ಚಳ್ಳಕೆರೆ ಆ.6. ವಿದ್ಯಾರ್ಥಿಗಳಿಗೆ ರುಚಿ ಶುಚಿಯಾದ ಊಟ ಕೊಡುವ ಜತೆಗೆ ಅಡುಗೆ ಕೋಣೆ.ಶೌಚಾಲಯ ಹಾಗೂ ಆವರದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡುವಂತೆ ತಾಪಂ ಇಒಶಶಿಧರ್ ಕಿವಿಮಾತು ಹೇಳಿದರು. ತಾಲೂಕಿನ ಬಾಲೇನಹಳ್ಳಿಸಮೀಪವಿರುವ ಇಂದಿರಾಗಾಂಧಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಪೋಷಕರು ನಮ್ಮ ಮಕ್ಕಳವ್ಯಾಸಂಗ ಮಾಡಿ ಬುದ್ದಿವಂತರಾಗಿ ಉನ್ನತ ಹುದ್ದೆಗೆ ಹೋಗ ಬೇಕೆಂಬ ಕಸು ಕಂಡಿರುತ್ತಾರೆ . ನಿಮ್ಮ ಚಂಚಲ ಮನಸ್ಸು ಹಾಗೂ ಮೊಬೈಲ್ ಗೀಳಿನಿಂದ ಹೊರಬಂದು ಶ್ರದ್ದೆ ಪರಿಶ್ರಮದಿಂದ ಓದುವ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ತರುವ ಮೂಲಕಕೀರ್ತಿ ಗಳಿಸ ಬೇಕು .
ಓದುವ ಜತೆಗೆ ಶಿಸ್ತು..ದೇಶಭಕ್ತಿ.ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಬಾಲೇನಹಳ್ಳಿ ಯಿಂದ ವಸತಿ ಶಾಲೆ ಸೇರಿದಂತೆ ರಾಮಜೋಗಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗಳ ಬದಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಕಿರುವ ಸಸಿಗಳನ್ನು ಪರಿಶೀಲನೆ ನಡೆಸಿ ಸಸಿ ನೆಟ್ಟರೆ ಸಾಲದು ಅವುಗಳನ್ನು ಪಾಲನೆ ಪೋಷಣೆ ಮಾಡಿ ಅರಣ್ಯೀಕರ ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ್. ಸಮಾಜಿಕ ವಲಯ ಅರಣ್ಯಾಧಿಕಾರಿ ವಿತನ್. ಜೆಇ ರಾಜಣ್ಣ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ್ ಇದ್ದರು.
0 Comments