ಚಳ್ಳಕೆರೆ ಜನಧ್ವನಿ ವಾರ್ತೆ ಅ.24. ಅನುಕಂಪ ಹುದ್ದೆ ಪಡೆಯಲು ಆಕಾಂಕ್ಷಿಯೊಬ್ಬರು ವರ್ಷಗಳಿಂದ ಅಲೆದಾಟ ನಡೆಸಿದ್ದರೂ, ಅಧಿಕಾರಿಗಳು ನೇಮಕ ಆದೇಶ ನೀಡುವ ಕಡತ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹೌದು ಇದು ಚಳ್ಳಕೆರೆ ನಗರದ ಕೃಷಿ ಉತ್ಪನ್ನ ಮಾರುಕಟಟ್ಟೆ ಕಚೇರಿಯಲ್ಲಿ ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಅಂಬೇಡ್ಕರ್ ನಗರದ ನಿವಾಸಿ ಡಿ.ನೌಕರ ಹನುಮಂತಪ್ಪ ಕರ್ವ್ಯ ನಿರ್ವಹಿಸುವ ವೇಳೆ 11-6-1987 ರಂದು ಮೃತಪಡುತ್ತಾರೆ. ಆಗ ಮಕ್ಕಳು ಚಿಕ್ಕವರಿದ್ದು. ಮೃತನ ಪತ್ನಿ ತಿಪ್ಪಮ್ಮ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ಮಕ್ಕಳು ವಯಸ್ಸಿಗೆ ಬಂದ ನಂತರ ಉದ್ಯೋಗ ನೀಡುವಂತೆ 1988 ರಲ್ಲಿ ಕೃಷಿ ಉತ್ಪನ್ನಮಾರುಕಟ್ಟೆ ಅಂದಿನ ಕಾರ್ಯದರ್ಶಿಗೆ ಮನವಿ ಸಲ್ಲಿಸುತ್ತಾರೆ.
ಮೃತನ ಪತ್ನಿ ತಿಪ್ಪಮ್ಮಳ ಹಿರಿಯ ಮಗ ತಿಪ್ಪೇಸ್ವಾಮಿಗೆ ಪಾರ್ಶುವಾಯು ವಡೆದಿರುವುದರಿಂದ ಎರಡನೇ ಮಗ ಅಂಜೀನಪ್ಪನಿಗೆ ಮೃತ ಗಂಡನ ಅನುಕಂಪದ ನೌರಿಯನ್ನು ಅಂಜೀನಪ್ಪನಿಗೆ ನೌಕರಿಗೆ ಕೊಡುವಂತೆ ಸುಮಾರು 20 ವರ್ಷಗಳಿಂದ ವಿಧಾನ ಸೌಧ, ಜಿಲ್ಲಾಧಿಕಾರಿಗಳ,ಕೃಷಿ ಉತ್ಪನ್ನ ಮಾರುಕಟ್ಟೆ ಹಿರಿಯ ಅಧಿಕಾರಿಗಳ, ಸಂಸದರ, ಶಾಸಕರ ಬಳಿ ಹಾಗೂ ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
18 ವರ್ಷ ತುಂಬಿದ ನಂತರ ಸುಮಾರು 20 ವರ್ಷಗಳಿಗೂ ಹೆಚ್ಚು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದರೂ ಅಧಿಕಾರಿಗಳು ಒಂದಿಲ್ಲೊಂದು ಕಾರಣ ನೀಡಿ ಸಾಗಹಾಕುತ್ತಿದ್ದಾರೆ. ನಿಯಮಾವಳಿಯಲ್ಲಿ ಅವಕಾಶ ಇದ್ದರೂ, ಇಲ್ಲದ ನೆಪ ಮಾಡಿ ‘ನಾಳೆ ಬಾ’ ಎಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮೃತ ನೌಕರನ ಪತ್ನಿ ತಿಪ್ಪಮ್ಮ ಅಳಲು ತೋಡಿಕೊಂಡಿದ್ದಾರೆ.
ಮೃತ ತಂದೆಯ ಹುದ್ದೆ ಬೇರೆಯವರಿಗೆ ನೀಡಿರುವ ಅನುಮಾ ಆರೋಪ.
ಮೃತ ತಂದೆಯ ಅನುಕಂಪ ಉದ್ಯೋಗಾಂಕ್ಷಿ ಅಂಜೀನಪ್ಪ ಮಾತನಾಡಿ ಅನುಕಂಪ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅವಕಾಶ ಇದ್ದರೂ ಸಹ ಕೆಲ ಪ್ರಕರಣಗಳಲ್ಲಿ ಸರಕಾರಿ ನೌಕರ ಮೃತಪಟ್ಟ ವೇಳೆ ಆತನ ಮಕ್ಕಳು ಅಪ್ರಾಪ್ತರು ಹಾಗೂ ಅರ್ಜಿ ಹಾಕಿಲ್ಲವೆಂಬ ಕಾರಣ ನೀಡಲಾಗಿದೆ. ಆದರೆ, ಪ್ರಾಪ್ತ ವಯಸ್ಕರಾಗುತ್ತಿದ್ದಂತೆ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ಮಾನ್ಯ ಮಾಡುತ್ತಿಲ್ಲ, ಸುಮಾರು 20 ವರ್ಷಗಳಿಂದ ಅಲೆದಾಡುತ್ತಿದ್ದೇನೆ ನನಗೆ ಈಗ 38 ವರ್ಷವಾಗಿದೆ ಸರಕಾರಿ ಹುದ್ದೆ ಪಡೆಯಲು ಇನ್ನು ಎರಡು ವರ್ಷಗಳು ಮಾತ್ರ ಬಾಕಿ ಇದೆ ಈಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನನ್ನ ತಂದೆಯ ಎಸ್ ಆರ್ ಪುಸ್ತಕ ಸಿಗುತ್ತಿಲ್ಲ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೂ ಲಭ್ಯವಿಲ್ಲ ಎನ್ನುತ್ತಾರೆ . ನನ್ನತಾಯಿ ತಿಪ್ಪಮ್ಮ ಹೆಸರಿನಲ್ಲಿ ಮತ್ತೊಂದು ಬ್ಯಾಂಕ್ ಖಾತೆ ಇದ್ದು ಇದು ನಮ್ಮ ಗಮನಕ್ಕೂ ಇಲ್ಲ ಮಾಹಿತಿಯೂ ನೀಡುತ್ತಿಲ್ಲವಾದ್ದರಿಂದ ನನ್ನ ತಂದೆಯ ಹುದ್ದೆಯನ್ನು ತಾಯಿ ತಿಪ್ಪಮ್ಮ ಹೆಸರಿನವರಿಗೆ ಬೇರೆಯವರಿಗೆ ಉದ್ಯೋಗ ನೀಡಿರುವ ಅನುಮಾನ ವ್ಯಕ್ತವಾಗಿದೆ.
ಸರ್ವೀಸ್ ಪುಸ್ತಕ ಸಿಕ್ಕರೆಎಲ್ಲಾ ವಿಷಯ ಬಯಲಿಗೆ ಬರುತ್ತದೆ ಆದರೆ ಸರ್ವೀಸ್ ಪುಸ್ತಕವನ್ನೇ ಮಾಯಾ ಮಾಡಿದ್ದಾರೆ ಎಂದು ಹುದ್ದೆ ಅಂಜೀನಪ್ಪ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

.1987 ರಲ್ಲಿ ನನ್ನ ತಂದೆ ಸತ್ತಾಗ ನಾನು ಅಪ್ರಾಪ್ತನಾಗಿದ್ದೆ. ವಯಸ್ಕನಾದ ಬಳಿಕ ಅರ್ಜಿ ಹಾಕಿದಾಗ ಹುದ್ದೆ ನೀಡುವ ಭರವಸೆ ದೊರೆತಿತ್ತು. ಈಗ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಹುದ್ದೆ ನಿರಾಕರಿಸಿರುವುದು ಯಾವ ನ್ಯಾಯ?
ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳೇನು ಹೇಳುತ್ತಾರೆ.

ಹನುಮಂತಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತ ಪಟ್ಟಿದ್ದರಿಂದ ಸರಕಾರದಿಂದ ಬರುವ ಪಿಂಚಿಣಿ, ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿದೆ ಈಗಲೂ ಮೃತನ ಪತ್ನಿ ತಿಪ್ಪಮ್ಮ ಪತಿಯ ಪಿಂಚಿಣಿ ಹಣವನ್ನು ಪಡೆಯುತ್ತಿದ್ದಾರೆ.
ಹನುಮಂತಪ್ಪ ಮೃತಪಟ್ಟು ಸುಮಾರು 36 ವರ್ಷಗಳು ಕಳೆದಿವೆ ಆಗ ಮಕ್ಕಳು ಅಪ್ರಾಪ್ತ ವಯಸ್ಕಾರಿದ್ದು ಪ್ರಸ್ತುತ ಅನುಕಂಪ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸಲು ಕರ್ನಾಟಕ ನಾಗರೀಕ ಸೇವಾ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಮಗಳು 1996 ರ ನಿಯಮ(5)ರಡಿ ಕಾಲಕಾಲಕ್ಕೆ ನಿಗಧಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬೇಕಾಗಿರುತ್ತದೆ. ಆದರೆ ಮೃತ ನೌಕರನ ಮಗ ಅಂಜೀನಪ್ಪ ಅನುಕಂಪ ಆಧಾರದ ಮೇಲೆ ನೇಮಕಾತಿ ಕೋರಿ ನಿಗಧಿತ ಕಾಲವಧಿಯಲ್ಲಿ ಮನವಿಯನ್ನು ಸಲ್ಲಿಸದೇ ಇರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಾಮವಳಿ ನಿಯಮ (5)ರನ್ವಯ ಪರಿಶೀಲಿಸಲು ಅವಕಾಶ ಇರುವುದಿಲ್ಲ ಎಂದು ಕೃಷಿ ಮಾರಾಟ ನಿರ್ಧೇಕರ ಕಚೇರಿಯಿಂದ ಅನುಕಂಪ ನೌಕರಿ ಆಕಾಂಕ್ಷಿ ಅಂಜೀನಪ್ಪನಿಗೆ ಹಿಂಬರಹ ನೀಡಿದೆ.
ಮೌಕಿಕವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ನೌಕರಿ ನೀಡುತ್ತೇವೆ ಕೆಲಸ ಮಾಡು ಎಂದು ಹೇಳಿದರೆ ಅದನ್ನು ತಿರಸ್ಕರಿಸಿ ನನ್ನ ತಂದೆಯ ಹುದ್ದೆ ಬೇಕು ಎನ್ನುತ್ತಾನೆ ಅಂಜೀನಪ್ಪ ನಮ್ಮಿಂದ ಇದು ಸಾಧ್ಯವಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಕೇಳಿ ಬರುತ್ತದೆ.
0 Comments