ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಭೂಮಾಫಿಯಾ,ಮನಿಲಾಂಡ್ರಿಂಗ್ ಗಳ ಹಸ್ತಕ್ಷೇಪದಿಂದ ರಾಜಕೀಯ ಮಲಿನವಾಗಿದೆ.ಮುಂದಿನದಿನಗಳಲ್ಲಿ ವಕೀಲರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಜೆಜೆಹಟ್ಟಿ ತಿಪ್ಪೇಸ್ವಾಮಿ.

by | 20/11/23 | ರಾಜಕೀಯ


ಚಳ್ಳಕೆರೆ ನ.,20 ಎಲ್ಲಿ ಕಾನೂನು ಇರುತ್ತದೆಯೋ ಅಲ್ಲಿ ಲೋಪದೋಶ ಇರುವುದಿಲ್ಲ, ಎಲ್ಲಿ ಲೋಪದೋಷವಿರುತ್ತದೆಯೋ ಅಲ್ಲಿ ವಕೀಲರಿರುತ್ತಾರೆ. ಎಂದು ಲೋಕಸಭಾ ಚುನಾವಣೆಯ ಪ್ರಭಲ ಅಕಾಂಕ್ಷಿ ಜೆಜೆಹಟ್ಟಿ ತಿಪ್ಪೇಸ್ವಾಮಿ ಹೇಳಿದರು.

ನಗರದ ವಕೀಲರ ಭವನದಲ್ಲಿ ವಕೀಲರನ್ನು ಭೇಟಿ ನೀಡಿ ಈ ಬಾರಿ ಸಂಸದರ ಆಯ್ಕೆಗೆ ನನಗೆ ಬೆಂಬಲಿಸುವಂತೆ ವಕೀಲರಲ್ಲಿ ಮನವಿ ಮಾಡಿಕೊಂಡರು. ದಶಕದ ಹಿಂದೆ ವಕೀಲರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದವು.ಭ್ರಷ್ಟಾಚಾರಗಳು ವಿರಳವಾಗಿತ್ತು ಆದರೇ ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಭೂಮಾಫಿಯಾ,ಮನಿಲಾಂಡ್ರಿಂಗ್ ಗಳ ಹಸ್ತಕ್ಷೇಪದಿಂದ ರಾಜಕೀಯ ಮಲಿನವಾಗಿದೆ.ಮುಂದಿನದಿನಗಳಲ್ಲಿ ವಕೀಲರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಸ್ಥಳೀಯನಾದ ನನಗೆ ಈಬಾರಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.ಮನೆ ಗೆದ್ದು ಮಂದಿ ಗೆಲ್ಲು ಎಂಬ ಗಾದೆಯಂತೆ ವಕೀಲನಾದ ನಾನು ನನ್ನ ಕುಟುಂಬದ ಮುಂದೆ ಮನವಿ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್. ಉಪಾಧ್ಯಕ್ಷರಾದ ಬಿ.ಪಾಲಯ್ಯ.ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿದ್ದರಾಜು, ಸಂಘದ ಸರ್ವ ಸದಸ್ಯ ವಕೀಲರು ಹಾಗೂ ಶ್ರೀ ಶ್ರೀ ಶ್ರೀ ವಾಲ್ಮೀಕಿ ಹರ್ಷಾನಂದ ಸ್ವಾಮಿಗಳು ,ಉಪ್ಪಾರಹಟ್ಟಿ ಆಶ್ರಮ , ಇತರರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *