ಚಳ್ಳಕೆರೆ ಆ.6 ನೀವೇಶನಕ್ಕೆಂದು ಮೀಸಲಿಟ್ಟ ಭೂಮಿಯಲ್ಲಿ ನಿವೇಶನ ರಹಿತರಿತರಿಗೆ ವಂಚಿಸಿ ಪಟ್ಟಭದ್ರರು ಅಕ್ರಮಿಸಿಕೊಂಡಿರುವುದನ್ನು ವಿರೂಧಿಸಿ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಗಂಜಿಗುಂಟೆ ಗ್ರಾಮದ ದಲಿತ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಳೆದ ತಿಂಗಳಲ್ಲಿ ಗಂಜಿಗುಂಟೆ ಗ್ರಾಮದಲ್ಲಿ ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ ನಡೆಸಲಾಗಿತ್ತು ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಬುಧವಾರ ತಾಲ್ಲೂಕು ಕಛೇರಿ ಆವರದಲ್ಲಿ ಪ್ರತಿಭಟನೆ ಮಾಡಲಾಗುವುದು.
ಚಳ್ಳಕೆರೆ ತಾಲ್ಲೂಕು ಕಸಬಾ ಹೋಬಳಿಯ ಗಂಜಿಗುಂಟೆ ಗ್ರಾಮ,ಇಲ್ಲಿ ವಾಸಿಸುವ ಅದರಲ್ಲೂ ಗ್ರಾಮದ ಸ್ಥಳೀಕರಾದ ಬಹುತೇಕ ಮಾದಿಗ ಬಂಧುಗಳಿಗೆ ಸ್ವಂತ ನಿವೇಶನವಿಲ್ಲ, ಇದರ ಜೊತೆಗೆ ಅವಿಭಕ್ತ ಕುಟುಂಬಗಳು ಬೇರೆ 2016-17 ರಲ್ಲಿ ಅಂದಿನ ಸರ್ಕಾರ ಆಶ್ರಯ ಯೋಜನೆ ವಸತಿಗಾಗಿ ಸರ್ಕಾರಿ ಗೋಮಾಳ ಸರ್ವೆನಂ 105 ರಲ್ಲಿ ಸುಮಾರು ಐದು ಎಕರೆ ಜಾಗವನ್ನು ಮೀಸಲು ಇಟ್ಟಿರುವುದು ಸರಿಯಷ್ಟೆ. ಸಾರ್ವಜನಿಕರಿಗೆಂದು ಮೀಸಲಿಟ್ಟ ಆಶ್ರಯ ಜಾಗದಲ್ಲಿ ಸಮಾಜಿಕ-ಆರ್ಥಿಕ-ರಾಜಕೀಯವಾಗಿ ಬಲಾಢ್ಯವಾಗಿರುವ ಸವರ್ಣಿಯರು ಈ ಜಾಗದಲ್ಲಿ 1/2 ಎಕರೆ ಮತ್ತು 1 ಎಕರೆ ಬಣವೆಗಾಗಿ ಜಾಗವನ್ನು ಹಿಡಿದುಕೊಂಡು ಈಗ ಇದೇ ಜಾಗದಲ್ಲಿ ಆಕ್ರಮವಾಗಿ ಮನೆಹಳನ್ನು ಕಟ್ಟುತ್ತಿದ್ದಾರೆ,
ಇದರಿಂದ ಮಾದಿಗ ಬಂಧುಗಳು ನಿವೇಶನದಿಂದ ವಂಚಿತರಾಗಿದ್ದಾರೆ.
ಈ ವಿಷಯವಾಗಿ ಹಾಲಿ ಶಾಸಕರಾದ ಟಿ. ರಘುಮೂರ್ತಿಯವರಿಗೆ ಹಾಗೂ ಲೋಕಸಭಾ ಸದಸ್ಯರುಗಳಿಗೆ 10
ವರ್ಷಗಳಿಂದಲೂ ಮನವಿ ಮತ್ತು ಸದರಿ ವಿಚಾರವನ್ನು ಗಮನಕ್ಕೆ ತರಲಾಗಿದೆ, ಆದರೂ ಯಾವುದೇ ಪ್ರಯೋಜನವಾಗಿಲ್ಲ
ಅಲ್ಲದೇ ಸಂಬಂಧಿಸಿದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಗಮನೆ ಸೆಳೆದರೂ ಪ್ರಯೋಜನವಾಗಿಲ್ಲ ಹಾಗಾಗಿ ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಗಂಜಿಗುಂಟೆ ಗ್ರಾಮದ ದಲಿತ ಮುಖಂಡರು ತಿಳಿಸಿದ್ದಾರೆ.
ಜಿಪಂ ಸಿಇಒ ಸೋಮಶೇಖರ್ ಭೇಟಿ ನರೇಗಾ ಕಾಮಗಾರಿಪರಿಶೀಲನೆ.
ಚಳ್ಳಕೆರೆ ಸೆ.11. ಹೆಚ್ಚು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಗ್ರಾಮೀ ಣ ಭಾಗದ ಕೂಲಿಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ...
0 Comments