ಚಿತ್ರದುರ್ಗ ಆಗಸ್ಟ್.30:
ಆಹಾರ ಸುರಕ್ಷತೆ ಆಂದೋಲನದ ಅಂಗವಾಗಿ ಜಿಲ್ಲಾ ವ್ಯಾಪ್ತಿಯ 95 ಹೋಟೆಲ್, ಬೇಕರಿ, ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರಿಗಳ ತಪಾಸಣೆಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 30 ಹಾಗೂ 31 ಜರುಗಿದ ತಪಾಸಣೆಯಲ್ಲಿ 61 ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗಾಗಿ ಕಳುಹಿಸಲಾಗಿರುತ್ತದೆ. ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮ ಪಾಲಿಸದ 52 ವ್ಯಾಪಾರಿಗಳಿಗೆ ನೊಟೀಸು ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನ್ಯೂನತೆ ಸರಿಪಡಿಸಿಕೊಳ್ಳದಿದ್ದರೆ, ತಪ್ಪು ಮರುಕಳಿಸಿದರೆ ದಂಡ ಜೊತೆಗೆ ಶಿಕ್ಷೆಯನ್ನು ವಿಧಿಸಲಾಗುವುದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಅಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಕುರಿತು, ವೈಯಕ್ತಿಕ ಸ್ವಚ್ಛತೆ ಕುರಿತು ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸಿದ್ದಾರೆ.
ತಪಾಸಣೆ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ರಾಜಶೇಖರ ಪಾಳೇದವರ, ಆಹಾರ ಸುರಕ್ಷತಾ ಅಧಿಕಾರಿಗಳಾದ ನಂದಿನಿ ಕಡಿ, ತಿರುಮಲೇಶ್ ಎನ್.ಹೆಚ್ ಮಂಜುನಾಥ್ ಇದ್ದರು.
0 Comments