ಇಂಪ್ಯಾಕ್ಟ್

ಮೂರೇ ತಿಂಗಳಿಗೆ ಕಿತ್ತು ಹೋದ ರಸ್ತೆ-ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ದುರಸ್ಥಿ ಭಾಗ್ಯ ಕಂಡ ರಸ್ತೆ….


ನಾಯಕನಹಟ್ಟಿ ಜೂ30 ಜನಧ್ವನಿ ವರದಿ ಎಫೆಕ್ಟ್ ದುರಸ್ಥಿ ಭಾಗ್ಯ ಕಂಡ ರಸ್ತೆ. . ಸುದ್ದಿ ಬೆಳಕು ಚೆಲ್ಲುವ ಮುನ್ನ
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀಗುರುತಿಪ್ಪೇರುದ್ರಸ್ವಾಮಿ ಒಳ ಮಠದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ45 ರ ರಸ್ತೆ ಸುಮಾರು 50 ಲಕ್ಷರೂ ವೆಚ್ಚದ ಸೇತುವೆ ಹಾಗೂ ರಸ್ತೆ ದುರಸ್ಥಿ ಕಾಮಗಾರಿ ಮೂರೆ ತಿಂಗಳಿಗೆ ಕಿತ್ತುಹೋದ ರಸ್ತೆ ಎಂಬ ತಲೆ ಬರಹದಡಿಯಲ್ಲಿ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ರಸ್ತೆ ದುರಸ್ಥಿ ಭಾಗ್ಯ ಕಂಡಿದೆ ಇದು ಜನಧ್ವನಿ ವರದಿ ಫಲಶೃತಿ

ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆಮೇಲೆ ಹರಿಯುತ್ತಿದ್ದ ನೀರು ಸ್ವಚ್ಚತೆಗೆ ಮುಂದಾದ ಅಧಿಕಾರಿಗಳು ಓಬಳಾಪುರ .


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.12. ಜನಧ್ವನಿ ಡಿಜಿಟಲ್ ಮೀಡಿಯ ವರದಿ ಫಲಶೃತಿ ಚರಂಡಿಯಲ್ಲಿ ಹರಿಯದ ನೀರು ರಸ್ತೆ ಮೇಲೆ ಸಾಂಕ್ರಮಿಕ ರೋಗ ಭೀತಿಯಲ್ಲಿ ಓಬಳಾಪುರ ಗ್ರಾಮಸ್ಥರು ಎಂಬ ತಲೆಬರಹಡಿಯಲ್ಲಿ ಮಂಗಳವಾರ ವರದಿ ಬಿತ್ತರಿಸಿದ ಬೆನ್ನಲ್ಲೇ ಬುಧವಾರ ಗ್ರಾಪಂ ಪಿಡಿಒ ಬೆಳ್ಳಂ ಬೆಳಗ್ಗೆ ರಸ್ತೆ ಹಾಗೂ ಚರಂಡಿ ಸ್ವಚ್ಚತೆ ಮಾಡಿಸಲು ಮುಂದಾಗಿದ್ದಾರೆ. ಸುದ್ದಿ ಪ್ರಕಟಿಸಿದಾಗ
ರಸ್ತೆಯಲ್ಲೇ ನಿಂತ ಚರಂಡಿ ನೀರು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಜನರು ಸಾಂಕ್ರಮಿಕ ರೋಗ ಬೀತಿಯಲ್ಲಿ ಗ್ರಾಮಸ್ಥರು. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ಕೇಂದ್ರ ಸ್ಥಳವಾದ ಈಶ್ವರದೇವಸ್ಥಾನ .ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ಮುಚ್ಚಿಹೋಗಿದ್ದು ಚರಂಡಿ ನೀರು ಹಾಗೂ ಮಳೆ ನೀರು ನಿಂದು ಸೊಳ್ಳೆ. ವಿಷಜಂತುಗಳ ಹಾವಳಿ ಗೊಬ್ಬು ವಾಸನೆಯಿಂದ ಸಾಂಕ್ರಮಿಕ ರೋಗಗಳಿಗೆ ಕೈಬೀಸಿ ಕರೆಯುವಂತಿದೆ. ಎಂದು ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಸ್ವಚ್ಚತೆ ಮುಂದಾಗಿದ್ದಾರೆ ಇದು ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್

ಸುದ್ದಿ ಪ್ರಕಟಿಸಿದಾಗ ಸ್ವಚ್ಚತೆ ಮಾಡುತ್ತಿರುವುದು

ಜನಧ್ವನಿ ವರದಿ ಎಫೆಕ್ಟ್ ಸರ್ವೆ ಇಲಾಖೆ ಕಚೇರಿ ಮಿನಿವಿಧಾನ ಸೌಧಕ್ಕೆ ಸ್ಥಳಾಂತರ.


ಚಳ್ಳಕೆರೆ ಜೂ.11 ಜನಧ್ವನಿ ವರದಿ ಫಲಶೃತಿ. ಸೋರುತಿಹುದು ಸರ್ವೇ ಇಲಾಖೆ ಕಟ್ಟಡ ..ಮಳೆ ನೀರು ಹೊರ ಹಾಕುತ್ತಿರುವ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಹೈಟೆಕ್ ಮಿನಿವಿಧಾನ ಸೌಧದ ಮೂರನೆ ಮಹಡಿಗೆ ಸರ್ವೆ ಇಲಾಖೆಯನ್ನು ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಸುಮಾರು ವರ್ಷಗಳಿಂದ ಶಿಥಿಲವಾದ ಕಟ್ಟಡದಲ್ಲಿ ಹಾಗೂ ಮಳೆ ಬಂದರೆ ಸೋರುತ್ತಿದ್ದು ಸಾರ್ವಜನಿಕರ ಆಸ್ತಿಯ ದಾಖಲೆಗಳಿಗಿಲ್ಲ‌ ರಕ್ಷಣೆ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬಿತ್ತರಿಸಲಾಗಿತ್ತು. ನೂತನ ತಾಲೂಕು ಕಚೇರಿಗೆ ಭೂಮಾಪನ ಇಲಾಖೆ ದಾಖಲೆ ಹಾಗೂ ಪೀಠೋಪಕರಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದು ಜನಧ್ವನಿ ವರದಿ ಎಫೆಕ್ಟ್

ಜನಧ್ವನಿ ನ್ಯೂಸ್ ಎಫೆಕ್ಟ್ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳು.


ಜನಧ್ವನಿ ನ್ಯೂಸ್ ವರದಿ ಫಲಶೃತಿ. ಚಳ್ಳಕೆರೆ ತಾಲೂಕಿನ ಮಿರಸಾಬಿಹಳ್ಳಿ ಗ್ರಾಪಂ ವ್ಯಾಪ್ತಿಯ ವಿಶ್ವೇಶ್ವರ ಪುರ ಗ್ರಾಮದ ಸ್ನಶಾನ ಭೂಮಿ ಒತ್ತುವರಿ ಮನುಷ್ಯ ಬದುಕಿದ್ದಾಗ ಸ್ವಂತ ಭೂಮಿ, ಮನೆ
ಇಲ್ಲದಿದ್ದರೂ ಸತ್ತಾಗಲಾದರೂ ಆರಡಿ ಮೂರಡಿ
ಜಾಗ ಬೇಕು. ಆದರೆ, ಇಲ್ಲಿ ಸ್ಮಶಾನವನ್ನು ಬಿಡದೆ
ಅಕ್ರಮವಾಗಿ ಮನೆ, ಸ್ಮಶಾನ ಭೂಮಿ ಉಳುಮೆ ಮಾಡಿಕೊಂಡು ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡು
ಅಂತ್ಯಸಂಸ್ಕಾರಕ್ಕೂ ಸ್ಥಳವಿಲ್ಲದಂತೆ ಮಾಡಿದ್ದಾರೆ ಎಂದು ವರದಿ ಬಿತ್ತರಿಸಿದ ಬೆನ್ನಲ್ಲೇ ಗುರುವಾರ ಕಂದಾಯ ನಿರೀಕ್ಷಕ ಲಿಂಗೇಗೌಡ. ಪಿಡಿಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ಜೆಸಿಬಿ ಯಂತ್ರದಿಂದ ಒತ್ತುವರಿ ತೆರವುಗೊಳಿಲು ಮುಂದಾಗಿದ್ದಾರೆ.

.
ತೆರವು ಕಾರ್ಯಕ್ಕೆ ಗ್ರಾಮಸ್ಥರು ಜನಧ್ವನಿ‌ ನ್ಯೂಸ್ ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ತಾಲೂಕು ಪಂಚಾಯತ್ ಕಚೇರಿ ಮುಂದೆ ಗುರುವಾರ ಕಳುವಾಗಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆ..


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 31 ತಾಲೂಕು ಪಂಚಾಯಿತಿ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಬಳ್ಳಾರಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳೆಕಿಗೆ ಬಂದಿದೆ.


ತಾಲೂಕು ಪಂಚಾಯತ್ ಕಚೇರಿಯ ಸಂಜೀವಿನಿ ಮಹಿಳಾ ಒಕ್ಕೂಟದ ತಾಲೂಕು ಸಂಯೋಜಕ ಬಾಲರಾಜು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಕಚೇರಿ ಮುಂದೆ ನಿಲ್ಲಿಸಿ ಕರ್ತವ್ಯ ಮಾಡಿ ಹೊರ ಬಂದಾಗ ಬೈಕ್ ಕಳವಾಗಿರುವ ಬಗ್ಗೆ ಆತಂಕಕ್ಕೆ ಸಿಲುಕುವಂತೆ ಮಾಡಿತ್ತು.
ಬೈಕ್ ಹಾಗೂ ಕಳ್ಳ ಸಮೇತ ಬಳ್ಳಾರಿಯಲ್ಲಿ ಸಿಕ್ಕಿದ್ದು ತಳಕು ಪೊಲೀಸ್ ಠಾಣೆಯಿಂದ ಬಾಲರಾಜ್ ಕರೆ ಮಾಡಿ ನಿಮ್ಮಬೈಕ್ ನಂಬರ್ ಹೇಳಿ , ಎಲ್ಲಿ ನಿಲ್ಲಿಸಿದ್ದಿರು ಎಂಬ ಮಾಹಿತಿಯನ್ನು ಪಡೆದು ತನಿಖೆ ಮುಗಿದ ನಂತರ ನಿಮಗೆ ಕರೆ ಮಾಡುತ್ತಾರೆ ಬಳ್ಳಾರಿಗೆ ಹೋಗಿ ನಿಮ್ಮ ಬೈಕ್ ಪಡೆದು ಕೊಂಡು ಬನ್ನಿ ಎಂದು ಮಾಹಿತಿ ನೀಡಿದಾಗ ನಿಟ್ಟುಸಿರು ಬಿಟ್ಟು ನನ್ನ ಬೈಕ್ ಸದಸ್ಯ ಪತ್ತೆಯಾಯಿತು ಎಂದು ನಗೆ ಬೀರಿದ್ದಾರೆ.
ಒಟ್ಟಾರೆ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ ಕಳೆದ ವಾರದಲ್ಲಿ ಪರಶುರಾಂಪುರ ಠಾಣೆವ್ಯಾಪ್ತಿಯಲ್ಲಿ ನಗರ ಸೇರಿದಂತೆ ವಿವಿಧೆ ಕಳುವಾಗಿದ್ದ ಸುಮಾರು 30 ಕ್ಕೂ ಹೆಚ್ಚು ಬೈಕ್ ಹಾಗೂ ಕಳ್ಳರನ್ನು ಬಂದಿಸಿರುವುದು ವರದಿಯಾಗಿದೆ.

ಜನಧ್ವನಿ ವರದಿ ಫಲಶೈತಿ ಕಸಮುದ್ರ ಗ್ರಾಮದ ಸ್ಮಶಾನ ಒತ್ತುವರೊ ತೆರವುಗೊಳಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ ಜನಧ್ವನಿ ವಾರ್ತೆ ಮೇ‌30 ಮೃತರ ಅಂತ್ಯಕ್ರಿಯೆಗೆ ಸ್ಮಶಾನ ವಿಲ್ಲದೆ ಪರದಾಡುವಂತಾಗಿದೆ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಯಿಂದ ಸ್ಪಂದನೆ.. ಹೌದು ಇದು ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಸುಮಾರು 800 ಮನೆಗಳಿದ್ದರೂ ಮೃತರ ಅಂತ್ಯಕ್ರಿಯೆಗೆ ಸ್ಮಾಶಾನವಿಲ್ಲದೆ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ ಆದರೆ ಜಮೀನು ಇಲ್ಲದವರು ಎಲ್ಲಿ ಅಂತ್ಯ ಕ್ರಿಯೆ ಮಾಡಬೇಕೆ ಎಂಬ ಪ್ರಶ್ನೆಯಾಗಿದೆ. ಇಂದು ಗ್ರಾಮದಲ್ಲಿ ವೃದ್ದೆಯೊಬ್ಬಳು ಮೃತಪಟ್ಟಿದ್ದು ಅಂತ್ಯ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ವೇದಾವತಿ ನಂದಿ ಸಂಡೆಯಲ್ಲಿ ಅಂತ್ಯಕ್ರಿಯೆ ಮಾಡಿದ ಪ್ರಸಂಗ ಜರುಗಿದೆ. ಎಂಬ ಸುದ್ದಿ ಬೆಳಕು ಚೆಲ್ಲಾಗಿತ್ತು

ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಕಾಮಸಮುದ್ರ ಗ್ರಾಮದ ರಿ.ಸಂ134 ರಲ್ಲಿ ಸ್ಮಶಾನಕ್ಕೆಂದು ಮೂರು ಎಕರೆ ಜಾಗ ಮೀಸಲಿರಿಸಲಾಗಿದೆ ನಾಳೆಯೇ ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೊಮ್ಮಸಮುದ್ರ ಕೆರೆಯಲ್ಲಿನ ಸುರಂಗ ಹಾಗೂ ಗುಂಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ.


ಜನಧ್ವನಿ ವರದಿ ಫಲಶೃತಿ
ಚಳ್ಳಕೆರೆ ಮೇ 15 ಜೀವದ ಹಂಗು ತೊರೆದು ಕೆರೆಯಲ್ಲಿ ಸುರಂಗ ಕೊರೆದು ಮರಳು ತುಂಬುತ್ತಿರುವ ದೃಶ್ಯ ನೋಡಿದರೆ ಜೀವ ಝಲ್ ಎನ್ನುವಂತಿದೆ ಎಂಬ ತಲೆಬರಹದಡಿಯಲ್ಲಿ ಜನಧ್ವನಿ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಯಲ್ಲಿನ ಸುರಂಗ ಹಾಗೂ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.


ಜನಧ್ವನಿ ನ್ಯೂಸ್ ವರದಿ ಬಿತ್ತಿರಿಸಿದಾಗ
ಹೌದು ಇದು ಚಳ್ಳಕೆರೆ ನಗರ ಸಮೀಪದ ಬೊಮ್ಮಸಂದ್ರ ಕೆರೆಯಲ್ಲಿ ನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಸುಮಾರು 10 ರಿಂದ 15 ಎತ್ತಿನಗಾಡಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದು. ಮೇಲಿನ ಕಪ್ಪು ಮಣ್ಣು ತೆಗೆದು ಸುಮಾರು 5 ರಿಂದ 8 ಅಡಿಯವರೆಗೆ ಸುರಂಗಕೊರೆದು ಮರಳು ತೆಗೆಯುತ್ತಾರೆ ಎಂದು ಸುದ್ದಿ ಬಿತ್ತಿರಿಸಿದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


ಜನಧ್ವನಿ ಸುದ್ದಿ ಬೆಳಕು ಚೆಲ್ಲಿದ ನಂತರ ಪೊಲೀಸ್ ಸಿಬ್ಬಂದಿಗಳು ಕೆರೆಯಲ್ಲಿನ ಗುಂಡಿ ಮರಳು ತುಂಬಲು ತೆಗೆದ ಸುರಂಗಗಳನ್ನು ಮುಚ್ಚುತ್ತಿರುವುದು ಹಾಗೂ ಕೆರೆಗೆ ಅಕ್ರಮ ಪ್ರವೇಶ ಮಾಡದಂತೆ ಜೆಸಿಬಿ ಯಂತ್ರದಿಂದ ಟ್ರಂಚ್ ತೆಗೆಯುತ್ತಿರುವುದು,
ಕೆರೆಯಲ್ಲಿ ಅಕ್ರಮ ಮಣ್ಣು ಹಾಗೂ ಮರಳು ಸಾಗಾಟದಿಂದ ಕೆರೆಯ ಚಿತ್ರಣವೇ ಬದಲಾಗಿದ್ದು ಕೆರೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಮರಳಿನ ಸುರಂಗಮಾರ್ಗ ಗಳನ್ನು ಜೆಸಿಬಿ ಯಂತ್ರದಿಂದ ಮುಚ್ಚಿದ್ದಾರೆ. ಕೆರೆಯಲ್ಲಿ ಅಕ್ರಮ ಪ್ರವೇಶ ಮಾಡದಂತೆ ಕೆರೆಗೆ ಪ್ರವೇಶ ಮಾಡುವ ದಾರಿಗೆ ಟ್ರಚ್ ಹೊಡೆಸಿದ್ದಾರೆ.ಮರಳು ತುಂಬುವ ಎತ್ತಿನ ಗಾಡಿಗಳಿಗೆ ಮತ್ತೆ ಇತ್ತ ಸುಳಿಯ ಬಾರದು ಎಂದು ಎಚ್ಚರಿಗೆ ನೀಡಿ ಕಳಿಸಿದ್ದಾರೆ.
ಜೀವ ರಕ್ಷಣೆಯಿಲ್ಲದೆ ಸುರಂಗ ಕೊರೆದು ಮರಳು ತುಂಬುವವರಿಗೆ ಪೊಲೀಸ್ ಅಧಿಕಾರಿಗಳು ಬುದ್ದಿ ಹೇಳಿದ್ದಾರೆ. ಜನಧ್ವನಿ ನ್ಯೂಸ್ ವರಿದಿಯ ಫಲಶೃತಿಯಾಗಿದೆ.

ಜನಧ್ವನಿ ಡಿಜಿಟಲ್ ಮೀಡಿಯ ವರದಿ ಎಫೆಕ್ಟ್- ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆ ಹಾಗೂ ಸರಕಾರಿ ಸೌಲಭ್ಯ ಕೊಡಿಸಲು ಮುಂದಾದ ಅಧಿಕಾರಿಗಳು.


ಶನಿವಾರ ಜನಧ್ವನಿ ಡಿಜಿಟಲ್ ಮೀಡಿಯ ಬೆಳಕು ಚೆಲ್ಲಿದ ಫೋಟೊ.
ಚಳ್ಳಕೆರೆ ಮೇ 14. ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಚಿಕಿತ್ಸೆಯ ನೆರವು ಬೇಕಾಗಿದೆ ಎಂಬ ತಲೆಬರಹದಡಿಯಲ್ಲಿ 2 ಶನಿವಾರ ಜನಧ್ವನಿ ಡಿಜಿಟಲ್ ಮೀಡಿ ಬೊಮ್ಮಸಮುದ್ರಗ್ರಾಮದ ಶಿಲ್ಪ ಕೋಂಮಾರುತಿ ಇವರ ಮಗು ಹುಟ್ಟಿನಿಂದ ನಿಶ್ಚಕ್ತಿಯಿಂದ ಬಳುತ್ತಿರುವ ಮಗುವಿಗೆ ಸುಮಾರು 3 ವರ್ಷಗಳುಕಳೆದರೂ ಚಿಕಿತ್ಸೆ ಹಾಗೂ ಸಕಾರಿ ಸೌಲಭ್ಯದಿಂದ ವಂಚಿತವಾಗಿರುವ ಬಗ್ಗೆ ಬೆಳಕು ಚೆಲ್ಲಿದ ಬೆನ್ನಲ್ಲೇ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಗುವಿಗೆ ಸಮಾಜಿಕ ಭದ್ತತಾ ಪಿಂಚಿಣಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿರುವ ಅಪೌಷ್ಠಾಕತೆ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.
ವಿಕಲ ಚೇತನಕಲ್ಯಾಣ ಇಲಾಖೆಯ ಕಾರ್ಯಕರ್ತೆ ಸಾಮಾಜಿಕ ಭದ್ರತಾ ಪಿಂಚಿಣಿ ಮಾಡಿಸಿರುವುದು.
ಮೂರು ವರ್ಷ ಕಳೆದರೂ ಪಿಂಚಿಣಿ ಹಾಗೂ ತೂಕ ಕಡಿಮೆ ಇರುವ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಾರದ ಅಂಗವನಾಡಿ ,ಆಶಾಕಾರ್ಯಕರ್ತೆಯರು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಸಕರಾರಿ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

ವೃದ್ದ ವಿಕಲ ಚೇತನ ಕೈ ಸೇರಿದ ಮ್ಯೂಟೇಷನ್ ಪತ್ರ . ಪತ್ರ-ವರದಿ ಫಲಶೃತಿ.

ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಫಲಶೃತಿ. ದ್ಚ. ವೃದ್ದ ವಿಕಲಚೇನನೊಬ್ಬ ಮ್ಯೂಟೇಷನ್ ಪತ್ರಕ್ಕಾಗಾಗಿ ಅಲೆದಾಡಿದರೂ ಸ್ಪಂಧಿಸದ ನಾಡಕಚೇರಿ ಸಿಬ್ಬಂದಿ ಎಂಬ ತಲೆಬರಹದಡಿ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಕೈಬರಹ ಮ್ಯೂಏಷನ್ ಪತ್ರ ನೀಡಿದ ನಾಡಕಚೇರಿ ಸಿಬ್ಬಂದಿ.

ಮಾ.22 ಮ್ಯೂಟೇಷನ್ ಪತ್ರಕ್ಕಾಗಿ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೌದು ಇದು ಚಳ್ಳಕೆರೆ ತಾಲೂಕಿನ ಯಲಗಟ್ಟಿ ಗ್ರಾಮದ ಸಮೀಲದ ಯಲಗಟ್ಟೆ ಗೊಲ್ಲರಹಟ್ಟಿಯ ಮಂಜಣ್ಣ ಎಂಬ ವೃದ್ದ ಕಣ್ಣು ವಿಕಲಚೇತನಾಗಿದ್ದು ಪರಶುರಾಂಪುರ ನಾಡ ಕಚೇರಿಗೆ ಹಳೆಯ ಮ್ಯೂಟೇಷನ್ ನೀಡುವಂತೆ ಅರ್ಜಿ ಸಲ್ಲಿಸಿದರೆ ಕಂಪ್ಯೂಟರ್ ಸೆಂಟರ್ ನಲ್ಲಿ ತೆಗೆಸಿ ಎಂದು ನಾಡ ಕಚೇರಿಯ ಸಿಬ್ಬಂದಿ ವೆಂಕಟೇಶ್ ಹೇಳಿತ್ತಾರೆ. ಕಂಪ್ಯೂಟರ್ ಸೆಂಟರ್ ಗೆ ಹೋದರೆ ಪರಶುಪಾಂಪುರ ನಾಡ ಕಚೇರಿಯಲ್ಲಿ ಸಿಗುತ್ತವೆ ಎನ್ನುತ್ತಾರೆ ಮಾರ್ಚ್ 1 ನೇ ತಾರಿಖಿನಿಂದ ಅಲೆದರೂ ಪರಶುರಾಂಪುರ ನಾಡ ಕಚೇರಿಯ ವೆಂಕಟೇಶ್ ಸ್ಪಂದಿಸುತ್ತಿಲ್ಲ ನನಗೆ ತುರ್ತು ಅವಶ್ಯಕತೆ ಇದ್ದು ಇಂದು ಚಳ್ಳಕೆರೆ ತಾಲೂಕು ಕಚೇರಿಯ ದಾಖಲೆ ಕೊಠಡಿತಲ್ಲಿ ಕೇಳಿದರೆ 2000 ಇಸವಿಯ ಹಳೆಯ ಮ್ಯೂಟೇಷನ್ ಪರಶುರಾಂಪುರ ನಾಡ ಕಚೇರಿಯಲ್ಲಿ ದೊರೆಯುತ್ತವೆ ಇತ್ತೀಚಿನ ಹೊಸ ಮ್ಯೂಟೇಷನ್ ಬೇಕಾದರೆ ಕಂಪ್ಯೂಟರ್ ನಲ್ಲಿ ದೊರೆಯುತ್ತವೆ ನೀವು ನಾಡ ಕಚೇರಿಯಲ್ಲೇ ಪಡೆಯ ಬೇಕು ಎನ್ನುತ್ತಾರೆ ಕಣ್ಣು ಕಾಣದ ಕುರುಡನಾಗಿದ್ದು ನಾನುತ್ತೊಬ್ಬರ ಆಸರೆಯಿಂದ ಸುಮಾರು 20 ದಿನಗಳಿಂದ ಪರಶುರಾಂಪುರ ನಾಡ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ನಾಡಕಚೇರಿ ವೆಂಕಟೇಶ್ ಉಢಾಪೆ ಉತ್ತರ ನೀಡುತ್ತಾರೆ ಎಂದು ಕಣ್ಣು ಕಾಣದ ವೃದ್ದ ಮಂಜಣ್ಣ ಶುಕ್ರವಾರ ತಾಲೂಕು ಕಚೇರಿ ಬಳಿ‌ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಅಳಲು ತೋಡಿಕೊಂಡಿದ್ದರು. ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ನಾಡಕಚೇರಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ಕೈ ಬರಹ ಮ್ಯೂಟೇಷನ್ ಪತ್ರಗಳನ್ನು ನೀಡಿ ಕಳಿಸಿದ್ದಾರೆ.

ಮಹಿಳಾ ಸದಸ್ಯೆ ಪತಿಯೊಬ್ಬ ವಸತಿ ಯೋಜನೆಯ ಬಿಲ್ ಲಂಚಕ್ಕೆ ಬೇಡಿಕೆ ಕುಟುಂಬಸ್ಥರ ಪ್ರತಿಭಟನೆ ಹಾಲಗೊಂಡನಹಳ್ಳಿ‌ಗ್ರಾಮಕ್ಕೆ ತಾಪಂ ಇಒ ಶಶಿಧರ್ ಭೇಟಿ ರಸ್ತೆ ಒತ್ತುವರಿ ಮಾಡಿಕೊಂಡ ಮೂರಡಿ ತೆರವುಗೊಳಿಸುವಂತೆ ಸೂಚನೆ.


ಚಳ್ಳಕೆರೆ ಜನಧ್ವನಿ ವಾರ್ತೆ ಡಿ.22. ಗ್ರಾಮಪಂಚಾಯಿ ವ್ಯಾಪ್ತಿಯ ಸಾರ್ವ ಜನಿಕ‌ ಆಸ್ತಿಗಳಾದ ರಸ್ತೆ.ಚರಂಡಿ ಒತ್ತುವರಿ ಮಾಡಿದರೆ ಕಾನೂನು ಕ್ರಮಕೈಕೊಳ್ಳುವುದಾಗಿ ತಾಪಂ ಇಒ ಶಶಿಧರ್ ಎಚ್ಚರಿಕೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ‌ ಗ್ರಾಪಂ ವ್ಯಾಪ್ತಿಯ ಹಾಲಿಗೊಂಡನಹಳ್ಳಿ‌ಗ್ರಾಮದ ಕುಟುಂಬವೊಂದು ವಸತಿಯೋಜನೆಯ ಬಿಲ್ ಮಾಡಲು ಗ್ರಾಪಂ ಮಹಿಳಾ ಸದಸ್ಯೆ ಪತಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತಿ ಇಒ ಶಶಿಧರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಸದಸ್ಯೆಯ ಪತಿ ಹನುಂತರಾಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಅಕ್ಕ‌ಪಕ್ಕದವರು ರಸ್ತೆಗೆ ಮೂರಡಿ ಜಾಗ ಒತ್ತುವರಿ ಮಾಡಿಕೊಂಡಿರುವುದರಿಂದ ತೆರವುಗೊಳಿಸಲು ಅರ್ಜಿ ನೀಡಿದ್ದಾರೆ. ಅದನ್ನು ವಿರೋಧಿಸಿ ಮಹಿಳಾ ಸದಸ್ಯೆಯ ಪತಿ ಮೇಲೆ ವಸತಿ ಯೋಜನೆಯ ಬಿಲ್ ಪಾವತಿಗೆ 30 ಸಾವಿರ ರೂ ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿ ಭಟನೆ ನಡೆಸಿದ್ದರು ಇಒ ಗ್ರಾಮಕ್ಕೆ ಭೇಟಿ ನೀಡಿದಾಗ ರಸ್ತೆ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದ್ದು ರಸ್ತೆ ಒತ್ತುವರಿ ಮೂರು ಅಡಿ ಜಾಗವನ್ನು ಬೆರಗುಗೊಳಿಸುವಂತೆ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಇಬ್ಬರೂ ಒತ್ತುವರಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರಸ್ತೆ ಒತ್ತುವರಿ ವಿವಾದ ಇಬ್ಬರ ನಡುವೆ ಬಹಳ ದಿನಗಳಿಂದ ಇದೆ ಎಂದು ಕರೆಯಲಾಗುತ್ತದೆ ತಿಳಿದು ಬಂದಿದೆ. ಈಗಲಾದರೂ ಗ್ರಾಮೀಣ ಭಾಗದಲ್ಲಿ ರಸ್ತೆ ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುವ ಮುನ್ನವೇ ಎಚ್ಚತ್ತು ನಿರ್ಮಿಸಕು ಗ್ರಾಪಂ ಆಡೀತ ಜನರಿಗೆ ಎಚ್ಚರಿಕೆ ನೀಡ ಬೇಕಿದೆ. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್. ಪಿಡಿಒ ವೇದವ್ಯಾಸಲು ಇತರರಿದ್ದರು.

You cannot copy content of this page