ಆರ್ಥಿಕ

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನ*

ಚಿತ್ರದುರ್ಗ.ನ.22:

2023-24ನೇ ಸಾಲಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಪರಿಶಿಷ್ಟ ಪಂಗಡದ ಯುವಕ ಯುವತಿಯರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಉದ್ದಿಮೆ ಸ್ಥಾಪಿಸಲು ಗರಿಷ್ಠ 5 ಲಕ್ಷ ಸಹಾಯಧನವನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ನೀಡಲಾಗುವುದು.

ಯೂಟ್ಯೂಬ್ ಚಾನೆಲ್, ಸೋಶಿಯಲ್ ಮೀಡಿಯಾ ನ್ಯೂಸ್ ಪೇಜಸ್, ನ್ಯೂಸ್ ಆನ್ ಲೈನ್ ಬ್ಲಾಗ್, ನ್ಯೂಸ್ ಕಂಟೆಂಟ್ ಕ್ರಿಯೇಷನ್, ವೆಬ್ ಪೇಜಸ್, ಆನ್ ಲೈನ್ ಜರ್ನಲಿಸಂ, ಮೀಡಿಯಾ ರಿಲೇಟೆಡ್ ಟ್ರೈನಿಂಗ್ ಸಂಸ್ಥೆಗಳನ್ನು ಸಹಾಯಧನ ಪಡೆದು ಸ್ಥಾಪಿಸಬಹುದಾಗಿದೆ. ಘಟಕ ವೆಚ್ಚದ ಶೇಕಡ 70 ರಷ್ಟು ಅಥವಾ ಗರಿಷ್ಠ 5 ಲಕ್ಷ ಸಹಾಯಧನವನ್ನು ನಿಗಮದಿಂದ ನೀಡಲಾಗುವುದು.

15 ವರ್ಷಗಳಿಂದ ಕರ್ನಾಟಕದಲ್ಲಿ ನೆಲಸಿರುವ, ಕುಟುಂಬದ ವಾರ್ಷಿಕ ಆದಾಯ ರೂ.1.50 ಲಕ್ಷ ಹೊಂದಿರುವ ಗ್ರಾಮೀಣ ಪ್ರದೇಶ ಹಾಗೂ ರೂ.2 ಲಕ್ಷ ಹೊಂದಿರುವ ನಗರ ಪ್ರದೇಶದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ವಯೋಮಿತಿ 21 ರಿಂದ 50 ವರ್ಷಗಳ ಒಳಗಿರಬೇಕು. ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು. ಸಫಾಯಿ ಕರ್ಮಚಾರಿ, ಅಲೆಮಾರಿ, ಅರೆ-ಅಲೆಮಾರಿ ಜನಾಂಗದವರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಹಾಗೂ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಆರ್ಥಿಕ ಸೌಲಭ್ಯ ಪಡೆದಿರಬಾರದು. ಅಭ್ಯರ್ಥಿ ಕಡ್ಡಾಯವಾಗಿ UAM(ಉದ್ಯೋಗ ಆಧಾರ್ ಮೆಮೊರಂಡಮ್) ನಲ್ಲಿ ನೊಂದಾಯಿತವಾಗಿರಬೇಕು.

ಆಸಕ್ತರು ಯೋಜನಾ ವರದಿಯೊಂದಿಗೆ ಬ್ಯಾಂಕ್ ಮೂಲಕ ನಿಗಮಕ್ಕೆ ಅರ್ಜಿಸಲ್ಲಿಸಬೇಕು. ಬ್ಯಾಂಕ್‌ನಿಂದ ಘಟಕ ಸ್ಥಾಪನೆ ಹಣ ಸಹಾಯ ನೀಡಿ, ಸಹಾಯಧನ ಒದಗಿಸಲು ಬೇಡಿಕೆ ಬಂದ ಕೂಡಲೇ ಸಹಾಯಧನ ಮಂಜೂರು ಮಾಡಲಾಗುವುದು. ಗರಿಷ್ಠಕ್ಕಿಂತ ಹೆಚ್ಚಿನ ಮೊತ್ತವು ಬ್ಯಾಂಕ್‌ನಲ್ಲಿ ಸಾಲವಾಗಿರುತ್ತದೆ.

ಪಲಾಪೇಕ್ಷಿಯು ನಿಗಮದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ನಿಯಮಾನುಸಾರ ಆಯ್ಕೆಯಾಗಿ ಸಾಲ ಪಡೆಯಲು ಅರ್ಹರಾಗಿರಬೇಕು. ಸಹಾಯಧನ ಪಡೆದವರು ಕಡ್ಡಾಯವಾಗಿ ತಮ್ಮ ಮಾಧ್ಯಮ ಸಂಸ್ಥೆಯಲ್ಲಿ ಒಬ್ಬ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವಕರಿಗೆ ಉದ್ಯೋಗ ನೀಡತಕ್ಕದ್ದು. ಮಾಧ್ಯಮ ಘಟಕ ಸ್ಥಾಪಿಸಿದ ಕುರಿತು ಸ್ಥಳ ಪರಿಶೀಲನೆ ಮಾಡಿ ಜಿಪಿಎಸ್ ಫೋಟೋದೊಂದಿಗೆ ವರದಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗುವುದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚರ್ಮಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ನ.20:
ಡಾ. ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳಿಗೆ ಕಡ್ಡಾಯವಾಗಿ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಚರ್ಮಕುಶಲಕರ್ಮಿಗಳಿಗೆ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 19 ಅರ್ಜಿ ಸಲ್ಲಿಸಲು ಕೊನೆ ದಿನ.
ನಿಗಮದ ಯೋಜನೆಗಳಾದ ತರಬೇತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಡಾ.ಬಾಬು ಜಗಜೀವನ ರಾಂ ವಸತಿ ಕಾರ್ಯಾಗಾರ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ .
ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in ಮೂಲಕ ಗ್ರಾಮಒನ್ ಅಥವಾ ಕರ್ನಾಟಕ ಒನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಲಿಡ್ಕರ್ ಜಿಲ್ಲಾ ಸಂಯೋಜಕರ ದೂರವಾಣಿ ಸಂಖ್ಯೆ 9480886266 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ದುಡಿಯುವ ಕೈಗಳಿಗೆ ನರೇಗಾ ಕೆಲಸ ನೀಡಲು ಅಧಿಕಾರಿಗಳು ಮುಂದಾಗುವಂತೆ ತಾಪಂ ಇಒ ಶಶಿಧರ್.

ಚಳ್ಳಕೆರೆ ನ.18 ಬರಗಾಲವಿರುದರಿಂದ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಮೂಲಕ ವಾರದೊಗಳಗೆ ನರೇಗಾ ಪ್ರಗತಿ ಸಾಧಿಸುವಂತೆ ತಾಂತ್ರಿಕ ಸಹಾಯಕರಿಗೆ ತಾಪಂ ಇಒ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನರೇಗಾ ಇಂಜಿನಿಯರ್, ಬಿಎಫ್ ಟಿ ಗಳಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು,
ತಾಲೂಕನ್ನು ಬರಗಾಲ ಎಂದು ಸರಕಾರ ಘೋಷಣೆ ಮಾಡಿರುವುದರಿಂದ 100 ರಿಂದ 150 ಮಾನವ ದಿನಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದು ಕನಿಷ್ಟ ಒಂದು ಪಂಚಾಯಿತಿಗೆ 500 ಮಾನವ ದಿನಗಳನ್ನು ಸೃಷ್ಠಿಯಾಗುವಂತೆ ಕೆರೆ, ಕಾಲುವೆ, ಗೋಕಟ್ಟೆ ಹೂಳೆತ್ತುವ ಕಾಮಗಾರಿ ರೈತರ ಬದು ನಿರ್ಮಾಣ, ತೋಟಗಾರಿಕೆ, ಅರಣ್ಯಸಸಿಗಳ ಬೆಳೆಸಲು ಕೂಲಿ ಕಾರ್ಮಿಕರು ಹೆಚ್ಚು ಭಾಗವಹಿಸಂತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು,
ನರೇಗಾ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ ನಿಶೇಷದವಿದ್ದು ದುಡಿಯುವ ಕೈಗಳಿಗೆ ಕೆಲಸ ನೀಡ ಬೇಕು, ನರೇಗಾ ಕಾಮಗಾರಿಗಳಲ್ಲಿ ಹೆಚ್ಚು ಮಹಿಳಾ ಕೂಲಿಕಾರ್ಮಿಕರು ಭಾಗವಸುವಂತೆ ನೋಡಿಕೊಳ್ಳಬೇಕು ಕಾಮಗಾರಿಗಳ ಗುಣ ಮಟ್ಟ ನೋಡಿಕೊಳ್ಳ ಬೇಕು ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡುವಂತಿಲ್ಲ, ಕಾಮಗಾರಿ ಸ್ಥಳ ಪರಿಶೀಲನೆ ಮಾಡದೆ ಎಂ.ಬಿ ದಾಖಲಿಸುವಂತಿಲ್ಲ ನರೇಗಾ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದೆ ಕಟ್ಟು ನಿಟ್ಟಾಗಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡ ಬೇಕು ಎಂದು ತಿಳಿಸಿದರು.
ತಾಪಂ ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿದರು.
ಈ ಸಂದರ್ಭದಲ್ಲಿ ನರೇಗಾ ತಾಂತ್ರಿಕ ಸಹಾಯಕರು, ಬಿ ಎಫ್ ಟಿ ಹಾಗೂ ಜಿ ಕೆ ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾಯಕನಹಟ್ಟಿ : ಪರಿಶಿಷ್ಟರು, ವಿಶೇಷ ಚೇತನರಿಗೆ ವಿವಿಧ ಯೋಜನೆ

ನಾಯಕನಹಟ್ಟಿ ನ.09:
ನಾಯಕನಹಟ್ಟಿ ಪಟ್ಟಣ ಪಂಚಾಯತಿ ವತಿಯಿಂದ 2023-24ನೇ ಸಾಲಿನ ಎಸ್‍ಎಫ್‍ಸಿ ಮುಕ್ತನಿಧಿ ಅನುದಾನದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಶೇಷಚೇತನರಿಗೆ ವಿವಿಧ ಸೌಲಭ್ಯ ಮಂಜೂರಾತಿ ಹಾಗೂ ವಿಶೇಷ ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಸ್‍ಎಫ್‍ಸಿ ಮುಕ್ತನಿಧಿ ಅನುದಾನದಡಿ ಶೇ. 24.10 ರ ಅನುದಾನದಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್‍ಎಸ್‍ಎಲ್‍ಸಿ, ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇರೆಗೆ ವಿಶೇಷ ನೆರವು ನೀಡಲಾಗುವುದು.
ಎಸ್‍ಎಫ್‍ಸಿ ಅನುದಾನದಡಿ ಶೇ. 5 ರ ಯೋಜನೆಯಡಿ ಬ್ಯಾಂಕ್‍ಗಳ ಸಾಲದ ನೆರೆವಿನಿಂದ ಸಣ್ಣ ಉದ್ದಿಮೆಯನ್ನು ಆರಂಭಿಸಲಿಚ್ಚಿಸುವ ವಿಶೇಷಚೇತನ ಸಣ್ಣ ಉದ್ದಿಮೆದಾರರಿಗೆ ಬ್ಯಾಂಕ್ ನಿಂದ ಸಾಲ ಮಂಜೂರು ಮಾಡಿದ ನಂತರ ಬ್ಯಾಂಕ್ ಅಂಡ್ ಸಬ್ಸಿಡಿ ರೂಪದಲ್ಲಿ ಸಾಲ ನೀಡಿದ ಬ್ಯಾಂಕ್‍ಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಅರ್ಹ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯ ಪಡೆಯಬಹುದು ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವ ಸಂತೋಷ್ ಲಾಡ್ ರವರಿಗೆ ಮನವಿಪತ್ರ ಸಲ್ಲಿಕೆ


ಹಿರಿಯೂರು :
ರಾಜ್ಯದಲ್ಲಿ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವವರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ 2023-24ನೇ ಸಾಲಿನ ವಿದ್ಯಾರ್ಥಿ ವೇತನವನ್ನು ಅತ್ಯಂತ ತುರ್ತಾಗಿ ಬಿಡುಗಡೆ ಮಾಡಬೇಕು ಎಂಬುದಾಗಿ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಿ. ದಾದಾಪೀರ್ ಹೇಳಿದರು.
ಚಿತ್ರದುರ್ಗ ತೆರಳುವ ಮಾರ್ಗಮಧ್ಯ ಹಿರಿಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕಾರ್ಮಿಕ ಸಚಿವರಾದ ಸನ್ಮಾನ್ಯ ಸಂತೋಷ್ ಲಾಡ್ ರವರನ್ನು ಭೇಟಿಯಾಗಿ. ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವ ಮಕ್ಕಳಿಗೆ 2023-24ನೇ ಸಾಲಿನ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವ ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ರಾಜ್ಯದಲ್ಲಿ ಲಕ್ಷಾಂತರ ಬಡಜನರು ಕಟ್ಟಡ ಕಾರ್ಮಿಕರಾಗಿ ಪ್ರತಿನಿತ್ಯ ಅತ್ಯಂತ ಕಷ್ಟದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದು, ಸರ್ಕಾರದ ವಿಳಂಬ ನೀತಿಯಿಂದ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಉಂಟಾಗಿದೆ, ಇಂತಹ ಬಡ ಕಾರ್ಮಿಕರ ಮಕ್ಕಳಿಗೆ ಕೂಡಲೇ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರ ಭವಿಷ್ಯಕ್ಕೆ ತಾವು ದಾರಿದೀಪವಾಗಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಬಡ ಕಟ್ಟಡ ಕಾರ್ಮಿಕರು ಬಹಳ ಬಡತನದಿಂದ ಜೀವನ ನಡೆಸುತ್ತಿರುವುದರಿಂದ ಇವರುಗಳಿಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಲು ಆರ್ಥಿಕ ತೊಂದರೆಯಾಗುತ್ತಿದ್ದು, ಸರ್ಕಾರ ಮಹಿಳೆಯರಿಗೆ ಶಕ್ತಿಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ನೀಡಿದಂತೆ ಇವರುಗಳಿಗೂ ಕಟ್ಟಡ ಕಾರ್ಮಿಕರ ಕಷ್ಟಗಳನ್ನು ಕರುಣೆಯಿಂದ ಪರಿಗಣಿಸಿ ಕೂಡಲೇ ಉಚಿತ ಬಸ್ ಪಾಸ್ ಗಳನ್ನು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಕಾಂಗ್ರೆಸ್ ಮಾಜಿಪ್ರಧಾನಕಾರ್ಯದರ್ಶಿ ಜಿ.ದಾದಾಪೀರ್, ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಸೈಫುಲ್ಲಾ, ಕಾರ್ಮಿಕ ಘಟಕದ ತಾಲ್ಲೂಕು ಉಪಾಧ್ಯಕ್ಷರಾದ ಮಾರುತಿರಾವ್, ಜಾದವ್. ಮೊಹಮ್ಮದ್ ಶಬ್ಬೀರ್. ಇರ್ಫಾನ್ ಉಲ್ಲಾ. ಬಾಬಾ ಫಕ್ರುದ್ದೀನ್. ಇನ್ನು ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವಿವಿಧ ಸೌಲಭ್ಯಕ್ಕಾಗಿ ವಿಕಲಚೇತನರಿಂದ ಅರ್ಜಿ


ಚಿತ್ರದುರ್ಗ ನ.02:
2023-24ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರಿಗಾಗಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.
ಶುಲ್ಕ ಮರುಪಾವತಿ, ವಿವಾಹ ಪ್ರೋತ್ಸಾಹಧನ, ನಿರಾಮಯ, ಸ್ಪರ್ಧಾ ಚೇತನ ಈ ಯೋಜನೆಗಳಡಿ ಪ್ರಯೋಜನವನ್ನು ಪಡೆಯಲು ವಿಕಲಚೇತನರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಧಾರ ಕಾರ್ಡ್ ಲಿಂಕ್ ಮಾಡಿಸಿರುವ ಉಳಿತಾಯ ಖಾತೆ ಪುಸ್ತಕದ ಪ್ರತಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ, ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ (ಯು.ಡಿ.ಐ.ಡಿ), ಇತ್ತೀಚಿನ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್& ಮತದಾರರ ಗುರುತಿನ ಚೀಟಿ, ನಿವಾಸಿ ದೃಢೀಕರಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-12-2023 ಆಗಿರುತ್ತದೆ. ಈ ಯೋಜನೆಗಳ ಅರ್ಜಿ ನಮೂನೆಗಳನ್ನು www.dwdsc.kar.nic.in ವೆಬ್‍ಸೈಟ್‍ನಿಂದ ನೇರವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು ಅಥವಾ ತಾಲ್ಲೂಕು ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರಿಂದ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರ ಪುನರ್ವಸತಿ ಕಾರ್ಯಕರ್ತರುಗಳನ್ನು ಸಂಪರ್ಕಿಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಛೇರಿ, ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ, ದೂ: 08194-235284ನ್ನು ಸಂಪರ್ಕಿಸಬಹುದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

ಬೈಕ್ ಅಪಘಾತದಲ್ಲಿ ಮರಣಹೊಂದಿದ ನಿಂಗಮ್ಮನವರ ಕುಟುಂಬಸ್ಥರಿಗೆ ಸಚಿವ ಸುಧಾಕರ್ ರಿಂದ ಧನಸಹಾಯ


ಹಿರಿಯೂರು :
ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ನಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ಬೈಕ್ ಅಪಘಾತದಲ್ಲಿ ಮರಣ ಹೊಂದಿದ ತಾಲ್ಲೂಕಿನ ಗೂಳ್ಯ ಗ್ರಾಮದ ನಿವಾಸಿ ನಿಂಗಮ್ಮ ಹಾಗೂ ಪ್ರಜ್ವಲ್ ಎಂಬುವವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಅವರಿಗೆ 1 ಲಕ್ಷ ರೂಗಳ ವೈಯಕ್ತಿಕ ಧನಸಹಾಯ ಮಾಡಿ ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಮೃತ ನಿಂಗಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಂಜಾರ ಮಹಿಳೆಯರಿಗೆ ಸಾಂಪ್ರದಾಯಿಕ ಕಸೂತಿ, ಪೂರಕ ಹೊಲಿಗೆ ತರಬೇತಿ: ಅರ್ಜಿ ಆಹ್ವಾನ


ಚಿತ್ರದುರ್ಗ ಅ.30:
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ದಾವಣಗೆರೆ ವಲಯ (ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆ) ಕಚೇರಿ ವತಿಯಿಂದ ಬಂಜಾರ ಸಾಂಪ್ರದಾಯಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿಯನ್ನು ಕೈಗೊಳ್ಳಲು ನುರಿತ, ಅರ್ಹ ನೋಂದಾಯಿತ ಸಂಘ, ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿರುತ್ತದೆ. ತರಬೇತಿ ನೀಡಬೇಕಾದ ಅರ್ಹ ತರಬೇತಿ ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತವುಳ್ಳ ಅರ್ಹ ನೋಂದಾಯಿತ ಸಂಘ, ಸಂಸ್ತೆಗಳು ದಾವಣಗೆರೆ ವಲಯ ಕಚೇರಿಗೆ ಭೇಟಿ ನೀಡಿ ನಿಗಮ ನಿಗಧಿಪಡಿಸಿರುವ ನಿಯಮಾನುಸಾರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ನವೆಂಬರ್ 4ರ ಒಳಗಾಗಿ ವಲಯ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ದಾವಣಗೆರೆ ವಲಯ ಕಚೇರಿ ದೂರವಾಣಿ ಸಂಖ್ಯೆ 08192-233678 ಗೆ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ವಲಯ ಕಚೇರಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಚಳ್ಳಕೆರೆ ತೋಟಗಾರಿಖೆ ಇಲಾಖೆಯಲ್ಲಿ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ.

ಚಳ್ಳಕೆರೆ ಅ25 ತೋಟಗಾರಿಕೆ ಬೆಳೆಗಾರರಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ತಿಳಿಸಿದ್ದಾರೆ.


ಪ್ರಸಕ್ತ ಸಾಲಿನಲ್ಲಿ ಹನಿನೀರಾವರಿ ಪದ್ದತಿಯನ್ನು ರೈತರ ಅಳವಡಿಸಿಕೊಳ್ಳಲು ತಾಲ್ಲೂಕಿನ ಎಸ್ ಸಿ.ಎಸ್ ಟಿ ರೈತರಿಗೆ ಶೇ 90 ರಷ್ಟು ಸಹಾಯಧನ, ಸಾಮಾನ್ಯ ವರ್ಗಕ್ಕೆ ಶೇ 70ರಷ್ಟು ಸಹಾಯಧನ ನೀಡಲಾಗುವುದು, ಎಸ್‌ಸಿ ಜನಾಂಗದ ರೈತರಿಗೆ 20 ಲಕ್ಷ , ಸಾಮಾನ್ಯ ವರ್ಗ ರೈತರಿಗೆ ೪೦೦ ಲಕ್ಷ ಗುರಿ ನೀಡಲಾಗಿದೆ. ಎಸ್‌ಟಿ ರೈತರಿಗೆ ಹನಿನೀರಾವರಿರಿ ಪದ್ದತಿ ಅಳವಡಿಕೊಳ್ಳಲು ಅನುದಾನ ಬಿಡುಗಡೆಯಾಗಿಲ್ಲ, ಇವರು ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಸ್ವಷ್ಟನೆ ನೀಡಿದ್ದಾರೆ.
ಎಸ್‌ಸಿ, ಸಾಮಾನ್ಯ ವರ್ಗ ರೈತರು ಹನಿನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ಪಹಣಿ, ಆಧಾರ್ ಕಾರ್ಡ್, ಪಾಸ್ ಬುಕ್, ಜಾತಿ ಪ್ರಮಾಣ ಪತ್ರದೊಂದಿಗೆ ತೋಟಗಾರಿಕೆ ಇಲಾಖೆ ಅರ್ಜಿ ಸಲ್ಲಿಸಿ, ರೈತರು ಅನುಮೋದಿತ ಕಂಪನಿಯಿAದ ಹನಿನೀರಾವರಿ ಪದ್ದತಿ ಅಳವಡಿಕೊಂಡು ಸಹಾಯಧನ ಪಡೆಬಹುದುಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ತೋಟಗಾರಿಕೆ ಬೆಳೆ ಬೆಳೆಯು ರೈತರಲ್ಲಿ ಮನವಿ ಮಾಡಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ. 3.75ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ


ಬೆಂಗಳೂರು ಅ.21 ರಾಜ್ಯ ಸರ್ಕಾರ ಡಿಎ ಹೆಚ್ಚಳ ಮಾಡಿ ಆದೇಶಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಡಿಎ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿ ದಸರಾ ಗಿಫ್ಟ್​ ಕೊಟ್ಟಿದೆ.ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ. 3.75ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.38.75ಗೆ ಏರಿಕೆಯಾಗಿದೆ. UGC/ AICTE/ ICAR ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ NJPC ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಿ (ಶೇ.46 ಕ್ಕೆ ಪರಿಷ್ಕರಿಸಿ) ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 4 ಶೇ. ದಷ್ಟು ಹೆಚ್ಚಿಸಿ ಸಿಹಿ ಸುದ್ದಿ ನೀಡಿತ್ತು. ಅ. 18ರಂದು ಕೇಂದ್ರ ಸರ್ಕಾರ ಈ ಘೋಷಣೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ತನ್ನ ನೌಕರರ ಡಿಎಯನ್ನು 3.75 ಶೇ. ಹೆಚ್ಚಿಸಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರ ಡಿಎ ಹೆಚ್ಚಿಸಿದ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.

ಇದೀಗ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ಹಬ್ಬದ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ(ಡಿಎ)ಯನ್ನು ಶೇ.3.75ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.