮೂರನೇ ಭಾಗವಾಗಿ ಕನ್ನಡಕ ಕಲಿಕೆಯ ಕಸ್ತೂರಿ ಎಂಬ ಪುಸ್ತಕವನ್ನು ಬರೆದು ಮುದ್ರಣಗೊಳಿಸಿ ಇಂಗ್ಲೀಷ್ ನಲ್ಲಿಏಗೆ ಕಾಗುಣಿತವಿಲ್ಲವೆ ಆದೇ ರೀತಿ ಕನ್ನಡದಲ್ಲಿ ಕಾಗುಣಿತ ಒತ್ತಕ್ಷರವಿಲ್ಲದೆ ಸುಲಭವಾಗಿ ಕನ್ನಡ ಬೋದನೆ, ಕಲಿಕೆಯ ಬಗ್ಗೆ ಪುಸ್ತಕ ಬರೆದು. ವಿದ್ಯೆ ವ್ಯರ್ಥವಾಗಬಾರದು ಎಂಬ ಉದ್ಧೇಶದಿಂದ ನಿವೃತ್ತಿ ಹೊಂದಿದರೂ ಸಹ ನಗರ ಹಾಗೂಗ್ರಾಮೀಣ ಭಾಗದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹೋಗಿ ಕನ್ನಡ ವ್ಯಾಕರಣವನ್ನು ಪಾಠಮಾಡಿ ಕನ್ನಡ ಕಲಿಕೆಯ ಕಸ್ತೂರಿ ಪುಕವನ್ನು ಮಕ್ಕಳಿಗೆ ಕಡಿಮೆಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಮಕ್ಕಳಿಗೆ ಜ್ಞಾನಾರ್ಜನೆಯನ್ನು ದಾರೆ ಎರೆಯುತ್ತಿದ್ದಾರೆ.
ಸಮಾಜಕ್ಕೆ ಏನಾದ್ರೂ ಮಾಡಬೇಕೆಂಬ ಹಂಬಲ…
ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕರಿಯಪ್ಪ ಮಾತನಾಡಿ ನಾಡಿಗಾಗಿ ಸಮಾಜಕ್ಕಾಗಿ ಸಾಕಷ್ಟು ಮಹನೀಯರು ದುಡಿದಿದ್ದಾರೆ, ಕೆಲವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂಥ ಮಹನಿಯರ ಮುಂದೆ ಈ ತನ್ನ ಕಾರ್ಯ ದೊಡ್ಡದಲ್ಲ. ಸಮಾಜಕ್ಕಾಗಿ ತಾನು ಏನನ್ನಾದರೂ ಮಾಡಬೇಕೆಂಬ ಛಲವಿತ್ತು. ಹೀಗಾಗಿ ನನ್ನ ವೃತ್ತಿಗೆ ನಿವೃತ್ತಿಯಾಗಿದೆ ಆದರೆ ಶಿಕ್ಷಣಕ್ಕಲ್ಲ ನಗರ ಹಾಗೂ ಕನ್ನಡ ವ್ಯಾಕರಣ ಸುಲಬವಾಗಿ ಕಲಿಯುವ ಹಾಗೂ ಬೋದನೆ ಮಾಡಲು ಸಹಕಾರಿಯಾಗುವಂತೆ ಬರೆದಿದ್ದೇನೆ,
ಸಹಾಯಕ ಶಿಕ್ಷಣಾಧಿಕಾರಿ ಕರಿಯಪ್ಪ ನಿವೃತ್ತಿ ಹೊಂದಿ ಸುಮಾರು 26 ವರ್ಷಗಳು ಕಳೆದರೂ ಸಹ ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ದಾರೆಹರೆಯಲು ಮುಂದಾಗಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರು ನಿವೃತ್ತಿ ಹೊಂದಿದ ಮೇಲೆ ಕುಟುಂಬದ ಜೊತೆಯಲ್ಲಿ ನೆಮ್ಮದಿಯಿಂದ ಜೀವ ನಡೆಸುವ ದಿನಮಾನಗಳಲ್ಲಿ ಇದಕ್ಕೆ ತದ್ವಿರುದ್ದವಾಗಿದ್ದಾರೆ ಇಳಿವಯಸದಸಿನಲ್ಲಿಯೂ ಸತತವಾಗಿ 2 ಗಂಟೆಗಳ ಕಾಲ ಮಕ್ಕಳಿಗೆ ಪಾಠ ಬೋದನೆ ಮಾಡುವ ಮೂಲಕ ತಮ್ಮಲ್ಲಿರುವ ಉತ್ಸಹ ಹಾಗೂ ಆಸಕ್ತಿ ಕಡಿಮೆಯಾಗಿಲ್ಲ ಇವರಿಗೆ ನಮ್ಮೊಂದು ಸಲಾಂ

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *