ಅಭಿಪ್ರಾಯ

ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹ ಆಟಿಕೆಗಳನ್ನು ಮಾರಾಟ ನಿಶೇಧ ತಹಶೀಲ್ದಾರ್ ರೇಹಾನ್ ಪಾಷ.

ಚಳ್ಳಕೆರೆ ಮಾ.23 ಚಳ್ಳಕೆರೆ ತಾಲ್ಲೂಕು ನಾಯ್ಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ
ಮಾ25 ರಿಂದ 27 ರವರೆಗೆ ನಡೆಯಲಿರುವುದರಿಂದ
ಸದರಿ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹ ಆಟಿಕೆಗಳ ಮಾರಾಟ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.
ಜಾತ್ರಾ ಪೂರ್ವಭಾವಿ ಸಭೆಯ ಮಾ24ರಂದು ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿರುವುದರಿಂದ ನಾಯ್ಕನಹಟ್ಟಿ ಶ್ರೀ ಗುರು
ಚಳ್ಳಕೆರೆ ಮಾ.23 ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಜಾತ್ರೆಯಲ್ಲಿ ಕರ್ಕಶ ಧ್ವನಿ ಹೊರಡಿಸುವಂತಹಆಟಿಕೆಗಳನ್ನು ಮಾರಾಟ ಮಾಡುವುದು ರೂಢಿಗತವಾಗಿರುತ್ತದೆ. ಆದರೆ ಇಂತಹ ವಸ್ತುಗಳನ್ನು ಮಾರಾಟ ಮಾಡುವುದನ್ನು
ನಿಷೇಧಿಸಲು ಸೂಚಿಸಲಾಗಿರುತ್ತದೆ.
ಕಿರಿಕಿರಿ
ಪ್ರಯುಕ್ತ ಇಂತಹ ಅಟಿಕೆಗಳಿಂದ
ಮಾಡುವಂತ ಧ್ವನಿ ವರ್ಧಕದಂತಹ ಆಟಿಕೆಗಳನ್ನು ನಿಷೇಧ ಮಾಡುವುದು
ಸೂಕ್ತವಾಗಿರುತ್ತದೆ ಎಂದು ಭಾವಿಸಿ ಸದರಿ ಜಾತ್ರೆ ನಡೆಯುವ ದಿನಾಂಕಗಳಂದು ಮಾರಾಟ ಮಾಡದಂತೆ ನಿಷೇಧಿಸಿ
ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸೂಕ್ತ ಕ್ರಮವಹಿಸಲು ಆದೇಶ ಹೊರಡಿಸಿದ್ದಾರೆ.

ರಾಜದಾನಿಯಲ್ಲಿ ಸ್ವತ್ತು ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಕಂದಾಯ ಸಚಿವ ಕೃಷ್ಣಬೈರೇಗೌಡ..

ರಾಜದಾನಿಯಲ್ಲಿ ಸ್ವತ್ತು ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಕಂದಾಯ ಸಚಿವ ಕೃಷ್ಣಬೈರೇಗೌಡ..

ಬೆಂಗಳೂರು ಸೆ.19 ಭೂಮಿ ಮಾರಾಟಗಾರರು ಹಾಗೂ ರೈತರ ಹಿತದೃಷ್ಟಿ, ಕಪ್ಪಹಣ ವಹಿವಾಟಿಗೆ ಕಡಿವಾಣ ದೃಷ್ಟಿಯಲ್ಲಿಟ್ಟುಕೊಂಡು ಸ್ವತ್ತುಗಳ ಮಾರ್ಗಸೂಚಿದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಅ.1 ರಿಂದ ಪರಿಷ್ಕೃತ ಮಾರ್ಗಸೂಚಿ ದರ(ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ಯಾಯವಾಗಿದೆ. ಅಲ್ಲದೆ, ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ. ಕಾರಣ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಅ.1 ರಂದು ಬೆಂಗಳೂರಿನಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ ಉಪ ಸಮಿತಿ ಚರ್ಚಿಸಿ ನೂತನ ಮಾರ್ಗಸೂಚಿ ದರವನ್ನು ಹಂತಹಂತವಾಗಿ ಜಾರಿಗೊಳಿಸಲಿವೆ ಎಂದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ಡಾ. ಬಿ.ಆರ್.ಮಮತ ಉಪಸ್ಥಿತರಿದ್ದರು.

ಮಹಿಳೆಯರು ಒಡೆವೆಗಳನ್ನು ಹಾಕಿಕೊಂಡು ಪ್ರದರ್ಶನ ಮಾಡದೆ ಅವುಗಳನ್ನು ಸೆರಗಿನಿಂದ ಮರೆ ಮಾಡಿಕೊಳ್ಳ ಬೇಕು ಪಿ ಐ ದೇಸಾಯಿ .

‌‌‌ ಚಳ್ಳಕೆರೆ ಆ.27.ಮಹಿಳೆಯರು ಬೆಲೆ ಬಾಳುವ ಒಡವೆ ಧರಿಸಿ ಒಬ್ಬಂಟಿಯಾಗಿ ಓಡಾಡಬಾರದು, ಸೀರೆ ಸೆರಗು ಮತ್ತು ವೇಲ್‍ನಿಂದ ಕುತ್ತಿಗೆಯನ್ನು ಮುಚ್ಚಿಕೊಳ್ಳಬೇಕು ಎಂದು ಚಳ್ಳಕೆರೆ ಠಾಣೆಯ ಪಿ ಐ ಆರ್ .ಎಫ್ .ದೇಸಾಯಿ ಕಿವಿಮಾತು ಹೇಳಿದರು. ಚಳ್ಳಕೆರೆ ನಗರದ ಪಾವಗಡ ರಸ್ತೆಯ ಬಟ್ಟೆಅಂಡಿಯ ಮಸಲಿಕನ ಚಿನ್ನದ ಸರ ಕಳವು ಸ್ಥಳಕ್ಕೆ ತನಿಖೆ ಮಾಡುವ ಸಂದರ್ಭದಲ್ಲಿ ಅದೇ ಅಂಗಡಿ ಮುಂಭಾಗದಲ್ಲಿ ಹಾದು ಹೋಗುವ ಮಹಿಳೆಯರು ಕೊರಳಲ್ಲಿನ ಒಡವೆಗಳನ್ನು ಕಾಣುವಂತೆ ಹಾಕಿಕೊಂಡಿರುವುದನ್ನು ಕಂಡು ನಿಮ್ಮ ಒಡೆವೆಗಳನ್ನು ಕಾಣದಂತೆ ಸೀರೆಯ ಸೆರಿಗಿನಿಂದ ಮುಚ್ಚಿಕೊಂಡು ಹುಷಾರಾಗಿ ಹೋಗುವಂತೆ ಮಹಿಳೆಯರಿಗೆ ಜಾಗೃತಿ ಮೂಡಿಸಿದರು. ಸರಗಳ್ಳರ ಬಗ್ಗೆ ನಗರದ ಸಾರ್ವಜನಿಕ ಸ್ಥಳ ಪಾರ್ಕ್, ರಸ್ತೆ ಬದಿ ವಾಕಿಂಗ್ ಮಾಡುವಾಗ ಅಕ್ಕಪಕ್ಕದಲ್ಲಿ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರದಿಂದಿರಿ ನಿಮ್ಮ ಒಡೆವೆಗಳ ಬಗ್ಗೆ ಜಾಗೃತರಾಗಿರುವಂತೆ ಪೋಲಿಸ್ ಇಲಾಖೆ ಅನೇಕ ಬಾರಿ ಜಾಗೃತಿ ಮೂಡಿಸಲಾಗಿದೆ ಆದರೂ ಒಡವೆಗಳನ್ನು ಮೈ ಮೇಲೆ ಕೊರಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಹಾಕಿಕೊಂಡು ಓಡಾಡಿತ್ತಾರೆ ಬಡಾವಣೆಗಳಲ್ಲಿ ಅನುಮಾನಾಸ್ಪದ ವಾಗಿ ಓಡಾಡುವವರ ಬಗ್ಗೆ ನಿಗಾವಹಿಸಿ ಅನುಮಾನ ಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಉದ್ಯಾನ, ದೇವಸ್ಥಾನ ಮತ್ತು ಜನವಸತಿ ಪ್ರದೇಶಗಳಿಗೆ ಪೊಲೀಸರು ಭೇಟಿ ನೀಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಳ್ಳರು ಒಂಟಿ ಮಹಿಳೆಯರನ್ನು ವಿಳಾಸ ಕೇಳುವ ನೆಪದಲ್ಲಿ ಸರಗಳನ್ನು ಎಗರಸುತ್ತಿದ್ದು. ನಿಮ್ಮ ಮನೆ , ಬಡಾವಣೆಗಳಲ್ಲಿ ಯಾರಾದರೂ ಅಪರಿಚಿತರ ಕಂಡರೆ ಯಾರು ? ಯಾವ ಊರು ? ಏಕೆ ಬಂದಿದ್ದೀರಿ ಎಂದು ಪ್ರಶ್ನಿಸ ಬೇಕು ಅನುಮಾನ ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡ ಬೇಕು.
ಒಟ್ಟ ಮಹಿಳೆಯರು ಒಡೆವೆಗಳನ್ನು ಹಾಕಿಕೊಂಡು ಪ್ರದರ್ಶನ ಮಾಡದೆ ಅವುಗಳನ್ನು ಸೆರಗಿನಿಂದ ಮರೆ ಮಾಡಿಕೊಳ್ಳ ಬೇಕು, ಒಂಟಿ ಮಹಿಳೆಯರು,ಮನೆಯಲ್ಲಿ ಯಾರು ಇಲ್ಲದೆಇರುವುದನ್ನು ಗಮನಿಸಿ ಕಳ್ಳತ ಮಾಡುತ್ತಿದ್ದಾರೆ.
ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿರುವ ಮಾಂಗಲ್ಯ, ಚಿನ್ನದ ಸರ ಕಸಿದುಕೊಂಡು ಹೋಗುವಾಗ ಎಚ್ಚರದಿಂದಿರಬೇಕು ಬೆಲೆ ಬಾಳುವ ಒಡೆವೆ, ಹೆಚ್ಚು ಹಣವನ್ನು ಮನೆಯಲ್ಲಿ ಸಂಗ್ರಹಿಸದೆ ಬ್ಯಾಂಕ್ ಲಾಕರ್‌ನಲ್ಲಿಡ ಬೇಕು ಮನೆಗಳು ಸುತ್ತ ಸಿ.ಸಿ. ಕ್ಯಾಮರ ಅಳವಡಿಸಿಕೊಳ್ಳ ಬೇಕು, ಮಹಿಳೆರು ಒಡವೆಗಳನ್ನು ಪ್ರದರ್ಶನ ಮಾಡದೆ ಮರೆ ಮಾಡಿಕೊಳ್ಳಬೇಕು, ಸರಗಳ್ಳರ ಬಗ್ಗೆ ಜನರು ಜಾಗೃತರಾಗ ಬೇಕು .
ಬಡವಾಣೆಯಲ್ಲಿ ದಾನಿಗಳ ಹಾಗೂ ಸಂಘ ಸಂಸ್ಥೆಯವರು ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿಕೊಂಡರೆ ಕಳ್ಳತನಪತ್ತೆ ಮಾಡಲು ಸಾಧ್ಯವಾಗುತ್ತದೆ ಎಂದು ಪಿಎಸ್‌ಐ ಸತೀಶ್ ನಾಯ್ಕ ಸಾರ್ವಜನಿಕರಲ್ಲಿ ಅರಿವು ಮುಡಿಸಿದರು.
ನಾವು ಮಫ್ತಿಯಲ್ಲಿರುವ ಪೊಲೀಸರು ಎಂದು ನಂಬಿಸಿ ಒಡವೆಗಳನ್ನು ತೆಗೆಸಿ ಮೋಸ ಮಾಡುವವರ ಬಗ್ಗೆ ಮತ್ತು ರಸ್ತೆಯಲ್ಲಿ ನಡೆದು ಹೋಗುವಾಗ ಎದುರು ಮತ್ತು ಹಿಂದಿನಿಂದ ದ್ವಿಚಕ್ರ ವಾಹನಗಳಲ್ಲಿ ಬಂದು ಚಿನ್ನದ ಸರ, ಮಾಂಗಲ್ಯ ಅಪಹರಣ ಮಾಡುವವರ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಿದರು.
ಸರಗಳ್ಳತಗಳ ಕೃತ್ಯ ನಡೆದ ಅಂಗಡಿ ಸ್ಥಳಗಳಿಗೆ ಭೇಟಿ ನೀಡಿ ಜನತಲ್ಲಿ ಜಾಗೃತಿ ಮೂಡಿಸಿದರು.

ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಾವುದೇ ನಿರ್ವಿಘ್ನವಿಲ್ಲದೆ ಲ್ಯಾಂಡ್ ಆದಲ್ಲಿ ಭಾರತ ವಿಶ್ವದಲ್ಲಿ ಒಂದು ಹೊಸ ಇತಿಹಾಸದ ಸೃಷ್ಟಿಸಲಿದೆ ಎಂದು ಚಳ್ಳಕೆರೆ ನಿಕಟಪೂರ್ವ ತಹಶೀಲ್ದಾರ್ ರಘುಮೂರ್ತಿ


ನಾಯಕನಹಟ್ಟಿ
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಾವುದೇ ನಿರ್ವಿಘ್ನವಿಲ್ಲದೆ ಲ್ಯಾಂಡ್ ಆದಲ್ಲಿ ಭಾರತ ವಿಶ್ವದಲ್ಲಿ ಒಂದು ಹೊಸ ಇತಿಹಾಸದ ಸೃಷ್ಟಿಸಲಿದೆ ಎಂದು ಚಳ್ಳಕೆರೆ ನಿಕಟಪೂರ್ವ ತಹಶೀಲ್ದಾರ್ ರಘುಮೂರ್ತಿ ಹೇಳಿದರು.
ಅವರು ಇಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದಲ್ಲಿ ಇಸ್ರೋ ವಿಜ್ಞಾನಿಗಳಿಗ ಶ್ರೇಯಸ್ಸು ಕೋರುವ ಪೂಜೆಯಲ್ಲಿ ಭಾಗಿಯಾಗಿ ಮಾತನಾಡಿ ಇಂದು ಜಗತ್ತೇ ಭಾರತದತ್ತ ನೋಡುತ್ತಿದೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಫಲಪ್ರದವಾದಲ್ಲಿ ಪ್ರಪಂಚದಲ್ಲಿ ವೈಜ್ಞಾನಿಕವಾಗಿ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ಭಾರತ ನಂಬರ್ ಒನ್ ರಾಷ್ಟ್ರವಾಗಲಿದೆ ಎಂದು ಅವರು ಮಾತನಾಡಿದರು.

ನಾಡಿಗೆ ಸುಭಿಕ್ಷ ಯನ್ನು ನೀಡುವಂತಹ ದೈವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಇಸ್ರೋ ವಿಜ್ಞಾನಿಗಳ ಪರಿಶ್ರಮ ಬಲಪ್ರದವಾಗಲಿ ಮತ್ತು ವಿಕ್ರಂ ಲ್ಯಾಂಡರ್ ಯಾವುದೇ ವಿಘ್ನಗಳಿಲ್ಲದೆ ತನ್ನ ಕಕ್ಷೆಯನ್ನು ಸೇರಿಕೊಳ್ಳಲಿ ಎಂದು ಅವರು ಹೇಳಿದರು.

ಆಶೀರ್ವಾದ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ಮಾತನಾಡಿ ಇಸ್ರೋ ವಿಜ್ಞಾನಿಗಳ ಈ ಕಾರ್ಯ ದೇಶಕ್ಕೆ ಹೆಮ್ಮೆ ತರುವಂತದ್ದು ಈ ಕಾರ್ಯ ಸಫಲವಾದಲ್ಲಿ ವಿಶ್ವಕ್ಕೆ ಭಾರತ ಒಂದು ಹೊಸ ಬಾಷ್ಯವನ್ನು ಬರೆಯುತ್ತದೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಸಫಲವಾಗಲಿ ಎಂದು ಹೇಳಿದರು.

ನಾಯಕನಹಟ್ಟಿ ಆರಕ್ಷಕ ಉಪನಿರೀಕ್ಷಕರದ ದೇವರಾಜ್ ಮಾತನಾಡಿ ಭಾರತ ವಿಶ್ವದಲ್ಲೇ ನಾಲ್ಕನೇ ರಾಷ್ಟ್ರ ವೈಜ್ಞಾನಿಕ ರೀತಿಯಲ್ಲಿ ಮುಂದುವರೆದ ದೇಶಗಳಿಗೆ ಪಟ್ಟಿಗೆ ಸೇರುತ್ತೆ ಎಂದರೆ ನಮಗೆಲ್ಲ ಹೆಮ್ಮೆಯ ವಿಚಾರ ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ನೈಪುಣ್ಯತೆ ವಿಶ್ವಕ್ಕೆ ಮಾದರಿಯಾದಂತದ್ದು ಒಂದು ಪ್ರಯತ್ನ ಕಾಣಲಿ ಇಸ್ರೋ ವಿಜ್ಞಾನಿಗಳ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಟೇಲ್ ತಿಪ್ಪೇಸ್ವಾಮಿ ಡಿ ವೈ ಎಸ್ ಪಿ ತಳವಾರ್ ಮಂಜಣ್ಣ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರು ಮತ್ತು ನೂರಾರು ಭಕ್ತಾದಿಗಳು ಆಗಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಭದ್ರಾ,ರಾಷ್ಟ್ರೀಯ ಯೋಜನೆ ಘೋಷಣೆಮಾಡಿ ಅನುದಾನ ನೀಡಲಿ : ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಹಿರಿಯೂರು :


ಹಿರಿಯೂರು ಬರಪೀಡಿತ ಬಯಲು ಸೀಮೆಯ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಅನುದಾನ ಬಿಡುಗಡೆ ಮಾಡಲಿ ಎಂಬುದಾಗಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಪ್ರಧಾನಿ ನರೇಂದ್ರಮೋದಿರವರನ್ನು ಒತ್ತಾಯಿಸಿದ್ದಾರೆ.
ಕೃಷಿಕ ಸಮಾಜದ ಪದಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮೂಲಕ ತಲುಪಿಸುವಂತೆ ಈ ಮೂಲಕ ಅವರು ಒತ್ತಾಯಿಸಿದ್ದಾರೆ.
ಮಧ್ಯ ಕರ್ನಾಟಕದ ಬರ ಪೀಡಿತ ಬಯಲು ಸೀಮೆಯ ನಾಲ್ಕೈದು ಜಿಲ್ಲೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಮತ್ತು ಸುಮಾರು 5 ಲಕ್ಷ ಎಕರೆ ಪ್ರದೇಶಕ್ಕೆ ಏತ(ಲಿಫ್ಟ್) ನೀರಾವರಿ ಯೋಜನೆ ಮೂಲಕ ರೈತರಿಗೆ ನೀರು ಪೂರೈಸುವುದು ಸೇರಿದಂತೆ 367 ಕೆರೆಗಳನ್ನು ಭರ್ತಿ ಮಾಡುವ ಭದ್ರಾ ಯೋಜನೆ ಅತ್ಯಂತ ಉಪಯುಕ್ತವಾಗಿದೆ.
ಮೊದಲ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಎತ್ತಿ ಹಾಕುವುದು ಮತ್ತು ಎರಡನೇ ಹಂತದಲ್ಲಿ 29.90 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಎತ್ತುವ ಮೂಲಕ 2,25,515 ಹೆಕ್ಟೇರ್ ಪ್ರದೇಶವನ್ನು ಬರಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಮಾಡಲು ಆಯೋಜಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಸುಸ್ಥಿರ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಬರಪೀಡಿತ ಜಿಲ್ಲೆಗಳ 367 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲವನ್ನು ಮರುಪೂರಣಗೊಳಿಸುವುದು ಮತ್ತು ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. 21,473.67 ಕೋಟಿ ವೆಚ್ಚದ ಭದ್ರಾ ಯೋಜನೆಯ ತಾಂತ್ರಿಕ-ಆರ್ಥಿಕ ಕಾರ್ಯ ಸಾಧ್ಯತೆಯನ್ನು ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯದ ಸಲಹಾ ಸಮಿತಿಯು ಅಂಗೀಕರಿಸಿದೆ.
ಇಂತಹ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ತಾಲ್ಲೂಕು ಕೃಷಿಕ ಸಮಾಜ ಮನವಿ ಮಾಡಿದೆ. ಇಡೀ ಯೋಜನೆ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ನಿಯಮಗಳಂತೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಅರ್ಹವಾಗಿದೆ.
ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಹೈ ಪವರ್ಡ್ ಸ್ಟೀರಿಂಗ್ ಕಮಿಟಿ ಶಿಫಾರಸು ಮಾಡಿದೆ. ಪಬ್ಲಿಕ್ ಇನ್ವೆಸ್ಟ್ಮೆಂಟ್ ಬೋರ್ಡ್ ಕೂಡಾ ಶಿಫಾರಸು ಮಾಡಿದೆ. ಆದರೂ ಕೇಂದ್ರ ಸರ್ಕಾರ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮೀನಾಮೇಷ ಏಣಿಸುತ್ತಿದೆ ಎಂದು ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
2023-2024ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಯೋಜನೆಗೆ 5300 ಕೋಟಿ ಕೇಂದ್ರದ ಆರ್ಥಿಕ ನೆರವು ಘೋಷಿಸಲಾಗಿದ್ದು ಕೂಡಲೇ ಆ ಹಣವನ್ನು ಯಾವುದೇ ಷರತ್ತು ಇಲ್ಲದೆ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 29-06-2023 ರಂದು ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ನವದೆಹಲಿಯಲ್ಲಿ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲು ಮತ್ತು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದರಲ್ಲದೆ,
ಬಯಲು ಸೀಮೆಯ ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಭದ್ರಾ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಿ ಪೂರ್ಣಗೊಳಿಸುವುದು ಬಹಳ ಅವಶ್ಯಕವಾಗಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ, ಉಪಾಧ್ಯಕ್ಷ ಹುಲುಗಲಕುಂಟೆ ರಂಗನಾಥ್, ಪ್ರಧಾನ ಕಾರ್ಯದರ್ಶಿ ಬಿ.ರಾಜಶೇಖರ್, ನಿರ್ದೇಶಕರಾದ ವಕೀಲ ಬಬ್ಬೂರು ಎಂ.ಟಿ.ಸುರೇಶ್, ಎಂಎಂಎಂ ಮಣಿ ಅಲಿಯಾಸ್ ಆರ್.ರಾಜೇಂದ್ರನ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಹಾರ ತುರಾಯಿ. ನೆನಪಿನ ಕಾಣಿಕೆ ಬದಲು ಪುಸ್ತಕ ಕೊಡಿ ಮುಖ್ಯಮಂತ್ರಿ ಸಿದ್ದರಾಮಯ್ಯ

‌‌‌‌‌‌‌‌‌‌‌‌ ಚಳ್ಳಕೆರೆ ಜನಧ್ವನಿ ಮೇ21. ಸಾರಕಾರಿ ಕಚೇರಿ .ಸರಕಾರಿ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ನಿಷೇಧಿಸುವ ಮೂಲಕ 2021ರಂದು ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿದ್ದರು.

ನೂತನವಾರಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ‌ ಅಧಿಕಾರವಹಿಸಿಕೊಂಡ ಸಿದ್ದರಾಮಯ್ಯ ‌ನಾಳೆಯಿಂದಲೇ ನನಗೆ ಭೇಟಿಯಾಗಲು ಬರುವವರು ಹಾರ ತುರಾಯಿ .ಶ್ಯಾಲ್ ನೆನಪಿನಬಕಾಣಿಕೆ ಬದಲು ಪುಸ್ತಕ ನೀಡುವಂತೆ ತಿಳಿಸಿದ್ದಾರೆ.ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ.

ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ.

ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು.

ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ.ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ

ಇತ್ತೀಚೆಗೆ ನಡೆದ ಅಭಿನಂದನ ಸಮಾರಂಭದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನ ಹಿರಿಯ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂಬ ಅಸಮದಾನ ಹೊರಹಾಕಿದ್ದಾರೆ.


ಚಳ್ಳಕೆರೆಜನಧ್ವನಿ ವಾರ್ತೆ ಮಾ.1 ಕಾಂಗ್ರೆಸ್ ಪಕ್ಷ ಶಿಸ್ತು ಹಾಗೂ ತತ್ವಸಿದ್ದಾಂಗಳಿಗೆ ಹೆಸರು ಪಡೆದಿರುವ ಪಕ್ಷ ಎಂದರೆ ಕಾಂಗ್ರೆಸ್ ಆದರೆ ಕಾರ್ಯಕ್ರಮ ಸಭೆ ಸಮಾರಂಭಾ ಅಂತ ಬಂದಾಗ ಎಲ್ಲವನ್ನು ಕಡೆಗಣಿಸುತ್ತಾರೆ ಎಂಬ ಅಪರಸ್ವರ ಕೇಳಿ ಬರುತ್ತಿದೆ.
ಹೌದು ಇತ್ತೀಚೆಗೆ ಶಾಸಕರ ಭವನದ ಮುಂಭಾಗದಲ್ಲಿ ಮಾದಿಗ ಸಮುದಾಯದವತಿಯಿಂದ ಶಾಸಕ ಟಿ.ರಘುಮೂರ್ತಿಯವರಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದ ಕಾರ್ಯಕ್ರಮದ ಕಾರ್ಯಕ್ರಮಕ್ಕೆ ಮಾದಿಗ ಸಮುದಾಯದ ಹಿರಿಯ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಕಡೆಗಣಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಲ್ಲಿ ಅಸಮದಾನದ ಮಾತುಗಳು ಕೇಳಿ ಬರುತ್ತಿವೆ.


ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಮಾದಿಗ ಸಮುದಾಯಕ್ಕೆ ನೀಡಿದ ಶಾಸಕ ರಘುಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಲು ಈಚೆಗೆ ಶಾಸಕರ ಭವನದ ಮುಂಭಾಗದಲ್ಲಿ ಆಯೋಜಿಸಿದ್ದ ಸಮಾರಂಭದ ವೇದಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸದೇ ನಿನ್ನೆ ಮೊನ್ನೆ ಬಂದವರನ್ನು ವೇದಿಕೆ ಮೇಲೆ ಕೂರಿಸಿದ್ದನ್ನ ಕಂಡು ಹಿರಿಯ ಮುಖಂಡರು ಸಮಾರಂಭದ ಸ್ಥಳದಿಂದ ಎದ್ದು ಹೊರನಡೆದ ಪ್ರಸಂಗ ತೆರೆಮರೆಯಲ್ಲಿ ಅಸಮಾಧಾನದ ಹೊಗೆಯಾಡಲು.ಕಾರಣವಾಗಿರುವುದು ಇಂಟರೆಸ್ಟಿAಗ್ ಆಗಿದೆ.
ಈ ಬೆಳವಣಿಗೆ ಪಕ್ಷದ ಆಂತರಿಕ.ವಲಯದಲ್ಲಿ ಸಕತ್ ಸುದ್ದಿಯಾಗಿದ್ದರೂ ಡ್ಯಾಮೇಜ್ ಕಂಟ್ರೋಲ್‌ಗೆ ಸ್ವತಃ ಬ್ಲಾಕ್ ಅಧ್ಯಕ್ಷರೇ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಹಿರಿಯ ಮುಖಂಡ ಗಿರಿಯಪ್ಪ, ಭೂತಲಿಂಗಪ್ಪ, ಮಾರಣ್ಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಮೂರ್ತಿ ಇದ್ದರಾದರೂ ಇನ್ನೂ ಕೆಲವರು ವೇದಿಕೆ ಮೇಲೆ ಕೂತಿದ್ದರು. ಆದರೆ ವೇದಿಕೆ ಮುಂಭಾಗದಲ್ಲಿ ಇದ್ದ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೀರಾಸಾಬಿಹಳ್ಳಿ ರಂಗಸ್ವಾಮಿ ನಾವೂ ಕೂಡ ಮಾಜಿ ಶಾಸಕ ಜಯಣ್ಣ ಸುಧಾಕರ್ ಕಾಲದಿಂದಲೂ ಕಟ್ಟಾ ಕಾಂಗ್ರೆಸಿಗ. ಆದರೆ ಬೇಕಂತಲೇ ನನ್ನ ವೇದಿಕೆ ಮೇಲೆ ಕೂರಿಸಲು ಮರೆತಿದ್ದಾರೆ ಎಂದರೆ ಏನರ್ಥ? ಎಂಬAತೆ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗೆ ನೋಡಿದರೆ ಪ್ರಕಾಶ ಮೂರ್ತಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಆಗಿರಬಹುದು. ಅವರು ಟಿಕೆಟ್ ಗಿಟ್ಟಿಸಿಕೊಳ್ಳುವವರೆಗೂ ಯಾವ ಪಕ್ಷದಲ್ಲಿ ಇದ್ದರು. ಕಾಂಗ್ರೆಸ್ ವಿರುದ್ದವೇ ಇದ್ದರು. ಇವರ ಕೊಡುಗೆ ಕಾಂಗ್ರೆಸ್ ಗೆ ಎಷ್ಟಿದೆ ಎಂಬ ಅಸಮಾಧಾನದ ಮಾತುಗಳು ಆ ಸಮುದಾಯದ ಮುಖಂಡರಿAದಲೇ ಕೇಳಿ ಬರುತ್ತಿವೆ. ಒಂದು ಹಂತದಲ್ಲಿ ಪ್ರಕಾಶಮೂರ್ತಿ ಹೇಳಿದಂತೆಯೇ ಈ ಸಮಾರಂಭ ನಡೆದಿದೆ. ಅವರ ಹತ್ತಿರ ಹಣ ಇದೆ ಎಂಬ ಕಾರಣಕ್ಕೆ ಇದಕ್ಕೆಲ್ಲಾ ಅವಕಾಶ ಕೊಡುವುದಾದರೆ ಮೂಲ ಕಾರ್ಯಕರ್ತರ ಪಾಡೇನು? ಮತ್ತೋಮ್ಮೆ ಜಿಲ್ಲಾ ಪಂಚಾಯಿತಿ ಟಿಕೆಟ್ ಗಿಟ್ಟಿಸಲು ಪ್ರಕಾಶ್ ಮೂರ್ತಿ ವೀರಭದ್ರಯ್ಯ ಅವರನ್ಶು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಫಲರಾಗಿದ್ದಾರೆ. ಆದರೆ, ಪದೇ ಪದೇ ಇವರದೇ ಪಕ್ಷದಲ್ಲಿ ಸ್ಥಾನ ಮಾನ ಇದ್ದರೆ ಮತ ಹಾಕುವವರು ಯಾರು? ನಗರ ಪ್ರದೇಶದ ಮುಖಂಡರಿಗೆ ಮಣೆ ಹಾಕಿದರೆ ಗ್ರಾಮೀಣ ಭಾಗದ ಜನರ ಪಾಡೇನು ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರೊಬ್ಬರು ಹೇಳಿದ್ದಾರೆ.


ಮಾಜಿ ತಾಪಂ ಅಧ್ಯಕ್ಷ ರಂಗಸ್ವಾಮಿ ಜನಧ್ವನಿಯೊಂದಿಗೆ ಮಾತನಾಡಿ ನಾನು ಸಹ ವೇಧಿಕೆ ಮುಂದೆ ಕುಳಿತ್ತಿದ್ದೆ ನನ್ನ ಜತೆ ಇದ್ದವರನ್ನು ವೇಧಿಕೆ ಮೇಲೆ ಕರೆದರು ಮಾಜಿ ಗ್ರಾಪಂ ಅಧ್ಯಕ್ಷರೊಬ್ಬರು ವೇಧಿಕೆ ಅತಿಥಿಗಳನ್ನು ಕರೆಯುವವರ ಬಳಿ ಹೋಗಿ ಕಾಂಗ್ರೆಸ್ ಮುಖಂಡ ಮಾಜಿ ತಾಪಂ ಅಧ್ಯಕ್ಷರಿದ್ದಾರೆ ಕರೆಯಿರಿ ಎಂದು ಕಿವಿಯಲ್ಲಿ ಹೇಳಿದರೂ ಸಹ ಕರೆಯಲಿಲ್ಲ ಬೇರೆಯವರನ್ನು ವೇಧಿಕೆಗೆ ಆಹ್ವಾನಿಸಿದರೂ ಆದ್ದರಿಂದ ಬೇಸರವಾಗಿ ಕಾರ್ಯಕ್ರಮದಿಂದ ಎದ್ದು ಹೊರ ಹೋಗಿದ್ದೇವೆ ಎಂದು ತಿಳಿಸಿದರು.

ಕಾಂಗ್ರಸ್ ಮುಖಂಡ ಸಿ.ಜಿ.ಜಯಕುಮಾರ್ ಮಾತನಾಡಿ ದಲಿತ ಮುಖಂಡ, ಹೋರಾಟಗಾರ ಹಾಗೂ ನಗರಸಭೆ ಸದಸ್ಯ ವೀರಭದ್ರಯ್ಯ ನನ್ನ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದು ನನಗೆದ ಸಂತೋಷವಾಗಿದೆ ಆದರೆ ದಲಿತ ಸಮುದಾಯವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡುವ ಮುನ್ನ ನಗರ ಹಾಗೂ ಗ್ರಾಮೀಣ ಭಾಗದ ಕಾಂಗ್ರೆಸ್ ಮುಖಮಡರನ್ನು ಕರೆದು ಪೂರ್ವಬಾವಿ ಸಭೆ ಮಾಡಿ ಎಲ್ಲರನ್ನು ವಿಶ್ವಾಸ ಪಡೆದು ಮಾಡ ಬೇಕು ಈಗ ಚುನಾವನೆ ಸಂರ್ಭವಾಗಿರುವುದು ಪ್ರತಿಯೊಬ್ಬ ಕಾರ್ಯಕರ್ತರ ಅವಶ್ಯಕತೆಯಿಂದ ಯಾರನ್ನು ಕಡೆಗಣಿಸ ಬಾರದು ಶಾಸಕರ ಭವನದ ಮುಂದೆ ನಡೆದ ಅಭಿನಂದನಾ ಸಮಾರಂಭ ನಗರದಕ್ಕೆ ಮಾತ್ರ ಸೀಮಿತವಾದಂತಿತ್ತು ಮತ್ತೆ ಇಂತಹ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವಂತೆ ಆಯೋಜಕರಿಗೆ ಕಿವಿಮಾತು ಹೇಳಿದ್ದಾರೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ವೀರಭದ್ರಪ್ಪ ಮಾತನಾಡಿ ವೇಧಿಕೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಕಾರ್ಯಕ್ರಮಕ್ಕೆ ಅರ್ಥವಿರುವುದಿಲ್ಲ ಎಂಬ ಉದ್ದೇಶದಿಂದ ಕೆಲವರಿಗೆ ಮಾತ್ರ ಸೀಮಿತ ಮಾಡಲಾಗಿತ್ತು ಆದರೂ ಸಹ ಕೆಲವರು ಕರೆಯದೇ ವೇಧಿಕೆ ಮೇಲೆ ಬಂದಿದ್ದಾರೆ ಮತ್ತೆ ಕಾರ್ಯಕ್ರಮದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಹಾಗೂ ಅಸಮದಾನಗೊಂಡ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷದ ಹಿರಿಯ ,ಕಿರಿಯ ಎಲ್ಲಾ ಕಾರ್ಯಕಕರ್ತರನ್ನು ವಿಶ್ವಾಸ ಹಾಗೂ ಸಲಹೆ ಸೂಚನೆಗಳನ್ನು ಪಡೆದು ಪಕ್ಷದ ಸಂಘಟನೆ ಮುಂದಾಗುತ್ತೇನೆ ಈಗಾಗಲೆ ಅಸಮಾನದಗೊಂಡ ಮುಂಡರನ್ನು ಸಂಪರ್ಕಿಸಿದ್ದೇನೆ ಎಂದು ತಿಳಿಸಿದರು.

ಪ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ರಸ್ತೆಗಳಲ್ಲಿ ಗುಂಡಿಗಳು ತೋಡಿ ಹಾಳು ..

ಚಳ್ಳಕೆರೆ ಜನಧ್ವನಿ ವಾರ್ತೆ ಫೆ.11. ಪ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಗರದ ರಸ್ತೆಗಳು ಹಾಳು ಮೌನಕ್ಕೆ ಜಾರಿದ ಅಧಿಕಾರಿಗಳು. ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ಮುಖ್ಯ ರಸ್ತೆಗಳ ಡಾಂಬರ್ ರಸ್ತೆಯ ಬದಿತಲ್ಲಿ ಪ್ಲೆಕ್ಸ್ ಬ್ಯಾನರ್ ಅಳವಡಿಗೆ ಡಾಂಬರ್ ರಸ್ತೆಯಲ್ಲಿ ಗುಂಡಿತೋಡಿ ಪ್ಲೆಕ್ಸ್ ಗಳನ್ನು ಅಳವಡಿಸುವುದರಿಂದ ಸಾರ್ವಜನಿಕ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ರಸ್ತೆ ಗುಂಡಿಗಳಿಂದ ಹಾಳಾಗುತ್ತಿದೆ. ಮುಖ್ಯರಸ್ತೆಗೆ ಡಾಂಬರ್ ಹಾಕಿ ಇನ್ನು ಒಂದು ತಿಂಗಳು ಕಳೆದಿಲ್ಲ ಪ್ಲೆಕ್ಸ್ ಅಳವಡಿಕೆಗೆ ಗುಂಡಿಗಳನ್ನು ತೋಡಿ ರಸ್ತೆ ಹಾಳು ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಕಡಿವಾಣ ಹಾಕವಬೇಕಾದ ಅಧಿಕಾರಿಗಳು ಮಾತ್ರ ಕಣ್ಣಿದ್ದು ಜಾಣಕುರುಡರಾಗಿದ್ದಾರೆ ಎಂಬುದು ಪಜ್ಞಾವಂತರ ಪ್ರಶ್ನೆಯಾಗಿದೆ. ಚುನಾವಣೆ ವರ್ಷವಾಗಿರುವುದರಿಂದ ಇನ್ನೇನು ಚುನಾವಣೆ ಮೂರು ತಿಂಗಳು ಬಾಕಿದ್ದು ವಿವಿಧ ಪಕ್ಷದ ನಾಯಕ ಶಕ್ತಿ ಪ್ರದರ್ಶನ ಮಾಡಲು ಸಮೇಶಗನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶಕ್ಕೆ ಬರುವ ಗಣ್ಯರನ್ನು ಸ್ವಾಗತಿಸಲು ಹಾಗೂ ಮತದಾರೆನ್ನು ಸೆಳೆಯಲು. ನೆಹರು ವೃತ್ತ. ಬೆಂಗಳೂರು.ಪಾವಗಡ.ಚಿತ್ರದುರ್ಗ ರಸ್ತೆ ಸೇರಿದಂತೆ ಬೃಹತ್ ಗಾತ್ರದ ಕಟೌಟ್‌ .ಬ್ಯಾನರ್ .ಬಂಟಿಂಗ್ ಗಳನ್ನು ಹಾಕಲಾಗುತ್ತದೆ.
ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಜಾತ್ರೆ .ಉತ್ಸವ.ಹಬ್ಬ. ನಾಟಕಗಳಿಗೆ ಶುಕ್ರದಶೆ ತಿರುಗಿದ್ದು ಎಲ್ಲಾ ಪಕ್ಷದ ಮುಖಂಡರನ್ನು ಆಹ್ವಾನ ನೀಡಲು ಅಭಿಮಾನಿಗಳು ಪ್ಲೆಕ್ಸ್ ಗಳನ್ನು ಹಾಕಲಸಗುತ್ತಿದೆ . ತುರನೂರು ಹೋಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಾಕಿದ್ದ ಜೆಡಿಎಸ್ ಪ್ಲೆಕ್ಸ್ ಹರಿದಿದ್ದಾರೆ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡು ಪ್ಲೆಕ್ಸ್ ಹರಿದಿರುವ ಬಗ್ಗೆ ಆರೋಪಗಳನ್ನು ಮಾಡಲಾಗುತ್ತಿದೆ. ಅಕ್ರಮವಾಗಿ ಹಾಕಿರುವ ಪ್ಲೆಕ್ಸ್ ಬ್ಯಾನರ್ ಗಳಿಂದಲೂ ಅಭಿಮಾನಿಗಳ ಹಾಗೂ ಹಾಗೂ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟ ಹಾಗೂ ಪ್ಲೆಕ್ಸ್ ರಾಜಕೀಯ ಪ್ರಾರಂಭವಾಗಿದೆ.

ಹೈಕೋರ್ಟ್ ಆದೇಶ ಏನಿದೆ?
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ರಾಜ್ಯಾಧ್ಯಂತ ಫ್ಲೆಕ್, ಬ್ಯಾನರ್ ನಿಷೇಧಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಸಹ ನ್ಯಾಯಾಲಯದ ಆದೇಶಕ್ಕೂ ಕವಡೇ ಕಾಸಿನ ಕಿಮ್ಮತ್ತು ನೀಡದೆ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಮೌನವಹಿಸಿದ್ದಾರೆ.
ವಿಪರ್ಯಾಸ ಏನಂದರೆ ಹೈಕೋರ್ಟ್ ಆದೇಶ ಇದ್ದರೂ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಫ್ಲೆಕ್ಸ್, ಬ್ಯಾನರ್‌, ಕಟೌಟ್‌ಗಳಿಗೆ ಕಡಿವಾಣ ಬಿದ್ದಿಲ್ಲ. ಇದೀಗ ಚುನಾವಣಾ ವರ್ಷ ಆಗಿರುವುದರಿಂದ ರಸ್ತೆಗಳ ಇಕ್ಕೆಲಗಳಲ್ಲೂ ರಾಜಕಾರಣಿಗಳ ಫೋಟೋ, ಸಾಧನೆಗಳು ಹಾಗೂ ಶುಭಾಶಯಗಳದ್ದೇ ಕಾರುಬಾರು ಎಂಬಂತ್ತಾಗಿದೆ. ನಗರದ ಸೌಂಧರ್ಯಕ್ಕೆ ಈ ಫ್ಲೆಕ್ಸ್, ಬ್ಯಾನರ್‌ಗಳು ಹಾನಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಈ ಹಾವಳಿಗೆ ಕಡಿವಾಣ ಹಾಕಬೇಕಿದೆ

ನರರಾಕ್ಷಸನ‌ ವಿಕೃತ ಅಟ್ಟಹಾಸ……

” ನರರಾಕ್ಷಸನ‌ ವಿಕೃತ ಅಟ್ಟಹಾಸ………
****************************************
ನಾವು‌ ಚಿಕ್ಕವರಿದ್ದಾಗ ದೆವ್ವ, ಪಿಶಾಚಿ, ರಾಕ್ಷಸರೆಂದರೆ‌ ಮನುಷ್ಯರಿಗೆ ತದ್ವಿರುದ್ಧವಾದ ಅತಿ ಭಯಂಕರ ರೂಪ ಹೊಂದಿರುವ, ನೋಡಿದರೆ ಬೆಚ್ಚಿ‌ಬೀಳುವ ಕ್ಷುದ್ರ ಆಕೃತಿಗಳು ಎಂಬ ವಿಶೇಷ ಕಲ್ಪನೆಯಿತ್ತು. ಕಥೆ, ಸಿನಿಮಾ‌, ಡ್ರಾಮಾ, ಫ಼್ಯಾಂಟಸಿ ಕಥಾನಕಗಳಲ್ಲೂ ದೆವ್ವ ಪಿಶಾಚಿಗಳೆಂದರೆ ಒಂದು ರೀತಿಯ ಭಯಾನಕ ಚಿತ್ರಣವೇ‌ ಕಣ್ಣಮುಂದೆ ಇತ್ತು. ಆದರೆ ಸ್ವತಃ ದೆವ್ವ- ಭೂತಗಳೂ ಹೆದರಿಕೊಳ್ಳು ವಂತಹಾ, ಕಾಡು ಪ್ರಾಣಿಗಳೂ ನಾಚಿಕೆ ಪಟ್ಟುಕೊಳ್ಳುವಂತಹ, ವಿಷಜಂತುಗಳೂ ಬೆಚ್ಚಿ ಬೀಳುವ ಭಯಂಕರ ಕೃತ್ಯಗಳನ್ನು ಈ ನರ ಮನುಷ್ಯ ಎಂಬ ವಿಚಿತ್ರ ಪ್ರಾಣಿ ಮಾಡಬಲ್ಲ ಎಂಬುದು ಎಂದೋ ಸಾಬೀತಾಗಿದೆ, ಆಗುತ್ತಲಿದೆ ಹಾಗೂ ಆಗಲಿದೆ.

ಆ ಸಾಲಿಗೆ‌ ಇಲ್ಲೊಬ್ಬ ನರರಾಕ್ಷಸನ‌ ಹೇಯ‌ ಕೃತ್ಯ ಸೇರ್ಪಡೆ ಯಾಗಿದೆ. ಹಾಗೇ ಗಮನಿಸಿ.

ತನ್ನೊಡನೆ ಮದುವೆಯಾಗದೇ ಒಟ್ಟಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅವಳ ದೇಹವನ್ನು ಬರೋಬ್ಬರಿ 35 ತುಂಡುಗಳನ್ನಾಗಿಸಿ, ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಆಕೆಯ‌ ದೇಹದ ಭಾಗಗಳನ್ನು ಸರಿ ರಾತ್ರಿಯಲ್ಲಿ ಹೂತು ಹಾಕಿರುವ ಭೀಭತ್ಸಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ನರರಕ್ಕಸ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮೊನ್ನೆ ಸುದ್ದಿಯಾಗಿದೆ.

ಇದರ ಹಿನ್ನೆಲೆ‌ ಕೆದಕಿದಾಗ ಸಿಕ್ಕಿದ್ದಿಷ್ಟು !

ಕೊಲೆಯಾದ ನತದೃಷ್ಟೆ ಯುವತಿಯ ಹೆಸರು ಶ್ರದ್ಧಾ. ಕೊಲೆಮಾಡಿದ ನಫ಼್ತಟಾಲ್ ನರರಕ್ಕಸ , ಅಫ಼್ತಾಬ್ ಅಮೀನ್ ಪೂನವಾಲಾ ಎಂಬ ಮಾನವ ರೂಪ ಹೊತ್ತ ಕಾಡು ಮೃಗ.

ಶ್ರದ್ಧಾ ಮುಂಬೈನ‌ ಎಂ.ಎನ್.ಸಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಸಾಮಾಜಿಕ ಜಾಲತಾಣದ ಮೂಲಕ‌ ಪರಿಚಯವಾದ ಅಫ಼್ತಾಬ್ ಅಮೀನ್ ಎಂಬ ಪರಮ ಅಯೋಗ್ಯನ ಪ್ರೀತಿಯೆಂಬ ಆಕರ್ಷಣೆಗೆ‌ ಸಲೀಸಾಗಿ ಬೀಳುತ್ತಾಳೆ. ನಂತರ ಬಹುತೇಕ ಮೊಬೈಲ್‌ ಪ್ರೀತಿಗಳಂತೆ ಈ ಹುಚ್ಚು ಆಕರ್ಷಣೆ ಅವರ ನಡುವಿನ ಡೇಟಿಂಗ್ ನ‌ ಪರಾಕಾಷ್ಠೆ ತಲುಪಿದೆ. ಸಹಜವಾಗಿ ಎದುರಾದ ಮನೆಯವರ ವಿರೋಧವನ್ನೂ‌ ಲೆಕ್ಕಿಸದೇ ಈ ಲಫ಼ಂಗನೊಂದಿಗೆ ಭವಿಷ್ಯದ ಕನಸು ಕಂಡು ದೆಹಲಿಗೆ ಹಾರಿ ಅಲ್ಲಿ ಇವನೊಂದಿಗೆ ಕೂಡಿ ಬಾಳುವ ಕನಸಿಗೆ ಹೆಜ್ಜೆ ಇಟ್ಟಿದ್ದಾಳೆ. ಅವಳೊಂದಿಗೆ, ಅವಳ ಹಣದಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಸುಖ ಕಾಣುತ್ತಿದ್ದ ಈ ಕಂತ್ರಿಯಲ್ಲಿ, ದಿನ ಕಳೆದಂತೆ‌ ತನ್ನನ್ನು ಮದುವೆಯಾಗುವಂತೆ‌ ಪೀಡಿಸುತ್ತಿದ್ದ ಶ್ರದ್ಧಾಳ ವರ್ತನೆ‌ ಆಕ್ರೋಷ ಹುಟ್ಟಿಸಿ ಅವನಲ್ಲಿನ ಮೃಗತ್ವವನ್ನು ಹೊರಹಾಕಿದೆ. ಎಲ್ಲಿಯವರಗೆ ಅವಳ ಹಣ, ಸೌಂದರ್ಯ, ದೇಹ ಈ ಎಲ್ಲದರ ರುಚಿ‌ ಇತ್ತೋ ಅಲ್ಲಿಯವರೆಗೆ ಅವಳನ್ನು ಎಂಜಾಯ್ ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡು ಆನಂತರ‌ ಶ್ರದ್ಧಾಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟೇ ಆಗಿದ್ದಲ್ಲಿ ಈ ಪ್ರಕರಣಕ್ಕೆ ಇಷ್ಟೊಂದು‌ ಕ್ರೂರತೆ ಬರುತ್ತಿರಲಿಲ್ಲ. ಅವಳನ್ನು ಕೊಲೆ ಮಾಡಿ ಆನಂತರ ಅವಳ ಶವವನ್ನು 35 ತುಂಡುಗಳನ್ನಾಗಿ ಮಾಡಿ ಅದನ್ನು ದೆಹಲಿಯ ಮೆಹ್ರೌಲಿಯ ಅರಣ್ಯ ಭಾಗಗಳಿಗೆ ಮಧ್ಯರಾತ್ರಿ ಎರಡು ಘಂಟೆಯ ವೇಳೆಗೆ‌ ಹದಿನೆಂಟು ದಿನಗಳ ಕಾಲ ಹೋಗಿ ಎಸೆದಿದ್ದನಂತೆ ! ಅವಳ ದೇಹದ ತುಂಡುಗಳನ್ನಿರಿಸಲು‌ ಈ ಅಯೋಗ್ಯ ಹೊಸ ಫ಼್ತಿಡ್ಜ್ ಕೂಡಾ ಖರೀದಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆಯಂತೆ‌!

ಇಂತಹಾ‌ ಭೀಭತ್ಸ ದುಷ್ಕೃತ್ಯವನ್ನು ನೋಡಿದಾಗ ಯಾವ ಕೋನದಲ್ಲಿ ಮನುಷ್ಯನಾದವನು ಕ್ಷುದ್ರ ರಾಕ್ಷಸರಿಗಿಂತ ಕಡಿಮೆಯಿರಲು ಸಾಧ್ಯ ಎಂದೆನಿಸುವುದಲ್ಲವೇ ? ಇಂಥವರನ್ನು ಮನುಷ್ಯ ಎನ್ನಲು ಸಾಧ್ಯವೇ ?

ಮೊದಲನೆಯದಾಗಿ ಹರೆಯಕ್ಕೆ ಕಾಲಿಟ್ಟ‌ ಹುಡುಗಿಯರ‌ ಮನಸ್ಥಿತಿಯೆನ್ನುವುದು ಸುಲಭದ ಅರ್ಥಕ್ಕೆ ಸಿಗದ‌‌ ವಸ್ತುವಾಗಿ ಅಂದಿನಿಂದ ಇಂದಿನವರೆಗೂ ಉಳಿದಿದೆ. ಅದರಲ್ಲೂ ಇಂದಿನ ಅಂತರ್ಜಾಲ ಯುಗದಲ್ಲಿ , ಮೊಬೈಲ್ ಫೋನ್ ಗಳ ಭ್ರಮಾತ್ಮಕ ಬದುಕಲ್ಲಿ ಒಬ್ಬರನ್ನು ಆಕರ್ಷಣೆಗೆ ಒಳಗಾಗುವುದೂ- ಒಳಗಾಗಿಸುವುದೂ ಎರಡೂ ಸುಲಭ. ನೋಡಲು ಚಂದವಿರುವ ಸ್ಟೈಲಾಗಿರುವ ವ್ಯಕ್ತಿ ಮೊಬೈಲ್ ಸ್ಕ್ರೀನ್ ನಲ್ಲಿ ಪರಿಚಯವಾದನೆಂದರೆ ತಮ್ಮೆಲ್ಲಾ ಇಹಪರವನ್ನೂ ಮರೆತು, ವಾಸ್ತವ ಲೋಕದಿಂದ ಇನ್ನೆಲ್ಲೋ ಕಳೆದುಹೋಗಿಬಿಡುತ್ತಾರೆ. ಇದಕ್ಕೆ ಅಮಾಯಕ ಹುಡುಗಿ ಅಥವಾ ಹುಡುಗ ಯಾರಾದರೂ ಆಗಿರಬಹುದು.

ಇನ್ಸ್ಟಾ ಗ್ರಾಮ್, ಫ಼ೇಸ್ ಬುಕ್,ವಾಟ್ಸಪ್ ಗಳ ಚಾಟುಗಳಲ್ಲಿ , ಫೋಟೋಗಳಲ್ಲಿ ತಲೆತೂರಿಸಿ ಅಲ್ಲಿನ ಆಕರ್ಷಣೆಗೆ ಬಿದ್ದು ತಮ್ಮ ಕಾಲ ಮೇಲೆ ತಾವೇ‌ ಚಪ್ಪಡಿ ಎಳೆದುಕೊಳ್ಳುವ ಅನೇಕರಿದ್ದಾರೆ. ಈ ಹಂತದಲ್ಲಿ ಯಾರ ಬುದ್ದಿವಾದವಾಗಲೀ , ಯಾವುದೇ ವಾಸ್ತವ ಪ್ರಜ್ಞೆಯಾಗಲೀ ಕೆಲಸ ಮಾಡಲಾರದು. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದ ಕೆಲ‌ ಕ್ಷುದ್ರ ಮನಸುಗಳು ಸರಿಯಾದ ಅವಕಾಶಕ್ಕಾಗಿ ಕಾದು ಸೂಕ್ತ ಸಮಯ ನೋಡಿ ತಮ್ಮ‌ ಖೆಡ್ಡಾಕ್ಕೆ ಅಮಾಯಕರನ್ನು ಬೀಳಿಸಿಕೊಂಡು ಇನ್ನಿಲ್ಲದ ಅಪರಾಧಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಹುಡುಗಿಯ/ ಮಹಿಳೆಯ ಜೊತೆ ಮೊಬೈಲ್ ನಲ್ಲಿ ಸಲಿಗೆ ಬೆಳೆಸಿಕೊಂಡು ಅವರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಮಾಡಿ ಅಥವಾ ಅವರ ಖಾಸಗೀ ಪೋಸುಗಳ ಫೋಟೋಗಳನ್ನು ತೆಗೆದು ಬ್ಲಾಕ್ ಮೈಲ್ ಮಾಡುತ್ತಾ ಹೆದರಿಸಿ ಬ್ಲಾಕ್ ಮೈಲ್ ಮಾಡುತ್ತಾ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

ಈ‌ ಬಗ್ಗೆ ಏನೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಿವೆ.

ಈ ಮೇಲಿನ ಘಟನೆಯಲ್ಲಿ ಮೂಲ ತಪ್ಪು ಎಲ್ಲಿದೆ ?

ಕೇವಲ ಮೊಬೈಲ್ ಸ್ಕ್ರೀನಿನಲ್ಲಿ ಚೆನ್ನಾಗಿ ಹಲ್ಲು ಕಿರಿದ ಅಯೋಗ್ಯನೊಬ್ಬ ನೋಡಲು ಸ್ಮಾರ್ಟಾಗಿದ್ದಾನೆಂಬ ಏಕೈಕ ಕಾರಣಕ್ಕಾಗಿ ಹಿಂದೆ ಮುಂದೆ ನೋಡದೇ ಇಪ್ಪತ್ತೈದು ವರ್ಷ ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಅವನೊಟ್ಟಿಗೆ ಪರಾರಿಯಾಗಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಮೈ, ಮನಸ್ಸು ಎರಡನ್ನೂ ಅನಾಮತ್ತು ಕೊಡುತ್ತಾರೆಂದರೆ ಅಲ್ಲಿಗೆ ತಪ್ಪು ಎಲ್ಲಿದೆ…. ಯಾರಲ್ಲಿದೆ ?

ಆಯ್ತು … ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ಉದ್ಯೋಗ ಇದಾವುದರ ಭೇದವಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅವನು ನಿಜವಾಗಿಯೂ ಇವಳನ್ನು ಪ್ರೀತಿಸುವವನಾಗಿದ್ದರೆ ಮೊದಲು ಮದುವೆಯಾಗಿ ನಂತರ ರಿಲೇಷನ್ ಶಿಪ್ ಮುಂದುವರೆಸ ಬೇಕಿತ್ತಲ್ಲವೇ ? ನಿಜವಾದ ಪ್ರೀತಿಗೂ, ಸ್ವಾರ್ಥಕ್ಕಾಗಿ ಟಿಶ್ಯೂ ಪೇಪರಿನಂತೆ ಉಪಯೋಗಿಸಿ ಬಿಸಾಕುವ ಪ್ರೇತಗಳ ಟೆಂಪೊರೆರಿ ಕಿಕ್ಕಿಗೂ ವ್ಯತ್ಯಾಸ ಅರಿಯದೇ ಹೋದರೆ ಹಾಗೂ ವಾಸ್ತವ ಜಗತ್ತಿಗೆ ಮುಖ ಮಾಡದೇ ಭ್ರಮಾಲೋಕದ ಬಾಳಿನಲ್ಲಿ ಮುಳುಗೇಳುವ ಕನಸ ಕಂಡರೆ….ಅಲ್ಲಿ ಶ್ರದ್ಧಾಳಿಗೆ ಆದ ಗತಿ ಇಲ್ಲಿ ಎಲ್ಲರಿಗೂ ಆದೀತು ! ಎಚ್ಚರವಿರಲಿ.

** ಮರೆಯುವ ಮುನ್ನ **

ನಮ್ಮ ಸಮಾಜದ ಸಮಸ್ಯೆಯೆಂದರೆ ಎಂತಹಾ ಕಣ್ಣು ತೆರೆಸುವ ಘಟನೆಗಳಾದರೂ ಅವುಗಳನ್ನು ಬಹುಬೇಗ ಮರೆತು ಮತ್ತೇ‌‌ ಯಥಾ ಸ್ಥಿತಿಯ ಹಳಿಗೇ ಮರಳುವುದು ಹಾಗೂ ಒಳ್ಳೆಯದು – ಕೆಟ್ಟದರ ನಡುವಿನ ಸೂಕ್ಷ್ಮ‌ ವ್ಯತ್ಯಾಸದ ಪದರನ್ನು ಗುರುತಿಸಲು ಪರದಾಡುವುದು , ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅವಾಸ್ತವಿಕತೆಗೆ, ಮಾಯಾ ಭ್ರಮೆಗೆ ಸಲೀಸಾಗಿ ತೆರೆದುಕೊಳ್ಳುವುದು. ವಸ್ತುಸ್ಥಿತಿ ಹೀಗಿರುವುದರಿಂದಲೇ ನೆಟ್ ಲೋಕದ ನಯವಂಚಕರು ಅತಿ ಸುಲಭಕ್ಕೆ ಯಾಮಾರಿಸಬಹುದಾದ ಹೆಣ್ಣು/ ಗಂಡು ಗಳನ್ನು ತಮ್ಮದೇ ಆದ ನೆಟ್ ವರ್ಕ್ ಮೂಲಕ ಜಾಣತನದಿಂದ ಹೆಕ್ಕಿ ಬಲೆ ಬೀಸಿ ತಮ್ಮ ಜಾಲಕ್ಕೆ ಕೆಡವಿ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಸಾಧ್ಯವಾಗಿರುವುದು.

ಶ್ರದ್ಧಾಳದ್ದು ಹೆಚ್ಚು ಕಡಿಮೆ ಇದೇ ರೇಂಜಿನ ಕೇಸು. ಅದೇನೇ ಇರಲಿ ! ಒಬ್ಬ ಅಮಾಯಕ ಯುವತಿಯ ಜೊತೆ ತಿಂಗಳುಗಳ ಕಾಲ ಡೇಟಿಂಗ್ ಮಾಡಿ ಅವಳದೆಲ್ಲವನ್ನೂ ಅನುಭವಿಸಿ ಆನಂತರ ಅವಳನ್ನು‌ ಬರ್ಬರವಾಗಿ ತುಂಡುತುಂಡಾಗಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಹೂತು ಬರುತ್ತಾನೆಂದರೆ ಇಂಥವರನ್ನು ಯಾವುದರಲ್ಲಿ ಹೊಡೆಯಬೇಕು, ಯಾವ ಕಾನೂನಿನಿಂದ ಹೇಗೆ ಶಿಕ್ಷಿಸಬೇಕು ಅಥವಾ ಇತರರಿಗೆ ಪಾಠವಾಗುವ ಯಾವ ದಂಡನೆ ವಿಧಿಸಬೇಕು ಎಂಬುದು ತರ್ಕಕ್ಕೆ‌ ನಿಲುಕದ ಸಂಗತಿಯಾಗಿದೆ. ಇವನಿಗೆ ಕೊಡುವ ಶಿಕ್ಷೆ, ಈ ತರಹದ ಅಪರಾಧಗಳಲ್ಲಿ‌ ಭಾಗಿಯಾಗುವವರಿಗೆಲ್ಲಾ ಒಂದು ಎಚ್ಚರಿಕೆಯ ಗಂಟೆಯಾಗಲೆಂದಷ್ಟೇ ನಾವು ಆಶಿಸಬಹುದು.

ಅಫ಼್ತಾಬ್ ಅಮೀನ್ ನಂತಹ ಕ್ರೂರ ಮೃಗಗಳ ಬಗೆಗೆ, ಸಾಮಾಜಿಕ ಜಾಲತಾಣಗಳ ವಿಷಜಾಲಗಳ ಬಗೆಗೆ ಅಮಾಯಕ ಹೆಣ್ಣುಮಕ್ಕಳು ಮೈತುಂಬಾ ಎಚ್ಚರವಿರೋದು ಒಳ್ಳೆಯದು .

# ಲಾಸ್ಟ್ ಪಂಚ್ #

ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿದು ಹಾಳಾಗುವುದು ಬಟ್ಟೆಯೇ !

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

ನಿಮ್ಮೂರಿನ ಸುದ್ದಿಯಾಗಬೇಕೆ ಜನಧ್ವನಿ ವಾಟ್ಸ್ ಆಪ್ ಗ್ರೋಪ್ ಗೆ ಸೇರಿ ಮಾಹಿತಿ ಹಂಚಿಕೊಳ್ಳಿ

ಜನಧ್ವನಿ ಕಾಳಜಿ ಜಿಲ್ಲೆಯ ಜನಧ್ವನಿ ವೆಬ್‌ಸೈಟ್ ನ್ಯೂಸ್
ಈಗ ಮತ್ತೊಂದು ಮಹತ್ವದ ಹೆಜ್ಜೆ
ಇರಿಸಿದೆ. ಪ್ರತಿ ಹಳ್ಳಿಯಲ್ಲಿನ ಬೆಳವಣಿಗೆಯು
ಸುದ್ದಿಯಾಗಬೇಕು, ಪ್ರತಿ ಹಳ್ಳಿಯ ಸುದ್ದಿಗೂ ಮಹತ್ವ
ಸಿಗಬೇಕು. ಇದೇ ಕಾರಣಕ್ಕೆ ಜನಧ್ವನಿ ನ್ಯೂಸ್ ವೆಬ್
ಪ್ರಾರಂಭ ಮಾಡಲಾಗಿದ್ದು
ಜನಧ್ವನಿ ಎಂದೇ..! ಹೆಸರೆ ಹೇಳುವಂತೆ ನಿಮ್ಮೂರಿನ ಕುಡಿಯುವ .ನೀರು.ರಸ್ತೆ. ಚರಂಡಿ. ಕಚೇರಿಯಲ್ಲಿ ಕೆಲಸ ವಿಳಂಬ . ಜಾತ್ರೆ .
ಕ್ರೀಡಾಕೂಟ. ಕೃಷಿ.ಶಿಕ್ಷಣ. ಆರೋಗ್ಯ. ಕಥೆ.ಕವನ ನಿಮ್ಮೂರಿನ ವಿಶೇಷ
ಸಂಗತಿಗಳು, ಸಾಧನೆ,
ಶಾಲೆಯಕಾರ್ಯಕ್ರಮಗಳು ಗ್ರಾಮ ಪಂಚಾಯಿತಿ ಸಭೆಗಳು, ನಿಮ್ಮೂರಿನ ಸಮಸ್ಯೆಗಳು
ಸೇರಿದಂತೆ ಪ್ರತಿ ವಿಚಾರವು
ಸುದ್ದಿಯಾಗಬೇಕೆ ಜನಧ್ವನಿ ವಾಟ್ಸ್ ಆಪ್ ಗ್ರೋಪ್ ಗೆ ವೀಡಿಯೋ. ಪೋಟೋ. ಮಾಹಿತಿ ಹಾಕಿ.
ಗಂಡ ಹೆಂಡತಿ ಜಗಳ, ಸಹೋದರರ ಕಲಹ,ಆಸ್ತಿ
ವ್ಯಾಜ್ಯ ಸೇರಿದಂತೆ ವೈಯಕ್ತಿಕ ವಿಚಾರಗಳಿಗೆ ಅವಕಾಶವಿಲ್ಲ
ಸುದ್ದಿಗಳನ್ನು ಕಳುಹಿಸುವಾಗ ಫೋಟೊ
ಕಳುಹಿಸುವುದು ಕಡ್ಡಾಯ. ವಿಡಿಯೋ ಇದ್ದರೆ
ಅದನ್ನು ಕೂಡ ಕಳುಹಿಸಬಹುದಾಗಿದೆ.
ಅಪಘಾತಗಳು, ಅಪರಾಧದ ಮಾಹಿತಿ ನೀಡುವಾಗ
ಆತುರ ಬೇಡ. ಗಾಯಾಳುಗಳು, ನೊಂದವರ ರಕ್ಷಣೆ
ಕಾರ್ಯ ಮೊದಲು ನಡೆಯಲಿದೆ. ಪೊಲೀಸರಿಗೆ
ಘಟನೆಯ ಮಾಹಿತಿ ನೀಡಿ, ಆಸ್ಪತ್ರೆಗೆ
ಕರೆದೊಯ್ಯಲು ವ್ಯವಸ್ಥೆ ಮಾಡಿ. ಆ ಬಳಿಕ ಸುದ್ದಿ
ಕಳುಹಿಸಿ, ಸುದ್ದಿಗಿಂತಲೂ ಪ್ರಾಣ ಮುಖ್ಯ ಅದು
ನಮ್ಮ ಅದ್ಯತೆ.
ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ
16:9 ರೀತಿಯಲ್ಲಿ ಇರಲಿ, ಅಂದರೆ
ಮೊಬೈಲನ್ನು ಅಡ್ಡ ಹಿಡಿದು ರೆಕಾರ್ಡ್ ಮಾಡಿ.
ಸ್ಮಿನ್
ನ್
ಕಾರ್ಯಕ್ರಮದ ಮಾಹಿತಿ ನೀಡುವಾಗ ಸಾದ್ಯವಾದರೆ
ಆಮಂತ್ರಣ ಪತ್ರಿಕೆಯ ಫೋಟೊ ಇರಲಿ.
ಕಾರ್ಯಕ್ರಮದ ಕುರಿತು ಸಣ್ಣದೊಂದು ಟಿಪ್ಪಣಿ
ಕಳುಹಿಸಿ.
ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ಜೊತೆಗೆ ನಿಮ್ಮ
ಹೆಸರು, ಊರಿನ ಹೆಸರು ಕಳುಹಿಸುವುದು
ಮರೆಯಬೇಡಿ. ಮಾಹಿತಿ ಜೊತೆಗೆ ನಿಮ್ಮ ಹೆಸರು,
ಊರು ಇರಲಿ ಸುದ್ದಿ ಪ್ರಕಟಿಸುವಾಗ
ಮಾಹಿತಿದಾರರ ಗೌಪ್ಯತೆ ಕಾಪಾಡುತ್ತೇವೆ. ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ

You cannot copy content of this page