ಅಯುಷ್ ವೈದ್ಯ ಪದ್ಧತಿಯಲ್ಲಿ ಕಾಯಿಲೆಯನ್ನು ಗುಣಪಡಿಸುವುದರ ಜತೆಗೆ ದೇಹವು ಸದೃಢವಾಗುವಂತೆ ಮಾಡುತ್ತದೆ ಶಾಸಕ ಟಿ.ರಘುಮೂರ್ತಿ

by | 19/10/23 | ಆರೋಗ್ಯ

ಚಳ್ಳಕೆರೆ ಅ.19.ಆಯುಷ್‌, ಆಯುರ್ವೇದ ಔಷಧ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಆರ್ಯುವೇದ ಔಷಧಿಯನ್ನು ಬಳಕೆ ಮಾಡಿ ಆರೋಗ್ಯವಂತರಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಪೆತ್ತಮರಹಟ್ಟಿ ಗ್ರಾಮದಲ್ಲಿ ಆಯುಷ್ ಇಲಾಖೆವತಿಯಿಂದ ಆಯೋಜಿಸಿದ್ದ ಆಯುಷ್ ಸೇವಾ ಗ್ರಾಮ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಕೋವಿಡ್‌ ಸಂದರ್ಭದಲ್ಲಿ ಕೊರೊಬಾ ವಾರಿಯರ್ಸ್ ಗಳಿಗೆ ಆಯುಷ್ ಇಲಾಖೆಯಿಂದ ರೋಗ ನಿರೋದ ಶಕ್ತಿ ಹೆಚ್ಚಿಸಲು ಹಾಗೂ ರೋಗ ತಡೆಗಟ್ಟಲು ಆರ್ಯುವೇದ ಔಷಧಿ ಕಿಟ್ ವಿತರಿದ್ದರು. ಕೊರೋನ ಮಾರಕ ಖಾಯಿಲೆ ಸಂದರ್ಭದಲ್ಲಿ ಜನರು ಕಷಾಯ ಸೇರಿದಂತೆ ಆರ್ಯುವೇದ ಔಷಧಿಗಳ ಮೊರೆ ಹೋಗಿದ್ದನ್ನು ಜಾಣ ಬಹುದು. ಮಾರಕ ರೋಗದಿಂದ ಅನೇಕ ಜನರು ತಮ್ಮ ಮನೆಯಲ್ಲಿನ ಮನೆಮದ್ದನ್ನು ಉಪಯೋಗಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಕೋವಿಡ್ ಬಾರದಂತೆ ನೋಡಿಕೊಂಡಿದ್ದಾರೆ. ಯಾರು ತಮ್ಮ ಆರೋಗ್ಯದ ಬಗ್ಗೆ ವೈಯಕ್ತಿಕಕಾಳಜಿ ಇಟ್ಟುಕೊಳ್ಳುವರೋ ಅಂತಹವರಿಗೆ ರೋಗಗಳು ಬರುವುದಿಲ್ಲ . ಪೂರ್ವಜರ ಜಾಲದಲ್ಲಿ ಜ್ವರ. ತಲೆ ನೋವು ಸೇರಿದಂತೆ ವಿವಿಧ ರೋಗಗಳಿಗೆ ತುತ್ತಾದಗ ಅಂದು ಆಸ್ಪತ್ರೆಗಳಿರಲಿಲ್ಲ ಬೇವಿನ ಕಷಾಯ ಗಿಡಮೂಲಿಕೆ ಔಷಧಿಗಳನ್ನು ಸೇವಿಸಿ ಗಟ್ಟಿ ಮುಟ್ಟಾದ ಸದೃಢ ಆರೋಗ್ಯವಂತರಾಗುತ್ತಿದ್ದರು ಅದೇರೀತಿ ನಿಮ್ಮ ಮನೆ ಬಾಗಿಲಿಗೆ ಆಯುಷ್ ಇಲಾಖೆ ಆರೋಗ್ಯ ತಪಾಸಣೆ ಮಾಡಲು ಬಂದಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗುವಂತೆ ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ದ ಮಾತನಾಡಿ ಸರ್ಕಾರವು ಪ್ರತಿ ತಾಲೂಕಿನಲ್ಲಿ ಎಸ್ಟಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವಂತ ಒಂದು ಗ್ರಾಮವನ್ನು ಆಯುಷ್‌ ಸೇವಾ ಗ್ರಾಮಗಳೆಂದು ಗುರುತಿಸಿ ಅಲ್ಲಿನ ರೋಗಿಗಳಿಗೆ ಆಯುಷ್‌ ಔಷ ಧಗಳನ್ನು ನೀಡಲಾಗುತ್ತಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಅತ್ಯಂತ ಪುರಾತನವಾದದು. ನಮ್ಮ ಜೀವನ ಶೈಲಿಯಲ್ಲಿ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳೋಣ, ಆರೋಗ್ಯಯುತವಾಗಿರೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ . ಶಿವಮ್ಮ .ಉಪಾಧ್ಯಕ್ಷೆ ಬೀಬೀಜಾನ್, ಸದಸ್ಯರಾದ ದೊರೆ ಬೈಯಣ್ಣ, ಸಣ್ಣ ಬೋರಮ್ಮ, ಓಬಯ್ಯ, ಸಮಿಉಲ್ಲಾ, ಪಿಡಿಒ ಪಾಲಯ್ಯ, ತಾಲ್ಲೂಕು ಆಯುಷ್ ಅಧಿಕಾರಿ ಭಾಸ್ಕರ್, ಮುಖಂಡರಾದ ರಾಜಣ್ಣ, ಚಿನ್ನಸ್ವಾಮಿ, ಅಜ್ಜಯ್ಯ, ಆಯುಷ್ ಇಲಾಖೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *