ಆಧುನಿಕ ಕುಂಚಿಟಿಗರ ಪಿತಾಮಹ ಶ್ರೀ ಬನುಮಯ್ಯ ಹಾದಿಯಲ್ಲಿ ಸಾಗೋಣ… ಡಾ. ನರಸೇಗೌಡ. ಮಧುಗಿರಿ.

by | 08/07/24 | ಸುದ್ದಿ


ದಿನಾಂಕ 07.07.24ರಂದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕು ಕುರುಬರಹಳ್ಳಿ ಗ್ರಾಮದ ಮೈಸೂರು ಶಿವಣ್ಣ ತೋಟದ ಮನೆಯಲ್ಲಿ ಶ್ರೀ ಬನುಮಯ್ಯ ನವರ 164ನೇ ಜನ್ಮ ಜಯಂತಿ ಅಂಗವಾಗಿ ಫೋಟೋಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ನರಸೇಗೌಡ ಮಧುಗಿರಿ ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಆಸ್ತಿ ಅಂತಸ್ತು ಗಳಿಸಿ ಅದನ್ನು ಸಮಾಜಕ್ಕೆ ಉದಾರವಾಗಿ ಕಾಣಿಕೆ ಕೊಟ್ಟವರಲ್ಲಿ ಕುಂಚಿಟಿಗ ಸಮಾಜದ ಶ್ರೀಯುತ ಬನ್ಮಯ್ಯನವರನ್ನು ಮೈಸೂರು ಅರಸರು ಧರ್ಮಪ್ರಕಾಶ್ ರಾವ್ ಬಹದ್ದೂರ್ ಎಂಬ ಬಿರುದುಗಳೊಂದಿಗೆ ಗೌರವಿಸಿದರು ಸ್ವಾತಂತ್ರದ ಹೋರಾಟದ ಕೊಡುಗೆಗಳಿಗಾಗಿ ಗಾಂಧೀಜಿಯವರು ಬನ್ಮಯನವರನ್ನು ಅತ್ಯಂತ ಪ್ರೀತಿಯಿಂದ ಶ್ಲಾಘಿಸಿದರು. ಅವರು ಸಮಾಜದ ಎಲ್ಲ ವರ್ಗದ ಜನರಿಗೆ ಎಲ್ಲ ಜಾತಿಯ ಜನರಿಗೆ ಅದರಲ್ಲೂ ವಿಶೇಷವಾಗಿ ಪ್ರಾಣಿ ಪಕ್ಷಿಗಳಿಗೂ ಕೊಡುಗೆಗಳನ್ನು ಕೊಟ್ಟರು ಅಂತವರು ನಮಗೆ ಆದರ್ಶವಾಗಬೇಕು ಎಂದು ಹೇಳಿದರು. ಪ್ರಾಚಾರ್ಯ ವಸಂತ್ ಅವರು ಮಾತನಾಡಿ ಕುಂಚಿಟಿಗ ಮಕ್ಕಳು ಹೆಚ್ಚೆಚ್ಚು ಶ್ರಮವಹಿಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಸಂತೋಷದ ವಿಚಾರ, ಇದರ ಜೊತೆಗೆ ಸಮಾಜದ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ಕರೆಕೊಟ್ಟರು. ಕುಂಚಿಟಿಗ ಇತಿಹಾಸಕಾರ ಕ್ಯಾದಿಗುಂಟೆ ಜಯರಾಮಯ್ಯ ಮಾತನಾಡಿ ಕುಂಚಿಟಿಗರಿಗೆ ಸಾವಿರದ ಇನ್ನೂರು ವರ್ಷಗಳ ಇತಿಹಾಸವಿದೆ ದೆಹಲಿಯಿಂದ ತಮ್ಮ ಪಶುಗಳೊಂದಿಗೆ ದಕ್ಷಿಣಭಾರತಕ್ಕೆ ಬಂದರು ಸಹ ತಮ್ಮ ಆಚಾರ ವಿಚಾರಗಳನ್ನು ಬಿಡದೆ ರೂಡಿಸಿಕೊಂಡಿದ್ದಾರೆ ಎಂದು ಕೊಂಡಾಡಿದರು. ಮೈಸೂರ್ ಶಿವಣ್ಣ ಮಾತನಾಡಿ ನಾನು ಮೈಸೂರಿನಲ್ಲಿ ಶ್ರೀಯುತ ಬನುಮಯ್ಯನವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಅಲ್ಲಿಯೇ ಕೆಲಸ ನಿರ್ವಹಿಸಿ ಅತ್ಯಂತ ಸಂತೋಷದಿಂದ ನಿವೃತ್ತಿಯಾಗಿದ್ದೇನೆ ಬನ್ಮಯನವರನ್ನು ಹೊಗಳಲು ಯಾವುದೇ ಶಬ್ದಗಳು ಸಾಲುವುದಿಲ್ಲ. ರಾಜ್ಯದಲ್ಲಿಯೇ ಅತ್ಯಂತ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಯುತ ಬನ್ಮಯ್ಯನವರ ಕಾಲೇಜ್ ಎಂದು ಹಳೆಯ ನೆನಪುಗಳನ್ನು ಜ್ಞಾಪಿಸಿಕೊಂಡರು . ಕುಂಚಿಟಿಗರ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ ಭಾರತದ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಕೇರಳ ಮಹಾರಾಷ್ಟ್ರ ರಾಜ್ಯಗಳಲ್ಲಿ ಕುಂಚಿಟಿಗರು ಹರಿದು ಹಂಚಿಹೋಗಿದ್ದು ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ ಆದರೆ ಆಚಾರ-ವಿಚಾರಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ರಾಜ್ಯದ 18 ಜಿಲ್ಲೆ 46 ತಾಲೂಕುಗಳಲ್ಲಿ 26 ಲಕ್ಷಕ್ಕೂ ಅಧಿಕ ಸಂಖ್ಯೆಯ ಕುಂಚಿಟಿಗರು ಕೃಷಿ ಪಶು ಪಾಲನೆ ಇತ್ತೀಚಿಗೆ ವ್ಯವಹಾರಗಳಲ್ಲೂ ಅದರಲ್ಲೂ ಇಡೀ ಜಗತ್ತಿನ ಬಹುತೇಕ ದೇಶಗಳಲ್ಲಿ ಕುಂಚಿಟಿಗರು ಉದ್ಯೋಗ ನಿಮಿತ್ತ ವ್ಯವಹಾರದ ಸಲುವಾಗಿ ನೆಲೆಸಿ ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹೆಚ್ ರಂಗನಾಥ್ ಮಾತನಾಡಿ ಕುಂಚಿಟಿಗರು ಇತ್ತೀಚಿಗೆ ಒಗ್ಗೂಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳನ್ನು ಆಹ್ವಾನಿತರನ್ನು ಶ್ರೀಯುತ ದೇವರಾಜ್ ಮೇಷ್ಟ್ರು ಸ್ವಾಗತಿಸಿದರು. ದಿಂಡವರ ಚಂದ್ರಗಿರಿ ನಿರೂಪಣೆ ಮಾಡಿದರು. ಕಾತ್ರಿಕೇನಹಳ್ಳಿ ಮಂಜುನಾಥ್ ಪ್ರಾರ್ಥನೆ ಮಾಡಿದರು ,ಕುಬೇರಪ್ಪ ವಂದನಾರ್ಪಣೆ ಮಾಡಿದರು. ಉಪಾಧ್ಯಕ್ಷ ಜೋಗೇಶ್, ಕಾರ್ಯಕ್ರಮಕ್ಕೆ ಬಸಂತನಹಳ್ಳಿ ರಾಜಣ್ಣ, ಖಜಾಂಚಿ ಹನುಮಂತರಾಯ, ಕೆ ಕೆ ಹಟ್ಟಿ ಜಯಪ್ರಕಾಶ್ , ಆಪ್ಟಿಕಲ್ಸ್ ರಾಜೇಶ್, ಅವಿನಾಶ್, ಯು ವಿ ಗೌಡ, ಚಿಲ್ಲಳ್ಳಿ ಮಹಾಲಿಂಗಪ್ಪ, ನಿಜಲಿಂಗಪ್ಪ, ಕಸವನಹಳ್ಳಿ ಶ್ರೀನಾಥ್, ರಾಮಸ್ವಾಮಿ,ಪುಟ್ಟರಾಜು, ಮಹೇಶ, ಮನ್ಮಥಪ್ಪ, ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಕುಂಚಿಟಿಗ ಸಮಾಜದ ಮಹಿಳೆಯರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest News >>

ಹೊಸ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರನ್ನು ವರ್ಗಾಯಿಸಿದಂತೆ ಗ್ರಾಮಸ್ಥರ ಆಗ್ರಹ 

ಚಳ್ಳಕೆರೆ: ತಾಲೂಕಿನ ಜಾಜೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳು ವಾಸಿಸುವ ಕಾಲೋನಿಯ ಪಡಿತರ ಚೀಟಿದಾರರ ಅನುಮತಿ ಪಡೆಯದೆ...

ಪಹಣಿಗೆ ಆಧಾರ್ ಜೋಡಣಿ: ತಿಂಗಳಾಂತ್ಯಕ್ಕೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಳ್ಳಕೆರೆ ಜು.16 ಪಹಣಿಗೆ ಆಧಾರ್ ಜೋಡಣೆ ಕಾರ್ಯವನ್ನು ಪ್ರಥಮಾಧ್ಯತೆಯಾಗಿ ಪರಿಗಣಿಸಿ, ತಿಂಗಳಾಂತ್ಯಕ್ಕೆ ತಾಲ್ಲೂಕಿನಲ್ಲಿ ಪ್ರಗತಿ ಸಾಧಿಸಬೇಕು...

ನಗರದ ಪಾದಾಚಾರಿಗಳ ರಸ್ತೆ ಮೇಲಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ವೆಂಕಟೇಶ್ ಬಳಿ ದೂರು.

ಚಳ್ಳಕೆರೆ ಜು.16 ಪುಟ್ ಬಾತ್ ನಲ್ಲಿ ಅಕ್ರಮ ಪೆಟ್ಟಿಗೆ ಅಂಗಡಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಕೂಡಲೆ...

ಗೃಹ ಲಕ್ಷ್ಮೀ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜು.16: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು ಸಹ ಯೋಜನೆಯ ಸೌಲಭ್ಯ...

ಸಿದ್ದು ಬೆನ್ನಿಗೆ ಇದೆ ದಲಿತ ಶಕ್ತಿ ಟೀಕೆ, ಆರೋಪಗಳಿಗೆ ಎದೆಗುಂದದಿರಿ ಮಾಜಿ ಸಚಿವ ಎಚ್.ಆಂಜನೇಯ ಅಭಯ ಆಂಜನೇಯ ಅವರಿಗೆ ಬೆಳ್ಳಿಗಧೆ ನೀಡಿ ಗೌರವಿಸಿದ ದಲಿತ ಮುಖಂಡರು*

ಚಿತ್ರದುರ್ಗ: ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಬೇಕು. ಈ ಕಾರ್ಯಕ್ಕೆ ಇಡೀ ದಲಿತ...

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಜನರನ್ನ ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುತ್ತವೆ:ರಾಜ್ಯಾಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ್

ಹಿರಿಯೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಸಮಾಜದ ಜನರನ್ನು ಜಾಗೃತಗೊಳಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ...

ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಮನುಕುಲಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಭಗೀರಥ ಗುರುಪೀಠದ ಜಗದ್ಗುರು ಶ್ರೀ ಶ್ರೀ ಡಾ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ

ಪರಶುರಾಮಪುರ ಮಹರ್ಷಿ ಭಗೀರಥ ಕಠಿಣ ತಪಸ್ಸು ಕೈಗೊಂಡು, ಪೂರ್ವಜರ ಶಾಪ ವಿಮೋಚನೆ ಮಾಡುವ ಮೂಲಕ ಇಡೀ ಮನುಕುಲ ಉಧ್ದಾರಕ್ಕಾಗಿ ಗಂಗೆಯನ್ನು ಧರೆಗೆ...

ಪೀರಲು ದೇವರು ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ

ಹಿರಿಯೂರು: ನಗರದ ಚಿಕ್ಕಪೇಟೆ ಬಳಿ ಇರುವ ಪೀರಲು ದೇವರುಗಳ ದೇವಾಲಯದಲ್ಲಿ ಇಮಾಮ್ ಬಾಡ ಅಶುಖಾನ ಕಮಿಟಿ ವತಿಯಿಂದ ಮೊಹರಾಂ ಆಚರಣೆ ನಡೆಯುತ್ತಿದ್ದು...

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್

ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ ಮೈಲನಹಳ್ಳಿ ದಿನೇಶ್ ಕುಮಾರ್ ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು....

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page