ನಾಯಕನಹಟ್ಟಿ:: ಆಗಸ್ಟ್ 25. ಅಬ್ಬೇನಹಳ್ಳಿಗ್ರಾಮಕ್ಕೆ ಉತ್ತಮ ಮಳೆ ಬೆಳೆ ಶಾಂತಿ ನೆಮ್ಮದಿ ನೆಲಸಲಿ ಎಂದು ಶ್ರೀ ಶ್ರೀ 1008 ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾ ಭಗವತ್ವಾದಂಗಳವರ ಹೇಳಿದ್ದಾರೆ.
ಭಾನುವಾರ ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾಮದಲ್ಲಿ ನೂತನ ಕರಿಗಲ್ಲು ಪ್ರತಿಷ್ಠಾಪನೆ ಹಾಗೂ ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ವಹಿಸಿದ ಅವರು ಈ ನಾಡು ಸಮೃದ್ಧಿ ಮಳೆ ಯಾಗಲಿ ಬೆಳೆಗೆ ತಕ್ಕ ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕು ಈ ದೇಶದ ಬೆನ್ನೆಲುಬು ಅನ್ನದಾತ ರೈತರ ಬದುಕು ಉತ್ತಮವಾಗಲಿ ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ವ್ಯಾಪಾರ ಉದ್ಯೋಗ ವಧು -ವರರ ಕಲ್ಯಾಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಸಂತಾನ ಅಪೇಕ್ಷಿತ ದಂಪತಿಗಳಿಗೆ ದೇಶಭಕ್ತ ವಿದ್ಯಾ ವಿನಯ ಸಂಸ್ಕಾರ ಉಳ್ಳ ಮಕ್ಕಳು ಹುಟ್ಟಲಿ ಗ್ರಾಮದಲ್ಲಿ ಅಸಮಾನತೆ ಜಾತಿ ಭೇದ ಭಾವವಿಲ್ಲದೆ ಈ ದೇಶದ ಸತ್ ಪ್ರಜೆಗಳು ನಾವೆಲ್ಲ ಭಾರತಮಾತೆಯ ಮಕ್ಕಳು ಎಂದು ಗ್ರಾಮಸ್ಥರಿಗೆ ಆಶೀರ್ವಾದ ವಚನ ನುಡಿದು ಮಾತನಾಡಿದ ಅವರು ಜಗತ್ತಿನಲ್ಲಿ ಅತಿ ಹೆಚ್ಚು ಮಠ ಮಂದಿರಗಳು ದೇವಸ್ಥಾನಗಳು ಹೊಂದಿರುವ ದೇಶ ನಮ್ಮ ಭಾರತ ದೇಶ ಈ ದೇಶದಲ್ಲಿ ಗುಡಿ ಗುಂಡಾರಗಳು ಎಲ್ಲಿ ಕಾಣಲು ಸಾಧ್ಯವಿಲ್ಲ ನಮ್ಮ ದೇಶದಲ್ಲಿ ಕಲ್ಲು ಮಣ್ಣು ಗಿಡ ಸೂರ್ಯ ಚಂದ್ರ ಅಗ್ನಿ ಭಗವಂತ ಕೊಟ್ಟಿರುವಂತ ಪ್ರಕೃತಿಯಲ್ಲಿ ಎಲ್ಲದಕ್ಕೂ ಪೂಜಿಸಲ್ಲಿಸುತ್ತೇವೆ ಏಕೆಂದರೆ ಪ್ರತಿಯೊಬ್ಬರಲ್ಲಿ ಉಪಕಾರ ಮತ್ತು ಪರೋಪಕಾರ ಗುಣಗಳನ್ನು ಹೊಂದಿರುವ ದೇಶ ನಮ್ಮದು ಪೂರ್ವಿಕರು ಗಿಡಮರಗಳನ್ನ ಪೂಜೆ ಯಾಕೆ ಮಾಡ್ತಾರೆ ಎಂದರೆ ಪ್ರಾಣವಾಯು ಶಕ್ತಿ ಗಿಡ ಮರಗಳಲ್ಲಿ ಇವೆ ಗಿಡಮರಗಳು ಕೇವಲ ಹಣ್ಣು ನೆರಳು ಕೊಡದಲ್ಲದೆ ಆಕ್ಸಿಜನ್ ಮತ್ತು ಮರ ಕಡೆದ ನಂತರ ಮಂಚ ಕಿಟಿಕಿ ಡೋರ್ ಹೀಗೆ ಅನೇಕ ಉಪಯೋಗವನ್ನು ಪಡೆಯುವಂತ ಶಕ್ತಿ ಗಿಡ ಮರಕ್ಕಿದೆ ಆದ್ದರಿಂದ ಗ್ರಾಮದಲ್ಲಿ ನೂತನ ಕರಿಗಲ್ಲು ಪ್ರತಿಷ್ಠಾಪನೆ ಮಾಡಿರುವುದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ನೀಡಿದೆ ಗ್ರಾಮದಲ್ಲಿ ಪ್ರತಿಯೊಬ್ಬರೂ ಇಂತಹ ಧಾರ್ಮಿಕ ಕಾರ್ಯಗಳಲ್ಲಿಭಾಗವಹಿಸಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮದ ದೈವಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ಇದ್ದರು
0 Comments