
ಚಳ್ಳಕೆರೆ ಜನಧ್ವನಿ ಫೆ.24. ನಾಟಕ ನೋಡಿಕೊಂಡು ಮನೆಗೆ ಸೇರುವ ಮುನ್ನವೇ ಬಾರದ ಲೋಕಕ್ಕೆ ಮರಳಿದ ಯುವಕ. ಹೌದು ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ಮಧು(23) ತಾಲೂಕಿನ ದುರ್ಗಾವರ ಗ್ರಾಮದಲ್ಲಿ ನಾಟಕ ನೋಡಲು ಹೋಗಿ ಗುರುವಾರ ತಡರಾತ್ರಿಯವರೆಗೆ ಸ್ನೇಹಿತರ ಜತೆ ನಾಟಕ ವೀಕ್ಷಣೆ ಮಾಡಿ ತಡ ರಾತ್ರಿ ಸುಮಾರು 3 ಗಂಟೆ ಸುಮಾರಿನಲ್ಲಿ
ಚಳ್ಳಕೆರೆ ಕಾಟಪ್ಪನಹಟ್ಟಿಗೆ ಬೈಕ್ ನಲ್ಲಿ ಹೋಗುವಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ನುಜ್ಜು ಗುಜ್ಜಾಗಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ಸ್ಥಳಕ್ಕೆ ಪಿ ಐ ದೇಸಾಯಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಪೋಷಕರು ಇದು ಕೊಲೆ ಎಂದು ಶಂಕೆ ವ್ಯಕ್ತಪಡಿದ್ದು ತನಿಖೆ ನಡೆಸುವಂತೆ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಕುಟುಂಬಸ್ಥರಿಗೆ ಒಬ್ಬನೇ ಗಂಡುಮಗ ಇದ್ದು ವೆಡ್ಡಿಂಗ್ ಶಾಪ್ ಗೆ ದುಡಿಯುತ್ತಿದ್ದ ಈಗ ದುಡಿಯುವ ಮಗ ಅಪಘಾತದಲ್ಲಿ ಮೃತಪಟ್ಟಿದ್ದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತಿದೆ.
0 Comments